Connect with us

Mandya

ಸಂವಿಧಾನ ಇಕ್ಕಟ್ಟಿಗೆ ಸಿಲುಕಿದೆ – ಸಾಹಿತಿ ಮಾಯಿಗೌಡ

Published

on

ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಎದುರಾಗಿದ್ದು , ಈ ನಿಟ್ಟಿನಲ್ಲಿ ಮತದಾರರು ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವದ ನಾಶಕ್ಕೆ ಮುಂದಾಗಿರುವ ಬಿಜೆಪಿಯನ್ನು ದೂರ ಇಡಬೇಕು ಎಂದು ಸಾಹಿತಿ ಕೆ.ಮಾಯಿಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ಸಂವಿಧಾನ ಉಳಿಸಿ ಎಂದು ಕೇಳುವ ದುಸ್ಥಿತಿ ಈಗ ಎದುರಾಗಿದೆ. ಸಂವಿಧಾನ ಈಗಾಗಲೇ ಹೊಡೆದು ಹೋಗಿದೆ. ಹಾಗಾಗಿ ನಾವುಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.
ರಾಜಕಾರಣಿಗಳು ವಿದ್ವಾಂಸರು ಬರಹಗಾರರು ಆಗಿರಬೇಕು. ಆದರೆ ಇಲ್ಲಿ ಬಟ್ಟೆ, ಅದಕ್ಕೊಂದು ಬಣ್ಣ ,ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ ಎಂದು ವಿಷಾದಿಸಿದರು.


ಮೋದಿ ಆಡಳಿತದಲ್ಲಿ ಸಂವಿಧಾನದ ನಾಶ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು, ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಆದ್ದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಾಶಕ್ಕೆ ಮುಂದಾಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂದು ತಿಳಿಸಿದರು .
ಪ್ರೊಫೆಸರ್ ಜಯಪ್ರಕಾಶ್ ಗೌಡ ಮಾತನಾಡಿ, ಈ ದೇಶದಲ್ಲಿ ಆಗುತ್ತಿರುವ ನಡವಳಿಕೆ, ನೀಡುತ್ತಿರುವ ಹೇಳಿಕೆಗಳ ಬಗ್ಗೆ ಚಿಂತನೆ ನಡೆಯಬೇಕಿದೆ .ಸಾಮಾನ್ಯ ಕುಟುಂಬದ ವ್ಯಕ್ತಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಆದರೆ ಸಂವಿಧಾನದ ಆಶಯಗಳು ಕುಂಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಿದ್ದು , ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದರು .
ಪ್ರೊಫೆಸರ್ ಮಹೇಶ್ಚಂದ್ರ ಗುರು ಮಾತನಾಡಿ, ಹಿಂದುತ್ವ ಬಹುತ್ವದ ನಡುವೆ ಸಂಘರ್ಷ ನಡೆಯುತ್ತಿದೆ ಹಿಂದುತ್ವದಲ್ಲಿ ಯಾರು ಸುರಕ್ಷಿತರಾಗಿದ್ದಾರೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು ಹಿಂದುತ್ವದಲ್ಲಿ ರಾಜ ಪ್ರಭುತ್ವದ ಪ್ರತಿನಿಧಿಗಳು ಸುಖವಾಗಿದ್ದಾರೆ. ಆದರೆ ಸಮಸ್ತ ಹಿಂದುಳಿದವರು ಸುರಕ್ಷಿತರಾಗಿಲ್ಲ . ಇಂತಹ ಆಡಳಿತ ನಮಗೆ ಬೇಕೆ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ರೈತರು ಸುರಕ್ಷಿತವಾಗಿಲ್ಲ .ಮಣ್ಣಿನ ಮಕ್ಕಳು ಮೋದಿ ಆಡಳಿತದಲ್ಲಿ ಮಸಣದ ಹೂವಾಗುತ್ತಿದ್ದಾರೆ. ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮಸಣದ ಹೂವಾಗಿದ್ದಾರೆ. ವ್ಯಾಪಾರಿಗಳು, ಬಂಡವಾಳ ಶಾಹಿಗಳು , ರಾಜಪ್ರಭುತ್ವಕ್ಕೆ ಸೇರಿರುವವರನ್ನು ಮಾತ್ರ ಮೋದಿ ಪ್ರಭುತ್ವ ಕಾಪಾಡುತ್ತಿದೆ ಎಂದು ಕಿಡಿ ಕಾರಿದರು.
ಮೋದಿ ಆಡಳಿತದ ಹತ್ತು ವರ್ಷದ ಅವಧಿಯಲ್ಲಿ ರಾಕ್ಷಸಿ ಮತ್ತು ಪೈಶಾಚಿಕ ಪ್ರಭುತ್ವವಿದೆ. ಕೆಳವರ್ಗದವರು ಮತ್ತಷ್ಟು ತುಳಿತಕ್ಕೆ ಒಳಗಾಗಿದ್ದಾರೆ. ಹಾಗಾಗಿ ಬಹುಜನರು ಎಚ್ಚೆತ್ತುಕೊಂಡು ಹೀಗಿರುವ ಕೆಟ್ಟ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ನುಡಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ

Published

on

ಭಾರತೀನಗರ (ಕೆ.ಎಂ.ದೊಡ್ಡಿ) : ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿರುವ ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಇಲ್ಲಿಯ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕೆ.ಪಿ.ದೊಡ್ಡಿ, ಮಣಿಗೆರೆ, ಗುಡಿಗೆರೆ ಗ್ರಾಮದ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು

ಪಂಚಾಯಿತಿ ಬಳಿ ಜಮಾಯಿಸಿದ ಕೂಲಿಕಾರರು ಗ್ರಾಮ ಪಂಚಾಯಿತಿ ಅಧಿಕಾರಿಗಳ, ಉದ್ಯೋಗ ಖಾತ್ರಿ ಯೋಜನೆ ಇಂಜಿನಿಯರ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಕೂಲಿ ನಿರ್ವಹಿಸಿ ಪ್ರತೀ ಕೂಲಿಕಾರ್ಮಿಕರಿಗೆ ಕೇಮದ್ರ ಸರ್ಕಾರ ನಿಗಧಿಪಡಿಸಿದಂತೆ ₹̤349 ಕೊಡಬೇಕು. ಆದರೆ ಪಂಚಾಯಿತಿಯವರು ಕೆಲವರಿಗೆ ರೂ. 85, ರೂ.155, ರೂ.205 ರಂತೆ ಕೂಲಿ ಹಣ ನೀಡಿದ್ದಾರೆ. ಜೊತೆಗೆ ಯಾರು ರೂ.20 ಕಮೀಷನ್ ನೀಡುತ್ತಾರೋ ಅವರಿಗೆ ಸರ್ಕಾರ ನಿಗಧಿಪಡಿಸಿರುವಂತೆ ಹಣ ನೀಡುವ ಮೂಲಕ ಭ್ರಷಾಚಾರ ನಡೆಸುತ್ತಿದ್ದಾರೆ ಎಂದು ಆಪಾಧಿಸಿದರು.

ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸಿದ ಪ್ರತೀ ಕೂಲಿಕಾರರಿಂದ ರೂ.20 ಕಮೀಷನ್ ನೀಡುತ್ತಿದ್ದೆವು. ಹಾಗಾಗಿ ಕೂಲಿ ಹಣವನ್ನು ತಕ್ಷಣವೇ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದ್ದರು. ಆದರೆ ಈಗ ಕಮೀಷನ್ ನೀಡಲಿಲ್ಲವೆಂದು ಹಣವನ್ನು ಈವರೆವಿಗೂ ಕೂಲಿ ಹಣ ನೀಡಿಲ್ಲ ಎಂದು ಆರೋಪಿಸಿದರು.

ಕೂಲಿಕಾರರ ಬದುಕು ಕಷ್ಟದಲ್ಲಿದೆ. ಇತ್ತ ಕೃಷಿ ಚಟುವಟಿಕೆಗಳೂ ಇನ್ನೂ ಆರಂಭಗೊಂಡಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನು ಸರಿಯಾಗಿ ನೀಡುತ್ತಿಲ್ಲ. ಕೂಲಿ ಮಾಡಿರುವ ಕೆಲಸದ ಹಣವನ್ನೂ ನೀಡದೆ ವಂಚಿಸುತ್ತಿರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕುಟುಂಬ ನಿರ್ವಹಣೆ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ಆಗಮಿಸಿದ ಎಡಿಎಲ್ಆರ್ ಮಂಜುನಾಥ್, ಪಂಚಾಯಿತಿ ಅಭಿವೃದ್ಧಿ ಆಧಿಕಾರಿ ಸುಧಾ ಕಮೀಷನ್ ಕುರಿತು ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನ ಎನಡೆಸಲಾಗುವುದು. ಕೂಲಿ ಕಾರ್ಮಿಕರಿಗೆ ಸಮಾನ ಕೂಲಿ ನೀಡುವಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕೆ.ಪಿ.ದೊಡ್ಡಿಸಿದ್ದಾರಾಜು, ಪುಟ್ಟಮಾದು, ಗುಡಿಗೆರೆ ಮಮತಾ, ಬಸವರಾಜು, ಸುರೇಶ, ನಳಿನಿ, ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Continue Reading

Mandya

ಬೆಳಕು ಲಯನ್ಸ್ ಸಂಸ್ಥೆಯ ವತಿಯಿಂದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ

Published

on

ಮಂಡ್ಯ: ನಗರದ ಕಲ್ಲಹಳ್ಳಿ ಬಡಾವಣೆಯ ಎ.ಪಿ.ಎಂ.ಸಿ ಮುಖ್ಯರಸ್ತೆಯಲ್ಲಿರುವ ಹೊಂಬಾಳೆ ಕನ್ವೆನ್ಷನ್ ಹಾಲ್ ನಲ್ಲಿ ಮಂಡ್ಯ ಬೆಳಕು ಲಯನ್ಸ್ ಸಂಸ್ಥೆಯ ವತಿಯಿಂದ ನಡೆದ ಟಿ.ಡಿ. ಸ್ವಾಮಿರವರ ಮತ್ತು ತಂಡದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭವು ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ಎಂ.ಸಿ. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ರಾಜ್ಯಪಾಲರು ಹಾಗೂ ಜಿಲ್ಲಾ ಸಂಪುಟದ ಸಲಹೆಗಾರರಾದ ಕೆ.ದೇವೇಗೌಡ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ.ಚಂದ್ರೇಗೌಡ ರವರಿಗೆ ಅಭಿನಂದಿಸಲಾಯಿತು. ಜೊತೆಗೆ ಅತಿ ಹೆಚ್ಚು ಅಂಕವನ್ನು ಪಡೆದ ಹಾಗೂ ಕ್ರೀಡೆಯಲ್ಲಿ ಉನ್ನತ ಮಟ್ಟದ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಒಂದನೇ ಜಿಲ್ಲಾ ಉಪ ರಾಜ್ಯಪಾಲ ಕೆ.ಎಂ.ರಾಜಶೇಖರ್, ಜಿಲ್ಲಾ ಚೇರ್ ಪರ್ಸನ್ ಟಿ.ನಾರಾಯಣಸ್ವಾಮಿ, ಜಿಲ್ಲಾ ಖಜಾಂಚಿ ಕೆ.ಎನ್. ಪುನೀತ್ ಕುಮಾರ್, ಜಿಲ್ಲಾ ರಾಯಭಾರಿಗಳಾದ ವಿ. ಹರ್ಷ, ಜಿಲ್ಲಾ ಸಂಯೋಜಕ ಹನುಮಂತಯ್ಯ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆನಂದ್, ಪ್ರಾಂತೀಯ ಅಧ್ಯಕ್ಷರಾದ ಆದರ್ಶ, ವಲಯಾಧ್ಯಕ್ಷರಾದ ದೇವರಸೇಗೌಡ, ಕಾರ್ಯದರ್ಶಿ ಎ.ಶೇಖರ್, ಖಜಾಂಚಿ ಎಚ್. ಕೆ. ಕಾಂತರಾಜ್, ಖಜಾಂಚಿ ಕೆ.ಎಚ್. ಶ್ರೀಕಾಂತ್ ಹಾಗೂ ಮಂಡ್ಯ ಬೆಳಕು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ಹೊಸ ನಿರ್ದೇಶಕರುಗಳು ಸಹ ಉಪಸ್ಥಿತರಿದ್ದರು.

Continue Reading

Mandya

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಗರಣದಲ್ಲಿ ಸಿಲುಕಿಸಿ ರಾಜಕೀಯದಿಂದ ಹೊರ ಹಾಕುವ ಹುನ್ನಾರ – ರಾಮಚಂದ್ರಪ್ಪ

Published

on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಹಗರಣದಲ್ಲಿ ಸಿಲುಕಿಸಿ ರಾಜಕೀಯ ದಿಂದ ಹೊರ ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ರಾಜೀನಾಮೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.
ಇದರ ವಿರುದ್ದ ಶ್ರಮಿಕ ವರ್ಗಗಳು ಒಗ್ಗೂಡಿ ಪ್ರತಿ ಹೋರಾಟ ರೂಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಬೇಕಿದೆ ಎಂದು ಕರ್ನಾಟಕ ಶೋಷಿತ ಸಮುದಾಯ ಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.

ನಗರದ ಕನಕ ಸಮುದಾಯ ಭವನದಲ್ಲಿ ನೆಡೆದ ಜನಾಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಭಾರತೀಯ ಜನತಾಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆಸಿರುವ ಅವ್ಯವಹಾರ ಮತ್ತು ಹಗರಣಗಳನ್ನು ಜನತೆಯ ಮುಂದೆ ಇಡುವ ಜವಾಬ್ದಾರಿಯ ಆಧಾರದ ಮೇಲೆ ಆಗಸ್ಟ್ 05 ಮತ್ತು 06ರಂದು ಮದ್ದೂರು ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜನಾಂದೋಲನಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಿಗೆ ಜಿಲ್ಲೆಯ ಎಲ್ಲಾ ಶೋಷಿತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಅದೇ ರೀತಿ ಮೈಸೂರಿನಲ್ಲಿ ಆ. 09ರಂದು ನಡೆಯುವ ಜನಾಂದೋಲನ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಶೋಷಿತ ಸಮುದಾಯಗಳ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಇದೇ ರೀತಿ ಮುಂದುವರೆದರೆ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬೆಂಗಳೂರು ನಡುಗಬೇಕು ಅಂತಹ ಕಾರ್ಯಕ್ರಮ ಮಾಡೋಣ.

ಈ ಕಾರ್ಯಕ್ರಮಕ್ಕೂ ಶೋಷಿತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಸಮರ್ಥ ಆಡಳಿತ ನೀಡುತ್ತಿರುವುದರಿಂದ ಹತಾಶರಾಗಿರುವ ಬಿಜೆಪಿ, ಜೆಡಿಎಸ್ ನಾಯಕರು ಮುಡಾ ಹಗರಣದ ನೆಪವೊಡ್ಡಿ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸ್ವತಃ ಸಿದ್ದರಾಮಯ್ಯ ಅವರೇ ದಾಖಲೆ ಸಹಿತ ವಿವರಣೆ ನೀಡಿದ್ದಾರೆ.

ಇಷ್ಟಾಗಿಯೂ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಪಾದಯಾತ್ರೆ ಮಾಡಲಾಗುತ್ತಿದೆ. ಇವೆಲ್ಲವನ್ನು ಗಮನಿಸಿ ಶೋಷಿತ
ಸಮುದಾಯಗಳು ಒಗ್ಗಟ್ಟಾಗಿ ಇಂತಹ ತಳ ಸಮುದಾಯದ ಮುಖ್ಯಮಂತ್ರಿಯನ್ನು ಉಳಿಸಿ ಕೊಳ್ಳೋಣ ಎಂದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಕೆ.ಹೆಚ್.ನಾಗರಾಜು ಮಾತನಾಡಿ, ಮುಡಾ ಹಾಗೂ ಮಹರ್ಷಿ ವಾಲೀಕಿ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌‍ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌‍ ಪಕ್ಷ ಆಗಸ್ಟ್ 05 ಮತ್ತು 06 ರಂದು ಮದ್ದೂರು ಹಾಗೂ ಮಂಡ್ಯ ನಗರದಲ್ಲಿ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕಾದರೆ ಶೋಷಿತ ಸಮುದಾಯಗಳು ನಾವು ಅವರ ಬೆನ್ನ ಹಿಂದೆ ಇದ್ದೇವೆ ಎಂದು ಹೇಳುವ ಮೂಲಕ ಈ ಸುವರ್ಣ ಅವಕಾಶವನ್ನು ಉಪಯೋಗಿಸಿ ಕೊಂಡು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮನವಿ ಮಾಡಿದರು.

ಹಿಂದುಳಿದ ವರ್ಗದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಿಕೊಳ್ಳಲು ಬಿಜೆಪಿ-ಜೆಡಿಎಸ್‌‍ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಈ ಕಳಂಕ ರಹಿತ ಆರೋಪದಿಂದ ಮುಕ್ತರಾಗಿ ಹೊರ ಬಂದು ಶೋಷಿತ ಸಮುದಾಯಗಳ ಸೇವೆಗೆ ಮುಂದಾಗಲು ತಾವು ಧೈರ್ಯವಾಗಿರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್, ಅಮ್ಜದ್ ಪಾಷ, ರಾಜಣ್ಣ, ಹಳುವಾಡಿ ವೆಂಕಟೇಶ್, ಸಾತನೂರು ಕೃಷ್ಣ,
ಬಿ.ಲಿಂಗಯ್ಯ, ಸುಂಡಹಳ್ಳಿ ಮಂಜುನಾಥ್, ಮಂಜೇಗೌಡ, ಮುಜಾಯಿದ್, ಮಹೇಶ್, ದೊಡ್ಡಯ್ಯ, ಕೃಷ್ಣಮೂರ್ತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!