Connect with us

Mandya

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಳವಳ್ಳಿ ತಾಲ್ಲೂಕಿನ ಬಸವನಹಳ್ಳಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Published

on

ಸದರಿ ಮತಗಟ್ಟೆ ಕಮುನಿಕ್ಯಾಷನ್ ಶ್ಯಾಡೋ (communication shadow) ಮತಗಟ್ಟೆಯಾಗಿದ್ದು, ದೂರವಾಣಿ ಹಾಗೂ ಇತರೆ ಸಂಪರ್ಕಗಳು ಕಷ್ಟಕರವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಮತಗಟ್ಟೆಯಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ನಾಳೆ ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್‌ನ ಮಂಡ್ಯ ಶಾಖೆ ಲೋಕಾರ್ಪಣೆ : ಚಿರಾಗ್

Published

on

ಮಂಡ್ಯ: ಅಶ್ವಿನಿ ಪುನಿತ್ ರಾಜ್‌ಕುಮಾರ್ ಅವರ ಸಂಸ್ಥಾಪಕ ಸಹಭಾಗಿತ್ವದ ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್‌ನ ಮಂಡ್ಯ ಶಾಖೆಯನ್ನು ಫೆ.5 ರಂದು ಮಧ್ಯಾಹ್ನ 12 ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಶಾಖೆಯ ಪಾಲುದಾರ ಚಿರಾಗ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜೂನಿಯರ್ ಟೋಸ್ ಪ್ರೀಸ್ಕೂಲ್‌ನ 15ಕ್ಕೂ ಹೆಚ್ಚು ಶಾಖೆಗಳಿವೆ. ಮೈಸೂರಿನ ನಂತರ ಮಂಡ್ಯದಲ್ಲಿ ನೂತನ ಶಾಖೆಯನ್ನು ಆರಂಭಿಸಲಾಗುತ್ತಿದೆ ಎಂದರು.

ನೂತನ ಶಾಖೆಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಮಾಜಿ ಮಂತ್ರಿ ಕೆ.ಗೋಪಾಲಯ್ಯ, ಶಾಕರಾದ ಪಿ.ರವಿಕುಮಾರ್ ಗೌಡ, ಮಧು ಜಿ.ಮಾದೇಗೌಡ, ಎಂ.ಜಿ.ದಿನೇಶ್ ಗೂಳೀಗೌಡ, ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಸಿ.ಭಗವಾನ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಎಡಿಸಿಸಿ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಬಿಬಿಎಂಪಿಯ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಡಿಐಜಿ ಎನ್.ವಿಷ್ಣುವರ್ಧನ, ಮಂಡ್ಯ ಎಸ್‌ಪಿ ಡಾ.ವಿ.ಜೆ.ಶೋಭರಾಣಿ, ಬೆಂಗಳೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ಗೌಡ ಹಾಗೂ ಸಂಸ್ಥೆಯ ಸಹ ಸಂಸ್ಥಾಪಕಿ ಅಶ್ವಿನಿ ಪುನಿತ್ ರಾಜ್‌ಕುಮಾರ್ ಭಾಗವಹಿಸುವರು ಎಂದು ಹೇಳಿದರು.

Continue Reading

Mandya

ಫೆ.7ಕ್ಕೆ ನಾನು ಕಾಫಿರ ಪುಸ್ತಕ ಬಿಡುಗಡೆ : ಡಾ.ಸುಧಾಕರ್ ಹೊಸಳ್ಳಿ

Published

on

ಮಂಡ್ಯ: ಅಖಿಲ ಭಾರತ ಸಾಹಿತ್ಯ ಪರಿಷದ್ ಮತ್ತು ಸ್ವರಾಷ್ಟ್ರ ಪ್ರಕಾಶನ ಸಹಯೋಗದಲ್ಲಿ ನಾನು ಕಾಫಿರ ಪುಸ್ತಕ ಬಿಡುಗಡೆ ಸಮಾರಮಭವನ್ನು ಫೆ.7ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೃತಿಯ ಕತೃ ಡಾ.ಸುಧಾಕರ್ ಹೊಸಳ್ಳಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತವನ್ನು ವಿಭಜಿಸಲು ಅಂಬೇಡ್ಕರ್‌ರನ್ನು ಹಿಂದೂ ಧರ್ಮದ ವಿರುದ್ಧ ಗುರಾಣೀಯಾಗಿ ಬಳಸಲಾಗುತ್ತಿದೆ. ಈ ಸಂಬಂಧ ಹಿಂದೂ ಸಮಾಜದ ಜಾಗೃತಿ ಭಾಗವಹಿsi `ನಾನೂ ಕಾಫಿರ’ ಕೃತಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್‍ಯದರ್ಶಿ ಬಿ.ಎಲ್.ಸಂತೋಷ್ ಕಾರ್‍ಯಕ್ರಮ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡುವರು. ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು. ಎಸ್‌ಬಿಇಟಿ ಕಾರ್‍ಯದರ್ಶಿ ಡಾ.ಮೀರಾಶಿವಲಿಂಗಯ್ಯ ಹಾಗೂ ಸ್ವರಾಷ್ಟ್ರ ಪ್ರಕಾಶನದ ಮಹಾಪೋಷಕ ಚಂದ್ರಶೇಖರ್ ದಡದಪುರ ಭಾಗವಹಿಸಲಿದ್ದಾರೆ. ಸಂವಿಧಾನ ತಜ್ಞ, ಲೇಖಕ ಡಾ.ಸುಧಾಕರ ಹೊಸಳ್ಳಿ ಉಪಸ್ಥಿತರಿರುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪುಸ್ತಕ ಪ್ರೇಮಿ ಎಂ.ಅಂಕೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್‌ನ ಜಿಲ್ಲಾಧ್ಯಕ್ಷ ಎಚ್.ಪದ್ಮನಾಭ, ವಿಭಾಗ ಪ್ರಭಾರಿ ಬಿ.ಎಸ್.ಅನುಪಮ ಇದ್ದರು.

Continue Reading

Mandya

ಅಪ್ರಾಪ್ತ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ: ಎಚ್.ಕೆ.ವೀರಣ್ಣ

Published

on

ಮದ್ದೂರು: ಹದಿಹರೆಯದ ಯುವಕರುಗಳು ಅರಿವಿನ ಕೊರತೆಯಿಂದ ಮಾದಕ ವಸ್ತುಗಳ ವ್ಯಸನಿಗಳಾಗಿ ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲಗೊಳ್ಳುವ ಮೂಲಕ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ ಎಂದು ಎಚ್. ಕೆ. ವೀರಣ್ಣ ಗೌಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಪ್ಪಿನಕೆರೆ ಶಿವಕುಮಾರ್ ಹೇಳಿದರು.

ನಗರದ ಎಚ್. ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಬುಧವಾರ ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ಭಾರತದಲ್ಲಿ ತಾತ್ಕಾಲಿಕ ಸುಖ ಮತ್ತು ಮೋಹಕ್ಕೆ ಒಳಗಾಗಿ ಯುವಕ ಯುವತಿಯರು ತಮಗರಿವಿಲ್ಲದೆ ಮಾದಕ ವ್ಯಸನಿಗಳಾಗುವ ಜೊತೆಗೆ ತಮ್ಮ ಉಜ್ವಲ ಭವಿಷ್ಯವನ್ನು ಕರಾಳವಾಗಿಸಿಕೊಂಡು ಪೋಷಕರಿಗೆ ಹಾಗೂ ಸಮಾಜಕ್ಕೆ ಕಂಟಕವಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಕೇವಲ ಕಾನೂನುಗಳ ಮೂಲಕ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಿದ್ಯಾವಂತರು ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಮಾದಕ ವಸ್ತುಗಳ ಅಪಾಯದ ಬಗ್ಗೆ ಯುವ ಜನರಿಗೆ ಶಿಕ್ಷಣ ನೀಡಲು ಶಾಲೆಗಳು, ಪೋಷಕರು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಉಪ ಪ್ರಾಂಶುಪಾಲೆ ಜಿ.ಎಸ್. ನಂದಿನಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಚ್.ಎಸ್. ಪಂಚಲಿಂಗೇಗೌಡ, ಜಿ. ಸುರೇಂದ್ರ, ಕುಮಾರ್, ಸುಚಿತ್ರ, ಚಾಂದಿನಿ, ಸ್ಪೂರ್ತಿ, ಡಾ. ಸುಧಾ, ಎಂ.ಪಿ. ರಮ್ಯ, ಜಿ .ರಕ್ಷಿತಾ, ಸ್ವಾತಿ,ಟಿ. ಎನ್.ಸುಚಿತ್ರ ಸೇರಿದಂತೆ ಇತರರು ಹಾಜರಿದ್ದರು.

Continue Reading

Trending

error: Content is protected !!