Mandya
ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಿ – ಡಿಸಿ
ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ಏಪ್ರಿಲ್ 25 ರಂದು ರಾತ್ರಿ ಪಿ.ಆರ್‌ಒ, ಎ.ಪಿಆರ್.ಒ ಹಾಗೂ ಮತಗಟ್ಟೆ ಅಧಿಕಾರಿಗಳು ಮತದಾನ ಕೇಂದ್ರಕ್ಕೆ ಆಗಮಿಸಲಿದ್ದಾರೆ. ಅವರಿಗೆ ಮೂಲಭೂತ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಕಲ್ಪಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು. ಕುಡಿಯುವ ನೀರು, ಶೌಚಾಲಯ, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳು ಹಾಗೂ ಇನ್ನಿತರೆ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ತಿಳಿಸಿದರು.

ಬಿಸಿಲಿನ ತಾಪ ಹೆಚ್ಚಿದ್ದು, ಒ.ಆರ್.ಎಸ್, ಸೇರಿದಂತೆ ವಿವಿಧ ಅವಶ್ಯಕ ಔಷಧಿಗಳುಳ್ಳ ಮೆಡಿಕಲ್ ಕಿಟ್ ಗಳನ್ನು ಆರೋಗ್ಯ ಇಲಾಖೆ ವತಿಯಿಂದ ಒದಗಿಸಲಾಗುವುದು. ಕ್ಲಸ್ಟರ್ ಮತಗಟ್ಟೆ ಇರುವ ಕಡೆ ಸಮುದಾಯ ಆರೋಗ್ಯಾಧಿಕಾರಿ ಹಾಗೂ ಉಳಿದ ಕಡೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸುವಂತೆ ತಿಳಿಸಿದರು.
ನೆರಳಿನ ವ್ಯವಸ್ಥೆ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಆಗಮಿಸುವ ಮತದಾರರಿಗೆ ಹೆಚ್ಚು ಜನ ಸರದಿ ಸಾಲಿನಲ್ಲಿ ಕಾಯುವವರಿಗೆ ನೆರಳಿನ ವ್ಯವಸ್ಥೆಯಾಗಬೇಕು. ಶಾಲೆಗಳಲ್ಲಿ ಕೊಠಡಿ ಇರುವ ಕಡೆ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಮಾಡಿ. ಕೊಠಡಿ ಇಲ್ಲದ ಸ್ಥಳಗಳಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಿ ಎಂದರು.

ಪ್ರತಿ ಮತಗಟ್ಟೆಯಲ್ಲಿ ವಿಕಲಚೇತನರಿಗೆ ಅನುಕೂಲ ಕಲ್ಪಿಸಲು ವೀಲ್ ಚೇರ್ ವ್ಯವಸ್ಥೆ, ವಿಕಲಚೇತನರು ತಮ್ಮ ಮನೆಯಿಂದ ಮತಗಟ್ಟೆಗೆ ಆಗಮಿಸಲು ವಾಹನದ ವ್ಯವಸ್ಥೆ ಬೇಕಿದ್ದಲ್ಲಿ ಮೂರು ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು. ವಿಕಲಚೇತನರಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಸಕ್ಷಮ್ ಆ್ಯಪ್ ನಲ್ಲಿ ತಿಳಿದುಕೊಳ್ಳಬಹುದು ಎಂದರು.
ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಊಟ ಉಪಹಾರದ ವ್ಯವಸ್ಥೆ ನಿಗದಿಪಡಿಸಿರುವ ಸಮಯಕ್ಕೆ ಆಗಬೇಕು. ಅವರುಗಳು ಆಹಾರ ಸೇವಿಸಲು ಹೊರಗೆ ಹೋಗಲು ಅವಕಾಶವಿರುವುದಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಗ್ರಾಮ ಪಂಚಾಯತಿ ಅಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯವರು ಸಮನ್ವಯವಾಗಿ ಕಾರ್ಯನಿರ್ವಹಿಸಲು ಯೋಜನೆ ರೂಪಿಸಿ ಮತಗಟ್ಟೆಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಡಿ.28 ರಂದು ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ : ಪಾಪಣ್ಣ
ಮಳವಳ್ಳಿ : ಇದೇ ಡಿ.28 ರಂದು ಬೆಂಗಳೂರಿನ ಲಕ್ಷ್ಮೀನಾರಾಯಣಪುರದ ಒಡಲೂರು ಶ್ರೀ ಜ್ಯೋತಿ ರಾಮಲಿಂಗ ಸ್ವಾಮಿಗಳ ಸಮರಸ ಸನ್ಮಾರ್ಗ ಸಂಘದ ಕಚೇರಿಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರ್.ಆರ್ ವಧು- ವರರ ಕೇಂದ್ರದ
ಅಧ್ಯಕ್ಷ ಪಾಪಣ್ಣ ಅವರು ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾರಾಯಣಪ್ಪ.ವಿ ಜಾಲಗೆರೆ ಮಾತನಾಡಿ, ಪಾಪಣ್ಣನವರ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಹಾಗೂ ಸಹಭಾಗಿತ್ವವನ್ನು ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಡಿವಾಳರ ಖಡ್ಗ ಪತ್ರಿಕೆಯ ಚಂದ್ರಶೇಖರ್, ಶಂಕರಮಠ ವಾರ್ಡ್ ಒಬಿಸಿ ಅಧ್ಯಕ್ಷ ಜಯರಾಮ್, ಬಿಜೆಪಿ ಮುಖಂಡ ಕೆಂಚಪ್ಪ, ಮುಖಂಡರಾದ ನಾಗರಾಜ ಮತ್ತು ಮುನಿರಾಜು, ವೆಂಕಟಾದ್ರಿ ಟೆಂಟ್ ಹೌಸ್ ಮಾಲೀಕ ವೆಂಕಟೇಶ್ ಉಪಸ್ಥಿತರಿದ್ದರು.
Mandya
ವಿವಿಧ ಗಣ್ಯರ ಪುತ್ಥಳಿ, ಸರ್ಕಲ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಶಾಸಕ ಕೆ.ಎಂ.ಉದಯ್
ಮದ್ದೂರು: ತಾಲೂಕಿನ ನಗರ ವ್ಯಾಪ್ತಿಯ ವಿವಿಧ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಶಾಸಕ ಕೆ. ಎಂ .ಉದಯ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮದ್ದೂರು ನಗರದ ಟಿ.ಬಿ. ಸರ್ಕಲ್‌ನಿಂದ ಪೇಟೆಬೀದಿ, ಕೊಲ್ಲಿ ಸರ್ಕಲ್‌ವರೆಗೆ 80 ಅಡಿ ರಸ್ತೆ ಮತ್ತು ಶಿವಪುರದ ಕೊಪ್ಪ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರಮುಖ ಸರ್ಕಲ್‌ಗಳಲ್ಲಿ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಶಿವಪುರದ ಕೊಪ್ಪ ಸರ್ಕಲ್ – ಭಕ್ತ ಕನಕದಾಸರು, ಕೊಲ್ಲಿ ಸರ್ಕಲ್ – ವಿಶ್ವಗುರು ಜಗಜ್ಯೋತಿ ಶ್ರೀ ಬಸವಣ್ಣ, ಹೂವಿನ ಸರ್ಕಲ್ – ಅಮರ ಶಿಲ್ಪಿ ಶ್ರೀ ಜಕಣಚಾರಿ, ಕೆಮ್ಮಣ್ಣು ನಾಲೆ ಸರ್ಕಲ್ – ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸ್ಟೇಡಿಯಂ ಸರ್ಕಲ್ – ಶ್ರೀ ಶ್ರೀ ಶ್ರೀ ಬಾಲ ಗಂಗಾಧರನಾಥ ಸ್ವಾಮಿಜೀ ಹಾಗೂ ಟಿ.ಬಿ. ಸರ್ಕಲ್ – ನಾಡಪ್ರಭು ಶ್ರೀ ಕೆಂಪೇಗೌಡರು ರವರುಗಳ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆಯ ಬಾಲರಾಮನ ಕೆತ್ತನೆಯ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ರವರ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ಮೂಲಕ ಯೋಜನೆಯ ವಿನ್ಯಾಸ, ಸ್ಥಳದ ಸೂಕ್ತತೆ, ಸಂಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿ, ಮುಂದಿನ ಕ್ರಮಗಳಿಗೆ ಅಗತ್ಯ ಮಾರ್ಗದರ್ಶನ ಪಡೆದಿದ್ದಾರೆ.
Mandya
ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
ವರದಿ : ಅಲ್ಲಾಪಟ್ಟಣ ಸತೀಶ್
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.
ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದ ರಮ್ಯಾ(26) ದೂರು ನೀಡಿರುವ ಯುವತಿಯಾಗಿದ್ದಾಳೆ. ಅದೇ ಗ್ರಾಮದ ಪಕ್ಕದ ಮನೆಯ ಪೃಥ್ವಿ(27) ಎಂಬಾತ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು,ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಮನೆಯಲ್ಲಿ ರಮ್ಯಾ ಒಬ್ಬಳೇ ಇರುವಾಗ ಅತ್ಯಾಚಾರವೆಸಗಿರುವುದಾಗಿ ಹೇಳಲಾಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಯಾರಿಗಾದರೂ ಹೇಳಿದರೆ ನಿಮ್ಮ ಅಪ್ಪ, ಅಮ್ಮನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಯುವತಿ ತಿಳಿಸಿದ್ದಾಳೆ.
ಅಕ್ಟೋಬರ್ ತಿಂಗಳಲ್ಲಿ ರಮ್ಯಾಗೆ ವಾಂತಿ ಶುರುವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರ ಬಳಿ ತಪಾಸಣೆ ಮಾಡಲಾಗಿ ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭಿಣಿಯಾಗಿರುವುದು ದೃಢ ಪಟ್ಡಿದೆ ಎನ್ನಲಾಗಿದೆ.

ಬಳಿಕ ಮದುವೆ ಮಾಡುವಂತೆ ಪೃಥ್ವಿ ಮನೆಯವರೊಂದಿಗೆ ಮಾತುಕತೆ ನಡೆದಿದ್ದು, ಮದುವೆಗೆ ಒಪ್ಪಿ ಇದೀಗ ಮದುವೆಯಾಗದೆ ಮೋಸ ಮಾಡಿರುವುದಾಗಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
-
Hassan2 hours agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special3 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan21 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
State21 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
Hassan19 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Kodagu21 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State17 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
-
Mandya20 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
