Connect with us

Hassan

ಹಣ, ಹೆಂಡ ಯಾವುದಕ್ಕೂ ಹಕ್ಕುಗಳ ಮಾರಿಕೊಳ್ಳಬೇಡಿ ರಾಷ್ಟ್ರೀಯ ಮತದಾರರ ದಿನಚರಣೆಯಲ್ಲಿ ನ್ಯಾ. ಟಿ.ಎನ್. ಇನವಳ್ಳಿ ಸಲಹೆ

Published

on

ಹಾಸನ : ಉತ್ತಮ ನಾಯಕನನ್ನು ಆಯ್ಕೆ ಮಾಡಲು ಪ್ರತಿಯೊಬ್ಬರೂ ಮತ ಹಾಕಬೇಕು. ಹಣ, ಹೆಂಡ ಯಾವುದಕ್ಕೂ ನಮ್ಮ ಹಕ್ಕುಗಳನ್ನು ಮಾರಿಕೊಳ್ಳಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎನ್. ಇನವಳ್ಳಿ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, (ಹಿಮ್ಸ್), ಸಭಾಂಗಣದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಬಂಧಿತರಾಗಿ ಮತ್ತು ಧರ್ಮ,ಜನಾಂಗ, ಜಾತಿ,ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು. ಪ್ರತಿಜ್ಞೆ ಮಾಡಬೇಕು ಎಂದರು. ೧೪ನೇ ಚುನಾವಣೆ ಮತದಾರರ ದಿನಾಚರಣೆಯ ಅಂಗವಾಗಿ ಮತದಾನದ ಪ್ರತಿಜ್ಞೆಯನ್ನು ಹೇಳುವುದಲ್ಲದೆ ಅದನ್ನು ನಾವು ಸರಿಯಾಗಿ ಪಾಲಿಸಬೇಕು. ನಾವು ಮಾತಿನಲ್ಲಿ ಒಂದು ಪುಸ್ತಕದಲ್ಲಿ ಒಂದು ಹೇಳುವುದೇ ಮತ್ತೊಂದು ಆಚರಣೆಯಲ್ಲಿಯೇ ಮಾಡುವುದು ಮತ್ತೊಂದು ಈ ರೀತಿಯಲ್ಲಿ ಮಾಡಬಾರದು ಎಂದು ಕಿವಿಮಾತು ಹೇಳಿದರು. ಸಂವಿಧಾನದಲ್ಲಿ ಮೂರು ರೀತಿಯ ನ್ಯಾಯವನ್ನು ನೋಡಬಹುದು ಆರ್ಥಿಕವಾಗಿ ಸಾಮಾಜಿಕ ರಾಜಕೀಯ ಇದರಲ್ಲಿ ಪತ್ರಿಕ ರಂಗ ನೋಡಬಹುದು. ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ ಈ ಎಲ್ಲವನ್ನು ಕಾಯುವ ಅಂಗ ಪತ್ರಿಕಾ ರಂಗ ಇದು ಎಲ್ಲವನ್ನು ತಿಳಿಸುವಂತಹ ಅಂಗವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ನಾವು ಜೀವನದಲ್ಲಿ ಚಾರಿತ್ರ ಗುಣ ಸರಿ ಇದ್ದರೆ ನಮ್ಮ ಮತದಾನವು ಸರಿ ಇರುತ್ತದೆ ಎಂದು ಸಲಹೆ ನೀಡಿದರು. ನಮ್ಮ ಸಮಾಜಕ್ಕೆ ಒಳ್ಳೆಯ ನಾಯಕನನ್ನು ಆಯ್ಕೆ ಮಾಡುವಾಗ ನಾವು ಯಾವುದೇ ರೀತಿಯ ಹಣಕ್ಕೆ ಹೆಂಡಕ್ಕೆ ಅಥವಾ ಬೇರೆ ಯಾವುದೇ ರೀತಿಯಿಂದಲೂ ನಮ್ಮ ಹಕ್ಕುಗಳನ್ನು ಮಾರಿಕೊಳ್ಳಬಾರದು. ನಮ್ಮ ಬುದ್ಧಿ ನಮ್ಮಲ್ಲಿ ಇದ್ದು ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂದು ತಿಳಿಸಿದರು. ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಮಾತನಾಡಿ ಭಾರತ ಚುನಾವಣಾ ಆಯೋಗ ನೆನಪಿಗಾಗಿ ಆಚರಣೆ. ೧೮ ವರ್ಷ ತುಂಬಿದ ಯುವ ಜನರಿಗೆ ಚುನಾವಣಾ ಮತದಾನ ದಿನ ಮಾಡುತ್ತೇವೆ. ನವ ಯುವಕರು ನವ ಯುವತಿಯರು ೧೮ ವರ್ಷ ತುಂಬಿದ ಮೇಲೆ ಅವರು ಮತದಾನಕ್ಕೆ ನೋಂದಾಯಿಸಿಕೊಳ್ಳುವ ಹಕ್ಕು ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ನಮ್ಮ ಕರ್ತವ್ಯ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಣೆ ಮಾಡಬೇಕು. ಮತದಾನವನ್ನು ತಿಳಿಸಿ ಅದರ ತಿಳುವಳಿಕೆಯನ್ನು ಸಹ ಎಲ್ಲರಿಗೂ ತಿಳಿಸುವಂತೆ ಮಾಡಬೇಕು. ನಮ್ಮ ಮತದಾನ ಹೆಚ್ಚು ಪಾರದರ್ಶಕ ವಾಗಿರುತ್ತದೆ. ಮತದಾನ ನೇರವಾಗಿ ಸ್ಪಷ್ಟವಾಗಿರುತ್ತದೆ. ಅಂಬಾನಿಗೆ ಇರುವುದು ಒಂದೇ ಮತ ಏನು ಇಲ್ಲದವನಿಗೆ ಇರುವುದು ಒಂದೇ ಮತ ಎಂದು ಹೇಳಿದರು. ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ನಾವು ಮತದಾನ ಮಾಡುವ ಮೊದಲು ಮತದಾನದಲ್ಲಿ ನಮ್ಮ ಹೆಸರು ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕು. ಮತದಾನದ ಅಂತಹ ಮತ್ತೊಂದು ಯಾವುದು ಇಲ್ಲ ಯಾವುದೇ ಒಂದು ವ್ಯವಸ್ಥೆಗೆ ಬ್ಯೂಟಿ ಎಲ್ಲರಿಗೂ ಒಂದೇ ರೀತಿಯ ಹಕ್ಕು ಇದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ವೀಪ್ ಸಮಿತಿ ಅಧ್ಯಕ್ಷರಾದ ಬಿ.ಆರ್. ಪೂರ್ಣಿಮಾ ಅವರು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾನದ ಪ್ರತಿಜ್ಞೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್, ಅಪಾರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಹಾಸನ ಉಪ ವಿಭಾಗಾಧಿಕಾರಿ ಜೆ.ಬಿ. ಮಾರುತಿ, ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಇತರರು ಉಪಸ್ಥಿತರಿದ್ರು.

Continue Reading
Click to comment

Leave a Reply

Your email address will not be published. Required fields are marked *

Hassan

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಯಾರು ಆತಂಕಪಡಬೇಕಾಗಿಲ್ಲ ಕಾಲವೇ ಉತ್ತರ ಕೊಡಲಿದೆ ಜೆಡಿಎಸ್ ಕಾರ್ಯಕರ್ತರಿಗೆ ದೈರ್ಯ ತುಂಬಿದ ಹೆಚ್.ಡಿ. ರೇವಣ್ಣ

Published

on

ಹಾಸನ : ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕಾಗುತ್ತದೆ ಅಷ್ಟೇ. ನಮ್ಮ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ದೈರ್ಯ ತುಂಬಿದರು.

ನಗರದ ಕುವೆಂಪು ಬಡಾವಣೆಯಲ್ಲಿರುವ ಡಿ.ಟಿ. ಪರಮೇಶ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನತೆಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ. ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡುವುದಿಲ್ಲ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕೆಲಸ ಮಾಡ್ತಿವಿ, ೪೮ ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ಬಾ ಎಂಬ ಕುಮಾರಸ್ವಾಮಿ ಮನವಿ ಮಾಡಿದ ವಿಚಾರವಾಗಿ ಮಾತನಾಡಿ, ಕೋರ್ಟ್‌ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡುವುದಿಲ್ಲ. ಹೇಸಿಗೆಯಂತಹ ವಿಚಾರವವು ರಾಜ್ಯಕ್ಕೆ, ನಮಗೆ ಗೌರವ ತಂದುಕೊಡುವುದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ತೆಗದುಕೊಂಡು ಹೋಗಲಾಗುತ್ತಿದೆ. ಈದಕ್ಕೆಲ್ಲಾ ಮೂಲ ಯಾರಿದ್ದಾರೆ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಲಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿದರು. ತಮ್ಮ ಮೇಲೆ ಎರಡು ಪ್ರಕರಣ ದಾಖಲು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು, ಯಾರು ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕು ಅಷ್ಟೇ. ನಮ್ಮ ಜಿಲ್ಲೆಯ ಜನರನ್ನು ಅರವತ್ತು ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನೀದ್ದೀನಿ, ಎ.ಮಂಜು, ಸ್ವರೂಪ್ ಪ್ರಕಾಶ್ ಇದ್ದಾರೆ. ಕಾರ್ಯಕರ್ತರು ಯಾರು ಭಯಪಡುವ, ಆತಂಕಪಡುವ ಅಗತ್ಯವಿಲ್ಲ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದ್ದು, ಈ ಸರ್ಕಾರದ ವೇಳೆ ಯಾವುದಾದರೂ ರಸ್ತೆ ಗುಂಡಿ ಮುಚ್ಚಿಲ್ಲ. ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರದ ಮಂತ್ರಿಗಳೇ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮಲ್ಲಿ ಇದ್ದು ಆ ಕಡೆ ಹೋಗಿದ್ದಾರಲ್ಲಾ ಕೆಲವರು ಸರ್ಕಾರ ಬಂದು ಒಂದು ವರ್ಷ ಆಗಿದೆ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಡಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ನಮ್ಮ ಆಡಳಿತದಲ್ಲಿ ನಾವು ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಕೊಟ್ಟು ತೋರಿಸಿದ್ದೇವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈ ಬಾರಿ ಹದಿನೈದನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈ ರೀತಿಯಾಗಲೂ ಕಾರಣ ಯಾರು ಕಾರಣ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರೆ ಅದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾತ್ರ. ಕುಮಾರಸ್ವಾಮಿ ಆಡಳಿತದಲ್ಲಿ ರಾಜ್ಯದಲ್ಲಿ ೧೫೦೦ ಹೈಸ್ಕೂಲ್, ೨೪೦ ಪ್ರಥಮ ದರ್ಜೆ ಕಾಲೇಜು ತೆರೆದರು. ಖಾಲಿ ಇದ್ದ ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿ ಎಂದರು. ಐವತ್ತು ವರ್ಷ ಆಡಳಿತದ ಕಾಂಗ್ರೆಸ್ ಕೈಯಲ್ಲೂ ಆಗಿರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇಡೀ ಇಂಡಿಯಾ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು. ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆ ಮಾಡಿಲ್ಲ. ಆದರೇ ಶಿಕ್ಷಕರ ಮಕ್ಕಳಿಗೆ ಉದ್ಯೋಗದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಅರಕಲಗೂಡು ಶಾಸಕ ಎ. ಮಂಜು.ಸ್ವರೂಪ ಪ್ರಕಾಶ್. ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ. ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಿವೇಕಾನಂದ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!