Chikmagalur
ಮರುಳಸಿದ್ದೇಶ್ವರರು ಹಾಗೂ ಬಸವಣ್ಣನವರು ಒಂದೇ ಕಾಲದಲ್ಲಿ ಜೀವಿಸಿದವರು

ಚಿಕ್ಕಮಗಳೂರು: ಮನುಷ್ಯನ ಹೃದಯಾಳದಿ ಭಗವಂತನು ನೆಲೆಸಿರುವನು. ಎಲ್ಲೆಲ್ಲೋ ತೆರಳಿ ಶೋಧಿಸುವ ಮೊದಲು, ಆತ್ಮದಲ್ಲಿ ಅಡಗಿರುವ ಪರಮಾತ್ಮನೊಟ್ಟಿಗೆ ಸನ್ಮಾರ್ಗದಲ್ಲಿ ಸಾಗಿದಾಗ ಬದು ಕು ಸಾತ್ವಿಕ ರೂಪು ಪಡೆದುಕೊಳ್ಳಲಿದೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಲಕ್ಯಾ ಹೋಬಳಿ ಸಮೀಪ ಗಾಣದಾಳು ಗ್ರಾಮದಲ್ಲಿ ಸೋಮವಾರ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಸೋಮವಾರ ಅವರು ಆರ್ಶೀವಚನ ನೀಡಿದರು.
ಭಕ್ತಾಧಿಗಳು ಮತ್ತು ಗ್ರಾಮಸ್ಥರು ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ದಾರಕ್ಕೆ ಮುಂದಾದರೆ ಸಾಲದು, ದೈನಂದಿನ ಪೂಜಾಕೈಂಕರ್ಯಗಳಲ್ಲಿ ತಲ್ಲೀನರಾಗಬೇಕು. ಪ್ರಾರ್ಥನೆ, ಪೂಜೆಯ ಜೊತೆಗೆ ವೈಮನಸ್ಸಿನ ಕೆಡಕನ್ನು ತೊಡೆದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ದೇವಾಲಯ ನಿರ್ಮಾಣಗೊಂ ಡಿದ್ದಕ್ಕೆ ಸಾರ್ಥಕವಾದಂತೆ ಎಂದು ತಿಳಿಸಿದರು.
ಶ್ರೀ ಮರುಳಸಿದ್ದೇಶ್ವರರು ಹಾಗೂ ಬಸವಣ್ಣನವರು ಒಂದೇ ಕಾಲದಲ್ಲಿ ಜೀವಿಸಿದವರು. ಶೋಷಿತರ ಧ್ವನಿ ಯಾಗಿ ಮತ್ತು ಸಂಸ್ಕೃತಿ, ಸಂಪ್ರದಾಯದ ಅಂಕುಡೊಂಕುಗಳನ್ನು ತಿದ್ದಲು ಇಡೀ ಜೀವನವನ್ನೆ ಸಮಾಜಕ್ಕಾಗಿ ಮುಡಿಪಿಟ್ಟ ಶ್ರೇಷ್ಟ ದಾರ್ಶನಿಕರು. ಯಜ್ಞಾಧಿಗಳನ್ನು ವಿರೋಧಿಸಿ ಉತ್ತಮ ಪರಂಪರೆಯನ್ನು ಸಮಾಜಕ್ಕೆ ಧಾರೆಗೈದವರು ಎಂದು ಬಣ್ಣಿಸಿದರು.
ಎದೆಗೂಡಿನಲ್ಲಿ ಪರಮಾತ್ಮನನ್ನು ಕಾಣಲು ಮಾನವ ತನ್ನ ದೃಷ್ಟಿಕೋನ ಬದಲಿಸಿ, ಶ್ರದ್ದಾರ್ಪೂಕವಾಗಿ ಒಳಗಣ್ಣಿನಿಂದ ಪ್ರಾರ್ಥಿಸಿದರೆ, ತಾನಾಗಿಯೇ ದರ್ಶನ ಭಾಗ್ಯ ಕರುಣಿಸುವನು. ತನ್ನೊಳಗಿನ ದೇವರನ್ನು ಪೂ ಜಿಸುವ ಪರಿಯನ್ನು ಅರಿತುಕೊಳ್ಳಬೇಕು. ಈ ರೀತಿಯಲ್ಲೂ ಮರುಳಸಿದ್ದರು ತನ್ನ ವ್ಯಾಪ್ತಿಯಲ್ಲಿ ಸಕಲದೈವವು ಒಂದೆಡೆ ನೆಲೆಸಿದ್ದಾನೆ ಎಂಬ ಸಿದ್ಧಾಂತ ಸಾರಿದ್ದರು ಎಂದು ಹೇಳಿದರು.
ಗ್ರಾಮಸ್ಥರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಗಾಣದಾಳು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯವರ ಭವ್ಯ ಮಂದಿರ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಮಕ್ಕ ಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದಾಗಿ ಬಾಲ್ಯದಿಂದಲೇ ದೇವಾಲಯಕ್ಕೆ ಕಳುಹಿಸುವ ಪದ್ಧತಿ ರೂಢಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಶ್ರೀ ಮರುಳಸಿದ್ಧರ ಕಾಲಘಟ್ಟದಲ್ಲಿ ಆರ್ಥಿಕ ಸಮಾನತೆ, ಮಹಿ ಳೆಯರಿಗೆ ಗೌರವಿಸುವುದು, ಕಾಯಕವೇ ಕೈಲಾಸ ಎಂಬುದನ್ನು ವಚನಗಳ ಮುಖಾಂತರ ಸಾರಿ ಸಮಸಮಾ ಜಕ್ಕೆ ಹೆಜ್ಜೆಯಿಟ್ಟ ಶ್ರೇಷ್ಟರ ದೇವಾಲಯವನ್ನು ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗ್ರಾಮಸ್ಥರ ಮನಸ್ಸು ಅ ತೀವ ದೊಡ್ಡದು ಎಂದು ಹೇಳಿದರು.
ಪ್ರಸ್ತುತ ದೇವಾಲಯ ಅಭಿವೃಧ್ದಿಗೆ ಶಾಸಕರ ನಿಧಿಯಿಂದ ೧೦ ಲಕ್ಷ ಅನುದಾನ ಪೂರೈಸುವ ಜೊತೆಗೆ ವಿವಿಧ ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಇಂದು ವಿಜೃಂಭ್ರಮಣೆಯಿಂದ ಲೋಕಾರ್ಪಣೆಗೊಂಡಿದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಒಕ್ಕಲಿನ ಕುಟುಂಬವು ಮುಕ್ತವಾಗಿ ತೆರಳಿ ಪೂಜಾವಿಧಿವಿಧಾನ ಕೈಗೊಳ್ಳಲು ಅನುವು ಮಾಡಲಾಗಿದೆ ಎಂದರು.
ಬಸವತತ್ವ ಪೀಠವು ಕೇವಲ ಚಿಕ್ಕಮಗಳೂರು ತಾಲ್ಲೂಕಿಗೆ ಸೀಮಿತವಾಗಿತ್ತು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಗದ್ದುಗೆ ವಹಿಸಿಕೊಂಡ ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲೂ ಪ್ರತೀತಿ ಪಡೆ ಯುತ್ತಿದೆ. ಮುಂದೆ ಚಿಕ್ಕಮಗಳೂರಿಗೆ ಆಗಮಿಸುವವರು ಶೃಂಗೇರಿ, ರಂಭಾಪುರೀ ಮಠಗಳಿಗೆ ಭೇಟಿ ನೀ ಡಿದಂತೆ, ಬಸವತತ್ವಪೀಠಕ್ಕೆ ಭೇಟಿ ನೀಡುವಂತೆ ಅಭಿವೃದ್ದಿಪಡಿಸಲು ಮುಂದಾಗುತ್ತೇವೆ ಎಂದರು.
ಉದ್ಯಮಿ ಹಾಗೂ ದಾನಿ ಬಿ.ಎನ್.ಚಿದಾನಂದ್ ಮಾತನಾಡಿ ದೇವಾಲಯ ಅಭಿವೃಧ್ದಿ ಹಣ ಕೊಡು ವಷ್ಟು ದೊಡ್ಡವರಲ್ಲ, ಕೇವಲ ಸೇವೆಯ ದೃಷ್ಟಿಯಿಂದ ಕೆಲಸ ನಿರ್ವಹಿಸಿದ್ದೇವೆ. ಭಕ್ತಾಧಿಗಳು ಪ್ರಾರ್ಥನೆ ಹಾ ಗೂ ಆಚರಣೆಗಾಗಿ ತಾವು ಸೇರಿದಂತೆ ಅನೇಕರ ದಾನದಿಂದ ಶ್ರೀ ಮರುಳಸಿದ್ದೇಶ್ವರರ ಭವ್ಯ ಮಂದಿರ ನಿ ರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಚಂಚಲ ಮನಸ್ಸನ್ನು ನಿಗ್ರಹಿಸಲು ದೇ ವಾಲಯ ಅತ್ಯಂತ ಪುಣ್ಯಸ್ಥಳಗಳು. ಪೂರ್ವಿಕರ ಕಾಲದಲ್ಲಿ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸ ಬೇಕು. ಮೊದಲು ಸ್ಥಳೀಯ ದೇವಾಲಯ ಆದ್ಯತೆ ನೀಡಿ, ತದನಂತರ ಪ್ರಸಿದ್ಧ ದೇಗುಲಗಳಿಗೆ ತೆರುವ ಪದ್ಧ ತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಜಿ.ಪಂ. ಮಾಜಿ ಉಪಾ ಧ್ಯಕ್ಷ ಬಿ.ಜಿ.ಸೋಮಶೇಖರ್, ಉದ್ಯಮಿಗಳಾದ ಬಿ.ಎನ್. ರಾಜಶೇಖರ್, ಬಿ.ಎನ್.ಷಡಾಕ್ಷರಿ, ಸಾಹಿತಿ ಚಟ್ನ ಹಳ್ಳಿ ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮಹಡಿಮನೆ ಸತೀಶ್, ಶ್ರೀ ಮರುಳಸಿದ್ದೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಂ.ರಮೇಶ್, ಉಪಾಧ್ಯಕ್ಷ ಜಿ.ರಮೇಶ್, ಗ್ರಾಮಸ್ಥರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ಗಿರೀಶ್, ಎಲ್.ಆರ್.ಈಶ್ವರಪ್ಪ ಉಪಸ್ಥಿತರಿದ್ದರು.
Chikmagalur
ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್,

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯ ನಡುವೆಯೂ ಸಾವಿರಾರು ಪ್ರವಾಸಿಗರ ದಂಡು ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳಿಗೆ ಹರಿದು ಬಂದಿದೆ.
ಕಾರು-ಬೈಕ್-ಟಿಟಿ ಸೇರಿದಂತೆ ಇಂದು 1850 ವಾಹನಗಳು ಗಿರಿಭಾಗಕ್ಕೆ ಭೇಟಿ ನೀಡಿವೆ. ಇದರ ನಡುವೆ ಚಾಲಕನ ನಿಯಂತ್ರಣ ತಪ್ಪಿ ಕಾರು-ಜೀಪ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು-ಜೀಪಿನ ಮುಂಭಾಗ ಜಖಂಗೊಂಡಿದೆ. ಕಾರು ಮುಳ್ಳಯ್ಯನಗಿರಿಯಿಂದ ವಾಪಸ್ ಆಗುವಾಗ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ, ಅಪಘಾತ ಸಂಭವಿಸಿದ ಪರಿಣಾಮ ಗಿರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ನಿಯಂತ್ರಿಸಲು ಪೊಲೀಸರು ಹಾಗೂ ಪ್ರವಾಸಿ ಮಿತ್ರರು ಹರಸಾಹಸ ಪಡುವಂತಾಯಿತು.
ಟ್ರಾಫಿಕ್ ಕಂಟ್ರೋಲ್ ಮಾಡಲಾಗದೆ 2 ಗಂಟೆಗಳ ಕಾಲ ವಾಹನಗಳನ್ನ ಕೈಮರ ಚಕ್ ಪೋಸ್ಟ್ ನಲ್ಲಿ ನಿಲ್ಲಿಸಲಾಗಿತ್ತು. ಗಿರಿ ಪ್ರದೇಶದಲ್ಲಿ ವಾಹನಗಳು ಕಡಿಮೆಯಾದ ಬಳಿಕ ಮತ್ತೆ ವಾಹನಗಳನ್ನ ಬಿಡಲಾಯಿತು.
Chikmagalur
ಭಿಕ್ಷೆ ಬೇಡಿ ಕುರ್ಚಿ ದಾನ ಕೊಟ್ಟ ದಲಿತ ಸಂಘಟನೆಗಳು

ಚಿಕ್ಕಮಗಳೂರು : ತಾಲೂಕು ಕಚೇರಿಯಲ್ಲಿ ಕೂರಲು ಚೇರ್ ಇಲ್ಲ ಎಂದು ಭಿಕ್ಷೆ ಎತ್ತಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ವಿಲಕ್ಷಣ ಘಟನೆ ನಡೆದಿದೆ.
ಅಜ್ಜಂಪುರ ತಾಲೂಕಿನ ತಾಲೂಕು ಕಚೇರಿಗೆ 3500ರೂ. ಭಿಕ್ಷೆ ಎತ್ತಿ ಅದರಲ್ಲಿ 2500 ರೂ. ಕೊಟ್ಟು ದಲಿತ ಸಂಘಟನೆ ಕಾರ್ಯಕರ್ತರು ಕುರ್ಚಿ ತಂದಿದ್ದಾರೆ ಉಳಿದ ಹಣವನ್ನು ಸರ್ಕಾರಕ್ಕೆ ನೀಡಿವೆ .
ಅಜ್ಜಂಪುರ ಪಟ್ಟಣದ ಬಸ್ ಸ್ಟ್ಯಾಂಡ್, ಬಿ.ಎಚ್.ರಸ್ತೆ, ಹೋಟೆಲ್, ಅಂಗಡಿಗಳಲ್ಲಿ ಭಿಕ್ಷೆ ಎತ್ತಿದ ಹಣದಲ್ಲಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆಂದೇ 8 ಚೇರ್ ನೀಡಿದ್ದಾರೆ.
ಮಳೆ ಸುರಿಯುತ್ತಿದ್ದರೂ ರಸ್ತೆ-ರಸ್ತೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಭಿಕ್ಷೆ ಎತ್ತಲಾಯಿತು.
Chikmagalur
ದತ್ತು ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯ, ಮೈ ಸುಟ್ಟುಕೊಂಡು ನರಳುತ್ತಿರುವ ಕಂದಮ್ಮ

ಚಿಕ್ಕಮಗಳೂರು : ನಗರದ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗುವಿನ ಮೇಲೆ ಆರೈಕಾ ಸಿಬ್ಬಂದಿ ಕುದಿಯುವ ನೀರು ಸುರಿದ ಘಟನೆ ನಡೆದಿದೆ. ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ಘಟನೆ ಸಂಭವಿಸಿದೆ.
ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಯಡವಟ್ಟಿನಿಂದ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ನಗರದ ಗಾಂಧಿನಾಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ. ಜುಲೈ 09 ರಂದು ಘಟನೆ ನಡೆದಿದ್ದು, ಇಡೀ ಪ್ರಕರಣ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದಾರೆ.
ಸದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದತ್ತು ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya10 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar16 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar10 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore12 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu11 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
Chamarajanagar10 hours ago
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು