Connect with us

Mysore

ಬೆಳಗನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಮಾರಮ್ಮನ ಹಬ್ಬ

Published

on

ಎಚ್.ಡಿ. ಕೋಟೆ: ತಾಲೂಕಿನ ಬೆಳಗನಹಳ್ಳಿ ಗ್ರಾಮದಲ್ಲಿ ಶನಿವಾರದಿಂದ ಆರಂಭವಾದ ಮೂರು ದಿನಗಳ ಮಾರಮ್ಮನವರ ಹಬ್ಬದ ಹಿನ್ನಲೆ ಮೂರನೇ ದಿನವಾದ ಸೋಮವಾರ ಬೆಳಿಗ್ಗೆ ಮಾರಮ್ಮ ದೇವಾಲಯದಲ್ಲಿ‌ ಮಾರಮ್ಮ ದೇವಿಯನ್ನು ವಿವಿಧ ಹೂವುಗಳಿಂದ‌ ಅಲಂಕರಿಸಲಾಗಿತ್ತು. ಅಲ್ಲದೇ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಅಂಕದಿಂದ ಮಹಿಳೆಯರು ಕಳಸಗಳನ್ನು ಹೊತ್ತು ಮಾರಮ್ಮ ದೇವಿಯ ಉತ್ಸವಕ್ಕೆ ಚಾಲನೆ ನೀಡಿದರು.

ಮೆರವಣಿಗೆಗೆ ಸತ್ತಿಗೆ ಸೂರಪಾನಿ, ವೀರಗಾಸೆ ಮಂಗಳವಾದ್ಯಗಳು ಸಾಥ್ ನೀಡಿದವು.

ಎಚ್.ಡಿ.ಕೋಟೆ ತಾಲೂಕಿನ ಪ್ರಮುಖ ಹಬ್ಬಗಳಲ್ಲಿ ಈ ಗ್ರಾಮದ ಮಾರಮ್ಮನವರ ಹಬ್ಬವೂ ಒಂದಾಗಿದ್ದು ಹಾಗೂ ಹೆಚ್ಚು ಜನರು ಭಾಗವಹಿಸುವ ಹಬ್ಬವೂ ಸಹ ಇದಾಗಿದ್ದು ಅನೇಕ ಹರಕೆಗಳನ್ನು ಭಕ್ತರು ತೀರಿಸುತ್ತಿದ್ದುದು ಕಂಡುಬಂತು.

ನಂತರ ಗ್ರಾಮದ ಮಹಿಳೆಯರು ತಂಬಿಟ್ಟನ್ನು ಮಾಡಿ, ಅದಕ್ಕೆ ಗಣಗಲೆ ಹೂವಿನಿಂದ ಶೃಂಗಾರ ಮಾಡಿ ಮಾರಮ್ಮ ದೇವಾಲಯಕ್ಕೆ ಬಂದು ತಂಪಿನ ಪೂಜೆ ಮಾಡಿದರು. ಬಳಿಕ ಪರಸ್ಪರ ತಂಬಿಟ್ಡನ್ನು ತಿನ್ನಿಸುವ ಮೂಲಕ ಶುಭಾಶಯ ಕೋರಿದರು.

ಗ್ರಾಮದ ಯಜಮಾನರಾದ ನಾಗರಾಜು, ನಾಗೇಗೌಡ, ಕರಿಗೌಡ, ಸೋಮಣ್ಣ, ನಾಗಪ್ಪ, ಬಸಪ್ಪ, ಶಿವರಾಜು, ಗೋವಿಂದ, ಮಹದೇವು, ಸೋಮೇಗೌಡ, ಮಂಜೇಗೌಡ, ಚಲುವೇಗೌಡ, ನಿಂಗಪ್ಪ, ಈಶ್ವರೇಗೌಡ, ಪಟೇಲ್ ನಾಗೇಗೌಡ, ಸಣ್ಣೆಗೌಡ, ಸುರೇಶ್, ಚಂದ್ರಶೇಖರ್, ಪ್ರಭು, ಮಹೇಶ್ ಇದ್ದರು.

Continue Reading

Mysore

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ

Published

on

ಎಚ್.ಡಿ.ಕೋಟೆ: 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯ 65 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಏ.11 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏ.11 ರಂದು ಗ್ರಾಮದ ಮರಿಗೌಡ ಎಂಬ ವ್ಯಕ್ತಿ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.

ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದನ್ನು ಗಮನಿಸಿದ ತಂದೆ ಮಗಳನ್ನು ವಿಚಾರಿಸಿದ್ದಾನೆ ಬಾಲಕಿ ನಡೆದ ಘಟನೆಯನ್ನು ತಂದೆ, ತಾಯಿಗೆ ಹೇಳಿದ್ದಾಳೆ.

ಆತಂಕಗೊಂಡ ಬಾಲಕಿಯ ತಂದೆ, ತಾಯಿ ಮಾನ ಮರ್ಯಾದೆ ಗೊಸ್ಕಾರ ಘಟನೆ ಬಗ್ಗೆ ಯಾರ ಹತ್ತಿರ ಹೇಳಿಕೊಂಡಿಲ್ಲಾ. ಆದರೆ ಸಂತ್ರಸ್ತ ಬಾಲಕಿ ಅತ್ಯಚಾರ ವ್ಯಕ್ತಿ ನೋಡಿದಾಗಲೆಲ್ಲಾ ಇವನನ್ನು ಸಾಯಿಸಿ ಎಂದು ಹೇಳುವುದನ್ನು ಗಮನಿಸಿದ ತಂದೆ ತಾಯಿ ಖುದ್ದು ಘಟನೆ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಹಾಲು ತರಲು ಮನೆಯಿಂದ ಹೊರಗೆ ಬಂದ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

Mysore

ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ

Published

on

ಮೈಸೂರು: ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನಿರ್ಮಲ ನೆನಪು ಸಮಾರಂಭದಲ್ಲಿ  ಆರ್. ರಘು ಕೌಟಿಲ್ಯ ಅವರ ಭೂಮಿ ಪುತ್ರಿ, ಅಂಕಣಗಳ ಬೆಳಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

 

ರಂಗಭೂಮಿ ಕಲಾವಿದೆ ಪದ್ಮಶ್ರೀ ಬಿ.ಜಯಶ್ರೀ ಅವರು ಭೂಮಿಪುತ್ರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪುರುಷ ಸಮಾಜ ಹೆಣ್ಣನ್ನು ಪ್ರೀತಿಯಿಂದ ನೋಡುವುದಿಲ್ಲ. ನಿರ್ಲಕ್ಷ್ಯ ವಹಿಸುತ್ತಾರೆ. ಈ ಪುಸ್ತಕ ಓದಿದಾಗ ಪುರುಷ ಸಮಾಜಕ್ಕೆ ಹೆಂಡತಿಯನ್ನು ಪ್ರೀತಿಸಬೇಕು ಅನಿಸುತ್ತದೆ ಎಂದರು.

 

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ಮಾತನಾಡಿ, ವೃತ್ತಿ ಹಾಗೂ ಸಮಾಜಸೇವೆಯಲ್ಲೂ ರಘು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಸಣ್ಣ ಸಮುದಾಯದ ಬಗ್ಗೆ  ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಒಬಿಸಿ ಸಮುದಾಯದ ಜನಸಂಖ್ಯೆಯೇ ಬಹಳ‌ ದೊಡ್ಡದಿದೆ. ನಮ್ಮ ರಾಜ್ಯದಲ್ಲಿ ಸಣ್ಣ ಪುಟ್ಟ ಸಮುದಾಯಗಳು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರುತ್ತವೆ. ಪ್ರಬಲ ಸಮುದಾಯಗಳಿಗೆ ಹೋಲಿಸಿದರೆ ರಾಜ್ಯಾದ್ಯಂತ ಒಬಿಸಿ ಸಮುದಾಯದ ಸಂಖ್ಯೆಯೇ ದೊಡ್ಡದಿದೆ. ಸಣ್ಣ ಸಣ್ಣ ಸಮುದಾಯಗಳನ್ನು ಒಟ್ಟಾಗಿ ಸೇರಿಸಿದರೆ ಒಬಿಸಿ ಸಮುದಾಯಗಳ ಸಂಖ್ಯೆಯೇ ಹೆಚ್ಚಾಗಿದೆ. ನಾನು ಕೂಡ ಒಬಿಸಿ ಸಮುದಾಯಕ್ಕೆ ಸೇರಿದವನಾಗಿದ್ದೇನೆ. ಸಣ್ಣ ಸಣ್ಣ ಒಬಿಸಿ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

.

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಮಾತನಾಡಿದರು.

 

ಶಾಸಕ ಟಿ.ಎಸ್. ಶ್ರೀವತ್ಸ, ಗಾಯಕಿ ಸಂಗೀತಾ ಕಟ್ಟಿ,  ಕೋಮಲ ಹರ್ಷಕುಮಾರ ಗೌಡ, ಮಡ್ಡೀಕೆರೆ ಗೋಪಾಲ, ಮಾಜಿ ಮೇಯರ್ ಶಿವಕುಮಾರ್ ಅವರು ಉಪಸ್ಥಿತರಿದ್ದರು.

Continue Reading

Mysore

ಸಾವಿರಾರೂ ಪರಿಸರ ಪ್ರೇಮಿಗಳಿಂದ ಮೌನ ಪ್ರತಿಭಟನೆ

Published

on

ಮೈಸೂರು: ಇಲ್ಲಿನ ರಸ್ತೆ ಅಗಲೀಕರಣಕ್ಕಾಗಿ 40ಕ್ಕೂ ಹೆಚ್ಚಿನ ಮರಗಳ ಹನನ ನಡೆಸಿರುವುದನ್ನು ಖಂಡಿಸಿ ಶುಕ್ರವಾರ ಮೌನ ಪ್ರತಿಭಟಿಸಲಾಯಿತು.

ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ ವತಿಯಿಂದ ಕರ್ನಾಟಕ ಪೊಲೀಸ್‌ ಅಕಾಡೆಮಿ ಬಳಿ ಮರಗಳು ಹನನ ಗೊಂದ ಸ್ಥಳದಲ್ಲಿ. ಸಾವಿರಾರೂ ಪರಿಸರ ಪ್ರೇಮಿಗಳು ಸೇರಿ ಕಪ್ಪು ಪಟ್ಟಿ ಧರಿಸಿ, ಮೊಂಬತ್ತಿ ಬೆಳಗುವ ಮೂಲಕ ಅಮಾನುಷವಾಗಿ ಕಡಿಯಲ್ಪಟ್ಟ 40 ಮರಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಗಿಡಗಳನ್ನು ನೆಟ್ಟು ಬೆಳೆಸಬೇಕಾದ ಅರಣ್ಯ ಇಲಾಖೆ 40 ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಈ ರಸ್ತೆಯ ಅಗಲೀಕರಣವೇ ಅಗತ್ಯವಿಲ್ಲ. ಅನಿವಾರ್ಯವಾಗಿದ್ದರೆ ಲಲಿತ್‌ ಮಹಲ್‌ ಹತ್ತಿರದ ಎಟಿಐ ಮುಂಭಾಗದಲ್ಲಿ ಮಾಡಿರುವಂತೆ ಮರಗಳನ್ನು ಉಳಿಸಿಕೊಂಡು ರಸ್ತೆ ಅಗಲೀಕರಣ ಮಾಡಬಹುದಿತ್ತು ಎಂಬುವುದು ಪರಿಸರ ಪ್ರೇಮಿಗಳ ಒತ್ತಾಯದ ಮಾತಾಗಿದೆ.

Continue Reading

Trending

error: Content is protected !!