Mandya
ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ

ಮದ್ದೂರು :- ತಾಲೂಕಿನ ಗೆಜ್ಜಲಗೆರೆಯ ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮೆಗಾ ಡೈರಿ ಮೊದಲ ಅಂತಸ್ತಿನ ತುಪ್ಪ ಮತ್ತು ಕೋವಾ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತುಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿದೆ
ಭಾನುವಾರ ಬೆಳ್ಳಿಗ್ಗೆ ಏಳರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೌಕರರು ಹೋಗಿ ನೋಡಿದಾಗ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು ನಂದಿಸುವ ಪ್ರಯತ್ನ ಮಾಡಿದರು ಆದರೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಎಲ್ಲೆಡೆ ಆವರಿಸಿದ್ದರಿಂದ
ಬಾಯ್ಲರ್ ಗಳು ಸ್ಪೋಟಗೊಂಡಿರುವ ಸಾಧ್ಯತೆ ಹೆಚ್ಚಾಗಿದೆ.
ಮೆಗಾ ಡೈರಿ ಕಟ್ಟಡದಲ್ಲಿ ಬೆಂಕಿ ಧಗ ಧಗಿಸಿ ಹೊತ್ತಿ ಉರಿದಿದ್ದು ಇದರಿಂದ ಮನ್ ಮುಲ್ ಆವರಣದಲ್ಲಿ ದಟ್ಟ ಹೊಗೆಆವರಿಸಿದೆ
ಬೆಂಕಿ ನಂದಿಸಲು ಸ್ಥಳೀಯ ನೌಕರರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದು ಕೇಂದ್ರ ಸಚಿವ ಅಮಿತ್ ಶಾ ಕಳೆದ ವರ್ಷ ಮೆಗಾ ಡೈರಿ ಕಟ್ಟಡಕ್ಕೆ ಚಾಲನೆ ನೀಡಿದ್ದರು.
ಇದೀಗ ಬೆಂಕಿ ಅವಘಡದಿಂದ ಬಾರಿ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
Mandya
ವೈದ್ಯ ಅಧಿಕಾರಿ ನಟರಾಜ್ ಆತ್ಮಹತ್ಯೆ ಪ್ರಕರಣ – ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ದಾಖಲೆ ಸಮೇತ ಸ್ಪಷ್ಟನೆ.

ಮಂಡ್ಯ : ವೈದ್ಯ ಅಧಿಕಾರಿ ನಟರಾಜ್ ಆತ್ಮಹತ್ಯೆ ಪ್ರಕರಣ.
ನಟರಾಜ್ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲಾ.
ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ದಾಖಲೆ ಸಮೇತ ಸ್ಪಷ್ಟನೆ.
ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗ್ತಿದೆ.
ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ.
2-11-23 ರಲ್ಲಿ ನನಗೆ ಹೃದಯಾಘಾತವಾಗಿದೆ ಎಂದು ರಜೆ ಕೇಳಿದ್ದರು ನಂತರ ನಾನು ಅವ್ರಿಗೆ ರಜೆ ನೀಡಿದ್ದೆ.
ಬಳಿಕ 17-11-23 ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗ್ತಿಲ್ಲ ತಿಳಿಸಿದ್ದರು.
ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು.
ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರ ಕೂಡ ನೀಡಿದ್ದಾರೆ.
ನಟರಾಜ್ ಖಿನ್ನತೆಗೆ ಒಳಾಗಾಗಿದ್ದರು.
ಈಗಾಗಲೇ ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು.
ನನ್ನ ಮೇಲಿನ ಆರೋಪ ಪಿತೂರಿ.
ಇನ್ಮುಂದೆ ನನ್ನ ವಿರುದ್ದ ಯಾರು ಪಿತೂರಿ ಮಾಡ್ತಿದ್ದಾರೆ ಎಂದು ತಿಳಿದುಕೊಙಡು ಎಚ್ಚರಿಕೆ ವಹಿಸ್ತಿನಿ.
ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್ ಗೆ ಯಾವುದೇ ಸಂಬಂಧ ಇಲ್ಲಾ.
Mandya
ಅಪರಿಚಿತ ವಾಹನ ಡಿಕ್ಕಿ: ಫಿಲ್ಡ್ ಆಫೀಸರ್ ಸ್ಥಳದಲ್ಲೇ ಸಾವು

ಮದ್ದೂರು: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫೀಲ್ಡ್‌ಮನ್ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡಹೊಸಗಾವಿ ಗ್ರಾಮದ ಬಳಿ ಗುರುವಾರ ನಡೆದಿದೆ.
ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಫೀಲ್ಡ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್(40) ಎಂಬುವರೇ ಅಪಘಾತದಲ್ಲಿ ಮೃತರಾದ ವ್ಯಕ್ತಿಯಾಗಿದ್ದಾರೆ.
ಮಂಡ್ಯ ನಗರದ ಚಾಮುಂಡೇಶ್ವರಿನಗರ ಬಡಾವಣೆಯಲ್ಲಿ ವಾಸವಾಗಿದ್ದ ಮಂಜುನಾಥ್ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ವಾಪಸ್ಸು ಬರುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ ಮಂಜುನಾಥ್ ಅವರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mandya
ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಡ್ಯ ನಗರದ ಆನೆಕೆರೆ ಬೀದಿಯ ಕಾಳಿಕಾಂಬ ವೃತ್ತದ ಬಳಿಯಿರುವ ಐತಿಹಾಸಿಕ ಕೊಳವಾದ ಗಂಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಚೀವರ್ಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಾತನೂರು ಮತ್ತು ರೋಟರಿ ಸಂಸ್ಥೆ ,ಒನ್ ಇಂಡಿಯ ಟಿವಿ ಚಾನೆಲ್ ಹಾಗೂ ಜೈ ಕರ್ನಾಟಕ ಪರಿಷತ್ ಇವರ ಸಹಯೋಗದಲ್ಲಿ ರೋಟರಿ ಅಧ್ಯಕ್ಷೆ ಅನುಪಮ ರವರು,1 ಇಂಡಿಯ ಟಿವಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಇಂಡಿಯಾ ಟಿವಿ ಸಂಸ್ಥಾಪಕರಾದ ಜೈಕುಮಾರ್ ಹಾಗೂ ಜೈ ಕರ್ನಾಟಕ ಪರಿಷತ್ ರಾಜ್ಯಧ್ಯಕ್ಷರಾದ ಬೋರ್ ವೆಲ್ ನಾರಾಯಣ್ ರವರ ನೇತೃತ್ವದಲ್ಲಿ ಕರ್ನಾಟಕವೆಂಬ ನಾಮಕರಣದ 50ನೇ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಚೀವರ್ಸ್ ಶಾಲಾ ಮಕ್ಕಳಿಂದ ಕನ್ನಡ ಜಾಥಾ ಮತ್ತು ಐತಿಹಾಸಿಕ ಇತಿಹಾಸವುಳ್ಳ ಗಜೇಂದ್ರ ಮೋಕ್ಷ ಕೊಳವನ್ನು ಉಳಿಸುವ ಸಲುವಾಗಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ಜಾಥ ಉದ್ಘಾಟಿಸಿ ಮಾತಾನಾಡಿದ ಶಾಸಕ ಪಿ.ರವಿಕುಮಾರ್ ಗೌಡ, ಗಜೇಂದ್ರ ಮೋಕ್ಷ ಕೊಳವನ್ನು ಉಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಕೊಳದ ಅಭಿವೃದ್ಧಿ ಮಾಡಿ ಆಕರ್ಷಣೀಯ ಸ್ಥಳವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪೇಟೆಬೀದಿ ಯಿಂದ ಪ್ರಾರಂಭ ಆದ ಜಾಥಾ ಸಂಜಯ ವೃತ್ತದಿಂದ ಆರ್.ಪಿ ರಸ್ತೆಯ ಮೂಲಕ ಹಾದುಹೋಗಿ,ನೂರಡಿ ರಸ್ತೆಯ ಮೂಲಕ ವಿವಿ ರಸ್ತೆಯನ್ನ ಆದುಹೋಗಿ ಮಹಾವೀರ ಸರ್ಕಲ್ ಬಳಿ ಕನ್ನಡ ಸರಪಳಿಯನ್ನು ರೂಪಿಸಿ,ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿ ನಾಡಗೀತೆ ಯೊಟ್ಟಿಗೆ ಕಾರ್ಯವನ್ನು ಮುಕ್ತಾಯಗೊಳಿಸಲಾಯಿತು.
ಈ ವೇಳೆ ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷರಾದ ರಮೇಶ್, ಅನುಪಮ, ನಾರಾಯಣ್ ಸ್ವಾಮಿ,ಲಕ್ಕಪ್ಪ ಅಚೀವರ್ಸ್ ಶಾಲೆಯ ಪ್ರಾಂಶುಪಾಲರಾದ ವಿದ್ಯ ಹಾಗೂ ಅಡ್ಮಿನ್ ಆದ ರಾಮ್ ಸಿಂಗ್ ಜಗದೀಶ್ ಹಾಗೂ ಶಿಕ್ಷಕರು ಮತ್ತು ಇನ್ನಿತರರು ಉಪಸ್ಥಿತರಿದ್ದರು
ವರದಿ- ಮೋಹನ್ ರಾಗಿಮುದ್ದನಹಳ್ಳಿ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Mysore4 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ
-
Hassan1 day ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore4 days ago
ಹಳೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ದರಿದ್ರ ನನಗೆ ಬಂದಿಲ್ಲ, ಹೊಸದಾಗಿ ತರುವ ತಾಕತ್ತು ನನಗೆ ಇದೆ – ಶಾಸಕ ಡಿ. ರವಿಶಂಕರ್