Mandya
ಡಿ. 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20, 21 ಹಾಗೂ 22 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಹಿಂದೆ ಜೂನ್ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ, ಹೊರರಾಜ್ಯ ಹಾಗೂ ವಿದೇಶದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಸರ್ಕಾರ ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಯಾದ ಕೂಡಲೇ ಮಾಹಿತಿ ನೀಡಲಾಗುವುದು. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿನವರು ಸಾಹಿತಿಗಳ ಪಟ್ಟಿ ಒದಗಿಸಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮಗೊಳಿಸಲು ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಂಡ್ಯದಲ್ಲಿ 48 ನೇ ಸಾಹಿತ್ಯ ಸಮ್ಮೇಳನ 1974 ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ, 63 ನೇ ಸಾಹಿತ್ಯ ಸಮ್ಮೇಳನ 1994 ರಲ್ಲಿ ಡಾ. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರನೇ ಬಾರಿ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ಅಯೋಜಿಸುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮಂಡ್ಯ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು, ನಸೀರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Mandya
ಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
ಶ್ರೀರಂಗಪಟ್ಟಣ : 66/11ಕೆವಿ ವಿದ್ಯುತ್ ಉಪ-ವಿತರಣ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ನಾಳಿದ್ದು(ಡಿ.10) ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತಗೊಳಿಸುವುದಾಗಿ ಎಇಇ ಮಂಜುನಾಥ್ ಪ್ರಸಾದ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ, ಗಂಜಾಂ, ಮಂಡ್ಯ ವಾಟರ್ ಸಪ್ಲೆ, ಪಾಂಡವಪುರ ವಾಟರ್ ಸಪ್ಲೆ, ನಗುವನಹಳ್ಳಿ, ಬೆಳವಾಡಿ, ಬೊಮ್ಮೂರು ಅಗ್ರಹಾರ, ಕಿರಂಗೂರು, ಕೆ.ಶೆಟ್ಟಹಳ್ಳಿ, ಶ್ರೀನಿವಾಸ ಅಗ್ರಹಾರ, ಚಂದಗಾಲು, ದರಸಗುಪ್ಪೆ, ಚಿಂದಗಿರಿಕೊಪ್ಪಲು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಅಂದು ಬೆ.10 ರಿಂದ ಸಂಜೆ 06 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಾಯವಾಗುವುದಾಗಿ ಅವರು ತಿಳಿಸಿದ್ದಾರೆ.
Mandya
ಆಸ್ಪತ್ರೆಗೆ ಡಿಸಿ ಭೇಟಿ : ಅಪಘಾತಕ್ಕೀಡಾಗಿರುವ ಪ್ರಯಾಣಿಕರ ಆರೋಗ್ಯ ವಿಚಾರಣೆ
ಮಂಡ್ಯ: ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರ ಆರೋಗ್ಯ ವಿಚಾರಿಸಿದರು.
ಮದ್ದೂರು ತಾಲ್ಲೂಕಿನ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರ ಮದ್ದೂರು ತಾಲೂಕು ಅಗರಲಿಂಗನ ದೊಡ್ಡಿ ಸರ್ವಿಸ್ ರೋಡ್ ಬಳಿ ಅಮ್ಮ ಟೂರ್ಸ್ ಅಂಡ್ ಟ್ರಾವೆಲ್ಸ್ ರವರ ಮಾಲೀಕತ್ವದ ಸಂಖ್ಯೆ: KA51/EC/1665 ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಎಡಭಾಗಕ್ಕೆ ಮುಗುಚಿ ಬಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಗಾಯಗೊಂಡ 25 ಪ್ರಯಾಣಿಕರನ್ನು ಕೂಡಲೇ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇಲ್ಲಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದರಿ ಬಸ್ಸು ಶಿಂಷಾ ಬ್ಲಫ್ ಬಳಿ ಇರುವ ದಂಡಿ ಮಾರಮ್ಮನ ದೇವಸ್ಥಾನ ದಿಂದ ಕೆ ಪಿ ಅಗ್ರಹಾರ ಬೆಂಗಳೂರು ಇಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ.
ಜಿಲ್ಲಾಧಿಕಾರಿಗಳು ಮಿಮ್ಸ್ ಸಂಸ್ಥೆಗೆ ಭೇಟಿ ನೀಡಿ ಸದರಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿರುವ ಪ್ರಯಾಣಿಕರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದರು. ಜೊತೆಗೆ ಸೂಕ್ತ ಹಾಗೂ ಉತ್ತಮ ಮಟ್ಟದ ಔಷಧೋಪಚಾರಗಳನ್ನು ತುರ್ತಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
Mandya
ಕೃಷಿಕರು ಮಿಶ್ರ ಬೆಳೆಗೆ ಆದ್ಯತೆ ನೀಡಬೇಕು: ಡಾ. ಪಿ. ಎಲ್. ಪಾಟೀಲ
ಮಂಡ್ಯ : ರೈತರು ಒಂದೇ ತರವಾದ ಬೆಳೆ ಬೆಳೆಯುವ ಬದಲು ಏಕ ದಳ. ದ್ವಿದಳ ಬೆಳೆ ಬೆಳೆಯುವುದು ಸೂಕ್ತ. ಇದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ಪೂರೈಕೆ ಮಾಡಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಪಿ. ಎಲ್. ಪಾಟೀಲ ಅವರು ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಜಲಾನಯನ ಅಭಿವೃದ್ಧಿ ಇಲಾಖೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ “ಸಮಗ್ರ ಕೃಷಿಯಿಂದ ಸುಸ್ಥಿರತೆ” ಎಂಬ ಶಿರ್ಷಿಕೆ ಅಡಿಯಲ್ಲಿ ಮೂರು ದಿನಕಾಲ ಮಂಡ್ಯದ ವಿ. ಸಿ. ಫಾರಂ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ ವಿಶ್ವವಿದ್ಯಾಲಯದ ಮೊದಲ ಕೃಷಿ ಮೇಳ. ಸಮಗ್ರ ಕೃಷಿಯಿಂದ ಸುಸ್ಥಿರತೆಯಾಗಿದೆ . ರೈತ ಬಾಂಧವರು ಸುಸ್ಥಿರ ಕೃಷಿಗೆ ಮುಂದಾಗಬೇಕು ನಿಸರ್ಗದತ್ತವಾಗಿ ದೊರೆಯುವ ಮಣ್ಣು ಮತ್ತು ನೀರಿನ ಸಂಸ್ಕರಣೆ ಮಾಡುವುದು ಮುಖ್ಯ. ಮಂಡ್ಯ ಜಿಲ್ಲೆ ಶೇ. 70ಕ್ಕೂ ಹೆಚ್ಚು ಭೂಮಿ ಹಸಿರುಮಾಯವಾಗಿದೆ ಇದಕ್ಕೆ ಕಾವೇರಿ ಮಾತೆಗೆ ನೀವು ಚಿರಋಣಿಯಾಗಿರಬೇಕು ಎಂದು ಹೇಳಿದರು.

ಭೂಮಿಗೆ ಹರಿದು ಬರುವ ನೀರಿನ್ನು ಸಂಸ್ಕರಣ ಮಾಡಿ ಮಿತವಾಗಿ ಬಳಕೆ ಮಾಡಿ. ಭೂಮಿಯ ಸವಕಳಿಯನ್ನು ತಪ್ಪಿಸಿ. ಸಾವಯವ ಕೃಷಿ ಪದ್ಧತಿಯ ಮೂಲಕ ಉತ್ತಮ ಭತ್ತದ ಇಳುವರಿಯನ್ನು ಪಡೆಯಬಹುದು. ಕಬ್ಬಿನ ಬೆಳೆಗೆ ಸಾಲು ಸಾಲು ಬಿಟ್ಟು ನೀರು ಹಾಯಿಸಿ. ತೋಟಗಾರಿಕೆ ಬೆಳೆ ಜೊತೆ ಕುರಿ. ಕೋಳಿ ಸಾಕಾಣಿಕೆ ಜೊತೆಗೆ ಪಶುಪಾಲನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಆರ್. ನೆಹಲ್ ಅವರು ಮಾತನಾಡಿ ಸದರಿ ಕೃಷಿ ಮೇಳದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಮಳಿಗೆಯನ್ನು ತೆರೆದಿದ್ದಾರೆ. ನಮ್ಮ ರೈತ ಮಹಿಳೆಯರನ್ನು ಸುಸ್ಥಿರರನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಯ ಮೂಲಕ ಹಲವು ಸೌಲಭ್ಯವನ್ನು ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೂಲಕ ಕುಕ್ಕುಟ ಸಂಜೀವಿನಿ. ಮತ್ಸ್ಯ ಸಂಜೀವಿನಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಇದೇ ಮೊದಲ ಬಾರಿಗೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಯೋಜಿಸಿರುವ ಕೃಷಿ ಮೇಳದಲ್ಲಿ ಭಾಗಿಯಾಗಿ ರೈತರು ಕೃಷಿ ಕುರಿತಾಗಿ ಮಾಹಿತಿ ಪಡೆಯಬೇಕು. ಭಾರತ ದೇಶದಲ್ಲಿ ಕೃಷಿ ಭೂಮಿ ಸವಿಸ್ತರವಾಗಿದೆ. ರೈತರು ಹಳೆಯ ಹಾಗೂ ಸಾoಪ್ರದಾಯಿಕ ಕೃಷಿ ಪದ್ದತಿಯನ್ನು ಬಿಟ್ಟು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಹೆಚ್ಚು ಲಾಭವನ್ನು ಪಡೆಯಬಹುದು. ನೀರು ಮತ್ತು ಮಣ್ಣಿನ ಪೋಷಣೆ ಮಾಡುವುದು ಪ್ರತಿಯೊಬ್ಬ ರೈತನ ಜವಾಬ್ದಾರಿಯಾಗಿದೆ. ಎಂದು ಆಶೀರ್ವಾಚನ ನೀಡಿದರು.
ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಧ್ಯಕ್ಷರಾದ ಶ್ರೀ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಕೃಷಿಕರೇ ಹೆಚ್ಚಾಗಿರುವ ಸಂಶೋಧನ ಕೇಂದ್ರಕ್ಕೆ ವಿಶ್ವ ವಿದ್ಯಾಲಯ ನೀಡಿ 5 ಜಿಲ್ಲೆಗೆ ಅನುಕೂಲ ಮಾಡಿಕೊಟ್ಟಿರುವ ಸರ್ಕಾರದ ಕೆಲಸ ಉತ್ತಮವಾದದ್ದು. ಮಂಡ್ಯ ಜಿಲ್ಲೆಯ ರೈತರು ಕೃಷಿಯಲ್ಲಿ ತೊಡಗಿದ್ದರು ಸಹ ಇಳುವರಿ ಕಡಿಮೆ ಆದ್ದರಿಂದ ಪ್ರಗತಿಪರ ರೈತರ ಸಂಖ್ಯೆ ಹೆಚ್ಚಾಗಲು ವಿಶ್ವವಿದ್ಯಾಲಯ ತೆರೆದುಕೊಂಡು ಕೃಷಿ ಸಂಶೋಧಕರು ರೈತರೊಂದಿಗೆ ಸಂಪರ್ಕ ಇಟ್ಟುಕೊಂಡು ಅವರಿಗೆ ತಂತ್ರಜ್ಞಾನದ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಕುವೆಂಪುರವರ ನೇಗಿಲ ಯೋಗಿ ಹಾಡಿನಂತೆ ಭೂಮಿ ಮತ್ತು ನೀರನ್ನು ಮಾತೆಯಂತೆ ಪೂಜಿಸಬೇಕು. ಕೃಷಿ ಕ್ಷೇತ್ರಕ್ಕೆ ಯುವ ಸಮೂಹ ಹೆಚ್ಚಿನ ಆದ್ಯತೆ ನೀಡಿ ಆಧುನಿಕ ಯಂತ್ರೋಪಕರಣಗಳು ತಂತ್ರಜ್ಞಾನ ಬಳಸಿ ಕೃಷಿ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಕೃಷಿ ಕುರಿತು ಮಾಹಿತಿಯುಳ್ಳ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿ. ರೈತ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಕೆ.ಎಂ ಹರಿಣಿ ಕುಮಾರ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ನಿರ್ದೇಶಕ ನೇಹಲ್ ಆರ್.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ, ಉದ್ಯಮಿ. ಕನ್ನಡ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ. ಸಂಶೋಧನ ನಿರ್ದೇಶಕ ಡಾ. ಜಿ. ಎಂ. ದೇವಗಿರಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-
Mysore17 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya18 minutes agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mysore20 hours agoಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ
-
Special15 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
State21 hours agoನಾಳೆಯಿಂದ ಚಳಿಗಾಲದ ಅಧಿವೇಶನ: ಸುವರ್ಣಸೌಧದಲ್ಲಿ ಸುತ್ತ ಹೈ ಆಲರ್ಟ್ 6,000 ಪೊಲೀಸ್ ಭದ್ರತೆ
-
Hassan19 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Chikmagalur20 hours agoಗ್ರಾ.ಪಂ.ಸದಸ್ಯ ಗಣೇಶ್ ಕೊಲೆ ಪ್ರಕರಣ: ಐವರ ಬಂಧನ, ಮೂವರಿಗಾಗಿ ತೀವ್ರ ಶೋಧ
-
Chikmagalur20 hours agoಕಾಫಿನಾಡಲ್ಲಿ ನಿಲ್ಲದ ಕಾಡಾನೆ ದಾಳಿ: ಕಾರ್ಮಿಕ ಗಣಪತಿ ಪ್ರಾಣಾಪಾಯದಿಂದ ಪಾರು
