Connect with us

Location

ಗಂಡ ಸತ್ತ ಮುಂಡೆ ಎಂದಿದ್ದ ಎಚ್‌ಡಿಕೆ: ಪ್ರಕಾಶ್‌ ರೈ ಕಿಡಿ

Published

on

ಗಂಡ ಸತ್ತ ಮುಂಡೆ ಎಂದಿದ್ದ ಎಚ್‌ಡಿಕೆ: ಪ್ರಕಾಶ್‌ ರೈ ಕಿಡಿ

ಈ ಬಾರಿಯೂ ಹೆಣ್ಣಿಗೆ ಅವಮಾನಿಸಿದ ಕುಮಾರಸ್ವಾಮಿ

ಮಂಡ್ಯ: ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್‌ ಅವರನ್ನು ‘ಗಂಡ ಸತ್ತ ಮುಂಡೆ’ ಎಂಬ ಮಾತು ಹೇಳಿ ಸೋಲು ಅನುಭವಿಸಿದ್ದವರಿಗೆ ಅರ್ಥವಾಗಬೇಕಿದೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಮಗ ಯಾರು, ಕಳ್ಳನನ್ನ ಮಗ ಯಾರು ಎಂಬುದನ್ನ ಮಂಡ್ಯದ ಜನತೆ ನಿರ್ಧರಿಸುತ್ತಾರೆ ಎಂದು ನಟ ಪ್ರಕಾಶ್‌ ರೈ ಕಿಡಿಕಾರಿದರು.

ನಗರದ ರೈತ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ಸಹಯೋಗಲ್ಲಿ ಭಾನುವಾರ ಆಯೋಜಿಸಿದ್ದ ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಗರಾಗಿದ್ದಾರೆ, ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡಲು ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ‘ಗಂಡ ಸತ್ತ ಮುಂಡೆ’ ಎಂದು ಕರೆದಿದ್ದಕ್ಕೆ, ಮಂಡ್ಯ ಜಿಲ್ಲೆಯ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲೂ ಅಂತದ್ದೆ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಈಗ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಮಗ ಯಾರು, ಕಳ್ಳನನ್ನ ಮಗ ಯಾರು ಎಂದು ಮಂಡ್ಯದ ಜನತೆಯೇ ನಿರ್ಧಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಬಂದಿರುವುದರಿಂದ ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭುಗಳು ಬಂದಿದ್ಧಾರೆ, ಇದರಿಂದಾಗಿ ಮಹಾಪ್ರಭುವಿನ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಸ್ಸುಗಳು ಹೊರಟಿವೆ ಹಾಗಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನಮ್ಮ ಮಹಾಪ್ರಭುಗಳು ಕೋವಿಡ್ ಕಾಲದಲ್ಲಿ ಯಾಕೆ ಬರಲಿಲ್ಲ ಎಂದು ನರೇಂದ್ರ ಮೋದಿ ಅವರನ್ನು ಟೀಕಿಸಿದರು.

ಕಳೆದ ಸೆಪ್ಟಂಬರ್‌ನಲ್ಲಿ ಬರ ಪರಿಹಾರ ನೀಡಿ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ, ಏಪ್ರಿಲ್ ಬಂದರೂ ಬರ ಪರಿಹಾರ ನೀಡಲಿಲ್ಲ, ಇದರಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಹೋಗಿದೆ, ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ನೋಟೀಸ್ ನೀಡಲು ಮುಂದಾದಾಗ, ನೋಟೀಸ್ ನೀಡಬೇಡಿ ಮಾನ ಮರ್ಯಾದೆ ಹೋಗುತ್ತೇ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ನಾಟಕ ಏಕೆ ಎಂದು ಹರಿಯಾಯ್ದರು.

ಮುಖಂಡರಾದ ಡಾ.ವಾಸು, ಕುಮಾರ್ ಸಮತಳ, ಬಿ.ಟಿ.ವಿಶ್ವನಾಥ್‌, ಕೃಷ್ಣ ಪ್ರಕಾಶ್, ಸಿ.ಕುಮಾರಿ, ಲತಾ ಶಂಕರ್, ಸಿದ್ದರಾಜು. ಊರ್ಣಿಮಾ, ಜಗದೀಶ್‌ ನಗರಕೆರೆ ಭಾಗವಹಿಸಿದ್ದರು.

………..

Continue Reading
Click to comment

Leave a Reply

Your email address will not be published. Required fields are marked *

Mandya

ದಿನ ನಿತ್ಯ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ : ಎಸ್ಪೀ ಎನ್.ಯತೀಶ್

Published

on

ಮಂಡ್ಯ: ಪ್ರತಿದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.

ಅವರು ಮಂಡ್ಯ ನಗರದ ಪೊಲೀಸ್ ಪೆರೆಡ್ ಮೈದಾನದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಯ ಸಂಬಂಧ ಇಂದು ಪೊಲೀಸ್ ಇಲಾಖೆಯ ಪೆರೆಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗೋತ್ಸವದಲ್ಲಿ ಸುಮಾರು 300 ಜನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಭ್ಯಾಸ ಮಾಡಿದ್ದು ಬಹಳ ಖುಷಿಯಾಯಿತು ಇದೇ ರೀತಿ ಪ್ರತಿದಿನ ಕೂಡ ಯೋಗಾಭ್ಯಾಸವನ್ನು ಮಾಡಿ ಎಂದು ಹೇಳಿದರು.

ಆರೋಗ್ಯದ ಕಡೆಗೆ ಹೆಚ್ಚಿನ ಒಲವು ಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಸಾರ್ವಜನಿಕರು ಯೋಗಾಭ್ಯಾಸವನ್ನು ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಹೇಳಿದರು.

ಮನುಷ್ಯನಿಗೆ ನೀರು ಅತಿ ಮುಖ್ಯವಾದ ಅಂಶ ಎಂದು ಡಾ.ಸೀತಾಲಕ್ಷ್ಮಿ ಹೇಳಿದರು.
ದಿನ ನಿತ್ಯ ಜೀವನದಲ್ಲಿ ಸುಮಾರು ಜನರು ನೀರನ್ನು ಬಹಳ ಕಮ್ಮಿ ಕುಡಿಯುತ್ತಾರೆ ಇದರಿಂದ ಆರೋಗ್ಯದ ಸಮಸ್ಯೆ ಗಳು ಹೆಚ್ಚಾಗಿ ಕಾಡುತ್ತವೆ. ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿಯಲ್ಲಿ ಸ್ಟೋನ್ ತೊಂದರೆ, ಸುಸ್ತು, ಆಯಾಸ ಮತ್ತು ಚರ್ಮದ ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ಒಂದು ಹೊತ್ತು ಊಟ ಕಡಿಮೆ ಮಾಡಿದರು ಕೂಡ ನೀರು ಕುಡಿಯುವುದನ್ನು ಕಮ್ಮಿ ಮಾಡಬಾರದು ನೀರು ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಹೇಳಿದರು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ನಮ್ಮ ದಿನ ನಿತ್ಯ ಆಹಾರದ ಪದ್ದತಿಯಲ್ಲಿ ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ, ಹಸಿ ತರಕಾರಿ ಗಳು, ಹಣ್ಣು ಹಂಪಲು, ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದರು.

ಮಾಂಸಹಾರ ಸೇವನೆ ಮಾಡುವುದು ತಪ್ಪಲ್ಲ ಆದರೆ ಪ್ರತಿದಿನ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎ.ಎಸ್‌.ಪಿ ತಿಮ್ಮಯ್ಯ, ಡಿ.ವೈ.ಎಸ್.ಪಿ.ಗಂಗಾಧರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Kodagu

ಶಾಲಾ ವಾಹನ ಅಪಘಾತ

Published

on

ವಿರಾಜಪೇಟೆ ಗಾಂಧಿನಗರದ ಕೃಷಿ ಇಲಾಖೆಯ ಮುಂಭಾಗ ತ್ರಿವೇಣಿ ಶಾಲೆಯ ವಾಹನ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. ಬಸ್ ಚಾಲಕ ಅನಾರೋಗ್ಯದಿಂದ ದಿಡೀರನೆ ಕುಸಿದು ಬಿದ್ದ ಪರಿಣಾಮ ನೇರವಾಗಿ ಟ್ರ್ಯಾಕ್ಟರ್ ಹಾಗೂ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು 80 ಮೀಟರ್ ದೂರ

ಎಳೆದುಕೊಂಡು ಹೋಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲು ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಾಗ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಒಂದೇ ಒಂದು ಆಂಬುಲೆನ್ಸ್ ಇಲ್ಲದಿರುವುದು ಗೋಚರಿಸಿದೆ. ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದ್ದು ಕಳೆದ ಎರಡು ತಿಂಗಳ

ಹಿಂದೆ ಬಿಟ್ಟಂಗಾಲದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಇಲ್ಲಿ ತನಕ ತಾಲೂಕು ಆಸ್ಪತ್ರೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ಮತ್ತೊಂದು ಆಂಬುಲೆನ್ಸ್ ಅನ್ನು ದುರಸ್ತಿಗಾಗಿ ಶೋರೂಮ್ ಗೆ ಬಿಟ್ಟು ಕೆಲವು ತಿಂಗಳುಗಳೇ ಕಳೆದರೂ ಇನ್ನು ದುರಸ್ತಿ ಪಡಿಸಿ ಪಡೆದುಕೊಂಡಿಲ್ಲ. ಈ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡ ತಾಲೂಕು ಜೆಡಿಎಸ್

ಅಧ್ಯಕ್ಷರಾದ ಪಿ.ಎ ಮಂಜುನಾಥ್ ಅವರು ತಾಲೂಕು ಆಸ್ಪತ್ರೆಯ ಅವ್ಯವಸ್ಥೆಯ ಬಗೆ ಖಂಡಿಸಿ ಹೇಳಿಕೆ ನೀಡಿದ್ದಾರೆ. ಕೂಡಲೇ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಆಂಬುಲೆನ್ಸ್ ಸೌಕರ್ಯವನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.

Continue Reading

Kodagu

ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

Published

on

ಗೋಣಿಕೊಪ್ಪಲು : ಮಂಗಳವಾರ ಗೋಣಿಕೊಪ್ಪಲು ಪೊನ್ನಂಪೇಟೆ ರಸ್ತೆಯಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಸ್ಕೂಟರಿನ ಹಿಂಬದಿ ಕುಳಿತಿದ್ದ ಗೋಣಿಕೊಪ್ಪಲು ಸಂತ ಥಾಮಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆ


ಬೈಪಾಸ್ ರಸ್ತೆಯಲ್ಲಿ ಯುನೈಟೆಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶ್ರೀಜಾ ಎಂಬುವರ ಪುತ್ರಿಯಾಗಿದ್ದಾಳೆ. ಮೃತಪಟ್ಟ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ ರವರ ಮನೆಯಲ್ಲಿ ತಂಗಿ ಟ್ಯೂಷನ್ ಪಡೆಯುತ್ತಿದ್ದ ಅನು ನಿನ್ನೆ ಸ್ಕೂಟರ್ನಲ್ಲಿ ಪ್ರಭಾವತಿಯೊಂದಿಗೆ ಪೊನ್ನಂಪೇಟೆಗೆ ತೆರಳಿ ಹಿಂದಿರುಗುವ ವೇಳೆ ಅವಘಡ ನಡೆದಿದೆ.


ಮಂಗಳವಾರ ಗೋಣಿಕೊಪ್ಪ ಸಮೀಪದ ಅರುವತೊಕ್ಲು ಗ್ರಾಮ ಪಂಚಾಯಿತಿ ಸಮೀಪ ಬೊಲೆರೋ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿಯೊಂದಿಗೆ ಮೃತಪಟ್ಟಿದ್ದರು. ಅನು ಎಂಬುವಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಕೆಯನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ಬೊಲೆರೋ ಜೀಪ್ ಸಂಖ್ಯೆ KA 03 AA 1394

ಗುರುತಿಸಲಾಗಿದ್ದು ಚಾಲಕನನ್ನು ಬಂಧಿಸಲಾಗಿದೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Trending

error: Content is protected !!