Hassan
ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಜಾತ್ರಾ ಮಹೋತ್ಸವ
ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ದೈತಾಪುರ ಗ್ರಾಮದ ಪಾರ್ವತಮ್ಮನ ಬೆಟ್ಟದಲ್ಲಿ ನೆಲೆಸಿರುವ ಇತಿಹಾಸ ಪುರಾಣ ಪ್ರಸಿದ್ಧ ಶ್ರೀ ಪಾರ್ವತಮ್ಮ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ 28ನೇ ವರ್ಷದ ಜಾತ್ರಾ ಮಹೋತ್ಸವ, ದೇವಿಯ ಪಲ್ಲಕ್ಕಿ ಉತ್ಸವ ಕಳೆದೆರಡು ದಿನಗಳಿಂದ ಸಂಭ್ರಮದಿಂದ ನೆರವೇರಿತು.

ಶುಕ್ರವಾರ ಭಕ್ತರು ಪಾರ್ವತಮ್ಮನವರ ಬೆಟ್ಟದ ಕೆಳಗೆ ಇರುವ ಬಾವಿಯಿಂದ ಕುಂಭ ಕಳಸವನ್ನು ಬೆಟ್ಟದ ಮೇಲಕ್ಕೆ ಹೊತ್ತುಕೊಂಡು ಸಾಗಿದರು. ನಂತರ 9.30 ರಿಂದ 10.30 ರವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಹೊಳೆನರಸೀಪುರ ತಾಲೂಕು ಉದ್ದೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ವೀರಗಾಸೆ ನೃತ್ಯ ಕಲಾವಿದರಿಂದ ವೀರಗಾಸೆ ಪ್ರದರ್ಶನ ನಡೆಯಿತು. ಗುರುವಾರ ಬೆಳಗ್ಗೆ 10.30 ರಿಂದ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿ ಪೂಜೆ, ಪುಣ್ಯಾಹ, ನಾಂದಿ, ರುದ್ರಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಅಮ್ಮನವರಿಗೆ ಅಭಿಷೇಕ ಸಹಸ್ರನಾಮ ಪೂಜೆ, ಗವಿಯಲ್ಲಿ ಬೆಳಗ್ಗೆ 11 ಗಂಟೆಗೆ ಶ್ರೀ ವೀರಭದ್ರಸ್ವಾಮಿ ಅಭಿಷೇಕ ನೆರವೇ ರಿದವು. ನಂತರ ಮಹಾಮಂಗಳಾರತಿ ನಡೆಯಿತು. ಶುಕ್ರವಾರ ಪಾರ್ವತಮ್ಮ ದೇವಿಗೆ ಬೆಳಗ್ಗೆ 7.30 ರಿಂದ 9.30ರವರೆಗೆ ಕುಂಭಾಭಿಷೇಕ, ಅಲಂಕಾರ ಮಹಾಮಂಗಳಾರತಿ ನೆರವೇ ರಿತು. ಬೆಳಗ್ಗೆ 11.30ರಿಂದ ಹಣ್ಣು ಕಾಯಿ ಸೇವೆ ಸಲ್ಲಿಸಲಾಯಿತು.

ಚೋಳರ ಆಡಳಿತಾವಧಿಯಲ್ಲಿ ದೇವಾಲಯ ನಿರ್ಮಾಣವಾಗಿದ್ದು, ಈಶ್ವರ ದೇವಾಲಯ ನಂತರದ ದಿನಗಳಲ್ಲಿ ಅಸ್ತಿತ್ವ ಪಡೆದಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಎರಡೂ ದೇವರ ಮೇರು ಜಾತ್ರೆ ನೆರವೇರುತ್ತದೆ. ತಾಲೂಕಿನ 43 ಹಳ್ಳಿಗಳು ಮಾತ್ರ ವಲ್ಲದೆ ನಾಡಿನ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ.
ವಿಶೇಷ ಎಂದರೆ ಮಳೆರಾಯನ ಮುನಿಸು ಮುಂದುವರಿದಾಗ ಸುತ್ತಲಿನ 43 ಹಳ್ಳಿಗಳ ಜನರು ಒಟ್ಟಾಗಿ ಪೂಜೆ ಸಲ್ಲಿಸಿದರೆ ದೇವಿ ಕರುಣೆ ತೋರುತ್ತಾಳೆಂಬ ನಂಬಿಕೆ ಇದೆ.
Hassan
MLA ಸಿಮೆಂಟ್ ಮಂಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್: ಕಾನೂನು ಕ್ರಮಕ್ಕೆ ಆಗ್ರಹ
ಸಕಲೇಶಪುರ: ಆಲೂರು, ಕಟ್ಟಾಯ -ಸಕಲೇಶಪುರ,ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿರುವ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಹಾಸನ ಜಿಲ್ಲಾಡಳಿತದ ವತಿಯಿಂದ ಶನಿವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಶಾಸಕರು ಅಧಿಕಾರಿಗಳು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು Hassan News ಹಾಸನ್ ನ್ಯೂಸ್ ಫೇಸ್ಬುಕ್ ಪೇಜ್ ನಲ್ಲಿ ಬಿತ್ತರಿಸಲಾಗಿತ್ತು. ಸದರಿ ಪೇಜ್ ನಲ್ಲಿ vasanth kumar ಎಂಬ ಹೆಸರಿನ ಫೇಸ್ ಬುಕ್ ಖಾತೆಯುಳ್ಳ ವ್ಯಕ್ತಿಯು ಶಾಸಕರ ವಿರುದ್ಧ “ಸಿಮೆಂಟ್ ಮಂಜಣ್ಣ ಹುಟ್ಟು ಕಳ್ಳನ್ ಮಗ” ಎಂದು ಕಾಮೆಂಟ್ ಮಾಡಿದ್ದು ಈ ರೀತಿಯ ಕಾಮೆಂಟ್ ನಿಂದ ಶಾಸಕರ ಘನತೆಗೆ ಧಕ್ಕೆ ಯಾವುದರ ಜೊತೆಗೆ ಕ್ಷೇತ್ರದ ಜನತೆಗೆ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಠಾಣೆಗೆ ಬಾಳ್ಳುಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ. ಎಸ್. ಶಿವಕುಮಾರ್ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗೋಡು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಮುಖಂಡರಾದ ನವೀನ್ ಶೆಟ್ಟಿ. ಕಿಟ್ಟಿ ಪುಟ್ಟರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Hassan
ದೆಹಲಿ ನೋಟಿಸ್, ಕಾರ್ಟಿಯರ್ ವಾಚ್ ವಿವಾದದ ಬಗ್ಗೆ ಆತ್ಮವಿಶ್ವಾಸದ ನಿಲುವು ಘೋಷಿಸಿದ ಡಿಸಿಎಂ ಡಿಕೆಶಿ
ಹಾಸನ: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ. ನಮಗೆ ಕಿರುಕುಳ ನೀಡಲು ಈ ಸಮನ್ಸ್ ನೀಡಲಾಗಿದೆ. ಇದು ಸರಿಯಲ್ಲ, ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗದ ದೆಹಲಿ ಪೊಲೀಸರು ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ಇದು ನಮಗೆ ಆಘಾತ ತಂದಿದೆ. ನನಗೆ ಹಾಗೂ ಸಹೋದರ ಸುರೇಶ್ ಅವರಿಗೆ ನೋಟೀಸ್ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಇಡಿ ನಮಗೆ ಸಮನ್ಸ್ ನೀಡಿತ್ತು ಎಂದರು.

ನಾವು ಮೊದಲಿನಿಂದಲೂ ಇಡಿ ತನಿಖೆಗೆ ಸಹಕಾರ ನೀಡಿ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇದು ನಮ್ಮ ಪಕ್ಷದ ಸಂಸ್ಥೆ, ಕಾಂಗ್ರೆಸಿಗರಾಗಿ ಆ ಸಂಸ್ಥೆಗೆ ಬೆಂಬಲ ನೀಡಲು ದೇಣಿಗೆ ನೀಡುವುದರಲ್ಲಿ ತಪ್ಪಿಲ್ಲ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಸಂಸ್ಥೆ ಕಷ್ಟಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್ ಗಳಿಂದ ನೆರವು ನೀಡಿದ್ದು, ನನ್ನಂತೆ ಅನೇಕರು ದೇಣಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಹಾಕಿದ್ದು, ಅದರಲ್ಲಿ ನಮ್ಮ ಹೆಸರನ್ನು ಸೇರಿಸಿರಲಿಲ್ಲ. ನಮ್ಮ ಬಳಿ ಹೇಳಿಕೆ ಪಡೆದು, ಬಿಟ್ಟಿದ್ದರು. ಹೀಗಿರುವಾಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಮ್ಮ ಎಲ್ಲಾ ವ್ಯವಹಾರ ಪಾರದರ್ಶಕವಾಗಿದೆ. ನಾವು ನ್ಯಾಯಲಯದಲ್ಲಿ ಹೋರಾಟ ಮುಂದುವರೆಸುತ್ತೇವೆ. ನಾವು ಸರಿಯಾಗಿ ತೆರಿಗೆ ಕಟ್ಟಿದ್ದು, ನಮ್ಮ ಹಣವನ್ನು ನಾವು ಇಷ್ಟಪಡುವ ಯಾರಿಗೆ ಬೇಕಾದರೂ ನೀಡಬಹುದು” ಎಂದು ಹೇಳಿದರು.

ನನ್ನ ವಿರುದ್ಧ ಪಿಎಎಲ್ಎ ಪ್ರಕರಣ ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ಇಷ್ಟಾದ ಮೇಲೂ ಯಾವ ಕಾರಣಕ್ಕೆ ಸಮನ್ಸ್ ನೀಡಿದ್ದಾರೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಗೊಂದಲ ಮೂಡಿಸುವುದು ಇದರ ಉದ್ದೇಶ ” ಎಂದು ತಿಳಿಸಿದರು.
ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ, ನಾನು ಬಗ್ಗುವುದಿಲ್ಲ
“ನನಗೆ ಶುಕ್ರವಾರ ನೋಟೀಸ್ ಸಿಕ್ಕಿದ್ದು, ಇದನ್ನು ವಕೀಲರ ಜತೆ ಚರ್ಚೆ ಮಾಡುತ್ತೇನೆ. ನನ್ನ ಸಹೋದರ ಕೂಡ ಸಂಸದನಾಗಿದ್ದಾಗ ಈ ಸಂಸ್ಥೆಗೆ ದೇಣಿಗೆ ನೀಡಿದ್ದ. ದೆಹಲಿ ಪೊಲೀಸರು ಡಿ.19 ರ ಒಳಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ನಾನು ಸಮಯ ನೋಡಿಕೊಂಡು ಒಂದು ದಿನ ಹೋಗಿ, ಅವರ ನೋಟೀಸ್ ಗೆ ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇನೆ. ಅವರು ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ ನಾನು ಬಗ್ಗುವುದಿಲ್ಲ” ಎಂದು ಹೇಳಿದರು
Hassan
ಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.
ಹಾಸನ: ಕ್ರೀಡೆಯು ಕೇವಲ ಮನರಂಜನೆಗೋ ಅಥವಾ ಆರೋಗ್ಯ ವರ್ಧನೆಗೂ ಮಾತ್ರವಲ್ಲ. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಮ್ಮಿಷ್ಟದ ಹೊರಾಂಗಣದ ಆಟವೊಂದನ್ನು ಅಳವಡಿಸಿಕೊಂಡರೆ, ಅದು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು ಎಂದು ಚನ್ನರಾಯಪಟ್ಟಣದ ಆಯುರ್ವೇದ ತಜ್ಞ ವೈದ್ಯ ಡಾ. ಅಕ್ಷಯ್ ಎಸ್. ಗೌಡ ತಿಳಿಸಿದರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ನಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳ “ ಕ್ರೀಡಾ ತರಂಗ-2025 ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರು ಅನಾರೋಗ್ಯಕರ ಆಹಾರ, ದುಶ್ಚಟಗಳು, ಮೊಬೈಲ್ ದುರ್ಬಳಕೆಯಿಂದ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಿತ್ಯವೂ ನಡಿಗೆ, ಲಘುವ್ಯಾಯಾಮ, ಆಟ, ಯೋಗದಂತಹ ಕ್ರಿಯೆಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಲೇಬೇಕಿದೆ. ಆಯುರ್ವೇದದ ಚಿಕಿತ್ಸೆಗಳು ಕ್ರೀಡಾಳುಗಳ ಆರೋಗ್ಯದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಈವರೆಗೂ 1000 ಕ್ಕೂ ಹೆಚ್ಚು ಕ್ರೀಡಾಪಟುಗಳ ವಿವಿಧ ನೋವಿನ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮಗಳ ಮೂಲಕವೇ ಚಿಕಿತ್ಸೆ ನೀಡಿರುವುದನ್ನು ನೆನೆಸಿಕೊಂಡರು. ತಾವು ವ್ಯಕ್ತಿಯಲ್ಲಿ ವೈದ್ಯರಾದರೂ ತಮ್ಮಲ್ಲಿ ಇಂದಿಗೂ ಕಡಾ ಆಸಕ್ತಿ ಇರಲು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಒಂದು ಬಲವಾದ ಕಾರಣ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ.ಉಪ್ಪಿನಕುದುರು ಅವರು ಮಾತನಾಡಿ, ಇತರ ವೃತ್ತಿಗಳಂತೆ ಆರೋಗ್ಯ ಕ್ಷೇತ್ರದ ವೃತ್ತಿಗಳಲ್ಲೂ ಒತ್ತಡ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ನಮ್ಮ ದಿನಚರಿಯ ಭಾಗವಾಗಿಸಬೇಕು ಎಂದರು. ಎಸ್.ಡಿ.ಎಂ.ಅಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಎಲ್ಲ ಕ್ರೀಡಾಳುಗಳಿಗೆ ಶುಭಹಾರೈಸಿದರು.
ಆ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್.ಪಿ.ಪೂಜಾರ್, ಉಪಪ್ರಾಂಶುಪಾಲರಾದ ಡಾ.ಅಶ್ವಿನಿಕುಮಾರ್.ಎಂ ಮತ್ತು ಡಾ.ಪ್ರಕಾಶ್. ಎಲ್. ಹೆಗಡೆ ಹಾಗು ದೈಹಿಕ ನಿರ್ದೇಶಕ ಶ್ರೀ ಗಣೇಶ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.
-
State16 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan13 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
Hassan16 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Mandya12 hours agoಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್ಡಿಕೆ
-
Chikmagalur19 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan17 hours agoಸಿಎಂ, ಡಿಸಿಎಂ ಇಂದು ಹಾಸನ ಜಿಲ್ಲಾ ಪ್ರವಾಸ
-
Mysore16 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
-
Mysore10 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
