Connect with us

Hassan

ಧರ್ಮ ಜಾತಿ ಸಮಾನತೆಗೆ ನಾವೆಲ್ಲ ಶ್ರಮಿಸಬೇಕು : ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

Published

on

ಹಾಸನ : ದೇವಾಲಯದ ಅಭಿವೃದ್ಧಿಗೆ ಸಹಕಾರಿಯಾಗೊಣ, ಧರ್ಮ ಜಾತಿ ಸಮಾನತೆಗೆ ನಾವೆಲ್ಲ ಶ್ರಮಿಸಬೇಕು ಎಂದು ಅರಕಲಗೂಡು ದೊಡ್ಡ ಮಠದ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ತಾಲೂಕಿನ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದಲ್ಲಿ ಶ್ರೀ ಸೋಮೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ಮಾತನಾಡಿ,
ಎಲ್ಲಾ ಗ್ರಾಮಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗಿದೆ. ದೇವಸ್ಥಾನದ ನಿರ್ಮಾಣ, ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಸಂಸ್ಕೃತಿ ಸಂಸ್ಕಾರ ಆದರ್ಶ ಜೀವನವನ್ನು ತಾತ್ವಿಕತೆಯೊಂದಿಗೆ ಬದುಕುವ ಜೀವನ ಸಾಗಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು. ಅಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗೊಣ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ರವಿನಾಕಲಗೂಡ್ ಮಾತಾನಾಡಿ, ಧರ್ಮದ ಹಾದಿಯಲ್ಲಿ ನಡೆಯಬೇಕಿದೆ. ನಮ್ಮ ಬದುಕು ಉನ್ನತ ವ್ಯಕ್ತಿತ್ವದ ಪಡೆಯಲು ಸಾದು ಸಂತರ ಮಠಾಧೀಶರ ಅಶೀರ್ವಚನ ನಮಗಿರಬೇಕು. ದೇವರ ಪೂಜೆ ಪುನಸ್ಕಾರಗಳು ನಮಗೆ ನಂಬಿಕೆಯೊಂದಿಗೆ ನಾವು ಬದುಕುತ್ತಿದ್ದೇವೆ ಎಂದು ತಿಳಿಸಿದರು. ಉತ್ತಮ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಕಲ್ಲಮಠದ ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ. ಕಾರ್ಜುವಳ್ಳಿ ರಂಭಾಪುರಿ ಶಾಖಾ ಮಠದ ಮಠಾಧೀಶರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಚಂಗಡಹಳ್ಳಿ ಮಠದ ಮಠಾಧೀಶರಾದ ಶ್ರೀ ಬಸವ ಮಹಾಂತ ಮಹಾಸ್ವಾಮೀಜಿ, ಅಶೀರ್ವಚನ ನೀಡಿದರು. ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ವಿ. ಕುಮಾರ್, ಆಕಾಶವಾಣಿ ನಿರ್ದೇಶಕರಾದ ಡಾ. ವಿಜಯ ಅಂಗಡಿ. ಬ್ಯಾಡರಹಳ್ಳಿ ಗ್ರಾಮದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶಿವಬಸಪ್ಪ, ಉಪಾಧ್ಯಕ್ಷ ರಾದ ಬಿ.ಆರ್. ಶಿವಪ್ಪ . ಗ್ರಾಮ ಪಂಚಾಯಿತಿ ಸದಸ್ಯರಾದ ಮಧುಸೂದನ್, ನಿವೃತ್ತ ಇಂಜಿನಿಯರ್ ಮಹದೇವಪ್ಪ, ಚಂದ್ರಶೇಖರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಇಂಜಿನೀಯರ್ ಪ್ರಕಾಶ್. ಸಂಪತ್ ನಿವೃತ್ತ ಶಿಕ್ಷಕರು. ಗ್ರಾಮ ಪಂಚಾಯಿತಿ ಪಿಡಿಒ ಕಟ್ಟಾಯ, ಅಧ್ಯಕ್ಷರಾದ ಮಂಜಪ್ಪ ಹಾಗೂ ದೇವಸ್ಥಾನದ ಭಕ್ತರು ಸಾರ್ವಜನಿಕರು ಗ್ರಾಮದ ಮುಖಂಡರು ಗ್ರಾಮಸ್ಥರು ಪಾಲ್ಗೊಂಡಿದ್ದರು .

Continue Reading
Click to comment

Leave a Reply

Your email address will not be published. Required fields are marked *

Hassan

ಸಕಲೇಶಪುರ: ಹುರುಡಿ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

Published

on

ವರದಿ: ಸಿ. ಎಲ್. ಪೂರ್ಣೇಶ್ ಚಕ್ಕುಡಿಗೆ

ಸಕಲೇಶಪುರ : ಹುರುಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಾನುಬಾಳು ರೋಟರಿ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ರಾಮ್ ಚರಣ್ ಅವರಿಗೆ ಸನ್ಮಾನಿಸಿ ಸಂಭ್ರಮದಿಂದ ಆಚರಿಸಲಾಯಿತು.

ಹುರುಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮ್ ಚರಣ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕರು ಜೀವನವನ್ನು ಕಟ್ಟಿಕೊಡುವವರು ಶಿಕ್ಷಣವು ಸಮಾಜದ ಆಸ್ತಿ ಪ್ರತಿಯೊಬ್ಬರು ಶಿಕ್ಷಣ ವಂತರಗಬೇಕು ದೇಶ ಹಾಗೂ ನಾಡಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು ವಿದ್ಯೆ ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಅಜ್ಞಾನದ ಕತ್ತಲೆಯನ್ನು ತೆಗೆದು ಹಾಕಿ ಜ್ಞಾನದ ಬೆಳಕನ್ನು ತುಂಬುತ್ತಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗಿಳಿಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದೂ ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಎಡುವುತ್ತಿದ್ದಾರೆ. ವಿದ್ಯಾರ್ಥಿಗಳು ಚಂದನದಂತಹ ದೂರದರ್ಶನ ಟಿವಿಯಲ್ಲಿ ಪ್ರಸಾರವಾಗುವ ಶಿಕ್ಷಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹೆಚ್ಚು ವೀಕ್ಷಣೆ ಮಾಡಬೇಕು ಎಂದು ಹೇಳಿದರು.

ರೋಟರಿ ಅಧ್ಯಕ್ಷ ಎ.ವೈ. ಅನಿಲ್ ಕುಮಾರ್ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ಬರಿ ಶಿಕ್ಷಕರ ಜವಾಬ್ದಾರಿ ಮಾತ್ರ ಅಲ್ಲ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಮಕ್ಕಳಿಗೆ ಗುಣತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮರ್ಪಿತ ಬೋಧನೆ ಕಲಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ಸದಾಕ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಹಾನುಬಾಳು ರೋಟರಿ ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.

ಸಂಭ್ರಮದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಿ ಎಸ್ ಗೋಪಾಲ ಚಕ್ಕುಡಿಗೆ, ಶಾಲೆಯ ಸಹ ಶಿಕ್ಷಕರು, ರೋಟರಿ ಸದಸ್ಯರಾದ ಹೆಚ್ ಎಲ್ ನರೇಶ್, ಸುಂದ್ರೇಶ್, ಯುವರಾಜು ಸಿ ಆರ್, ಜಯಂತ್, ನಾಗರಾಜ್ ಯು ಏನ್,ರವಿಗೌಡ, ಶಿವಕುಮಾರ್, ಪೃಥ್ವಿ, ಮಂಜುನಾಥ್, ರವಿಕುಮಾರ್, ರತ್ನಾಕರ್,ಹಾಗೂ ವಿದ್ಯಾರ್ಥಿಗಳು ಇದ್ದರು.

 

Continue Reading

Hassan

ಡಿ.7ಕ್ಕೆ ಚಿತ್ರದುರ್ಗದಲ್ಲಿ ಉಚಿತ ಸಾಮೂಹಿಕ ವಿವಾಹ| ಸರ್ಕಾರ ಕನಿಷ್ಟ 500 ಮನೆ ಕೊಡಲಿ: ಬಿ.ಟಿ. ಚಂದ್ರಶೇಖರ್ ಆಗ್ರಹ

Published

on

ಹಾಸನ: ಚಿತ್ರದುರ್ಗದಲ್ಲಿ ಡಿಸೆಂಬರ್.7  ರಂದು 1,008 ಜೋಡಿಗಳ ಉಚಿತ ಮದುವೆ ನಡೆಯಲಿದ್ದು, ಬಡವರ ಮೇಲೆ ಸರ್ಕಾರ ಕರುಣೆ ತೋರಿ ಕನಿಷ್ಠ 500 ಮನೆಗಳ ಕೊಡಬೇಕು. ಹಾಗೇ ಮುಂದಿನ ದಿನಗಳಲ್ಲಿ ಸರಕಾರವು ಕೂಡ ಉಚಿತ ಮದುವೆ ಮಾಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ. ಚಂದ್ರಶೇಖರ್ ತಿಳಿಸಿದರು.

ನಗರದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಮದುವೆ ಪ್ರಯುಕ್ತ ತಿಳುವಳಿಕೆ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಲೋಕ ಕಲ್ಯಾಣವಾಗಿ ಕರ್ನಾಟಕದ 31 ಜಿಲ್ಲೆಗಳ ಮೂಲೆ ಮೂಲೆಯ 1,008 ಬಡ ರೈತ ಮತ್ತು ಬಡವರ ಮಕ್ಕಳಿಗೆ ಉಚಿತ ಸಾಮೂಹಿಕ ವಿವಾಹವನ್ನು ಮಾಡಲಾಗುತ್ತಿದೆ. ಸರ್ಕಾರಕ್ಕೆ ರೈತರ ಮತ್ತು ಬಡವರ ಮೇಲೆ ಕರುಣೆ ಇದ್ದರೇ ಕನಿಷ್ಠ 500 ಮನೆಗಳ ಕೊಟ್ಟರೇ ಬಡ ರೈತರು ಹಾಗೂ ಬಡವರು ಜೀವನ ಸಾಗಿಸುತ್ತಾರೆ. ಮಂದಿನ ದಿನಗಳಲ್ಲಿ ಸರ್ಕಾರವೇ 1,008 ಮದುವೆಗಳ ಮಾಡಿ 5 ರಿಂದ 10 ಲಕ್ಷದ ಮನೆ ನಿರ್ಮಿಸಿಕೊಟ್ಟರೇ ಬಡವರಿಗೆ ಅನುಕೂಲವಾಗಲಿದೆ ಎಂದರು.

ಶೃಂಗೇರಿ ಮಠದ ಭಾರತೀ ತೀರ್ತ ಸ್ವಾಮೀಜಿಗಳು ಈ ಮದುವೆಗೆ ಅವರ ಆಶೀರ್ವಾದ ಸಿಕ್ಕಿದೆ. ಅವರ ಶಿಷ್ಯರಾದ ವಿಧುಶೇಕರ ಭಾರತಿ ಅವರ ಆಶೀರ್ವಾದ ಪಡೆದು ಅವರ ನೇತೃತ್ವದಲ್ಲಿ ಇಡೀ ರಾಜ್ಯದ ಮೂಲೆ ಮೂಲೆಯ ಉದ್ದಲಕ್ಕೂ ಪ್ರವಾಸ ಮಾಡಲಾಗುತ್ತಿದೆ. ಇವರು 1,008 ಜೋಡಿಗಳಿಗೆ ಊಟದ ಸೆಟ್ ಗಳನ್ನು ಕೊಡುಗೆಯಾಗಿ ಕೊಡುತ್ತಿದ್ದಾರೆ. ಕಾಲುಂಗುರ ಕೊಡಲಾಗುತ್ತಿದೆ. ರೈತ ಸಂಘಟನೆಗೆ ಸಹಕಾರ ಕೊಟ್ಟವರು ಶ್ರೀ ಶೃಂಗೇರಿ ಮಠ ಎಂದು ಹೇಳಿದರು.

ಡಿಸೆಂಬರ್.7 ರಂದು ಬೆಳಿಗ್ಗೆ 10:30 ರಿಂದ 11:30 ರವರೆಗೂ ಶುಭ ಮೂಹೂರ್ತದಲ್ಲಿ ಬಡವರಿಗೆ ಉಚಿತವಾಗಿ ಸಾಮೂಹಿಕ ವಿವಾಹವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ವೇಳೆ ಮದುವೆ ಆಗುವವರಿಗೆ ತಾಳಿ, ಪಾತ್ರೆ, ಬಾಂಡೆ, ವಸ್ತ್ರಗಳು, ಬಟ್ಟೆಗಳು ಹಾಗೂ ಚಿಕ್ಕ ಸಂಸಾರ ನಡೆಸಲು ಸರ್ಕಾರದಿಂದ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ಮನವಿ ಮಾಡಲಾಗುವುದು. ಚಿತ್ರದುರ್ಗಕ್ಕೆ ಹೋಗಿ ಬರಲು ಬಸ್ ಚಾಜ್ ಹಾಗೂ ಇತರೆ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ ಎಂದರು.

ಎಸ್.ಸಿ., ಎಸ್.ಟಿ. ಗಳಿಗೆ ಸರ್ಕಾರ ಕೊಡುವ ಆ ಹಣವನ್ನು ಕೂಡ ಕೊಡಲಾಗುವುದು. ರಿಜಿಸ್ಟರ್ ಹಣವನ್ನು ಕೂಡ ನಾವೆ ಕಟ್ಟಲಾಗುವುದು. 1,008 ಕ್ಕಿಂತ ಹೆಚ್ಚು ಜೋಡಿಗಳು ಬಂದರೇ ಸಮಸ್ಯೆ ಇಲ್ಲ. ಈ ಮದುವೆಯು ಸಮಾಜದಲ್ಲಿ ಉತ್ತಮ ವಾತವರಣ ಉಂಟು ಮಾಡಲಿದೆ ಎಂದು ತಿಳಿಸಿದರು.

ಇದೆ ವೇಳೆ ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಯಾರು ಬಡವರು ಇದ್ದಾರೆ ಹಾಗೂ ರೈತರು ಇದ್ದಾರೆ ಅವರಿಗೆ ಹೆಣ್ಣುಗಳು ಸಿಗುತ್ತಿಲ್ಲ. ನಮ್ಮಲ್ಲಿ ಹೆಚ್ಚು ರೈತರು ಇದ್ದಾರೆ. ಏನಾದರೂ ಹೆಣ್ಣು ಕೇಳಲು ಹೋದರೇ ಹಿನ್ನಲೆ ಕೇಳುತ್ತಾರೆ. ಈಚ ಸ್ಥಿತಿ ಆದರೇ ಏನು ಮಾಡಬೇಕು. ಇದನ್ನ ನಿವಾರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜವೇನಹಳ್ಳಿ ಮಠದ ಮಠಾಧಿಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ದೇವಮ್ಮ, ಜಿಲ್ಲಾಧ್ಯಕ್ಷೆ ನೀತು ಕೊಥಾರಿ, ಪ್ರಧಾನ ಕಾರ್ಯದರ್ಶಿ ಶೋಭ ಮಹೇಶ್, ಗೌರವಾಧ್ಯಕ್ಷೆ ರಾಧ ವೆಂಕಟೇಶ್, ಜಂಠಿ ಕಾರ್ಯದರ್ಶಿ ಪಂಕಜ,. ಭಾನುವತಿ, ಕಾರ್ಯದರ್ಶಿ ಶಾಲಿನಿ, ರಾಜ್ಯ ಕಾರ್ಯದರ್ಶಿ ಬಿ.ಎಂ. ದೇವಿಹಳ್ಳಿ ತೇಜಸ್, ಜಿಲ್ಲಾ ಯುವ ಘಟಕದ ಹೆಚ್.ಬಿ. ಕಿರಣ್ ಗೌಡ ಇತರರು ಉಪಸ್ಥಿತರಿದ್ದರು.

 

 

 

Continue Reading

Hassan

ಇಂದು ಖಗ್ರಾಸ ಚಂದ್ರಗ್ರಹಣ: ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಾಗಿಲು ಬಂದ್

Published

on

ಬೇಲೂರು : ಇಂದು ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಆಗಿದೆ.

ಅರ್ಚಕರು ಇಂದು ಬೆಳಿಗ್ಗೆ ಎಂದಿನಂತೆ  ಮಹಾಮಂಗಳಾರತಿ ಮಾಡಿದ್ದು, ಮಧ್ಯಾಹ್ನ 3.30 ಕ್ಕೆ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಮಾಡಿದ್ದಾರೆ.

ಇಲ್ಲಿನ ಪ್ರಧಾನ ಅರ್ಚಕರು, ಗ್ರಹಣ ಹಿನ್ನೆಲೆಯಲ್ಲಿ ಸಂಜೆ ಪೂಜೆಯನ್ನು ಮಧ್ಯಾಹ್ನ‌ ನೆರವೇರಿಸಿ ಗರ್ಭಗುಡಿ ಬಾಗಿಲು ಬಂದ್ ಮಾಡಿದ್ದಾರೆ.

ಇನ್ನೂ ನಾಳೆ ಬೆಳಿಗ್ಗೆ 6.30 ಕ್ಕೆ  ದೇವಾಲಯದ ಬಾಗಿಲು ತೆರೆಯಲಿದ್ದು, ಶುದ್ದೀಕರಣ ಮಾಡಿದ ನಂತರ ಶ್ರೀ ಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಕೆಯಾಗಲಿದೆ. ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಶ್ರೀ ಚನ್ನಕೇಶವಸ್ವಾಮಿ ದರ್ಶನಕ್ಕೆ ಅವಕಾಶ ದೊರೆಯಲಿದೆ.

Continue Reading

Trending

error: Content is protected !!