Connect with us

Hassan

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆಯ ಅಬ್ಬರ

Published

on

ಹಾಸನ : ಬಾರಿ ಮಳೆಗೆ ಹಲವೆಡೆ ಅಪಾರ ಪ್ರಮಾಣದ ಹಾನಿ

ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಸಕಲೇಶಪುರ ತಾಲ್ಲೂಕಿನ, ಮಾವಿನೂರು, ಕಾಗಿನೆರೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ

ವಿದ್ಯುತ್ ಇಲ್ಲದೆ ಗ್ರಾಮಸ್ಥರ ಪರದಾಟ

ಬಾರಿ ಮಳೆಗೆ ಕುಸಿದು ಬಿದ್ದ ಮನೆಯ ಕಾಂಪೌಂಡ್

ಸಕಲೇಶಪುರ ತಾಲ್ಲೂಕಿನ, ಗಡಿ ಗ್ರಾಮ ತಂಬಲಗೇರಿಯಲ್ಲಿ ಘಟನೆ

ನೆಲಕ್ಕುರುಳಿದ ಪುಟ್ಟೇಗೌಡ ಎಂಬುವವರ ಸೇರಿದ ಮನೆ

ವರುಣನ ಅಬ್ಬರಕ್ಕೆ ಗದ್ದೆಗಳಿಗೆ ಕುಸಿದ ಮಣ್ಣು

ಮಣ್ಣಿನಡಿ ಸಿಲುಕಿದ ಭತ್ತ ಸಸಿಗಳು

ತಂಬಲಗೇರಿ ಗ್ರಾಮದ ಲೋಕೇಶ್ ಹಾಗೂ ಇತರೆ ಗ್ರಾಮಸ್ಥರಿಗೆ ಸೇರಿದ ಭತ್ತದ ಗದ್ದೆಗಳು

ಭತ್ತದ ಗದ್ದೆಗಳ ಮೇಲೆ ತುಂಬಿ ಹರಿಯುತ್ತಿರುವ ನೀರು

Continue Reading

Hassan

ಶಾಮನೂರ್ ಶಿವಶಂಕರಪ್ಪ ನಿಧನ: ಸಂತಾಪ ಸೂಚಿಸಿದ ಅರಸೀಕೆರೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

Published

on

ಅರಸೀಕೆರೆ: ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವರು, ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ  ಶಾಮನೂರ್ ಶಿವಶಂಕರಪ್ಪನವರ ಅಕಾಲಿಕ ಮರಣಕ್ಕೆ ಅರಸೀಕೆರೆ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆಯ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಇಂದು ಅರಸೀಕೆರೆಯ ಪಿ.ಪಿ. ವೃತ್ತದಲ್ಲಿ ನೂರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Continue Reading

Hassan

ಹಾಸನ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್: ಪರಿಶೀಲನೆ ನಡೆಸಿದ ಪೊಲೀಸರು

Published

on

ಹಾಸನ : ರಾಜ್ಯದ ನಾನಾ ಕಡೆಗಳಲ್ಲಿ ಇಂದು ಬಾಂಬ್‌ ಬೆದರಿಕೆ ಸಂದೇಶ ರವಾನೆಯಾಗಿದ್ದು, ಇದರ ಬಿಸಿ ಜಿಲ್ಲೆಯ ಡಿಸಿ ಕಚೇರಿಗೂ ತಟ್ಟಿದೆ. ಹಾಗಾಗಿ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಬಂದ ಕೂಡಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇತರೆಡೆಗೆ ಕಳಿಸಲಾಗಿರುವ ಮೇಲ್‌ನಲ್ಲಿ ಐದು ಕಡೆ ಬಾಂಬ್ ಇಟ್ಟಿದ್ದು ಸ್ಪೋಟಿಸುವುದಾಗಿ ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ಬೆದರಿಕೆ‌ ಮೇಲ್‌ನ ಸಾರಾಂಶದ ಪ್ರಿಂಟೌಟ್ ತೆಗೆದು ಎಫ್‌ಐಆರ್ ದಾಖಲಿಸಲು ಡಿಸಿ ಲತಾಕುಮಾರಿ ಸೂಚನೆ ಹೊರಡಿಸಿದ್ದರು.

ಡಿಸಿ ಕೆ.ಎಸ್.ಲತಾಕುಮಾರಿ ಅವರು, ರಾತ್ರಿಯಾದರೂ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ತಕ್ಷಣವೇ ಅನಾಮಧೇಯ ಮೇಲ್‌ ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲು ಆದೇಶ ಮಾಡಿದ್ದಾರೆ.

ಡಿಸಿ ಆದೇಶದಂತೆ ಹಾಸನ ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದಲ್ಲಿ ಶ್ವಾನದಳ,‌ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಡಿಸಿ  ಪೊಲೀಸರ ಪರಿಶೀಲನೆ ನಡುವೆಯೂ ಸಭೆ ಮುಂದುವರೆಸಿದ್ದಾರೆ.

 

Continue Reading

Hassan

ಶ್ಯಾಮನೂರು ಶಿವಶಂಕರಪ್ಪ ನಿಧನ: ವೀರಶೈವ ಲಿಂಗಾಯಿತ ಮಹಾಸಭಾದಿಂದ ಸಂತಾಪ

Published

on

ಹಾಸನ: ಮಾಜಿ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರು ನಿಧನರಾಗಿರುವುದಕ್ಕೆ ನಗರದ ಹೇಮಾವತಿ ಪ್ರತಿಮೆ ಬಳಿ ಸೋಮವಾರದಂದು ವೀರಶೈವ ಲಿಂಗಾಯಿತ ಮಹಾಸಭಾದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಜವೆನಹಳ್ಳಿ ಮಠದ ಮಠಾಧೀಶರಾದ ಸಂಗಮೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯಿತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಹಾಗೂ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಶ್ಯಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಅವರು ಸುಮಾರು 60 ವರ್ಷಗಳ ಕಾಲ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅಜಾತಶತ್ರು ನಾಯಕರೆಂದು ಸ್ಮರಿಸಿದರು. ಶಾಸಕರಾಗಿದ್ದರೂ ಪಕ್ಷಭೇದವಿಲ್ಲದೆ ಸಮಾಜದ ಹಿತಕ್ಕಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಗುಣ ಹೊಂದಿದ್ದರು ಎಂದು ಹೇಳಿದರು.

ವೀರಶೈವ ಲಿಂಗಾಯಿತ ರಾಷ್ಟ್ರೀಯ ಮಟ್ಟದ ಮಹಾಸಭೆಗೆ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸಂಘಟಿಸಿದ ಮಹಾನ್ ನಾಯಕರು ಎಂದು ಪ್ರಶಂಸಿಸಿದರು. ಅವರ ಸೇವೆ ಅನನ್ಯ ಹಾಗೂ ಸ್ಮರಣೀಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪುನಿತ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚಂದ್ರಮತಿ ಪುಟ್ಟಸ್ವಾಮಿ, ತಾಲೂಕು ಘಟಕದ ಅಧ್ಯಕ್ಷೆ ಮಮತಾ ಪಟೇಲ್, ಉಪಾಧ್ಯಕ್ಷೆ ಗಿರಿಜಂಬಿಕೆ, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ನಿರ್ದೇಶಕ ಶೋಭನ್ ಬಾಬು, ರಾಜ್ಯ ಸಮಿತಿ ನಿರ್ದೇಶಕ ಶಿವಕುಮಾರ್, ಖಜಾಂಚಿ ಎಸ್. ಜಯಶಂಕರ್, ಉಪಾಧ್ಯಕ್ಷೆ ಗೀತ ಪುಟ್ಟಸ್ವಾಮಿ, ಸಹಕಾರ್ಯದರ್ಶಿ ಮಲ್ಲಿಕ್, ನಿರ್ದೇಶಕಿ ಮಯೂರಿ ಲೋಕೇಶ್, ನಂದೀಶ್, ಜಗದೀಶ್, ಶೈಲಾ ಮಧನ್, ಸಮಾಜದ ಮುಖಂಡರಾದ ನಾಗೇಶ್, ಸರಸ್ವತಿ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Continue Reading

Trending

error: Content is protected !!