Connect with us

Kodagu

ಬಿರುನಾಣಿ ವ್ಯಾಪ್ತಿಯ ಮಳೆಹಾನಿ ಸ್ಥಳಗಳಿಗೆ ಶಾಸಕ ಪೊನ್ನಣ್ಣ ಭೇಟಿ

Published

on

ಶ್ರೀಮಂಗಲ: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 33 ಕೆ.ವಿ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಲಭ್ಯ ಇರುವ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ತಿಳಿಸಿದರು.
ಭಾನುವಾರ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆಹಾನಿ ಪ್ರದೇಶ ಗಳನ್ನು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕರಿಗೆ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್ ಅವರು ಕಳೆದ 20 ದಿನಕ್ಕೂ ಹೆಚ್ಚು ದಿನಗಳಿಂದ ವಿದ್ಯುತ್ ಸಮಸ್ಯೆಯನ್ನು ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ 5 ಗ್ರಾಮದ ಜನರು ಎದುರಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ವಿದ್ಯುತ್ ಕಡಿತ ಹಲವು ವಾರಗಳು ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು.


ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಅಡಚಣೆ ಉಂಟಾಗುವ ಸ್ಥಳಗಳಿಗೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರಗಳಿಂದ ದೂರವಿರುವ ಪ್ರದೇಶಕ್ಕೆ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಆದ್ದರಿಂದ ಬಿರುನಾಣಿ ವ್ಯಾಪ್ತಿಗೆ ಉಪ ವಿದ್ಯುತ್ ಸರಬರಾಜು ಕೇಂದ್ರದ ಬೇಡಿಕೆ ಹಲವಾರು ವರ್ಷಗಳಿಂದ ಇದ್ದು ಈ ಬಗ್ಗೆ ಲಭ್ಯವಿರುವ ಜಾಗವನ್ನು ಗ್ರಾಮಸ್ಥರ ಸಲಹೆ ಪಡೆದು ಗುರುತಿಸಿ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸುವ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಶಾಸಕರ ಕರ್ತವ್ಯ ಅಧಿಕಾರಿ ಬಿ.ಎ. ಮುತ್ತಣ್ಣ ಅವರೊಂದಿಗೆ ಸಂಪರ್ಕದಲ್ಲಿರುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಇದೇ ಸಂದರ್ಭ ಬಿರುನಾಣಿಯ ಕಳಕೂರು ಗ್ರಾಮದಲ್ಲಿ ರಸ್ತೆ ಕುಸಿತ ಸೇರಿದಂತೆ ಬರೆ ಕುಸಿತ ಪ್ರದೇಶಗಳನ್ನು ಶಾಸಕರು ವೀಕ್ಷಿಸಿ, ರಸ್ತೆ ಸಂಚಾರಕ್ಕೆ ಅಡಚಣೆ ಯಾಗದಂತೆ ತಕ್ಷಣ ತಾತ್ಕಾಲಿಕ ಕಾಮಗಾರಿ ಹಾಗೂ ಮಳೆಗಾಲ ಕಳೆದ ನಂತರ ಹಾನಿಯಾಗಿರುವ ಜಾಗಗಳಿಗೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆಯೂ ಸೂಚಿಸಿದರು.ಇದೇ ಸಂದರ್ಭ ಈ ವ್ಯಾಪ್ತಿಯ ಮಳೆ ಹಾನಿಯ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್,ಪ್ರಮುಖರಾದ ಕರ್ತಮಾಡ ನಂದಾ,ಕಾಳಿಮಾಡ ರಸಿಕ್,ಬೊಟ್ಟಂಗಡಪ್ರತಾಪ್, ಚೋನಿರ ಜೀವನ್,ಅಣ್ಣೀರ ವಿಜು ಪೂಣಚ್ಚ, ಕಾಳಿಮಾಡ ಪ್ರಶಾಂತ್, ಮುಕ್ಕಾಟಿರ ಸಂದೀಪ್, ಪೊನ್ನಂಪೇಟೆ ತಾಲೂಕು ತಹಸಿಲ್ದಾರ್ ಮೋಹನ್ ಕುಮಾರ್, ಅಧಿಕಾರಿಗಳಾದ ಪಿಡಬ್ಲ್ಯೂಡಿ -ಇಇ ಸಿದ್ದೇಗೌಡ, ಎ. ಇ.ಇ. ಲಿಂಗರಾಜು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಶ್ರೀಮಂಗಲ ಉಪ ನಿರೀಕ್ಷಕ ಶಿವಾನಂದ್ ಮತ್ತಿತರರು ಹಾಜರಿದ್ದರು.

Continue Reading

Kodagu

ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ

Published

on

ವರದಿ: ಟಿ.ಆರ್.ಪ್ರಭುದೇವ್ ಕುಶಾಲನಗರ

ಕುಶಾಲನಗರ: ‌ಜನವರಿ 20 ರಂದು ಮಡಿಕೇರಿಯಲ್ಲಿ ಅರೆಭಾಷೆ ಒಕ್ಕಲಿಗ ಗೌಡರಿಂದ ನಡೆದ ಮೌನ ಮೆರವಣಿಗೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರೆಭಾಷೆ ಒಕ್ಕಲಿಗ ಗೌಡರ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದ ಶಾಂತಿ ಕದಡಲು ಪ್ರಯತ್ನ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಇದರ ನಂತರವೂ ಕೆಲವು ದುಷ್ಟ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಷ್ಠ ಕಾರ್ಯವೈಖರಿಯನ್ನು ಮುಂದುವರಿಸಿದ್ದಾರೆ. ನಿರಂತರವಾಗಿ ನಿಂದನೆಯ ಹೇಳಿಕೆಗಳನ್ನು, ಆಡಿಯೋ ಗಳನ್ನೂ ಹರಿಬಿಡುತ್ತಿದ್ದಾರೆ. ಎಂದು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ ಕುಶಾಲನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಥವರ ವಿರುದ್ಧ ತೀವ್ರತರದ ಕಾನೂನು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಕೊಡಗಿನಲ್ಲಿ ಅಶಾಂತಿ ಉಂಟಾಗುವುದರಲ್ಲಿ ಎರಡು ಮಾತಿಲ್ಲ. ಕೊಡಗು ಜಿಲ್ಲೆ ಒಂದು ಜನಾಂಗಕ್ಕೆ ಸೀಮಿತವಾದ ಜಿಲ್ಲೆಯಲ್ಲ, ಹಲವಾರು ಜನಾಂಗದವರು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತಿರುವುದಾಗಿದೆ. ಹೀಗಿರುವಾಗ ಒಂದು ಕೋಮಿನ ಕೆಲವೊಂದು ದುಷ್ಕರ್ಮಿಗಳು ಇಂತಹ ಆಡಿಯೋಗಳನ್ನು ಹರಿಬಿಡುವುದು ಆರೋಗ್ಯಕರವಲ್ಲ. ಪೊಲೀಸ್ ಇಲಾಖೆಯವರು ಈಗಲೇ ಎಚ್ಚೆತ್ತುಕೊಳ್ಳುವುದು ಉತ್ತಮ ಎಂದರು.

ಕುಶಾಲನಗರ ಗೌಡ ಯುವಕ ಸಂಘದ ಕಾರ್ಯದರ್ಶಿ ಪಳಂಗೋಟು ವಿನಯ್ ಕಾರಿಯಪ್ಪ ಮಾತನಾಡಿ, ಪೊಲೀಸ್ ವರಿಷ್ಠಾಧಿಕಾರಿ ಗಳ ಯಾವುದೇ ಮನವಿ ಮತ್ತು ಎಚ್ಚರಿಕೆಗಳು ಅರಣ್ಯರೋದನೆಯಾಗುತ್ತಿದೆ. ದುಷ್ಟ ಶಕ್ತಿಗಳು ಅದನ್ನು ಕ್ಯಾರೆ ಮಾಡುತ್ತಿಲ್ಲ. ಅರೆಭಾಷೆ ಒಕ್ಕಲಿಗ ಜನಾಂಗದವರು ಕೆ.ಎಸ್.ಪಿ ತಂತ್ರಾಂಶ, ಐ.ಜಿ ಮತ್ತು ಎಸ್.ಪಿ ಯವರಿಗೆ ಸಾಕ್ಷಿ ಸಮೇತ ಮತ್ತೆ ದೂರುಗಳನ್ನು ಸಲ್ಲಿಸುತ್ತಿದ್ದು ತಕ್ಷಣ ಕ್ರಮಜರುಗಿಸದಿದ್ದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವ ಕಂಡು ಬರುತ್ತಿದ್ದು ಇಂತಹ ದುಷ್ಕರ್ಮಿಗಳ ವಿರುದ್ಧ ಜನವರಿ ಇಪ್ಪತ್ತನೆಯ ತಾರೀಖಿನಂದು ಮಡಿಕೇರಿಯಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಸ್ವಯಂಪ್ರೇರಿತರಾಗಿ ನೆರೆದಿದ್ದರು. ಕೂಡಲೇ ದುಷ್ಕರ್ಮಿಗಳ ವಿರುದ್ಧ ಸೂಕ್ತ

ಕ್ರಮವನ್ನು ತಕ್ಷಣ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಎರಡೂ ಜಿಲ್ಲೆಯ ಸಂಘಟನೆಗಳು ಬೆಂಗಳೂರಿನ ಒಕ್ಕಲಿಗ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಲಿರುವುದಾಗಿ ತಿಳಿಸಿದರು.
‌‌‌‌‌
ಪತ್ರಿಕಾಗೋಷ್ಠಿಯಲ್ಲಿ ಪುದಿಯನೆರವನ ರಿಷಿತ್ ಮಾದಯ್ಯ, ಕಾರ್ಯದರ್ಶಿ ಯುವ ವೇದಿಕೆ, ವಿವೇಕ್ ಕಡವಡಿರ, ನವೀನ್ ದೇರಳ ಇದ್ದರು.

Continue Reading

Kodagu

ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ

Published

on

ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-ಹೆಚ್ಚು ಮೊತ್ತಕ್ಕೆ ಖರೀದಿಯಾದ ಐಕಾನ್ ಆಟಗಾರ ಸಜೀರ್

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ (ಕೆಪಿಎಲ್) ಬಿಡ್ಡಿಂಗ್ ಪ್ರಕ್ರಿಯೆ ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಬಿಡ್ಡಿಂಗ್ ಪ್ರಕ್ರಿಯಲ್ಲಿ ಕೆ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಅವರು ಮಾತನಾಡಿ ಕೆಪಿಎಲ್ ಕ್ರಿಕೆಟ್ 10 ನೇ ವರ್ಷಕ್ಕೆ ಪಾದರ್ಪಣೆಯಾಗಿದೆ ಎಂಬುವುದು ಸಂತೋಷ,ಕ್ರಿಕೆಟ್, ವಾಲಿಬಾಲ್,ಫುಟ್ಬಾಲ್ ಎಲ್ಲಾ ಪಂದ್ಯಾಟಗಳು ಒಂದೇ ಆಯೋಜಕತ್ವದಲ್ಲಿ ನಡೆದರೆ ಉತ್ತಮ ವಾಗುತಿತ್ತು, ನಮ್ಮ ಗ್ರಾಮಸ್ತರಿಗೆ ಇರೋದು ನಮ್ಮ ಶಾಲಾ ಮೈದಾನ ಮಾತ್ರ ಅದು ನಮ್ಮ ಗ್ರಾಮದ ಯುವಕರಿಗೆ ಆಟವಾಡಲು ದೊರೆಯುತ್ತಿಲ್ಲ ಎಂಬುದು ಕೇದಕರ.ಎಲ್ಲಾ ಕ್ರೀಡಾಪಟುಗಳು ಸಂಘಟಿತರಾಗಿ ಸಹಕರಿಸಿ ಪ್ರಯತ್ನ ಪಟ್ಟರೆ ಖಂಡಿತ ಅದು ದೊರೆಯಲಿದೆ ಎಂದು ಶುಭಹಾರೈಸಿದರು.

ಮತ್ತೊರ್ವ ಮುಖ್ಯ ಅತಿಥಿ ಪತ್ರಕರ್ತ ಅಶ್ರಫ್ ಮಾತನಾಡಿ ಕೆಪಿಎಲ್ ಆಯೋಜಕರು ಉತ್ತಮ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾ ಸ್ಫೂತಿ ಮೆರೆಯುತ್ತಿರುವುದು ಶ್ಲಾಘನೀಯ.ಇಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ರಾಜ್ಯ,ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತರುವಂತ್ತಾಗಲಿ ಎಂದು ಶುಭ ಹಾರೈಸಿದರು.

:ಕೆಪಿಎಲ್ ಬಿಡ್ಡಿಂಗ್ ನಲ್ಲಿ ಹೆಚ್ಚು ಮೊತ್ತಕ್ಕೆ ಖರೀದಿಯಾದ ಅಟಗಾರ ಸಜೀರ್
ಜಿದ್ದಾಜಿದ್ದಿನಿಂದ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಡಂಗ ವ್ಯಾಪ್ತಿಯ ಒಟ್ಟು 7 ತಂಡಗಳಾದ ಕೂರ್ಗ್ ವಾರಿಯರ್ಸ್,ಎಬಿಆರ್ ಕ್ರಿಕೆಟರ್ಸ್,ಕೊಡಗು ರಾಯಲ್ಸ್,
ಇಲೆವೆನ್ ಮೊಂಸ್ಟರ್,ಸ್ಟ್ರೈಕ್ ಫೋರ್ಸ್ ಇಲೆವೆನ್,ತಪ್ಸಿ ಕ್ರಿಕೆಟರ್ಸ್,ಸ್ಟ್ರೀಟ್ ಫೈಟರ್ಸ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರು,ಕೋಚ್ ಭಾಗವಹಿಸಿದರು.ಇದರಲ್ಲಿ ಸ್ಟ್ರೀಟ್ ಫೈಟರ್ಸ್ ತಂಡದ ಮಾಲೀಕ ಐಕಾನ್ ಆಟಗಾರ ಸಜೀರ್ ರವರನ್ನು 29 ಸಾವಿರ ರೂಗಳ ಬೃಹತ್ ಮೊತ್ತಕ್ಕೆ ಖರಿದಿಸಿದ್ದು ವಿಶೇಷ ವಾಗಿತ್ತು.

2025 ರ ಏಪ್ರಿಲ್ 10 ರಿಂದ 13ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಆಯೋಜಕರಾದ ಜುನೈದ್ ಕೆ.ಎಂ. ಹಾಗೂ ಇಕ್ಬಾಲ್ ಮಾಹಿತಿ ನೀಡಿದರು.

ಈ ಸಂದರ್ಭ ಮೊಹಿಯ್ಯದ್ದೀ ನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್,ನಡಿಕೇರಿಯಂಡ ಜೀವನ್,ಬರೋಡ ಬ್ಯಾಂಕ್ ನ ಅಶ್ರಫ್,ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ವೈಶಾಕ್, ಕರೀಂ, ರಜಾಕ್,ರಾಝಿಕ್,ಸಲಾಂ, ಸಮೀರ್,ಸಿದ್ದಿಕ್,ಕಬೀರ್,ಆಶಿಕ್,ರಹೀಂ,ಷರೀಫ್, ಅಝರುದ್ದಿನ್, ಆಸ್ಕರ್,ಅಜೀಝ್,ರಝಿಕ್ ಎಬಿಆರ್,ನೌಫಲ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ನೌಫಲ್ಎಂ.ಬಿ. ಸ್ವಾಗತಿಸಿ,ನಿರೂಪಿಸಿ,ಸರ್ವರನ್ನು ವಂದಿಸಿದರು.

Continue Reading

Kodagu

ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ

Published

on

ಮಡಿಕೇರಿ : ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ( ACF) ಆಗಿ ವಾಟೇರಿರ.ಪಿ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.

ಮೂಲತ ಕೊಡಗು ಜಿಲ್ಲೆಯ ಮಗ್ಗುಲ ಗ್ರಾಮದವರಾದ ವಾಟೇರಿರ
.ಪಿ.ಕಾರ್ಯಪ್ಪ ನವರು ಈ ಹಿಂದೆ ಕುಂದಾಪುರದಲ್ಲಿ ಕರಾವಳಿ ಮತ್ತು ಸಾಗರ ಕೋಶ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆಯಲ್ಲಿದ್ದು ಈಗ ತಾಯ್ನಾಡಿನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇವರ ಕುಟುಂಬ ಮಡಿಕೇರಿ ನಗರದ ನಿವಾಸಿಗಳಾಗಿದ್ದಾರೆ.

Continue Reading

Trending

error: Content is protected !!