Connect with us

Kodagu

ಮಡಿಕೇರಿಯಲ್ಲಿ ಅ.22 ರಂದು ಮಹಿಳಾ ದಸರಕ್ಕಾಗಿ ವೈವಿಧ್ಯಮಯ ಸ್ಪರ್ಧೆಗಳು

Published

on

ಅ.22 ರಂದು ಮಹಿಳಾ ದಸರಾ – ಸ್ಥರ್ಧಿಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು

ಜನಮಿತ್ರ ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 22 ರಂದು ಭಾನುವಾರ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪರ್ಧೆಗಳಿಗೆ ಸ್ಲಳದಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ.
ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ಜಂಟಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಅ.22 ರಂದು ಬೆಳಗ್ಗೆ 10 ಗಂಟೆಯಿAದಲೇ ನಗರದ ಗಾಂಧಿ ಮೈದಾನದಲ್ಲಿ 8ನೇ ವರ್ಷದ ಮಹಿಳಾ ದಸರಾವನ್ನು ಸಂಭ್ರಮದಿAದ ಆಚರಿಸಲು ತೀರ್ಮಾನಿಸಲಾಗಿದ್ದು, ವಿವಿಧ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ.
ಮಹಿಳಾ ದಸರಾ ಅಂಗವಾಗಿನ ಸ್ಪರ್ಧೆಗಳ ವಿವರ ಇಂತಿದೆ : ಎಥ್ ನಿಕ್ ಫ್ಯಾಷನ್ ಶೋ 20 ರಿಂದ 30 ವಯೋಮಾನದವರಿಗೆ ಹಾಗೂ 31 ರಿಂದ 55 ವರ್ಷ ವಯೋಮಿತಿಯ ಮಹಿಳೆಯರಿಗೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕರ್ನಾಟಕದ ವಿವಿಧ ಉಡುಗೆಗಳಿಗೆ ಆದ್ಯತೆ, ಉಡುಗೆ, ಆಭರಣ, ವಸ್ತ್ರ, ನಡುಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು) ಈ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.
ಗಾರ್ಭಾ ನೃತ್ಯ ಸ್ಪರ್ಧೆ : 20 ರಿಂದ 30 ವರ್ಷದ ಮಹಿಳೆಯರಿಗಾಗಿ, 30 ರಿಂದ 40 ವರ್ಷ ವಯೋಮಿತಿ ಮಹಿಳೆಯರಿಗೆ 100 ಮೀಟರ್ ಓಟದ ಸ್ಪರ್ಧೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ, (ವೈಯಕ್ತಿಕ) ಹಾಗೂ ಹಗ್ಗ ಜಗ್ಗಾಟ, (ಒಂದು ಗುಂಪಿನಲ್ಲಿ 10 ಜನ ಇರಬೇಕು), 40 ರಿಂದ 50 ವರ್ಷ ವಯೋಮಿತಿ ಮಹಿಳೆಯರಿಗೆ – 100 ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯುವುದು, ಬಕೆಟ್‌ಗೆ ಚೆಂಡನ್ನು ಹಾಕುವುದು,
50 ರಿಂದ 60 ವರ್ಷ ವಯೋಮಿತಿ ಮಹಿಳೆಯರಿಗೆ – ಬಕೆಟ್‌ಗೆ ಚೆಂಡು ಹಾಕುವ ಸ್ಪರ್ಧೆ, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು, 60 ರಿಂದ 70 ವರ್ಷ ವಯೋಮಿತಿ ಮಹಿಳೆಯರಿಗೆ ನಿಧಾನವಾಗಿ ನಡೆಯುವುದು, ಸೂಜಿಗೆ ನೂಲನ್ನು ಹಾಕುವುದು. ಬಾಂಬ್ ಇನ್ ಸಿಟಿ, 70 ರಿಂದ 80 ವರ್ಷ ವಯೋಮಿತಿ ಮಹಿಳೆಯರಿಗೆ – ಸೂಜಿಗೆ ನೂಲನ್ನು ಹಾಕುವುದು, ಚೆಂಡನ್ನು ವರ್ಗಾಯಿಸುವುದು, ನಿಧಾನವಾಗಿ ನಡೆಯುವುದು.
ವೇದಿಕೆ ಮೇಲೆ ನಡೆಯುವ ಇತರ ಸ್ಪರ್ಧೆಗಳು – ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು, ಮತ್ತು ವಾಲಗ ಕುಣಿತ.
ಮಹಿಳಾ ದಸರಾ ಅಂಗವಾಗಿನ ಸ್ಪರ್ಧೆಗಳಿಗೆ ಅ.22 ರಂದು ಭಾನುವಾರ ಬೆಳಗ್ಗೆ 10 ಗಂಟೆಯೊಳಗಾಗಿ ಸ್ಪರ್ಧೆಗಳು ನಡೆಯುವ ಮಡಿಕೇರಿ ಗಾಂಧಿ ಮೈದಾನದ ಸ್ಪರ್ಧಾ ಸ್ಥಳದಲ್ಲಿಯೇ ಸ್ಪರ್ಧಿಗಳು ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಮಹಿಳಾ ದಸರಾ ಸಂಬAಧಿತ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆಗಳು – 9535898352, 8310891269, 7760840754.

 

Continue Reading
Click to comment

Leave a Reply

Your email address will not be published. Required fields are marked *

Kodagu

ಮೂರ್ನಾಡು ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕಾರು ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ-ಕಾರು ಚಾಲಕ ಗಂಭೀರ

Published

on

ನಾಪೋಕ್ಲು : ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮೂರ್ನಾಡು ಮಡಿಕೇರಿ ಮುಖ್ಯರಸ್ತೆಯ ಮುತ್ತಾರುಮುಡಿ ಎಂಬಲ್ಲಿ ನಡೆದಿದೆ.

ಮೂರ್ನಾಡು ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದ್ದು ಕಾರು ಚಾಲಕ ಎಮ್ಮೆಮಾಡು ಗ್ರಾಮದ ನಿವಾಸಿ ಇಬ್ರಾಹಿಂ ಸಅದಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Crime

ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ವ್ಯಕ್ತಿ ಬಂಧನ

Published

on

ವಿರಾಜಪೇಟೆ : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಅಸ್ಸಾಂ ರಾಜ್ಯದ ಅಬ್ದುಲ್ ಮಜೀದ್ (31) ಬಂಧಿತ ಆರೋಪಿ. ಆರೋಪಿಯನ್ನು 300 ಗ್ರಾಂ ಗಾಂಜಾದೊAದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುವ ಹಿನ್ನೆಲೆ ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್ ಮೋಹನ್ ಕುಮಾರ್ ಹಾಗೂ ಇತರ ಸಿಬ್ಬಂದಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಡಿ. 4 ರಂದು ಕಡಂಗಮರೂರು-ಬೆಳ್ಳುಮಾಡು ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

Kodagu

ಅನುಮಾನಸ್ಪದವಾಗಿ ವೈದ್ಯನ ಮೃತದೇಹ ಪತ್ತೆ

Published

on

ಮಡಿಕೇರಿ: ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 275 ರ
ಆನೆಕಾಡು ಬಳಿ ರಸ್ತೆ ಬದಿ ನಿಂತಿದ್ದ ಕಾರಿನಲ್ಲಿ ಪಿರಿಯಾಪಟ್ಟಣ ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಸತೀಶ್ ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾಗಿದೆ.

ಮೂಲತಹ ಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದವರಾದ ಡಾ. ಸತೀಶ್ (47) ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸುಾರು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು ಪಟ್ಟಣದ ತಾಲೂಕು ಆಯುರ್ವೇದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕಡೆಯವವರಿಗೆ ಮಾಹಿತಿ ನೀಡಿದ್ದಾರೆ

 

 

Continue Reading

Trending