Connect with us

Hassan

ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದ ಮೊಟ್ಟ ಮೊದಲ ದಲಿತ ಪ್ರಾಂಶುಪಾಲರಾಗಿ ಎ.ಜೆ. ಕೃಷ್ಣಯ್ಯ ಅಧಿಕಾರ ಸ್ವೀಕಾರ

Published

on

ಹಾಸನ:  ನಗರದ ಸಾಲಗಾಮೆ ರಸ್ತೆಯಲ್ಲಿರುವ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದ ಮೊಟ್ಟ ಮೊದಲ ದಲಿತ ಪ್ರಾಂಶುಪಾಲರಾಗಿ ಎ.ಜೆ. ಕೃಷ್ಣಯ್ಯ ಅವರು ಇಂದು ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದರು
ಕಳೆದ ಅನೇಕ ದಿನಗಳಿಂದ ವಿವಾದದ ಸುಳಿಯಲ್ಲಿ ಇದ್ದ ಪ್ರಾಂಶುಪಾಲರ ನೇಮಕ ಪ್ರಕ್ರಿಯೆ ಕೊನೆಗೂ ಸುಖಾಂತ್ಯ ಖಂಡಿದ್ದು ಜೇಸ್ಟತೆ ಆಧಾರದಲ್ಲಿ ನೇಮಕ.ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಲಾಯಿತು.
ಜೆಸ್ಟತೆ ಆಧಾರದಲ್ಲಿ ಕೃಷ್ಣಯ್ಯ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಬೇಕು ಎಂದು ಈ ಹಿಂದೆಯೇ ತೀರ್ಮಾನ ಮಾಡಲಾಗಿತ್ತು ಆದರೆ ಈ ಹಿಂದೆ ಇದ್ದ ಪ್ರಾಂಶುಪಾಲ ಪ್ರದೀಪ್ ತಮ್ಮ ಸ್ಥಾನ ಬಿಟ್ಟು ಕೊಡಲು ನಿರಾಕರಿಸಿದ್ದರು.


ಸೋಮವಾರ ಕಾಲೇಜಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಸಭೆ ಸೇರಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಪ್ರದೀಪ್ ಅವರ ಸ್ಥಾನಕ್ಕೆ ಕೃಷ್ಣಯ್ಯ ಅವರನ್ನು ನೇಮಕ ಮಾಡಲಾಯಿತು.
ಆದರೆ ಈ ಹಿಂದೆ ಇದ್ದ ಪ್ರಾಂಶುಪಾಲರಾದ ಪ್ರದೀಪ್ ವಿಷಯ ತಿಳಿದ ತಕ್ಷಣ ಕಾಲೇಜಿಗೆ ರಜೆ ಹಾಕಿ, ಎಲ್ಲಾ ಕೊಠಡಿಗಳ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದರು. ನಂತರ ಎಲ್ಲಾ ನಿರ್ದೇಶಕರ ಸಮ್ಮುಖದಲ್ಲಿ ಕೊಠಡಿಗಳ ಬೀಗ ಹೊಡೆದು ಒಳ ಪ್ರವೇಶ ಮಾಡಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Hassan

ಮರಿ ಸತ್ತು ಮೂರು ದಿನವಾದರೂ ಸ್ಥಳ ಬಿಟ್ಟು ಕದಲದ ತಾಯಿಯಾನೆ

Published

on

ಅರೇಹಳ್ಳಿ: ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್‌ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ:

ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು. ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

“ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ” ಎಂದು
ಬೇಲೂರಿನ ಆರ್‌ಎಫ್‌ಒ ಅಧಿಕಾರಿ ಯತೀಶ್ ತಿಳಿಸಿದ್ದಾರೆ.

Continue Reading

Hassan

ಹಾಸನ: ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್‌ ನಾಗೇಂದ್ರರನ್ನು ಸನ್ಮಾನಿಸಿದ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

Published

on

ಹಾಸನ: ಈ ಜಿಲ್ಲೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಹಾಗೂ ಸಮಾಜ ಸೇವಕ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಮಾಜಿ ಕಾರ್ಯ ನಿರ್ವಾಹಕ ಸದಸ್ಯರಾಗಿದ್ದ ಸಿದ್ದೇಶ್‌ ನಾಗೇಂದ್ರ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಸನ್ಮಾಸಿದ್ದಾರೆ.

ಹಾಸನದ ಬಿಜೆಪಿ ಕಚೇರಿಯಲ್ಲಿ ಇಂದು ಸಿದ್ಧೇಶ್‌ ನಾಗೇಂದ್ರ ಅವರಿಗೆ ಸನ್ಮಾನಿಸಿ ಗೌರವ ಪುರಸ್ಕಾರ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ್, ನಿರ್ದೇಶಕರಾದ ಮಯೂರಿ ಲೋಕೇಶ್, ಡಿ. ವಿ.ಮದನ್, ಹೆಚ್. ಕೆ.ಮಿಥುನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಲೋಕೇಶ್, ಖಜಾಂಚಿ ಶೈಲಾ ಮದನ್‌, ನಿರ್ಧೇಶಕರಾದ ಭಾಮಿನಿಹೇಮಂತ್, ವೀಣಾ ದೇವರಾಜ್, ಡಿ. ಸಿ.ಅನೂಸೂಯ, ಸುಶೀಲ ಪಾಲನೇತ್ರ, ಸವಿತಾ ಭೂಷಣ್ ಮುಖಂಡರಾದ ನೇತ್ರವತಿ ಮಂಜುನಾಥ್‌ ಇತರರು ಉಪಸ್ಥಿತರಿದ್ದರು.

Continue Reading

Hassan

5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಅವಿರೋಧ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು

ಆಲೂರು : ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ.

ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸ್ಥಾನಗಳು 6, ಪ.ಜಾತಿ ಮೀಸಲು ಸ್ಥಾನ 01, ಹಿಂದುಳಿದ ವರ್ಗ-ಪ್ರವರ್ಗ(ಬಿ) ಸ್ಥಾನ 01, ಮಹಿಳಾ ಮೀಸಲು 2 ಸ್ಥಾನ, ಸೂಪರ್ವೈಸರ್ ಸೇರಿ ಒಟ್ಟು 11 ಸ್ಥಾನಗಳಿಗೆ ಜೂನ್. 21 ರಂದು ಚುನಾವಣೆ ನಡೆಯಬೇಕಿತ್ತು ಆದರೆ ನಾಮಪತ್ರ ಸಲ್ಲಿಸಿದ ಒಟ್ಟು 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ(ಎ) ಸ್ಥಾನಗಳಿಗೆ ಅ ಸಮುದಾಯಗಳ ಜನರು ಇಲ್ಲದ ಕಾರಣ ಆ ಸ್ಥಾನಗಳು ಖಾಲಿ ಉಳಿದಿವೆ.

ಸಾಮಾನ್ಯ ಕ್ಷೇತ್ರದಿಂದ ಚಿಕ್ಕಕಣಗಾಲು ಗ್ರಾಮದ ಮಹೇಶ್ವರಯ್ಯ, ತೀರ್ಥ ಕುಮಾರ್ (ಕಟ್ಟೆಗಿಡ) ವೀರಭದ್ರ, ಬಸವಣ್ಣ, ಜೆ ತಿಮ್ಮನಹಳ್ಳಿ ಗ್ರಾಮದಿಂದ ಚಂದ್ರ, ಗುರು, ಮಹಿಳಾ ಮೀಸಲು ಸ್ಥಾನದಿಂದ ಜೆ.ತಿಮ್ಮನಹಳ್ಳಿಯ ಸುಶೀಲಮ್ಮ, ಸಿದ್ದಮ್ಮ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮಾಳಿಗಯ್ಯ, ಹಿಂದುಳಿದ ವರ್ಗ-ಪ್ರವರ್ಗ(ಬಿ) ಸ್ಥಾನದಿಂದ ಜೆ. ತಿಮ್ಮನಹಳ್ಳಿಯ ರವಿಪ್ರಕಾಶ್ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳಾಗಿದ್ದಾರೆ‌.

ಚುನಾವಣಾ ಅಧಿಕಾರಿಯಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ರಿಟರ್ನಿಂಗ್ ಆಫೀಸರ್ ಶಕುಂತಲಾ ಕರ್ತವ್ಯ ನಿರ್ವಹಿಸಿದರು.

 

Continue Reading

Trending

error: Content is protected !!