Kodagu
ಮಡಿಕೇರಿ ದಸರಾ ಸಮಿತಿ ನಿಯೋಗದಿಂದ ಸಚಿವರ ಭೇಟಿ

ಮಡಿಕೇರಿ: ಮಡಿಕೇರಿ ದಸರಾ ಸಮಿತಿ ನಿಯೋಗ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರನ್ನು ಭೇಟಿಯಾಗಿ ದಸರಾ ಉತ್ಸವ ಆಚರಣೆಗೆ ರೂ.೨ ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸಂದರ್ಭ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಮುಖರಾದ ಟಿ.ಪಿ.ರಮೇಶ್, ಮುನಿರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೂ ನಿಯೋಗ ಮನವಿ ಪತ್ರ ಸಲ್ಲಿಸಿತು.
Kodagu
ಚಿಕ್ಕಮ್ಮನ ಮೇಲೆ ಗುದ್ದಲಿಯಿಂದ ಹಲ್ಲೆ: ಆರೋಪಿ ಆರೆಸ್ಟ್

ಮಡಿಕೇರಿ: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಸ್ವಂತ ಚಿಕ್ಕಮ್ಮನನ್ನೇ ಗುದ್ದಲಿಯಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊನ್ನಂಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಅರಮಣಮಾಡ ಸಚಿನ್(42) ಎಂಬಾತ ಅರಮಣಮಾಡ ಬಾಗು(56) ಎಂಬುವವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಹಿಂದಿನಿಂದಲೂ ಪರಸ್ಪರ ವೈಶ್ಯಮ್ಯವಿದ್ದು, ಇಂದು ಗದ್ದೆಗೆ ತೆರಳುವ ಹಾದಿಗಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿತ್ತು. ಹೀಗಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Kodagu
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಮೇಲೆ ಎಫ್ಐಆರ್ ದಾಖಲು

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ಮೇಲೆ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕಿ ಉಳಿಯಂಡ ಡಾಟಿ ಪೂವಯ್ಯ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ (BNS) U\S 75(1)(iv) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ(ಜು.18) ಪಿರ್ಯಾದಿಯವರು ಮಡಿಕೇರಿ ನಗರ ಮಹಿಳಾ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ,ಪಿರ್ಯಾದಿಯವರ 38 ವರ್ಷಗಳಿಂದ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದು, ವೈಯಕ್ತಿಕ ದ್ವೇಷ ಎಂಬಂತೆ ಮಾನಹಾನಿ ಮಾಡುವ ಉದ್ದೇಶದಿಂದ ಪೂಮಾಲೆ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ವ್ಯಾಟ್ಸ್ ಅಪ್ ನಂಬರ್ ನಿಂದ ದಿನಾಂಕ 6-07-2025ರಂದು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ ಅಪ್ ಗುಂಪುಗಳಲ್ಲಿ ಹಾಗೂ ಬೇರೆಯವರ ವೈಯಕ್ತಿಕ ವ್ಯಾಟ್ಸ್ ಅಪ್ ನಂಬರ್ ಳಿಗೆ ಪಿರ್ಯಾದಿಯವರನ್ನು ಕೊಡವ ಭಾಷೆಯಲ್ಲಿ “ಎಲ್ಲಾ ಬೆತ್ತಲೆ ಆನವಡ ಕೊಣಿ ನೋಟಿಯಪ್ಪ(ಎಲ್ಲಾ ಬೆತ್ತಲಾದವಳ ಚೆಲ್ಲಾಟ ನೋಡ್ರಪ್ಪಾ) ಎಂಬುದಾಗಿ ತೀರಾ ಆಕ್ಷೇಪಕಾರಿಯಾಗಿಯೂ ಆಘಾತಕಾರಿಯಾಗಿಯೂ ಟಿಪ್ಪಣಿ ಬರೆದು ಸುಮಾರು20 ವರ್ಷಗಳ ಹಿಂದೆ ಆಗಿಹೋದ ಘಟನೆಯನ್ನೂ,ಅಂದೂ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವುದನ್ನು ಲೆಕ್ಕಿಸದೆ ವ್ಯಾಪಕ ಅಪಪ್ರಚಾರ ಮಾಡಿ ತೇಜೋವಧೆ ಮಾಡಿ ಪಿರ್ಯಾದಿಯವರಿಗೆ ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿರುತ್ತಾರೆ.
ತಪ್ಪಿತಸ್ಥೆ ಅಲ್ಲವೆಂದು ಘನವೆತ್ತ ಮಡಿಕೇರಿ ನ್ಯಾಯಾಲಯ ತೀರ್ಪು ಹೊರಡಿಸಿರುವುದನ್ನು ಮರೆಮಾಚಿ ಕುತಂತ್ರಿಗಳು ಪಿರ್ಯಾದಿಯವರ ಮೇಲೆ ಆರೋಪಿಸಿದ್ದ ಹಳೆ ವದಂತಿಗಳನ್ನು ಫೋಟೋ ಸಹಿತ ಪ್ರಕಟಿಸಿ ಎಲ್ಲಾ ಗ್ರೂಪ್ ಗಳಿಗೆ ಹರಡಿ ಆರೋಪ ,ಅಸಹ್ಯಕರ ಲೈಂಗಿಕ ಅರ್ಥ ಛಾಯೆ ಬರುವಂತೆ ಶಬ್ದ ಬಳಸಿ ಆಕ್ಷೇಪವಾದ ವಾಕ್ಯಗಳನ್ನು ದುರುದ್ದೇಶದಿಂದ ಬಳಸಿ ಲೈಂಗಿಕವಾಗಿ ಬಣ್ಣದ ಟೀಕೆಗಳ ಪದಗಳನ್ನು ಉಪಯೋಗಿಸಿ ಕಿರುಕುಳ ಕೊಟ್ಟದ್ದು ಪಿರ್ಯಾದಿಯವರನ್ನು ಕಳಂಕಿತ ಮಹಿಳೆ ಎಂಬಂತೆ ಬಿಂಬಿಸಿ ಮಾನಸಿ ಆಘಾತ ಉಂಟುಮಾಡಿರುತ್ತಾರೆ.
ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿರುವ ಪಿರ್ಯಾದಿ ತುಂಬಾ ಕುಗ್ಗಿ ಹೋಗಿರುತ್ತೇನೆ.ಆದ್ದರಿಂದ ಅಜ್ಜನಿಕಂಡ ಮಹೇಶ್ ನಾಚಯ್ಯವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ಪುಕಾರಿಗೆ FIR ದಾಖಲಾಗಿದೆ.
Kodagu
ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡ ಭರತನಾಟ್ಯ ಕಲಾವಿದೆ ಕೊಂಪುಳಿರ ಪಿ.ದಿಥ್ಯ

ಮಡಿಕೇರಿ: ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ವಿರಾಜಪೇಟೆಯ ಪುಟ್ಟ ಪೋರಿ ಭರತನಾಟ್ಯ ಕಲಾವಿದೆ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ-2025 ರ ಪ್ರಶಸ್ತಿ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ವಿರಾಜಪೇಟೆಯ ನಾಟ್ಯಾಂಜಲಿ ನಾಟ್ಯ ನೃತ್ಯ ಶಾಲೆಯಲ್ಲಿ ತನ್ನ ಚಿಕ್ಕ ವಯಸ್ಸಿಗೆ ಅಮೋಘ ಪ್ರತಿಭೆ ಮಾಡಿರುವ ಇವರು ತನ್ನ ಗುರುಗಳಾದ ವಿದುಷಿ ಹೇಮಾವತಿ ಮತ್ತು ಕಾವ್ಯ ಇವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ಸಾಧನೆಯನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿಥ್ಯಳ ಪ್ರತಿಭೆಯನ್ನು ಗಣ್ಯರು ಗುರುತಿಸಿದ್ದು, ಬಳಿಕ ಈ ರಾಜ್ಯಮಟ್ಟದ ಪ್ರಶಸ್ತಿಗೆ ತನ್ನ ಸಣ್ಣ ವಯಸ್ಸಿನಲ್ಲೇ ಆಯ್ಕೆಯಾದರು.
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿಥ್ಯ ವಿರಾಜಪೇಟೆ ಪಟ್ಟಣದ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿರ ಯು ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್ ಮತ್ತು ಭವ್ಯ ದಂಪತಿಯ ಪುತ್ರಿಯಾಗಿದ್ದಾರೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya10 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar16 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar10 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Special14 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Mysore11 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Kodagu10 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
State9 hours ago
ಆಗಸ್ಟ್.11ರೊಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು: ಸುರೇಶ್ ಬಾಬು