Connect with us

Cultural

ಅ.16 ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು

Published

on

ಮೊದಲ ದಿನ ಅಂತರರಾಷ್ಟ್ರೀಯ ಖ್ಯಾತಿಯ ಡ್ರಮ್ ದೇವ ಅವರಿಂದ ಇಂದು ವಾದ್ಯಸಂಗೀತ

ಜನಮಿತ್ರ ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನಿAದ (ಅ.16) ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೃತ್ಯ, ವಾದ್ಯಗಳ ಸಂಗಮದ ವೈವಿಧ್ಯತೆಗಳು ಮೂಡಿಬರಲಿದೆ.

ಸಂಜೆ 7 ಗಂಟೆಯಿAದ ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರಥಮ ದಿನದ ಆಕರ್ಷಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡದಿAದ ವಾದ್ಯ ಮತ್ತು ಸಂಗೀತ ಕಾರ್ಯಕ್ರಮ ಇರುತ್ತದೆ. ವಿವಿಧ ಭಾಷೆಗಳ 600 ಕ್ಕೂ ಅಧಿಕ ಸಿನಿಮಾಗಳಲ್ಲಿ ವಾದ್ಯಸಂಗೀತಕಾರನಾಗಿ ಕಾರ್ಯನಿರ್ವಹಿಸಿರುವ ಡ್ರಮ್ ದೇವ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊದಲ ದಿನ ದೇವಾ ಅವರೊಂದಿಗೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಗಾಯಕ ಪುರುಷೋತ್ತಮ, ಸರಿಗಮಪ ಖ್ಯಾತಿಯ ಹಂಸಿನಿ, ದಿವ್ಯಾ ಯಾದವ್, ಮನುಯಾದವ್ ಸೇರಿದಂತೆ ಅನೇಕ ಗಾಯಕರು, ಖ್ಯಾತ ವಾದ್ಯ ಸಂಗೀತಕಾರರಿAದ ಕಾರ್ಯಕ್ರಮ ಆಯೋಜಿತವಾಗಿದೆ.

ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿAದ ನೃತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನಾಟ್ಯಶಾಲಾ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯ, ಮದೆನಾಡಿನ ಶ್ರೀ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ಶಿವಚರಿತಾಮೃತಂ ನೃತ್ಯ ರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೊದಲ ದಿನದ ಆಕರ್ಷಣೆಯಾಗಿದೆ. ಇದರೊಂದಿಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಮೊದಲ ದಿನ ಆಯೋಜಿತವಾಗಿದೆ ಎಂದು ದಸರಾ ನೃತ್ಯ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ನೃತ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ, ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂಥರ್ ಗೌಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ , ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆ ಬಳಿ ಖ್ಯಾತ ಮರಳು ಕಲಾವಿದೆ ಎಂ.ಎನ್. ಗೌರಿ ರಚಿಸಿರುವ ವನದೈವ ಮರಳು ಕಲಾಕೃತಿ ಮತ್ತು ಮಡಿಕೇರಿ ದಸರಾ ಫೋಟೋ ಪಾಯಿಂಟ್‌ನ್ನೂ ಗಣ್ಯರು ಉದ್ಘಾಟಿಸಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Cultural

ಪಾಕಿಸ್ತಾನಿಯರನ್ನು ದೇಶದಿಂದ ಹೊರಗೆ ಕಳುಹಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು : ಡಾ.ಇಂದ್ರೇಶ್

Published

on

ಮಂಡ್ಯ: ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರ ಹೋಗಲು, ದೇಶದ ರಾಜ್ಯ ಸರ್ಕಾರಗಳು ಗಡಿಪಾರು ಮಾಡುವಂತೆ ಆದೇಶಿಸಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆಹಚ್ಚಿ ಪಾಕಿಸ್ತಾನಕ್ಕೆ ಮರಳಲು ಕ್ರಮ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ತಲೆ ತಗ್ಗಿಸುವ ರೀತಿ ಪಹಲ್ಗಾಮ್ ಹತ್ಯಾಕಾಂಡ ನಡೆದ ಹಿನ್ನಲೆ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಮಾಡಿದೆ . ದೇಶದ ಬಿಜೆಪಿ ಸರ್ಕಾರ ಇರುವ ಎಲ್ಲ ರಾಜ್ಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹಿಂದಿರುಗಿಸಲು ಕ್ರಮವಹಿಸಿದ್ದು, ರಾಜ್ಯದಲ್ಲಿ ಮಾತ್ರ ಸದರಿ ಕೆಲಸ ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಓಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಅವರ ಮೇಲಿನ ಪ್ರಕರಣಗಳ ಕುಲಾಸೆ ಮಾಡಿ, ಬಿಡುಗಡೆ ಮಾಡಿದ್ದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ್ದು, ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಲ್ಲಿದ್ದಾರೆ, ಯಾವ ಸಂಘಟನೆಯಲ್ಲಿದ್ದಾರೆ, ಯಾವ ಕೃತ್ಯವೆಸಗುತ್ತಿದ್ದಾರೆ ಇದರ ಬಗ್ಗೆ ಕ್ರಮ ವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಅಂತೆಯೇ ದೇಶದಿಂದ ಪಾಕಿಸ್ತಾನಿ ಪ್ರಜೆಗಳನ್ನು ಹಿಂದಿರುಗಿಸುವಂತೆ ಕ್ರಮ ವಹಿಸಲು ನಾಳೆ(ಬುಧವಾರ) ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಜೊತೆಗೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ್, ಚಂದ್ರು ಇದ್ದರು.

Continue Reading

Cultural

ಶ್ರೀರಾಮನ ಚರಿತ್ರೆ ವಿಶ್ವಕ್ಕೆ ಸಾರಿದ ಶ್ರೀಮಹರ್ಷಿ ವಾಲ್ಮೀಕಿ — ಶಾಸಕ ದರ್ಶನ್ ಧ್ರುವನಾರಾಯಣ್

Published

on

ನಂಜನಗೂಡು ನ.15

ಶ್ರೀ ರಾಮನ ಚರಿತ್ರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ನಾಯಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳು ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಪಡೆದುಕೊಳ್ಳುವ ಮೂಲಕ ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತೆನೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಜಾತಿಭೇದ ಮಾಡಬೇಡಿ ಸಮಾಜಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ವಾಲ್ಮೀಕಿ ಸಮುದಾಯ ಸಾರಬೇಕು.ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಗ್ರಾಮದ ಎಲ್ಲ ನಾಯಕ ಸಮಾಜದವರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಇರಬೇಕು.ಶ್ರೀ ಮಹರ್ಷಿ ವಾಲ್ಮೀಕಿ ಅವರ ರಾಮಾಯಣದಲ್ಲಿ ಹೆಚ್ಚು ರೂಪಕ ಅಲಂಕಾರ ಬಳಕೆಯಾಗಿರುವುದ್ದರಿಂದ ಕಾಳಿದಾಸ ಕವಿ ಮಹರ್ಷಿ ವಾಲ್ಮೀಕಿ ಅವರನ್ನು ಕವಿಕುಲ ಚಕ್ರವರ್ತಿ ಎಂಬುದಾಗಿಯೋ ವರ್ಣಿಸಿದ್ದಾರೆ ಅಲ್ಲದೇ ಜಗತ್ತಿನ ಶ್ರೇಷ್ಠ ವಿಮಾರ್ಶಕ ಥಾಮಸ್ ಪ್ರಕಾರ ವಾಲ್ಮೀಕಿ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯ ಸಂಪತ್ತು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುಂಬ್ರಳ್ಳಿ ಸುಬ್ಬಣ್ಣ, ಶ್ರೀ ಕಂಠನಾಯಕ,ತಾ ಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್,ನಾಯಕ ಸಂಘದ ತಾಲ್ಲೂಕು ಅದ್ಯಕ್ಷ ಬಂಗಾರನಾಯಕ, ಕಾಂಗ್ರೆಸ್ ಯುವ ಘಟಕದ ಅದ್ಯಕ್ಷ ದೇಬೂರು ಆಶೋಕ್,ಗ್ರಾ ಪಂ ಅದ್ಯಕ್ಷೆ ತಾಯಮ್ಮ,
ದೊರೆಸ್ವಾಮಿನಾಯಕ,ಅಭಿನಂದನ್ ಪಾಟೀಲ್,ಗ್ರಾ ಪಂ ಸದಸ್ಯದೇವನಾಯಕ,ನಾಗನಾಯ್ಕ,ಶ್ರೀಕಂಠಸ್ವಾಮಿ,ಶಿವರಾಜು,ಪ್ರಕಾಶ್,ನಂಜುಂಡಸ್ವಾಮಿ, ಸಿದ್ದು,ಮಹೇಶ್, ಮಹೇಂದ್ರ, ಹಾಗೂ ಕಿಚ್ಚಿನ ಅಭಿಮಾನಿ ಬಳಗದವರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Cultural

ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ

Published

on

ಆಲೂರು : ನೂರಾರು ವರ್ಷಗಳ ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ತಾಲ್ಲೂಕಿನ ಕಸಬಾ ಹೋಬಳಿ ಸೊಂಪುರ ಗ್ರಾಮದ ಸಮೀಪದಲ್ಲಿರುವ ನಂಜದೇವರ ಕಾವಲಿನಲ್ಲಿ ಸುಕ್ಷೇತ್ರ ನಂಜುಂಡೇಶ್ವರ ದೇವಾಲಯದಲ್ಲಿ 52ನೇ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಬೆಳಗಿನ ಜಾವದಿಂದಲೇ ದೇವಾಲಯ ಶುಚಿಗೊಳಿಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿ ವಿವಿಧ ಅಭಿಷೇಕ ಸೇರಿದಂತೆ ಅಲಂಕಾರ ಮಹಾ ಮಂಗಳಾರತಿ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.

ಆಲೂರು ತಾಲೂಕು ಸೇರಿದಂತೆ ಹಲವೆಡೆಗಳಿಂದ ನೂರಾರು ಭಕ್ತರ ದಂಡು ಅಗಮಿಸಿ ಪೂಜಾ ಕಾರ‍್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ವಿಶೇಷ ಎಂದರೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಕೋರಿಕೆಗಾಗಿ ಹರಕೆ ಹೊರುತ್ತಿದ್ದು. ಕೋರಿಕೆಗಳು ಈಡೇರಿದ ನಂತರ ಭಕ್ತರು ಪ್ರತಿ ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಾಧಿಗಳೇ ಸ್ವಯಂ ಪ್ರೇರಿತರಾಗಿ ಹಮ್ಮಿಕೊಳ್ಳುತ್ತ ಬಂದಿದ್ದಾರೆ ಎಂದು ದೇಗುಲ ಟ್ರಸ್ಟ್ ಅಧ್ಯಕ್ಷ ಈರಣ್ಣಯ್ಯ ತಿಳಿಸಿದ್ದಾರೆ.

Continue Reading

Trending

error: Content is protected !!