Connect with us

Kodagu

ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷ ಶಿಕ್ಷೆ

Published

on

ಮಡಿಕೇರಿ : ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ 11 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಗೆ ಮಡಿಕೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಅಬ್ದುಲ್ ನಾಸಿರ್ ಶಿಕ್ಷೆಗೆ ಒಳಗಾದ ಆರೋಪಿ. ಪ್ರಕರಣದಲ್ಲಿ ನೊಂದ ಬಾಲಕಿಯ ತಾಯಿ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೋಮವಾರಪೇಟೆ ಉಪ ವಿಭಾಗದ ಅಂದಿನ ಡಿವೈಎಸ್‌ಪಿ ಪ್ರಕರಣದ ತನಿಖೆ ನಡೆಸಿ, ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯ್ಯಾಧೀಶೆ ಪ್ರಶಾಂತಿ.ಜಿ, ನೊಂದ ಬಾಲಕಿಯ ಸಾಕ್ಷ್ಯ, ವೈದ್ಯಕೀಯ ಸಾಕ್ಷ್ಯ ಹಾಗೂ ಪ್ರಾಸಿಕ್ಯೂಷನ್ ಪರ ಹಾಜರುಪಡಿಸಿದ ಇತರ ಸಾಕ್ಷ್ಯಧಾರಗಳ ಆಧಾರದ ಮೇಲೆ ಆರೋಪಿ ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ ಎಂದು ಹೇಳಿದ್ದು, ಆರೋಪಿ ಅಬ್ದುಲ್ ನಾಸಿರ್ ಫೋಕ್ಸೋ ಹಾಗೂ ಎಸ್.ಸಿ / ಎಸ್.ಟಿ ಕಾಯ್ದೆಯಡಿ ಅಪರಾಧವೆಸಗಿದ್ದಕ್ಕಾಗಿ 20 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ನೊಂದ ಬಾಲಕಿಗೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ನ್ಯಾಯಾಲಯ ಹೇಳಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ

Published

on

ವಿರಾಜಪೇಟೆ : ತಾಲ್ಲೂಕು ಕೊಟ್ಟೋಳಿಯಲ್ಲಿರುವ ಶ್ರೀ ಧಾರಾಮಹೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು.
ದೇವಸ್ಥಾನ ಸಮಿತಿಯ ಕೋದಂಡ ಅಜಯ್ ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ಶ್ರೀ ದೇವರ ಪ್ರತಿಷ್ಠ ಮಹೋತ್ಸವದಲ್ಲಿ ಭಾಗವಹಿಸುವಂತೆ ಶಾಸಕರಿಗೆ ಆಮಂತ್ರಣ ನೀಡಿದ ಪ್ರಯುಕ್ತ ದೇವರ ಸನ್ನಿಧಿಗೆ ತೆರಳಿದ ಶಾಸಕರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ತಮ್ಮ ವೈಯಕ್ತಿಕ ರೂ 1 ಲಕ್ಷ ಧನಸಹಾಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾದ ಮಾಳೇಟೀರ ಪ್ರಶಾಂತ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಭಕ್ತದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Continue Reading

Kodagu

ಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ

Published

on

ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಪಂಚಾಯತ್ ನಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಸಂಜೀವಿನಿ ಸಭಾಂಗಣ ಫೆ.10 ರಂದು ಮಂಗಳವಾರ ಉದ್ಬಾಟನೆ ಯಾಗಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಹೆಚ್.ಎಸ್.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪಂಚಾಯತ್ ಕಚೇರಿಯ ಮೊದಲಂತಸ್ಥಿನಲ್ಲಿ ನಿರ್ಮಿಸಿರುವ ಕಟ್ಟಡವನ್ನು ಉದ್ಬಾಟನೆ ಸಮಾರಂಭದ ಅದ್ಯಕ್ಷತೆಯನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೇಗಾರ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮುಂತಾದ ಜನಪ್ರತಿನಿಧಿಗಳು, ಪಂಚಾಯತ್ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ.

Continue Reading

Kodagu

ದೇಶೀಯ ಕ್ರೀಡೋತ್ಸವ ಮತ್ತು ಜಾನಪದ ನಮ್ಮೆಗೆ ಅನುದಾನ ಕೋರಿ ಮನವಿ

Published

on

ಮಡಿಕೇರಿ : ಕೊಡಗಿನ ಮೂಲನಿವಾಸಿ ೨೧ ಕೊಡವ ಭಾಷಿಕ ಸಮುದಾಯಗಳ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸುತ್ತಿರುವ ’ದೇಶೀಯ ಕ್ರೀಡೋತ್ಸವ’ಕ್ಕೆ ಅನುದಾನ ಕೋರಿ ಕೊಡವ ಭಾಷಿಕ ಕೂಟವು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರಿಗೆ ಮನವಿ ಸಲ್ಲಿಸಿತು.
ಕೊಡವ ಭಾಷಿಕ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾ? ನಾಣಯ್ಯ ಅವರ ನೇತೃತ್ವದಲ್ಲಿ ವಿರಾಜಪೇಟೆಯಲ್ಲಿ ಅರುಣ್ ಮಾಚಯ್ಯ ಅವರನ್ನು ಭೇಟಿಯಾದ ನಿರ್ದೇಶಕರುಗಳು ಹಾಗೂ ಸಮುದಾಯಗಳ ಮುಖಂಡರುಗಳು ಕ್ರೀಡೋತ್ಸವದ ಯಶಸ್ಸಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.

ಕೆಂಬಟ್ಟಿ ಜಾನಪದ ನಮ್ಮೆ
ಕೊಡವ ಭಾಷಿಕ ಮೂಲನಿವಾಸಿ ಕೆಂಬಟ್ಟಿ ಸಮುದಾಯದ ವತಿಯಿಂದ ಪ್ರಥಮ ಬಾರಿಗೆ ’ಕೆಂಬಟ್ಟಿ ಜಾನಪದ ನಮ್ಮೆ’ಯನ್ನು ನಡೆಸಲಾಗುತ್ತಿದ್ದು, ಅಗತ್ಯ ಸಹಕಾರ ಕೋರಿ ಕೆಂಬಟ್ಟಿ ಸಮುದಾಯದ ನಿಯೋಗ ವಿರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.
ನಿಯೋಗದಲ್ಲಿ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ನಿರ್ದೇಶಕರುಗಳಾದ ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚವರೆಕುಟ್ಟಡ ಜೀವನ್, ಕೋಪರೆ ಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್, ಪ್ರಮುಖರಾದ ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಬಿದ್ದಣ ಕುಟ್ಟಡ ಕಿರಣ್ ಕಾವೇರಪ್ಪ, ಮೊಟ್ಟ ಕುಟ್ಟಡ ಭೋಜಮ್ಮ, ಜೋ ಕುಟ್ಟಡ ವ್ಯೆಶಾಲಿ ಪ್ರಕಾಶ್, ಬಿದ್ದಣಡ ಕುಟ್ಟ ರೋಹಿಣಿ ಪುಪ್ಪ, ಚಿಮ್ಮಿಡ ಕುಟ್ಟ ಗಿರೀಶ್ ಬೆಳ್ಳಿಪ್ಪ, ಚೋಕುಟ್ಟಡ ಸಂತೋಸ್, ಉತ್ತು ಕುಟ್ಟಡ ಮನು ಬಿದ್ದಪ್ಪ, ಬಿಲ್ಲಿರಿ ಕುಟ್ಟಡ ಮಂಜೇಶ್, ಚವರೆ ಕುಟ್ಟಡ ಸುಬ್ರಮಣಿ, ಚಿಮ್ಮಿಕುಟ್ಟಡ ವಿಲ್ಮ ಅಶೋಕ್,, ಚವರೆಡ ಕುಟ್ಟ ಸುಬ್ಬಕ್ಕಿ ಮುತಪ್ಪ ಮತ್ತಿತರರು ಹಾಜರಿದ್ದರು.

Continue Reading

Trending

error: Content is protected !!