Connect with us

Chamarajanagar

ಶ್ರೀ ಮಡಿವಾಳ ಮಾಚಿದೇವರ ಜಯಂತಿ

Published

on

ಯಳಂದೂರು: 12ನೇ ಶತಮಾನದ ಅವತಾರ ಪುರುಷನಾದ ಮಡಿವಾಳ ಮಾಚಿದೇವರು ಜನರ ಮನಸ್ಸಿನಲ್ಲಿದ್ದ ಜಾತಿ ಎಂಬ ಕೊಳೆಯನ್ನು ತೆಗೆಯುವ ಮೂಲಕ ಜಾತಿ ವ್ಯವಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ಗೂಳಿಪುರ ಗ್ರಾಮ ಪಂಚಾಯತಿ ಸದಸ್ಯ ಬೂದಂಬಳ್ಳಿ ಗಿರೀಶ್ ಹೇಳಿದರು.

ಯಳಂದೂರು ಸಮೀಪದ ಬೂದಂಬಳ್ಳಿ ಗ್ರಾಮದ ಮಡಿವಾಳ ಸಮುದಾಯದ ವತಿಯಿಂದ ಶನಿವಾರ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

ಮಡಿವಾಳ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು ಎಂದ ಅವರು, ಮಡಿವಾಳ ಸಮುದಾಯದವರು ಈಗಾಗಲೇ ಉನ್ನತ ಹುದ್ದೆಗಳಲಿದ್ದು, ಇನ್ನೂ ಹೆಚ್ಚಿನ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು.

ಇದಕ್ಕೂ ಮುನ್ನ ಬೆಳಿಗ್ಗೆ 11ಗಂಟೆಗೆ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಮಾಡಲಾಯಿತು.

ನಂತರ ಗ್ರಾಮದ ಎಲ್ಲಾ ಜನಾಂಗದವರು ಸೇರಿ ಊರಿನ ಹೊರ ವಲಯದಲ್ಲಿರುವ ಹರಳಿಮರಕ್ಕೆ ಪೂಜೆ ಸಲ್ಲಿಸಿ ವೀರಗಾಸೆ ತಂಡದೊಂದಿಗೆ ಅರಳಿ ಮರದಿಂದ ಮೆರವಣಿಗೆ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಜಯಂತಿಯನ್ನು ಅದ್ದೂರಿಯಾಗಿ ಮಾಡಲಾಯಿತು. ವೀರಗಾಸೆ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗೂಳಿಪುರ ಗ್ರಾಮ ಪಂಚಾಯತಿ ಸದಸ್ಯರಾದ ಬೂದಂಬಳ್ಳಿ ಗಿರೀಶ್, ಗೌಡ್ರು ಮಹದೇವಪ್ಪ, ಯಜಮಾನರಾದ ಬಿ. ಕೆ. ರಾಜಣ್ಣ, ನಂದೀಶ್, ಬಿ.ಡಿ. ನಾಗರಾಜು, ವಿ. ನಾಗರಾಜು, ಚಿಕ್ಕ ಯಜಮಾನರಾದ ನಾಗಶೆಟ್ಟಿ, ಮಡಿವಾಳ ಮಾಚಿದೇವರ ಸಂಘದ ಸದಸ್ಯರಾದ ಮಧು, ಬಸವಣ್ಣ, ಎನ್. ಮಹೇಶ್, ರವಿ, ಗಿರೀಶ್,ಪ್ರಸಾದ್, ಬಿ. ಮಹೇಶ್, ಬಸವಶೆಟ್ಟಿ, ಎನ್. ಮಹೇಶ್, ರಂಗಶೆಟ್ಟಿ, ಮಹದೇವಶೆಟ್ಟಿ, ಲೋಕೇಶ್, ಮಹದೇವಶೆಟ್ಟಿ, ಬೆಂಗಳೂರು ಲಿಂಗರಾಜು, ನಾಗಶೆಟ್ಟಿ, ಶಿವಕುಮಾರಶೆಟ್ಟಿ ಹಾಗೂ ಗ್ರಾಮಸ್ಥರು, ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ

Published

on

ಚಾಮರಾಜನಗರ: ತಲೆಯಲ್ಲಿ ಕೂದಲು ಇಲ್ಲದ ಕಾರಣಕ್ಕೆ ಪತ್ನಿ ಕಿರುಕುಳ ನೀಡಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಉಡಿಗಾಲ ಗ್ರಾಮದ ನಿವಾಸಿ ಪರಶಿವಮೂರ್ತಿ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪರಶಿವಮೂರ್ತಿಗೆ ತಲೆಯಲ್ಲಿ ಕೂದಲು ಕಡಿಮೆ ಇದ್ದು, ಕೂದಲು ನಾಟಿ ಮಾಡಿಸಿಕೊಳ್ಳುವಂತೆ ಪತ್ನಿ ಒತ್ತಾಯಿಸುತ್ತಿದ್ದಳು ಬೋಳು ತಲೆ ಎಂದು ಪದೇಪದೇ ನಿಂದಿಸುತ್ತಿದ್ದಳು. ಇದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಮಾಹಿತಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chamarajanagar

ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

Published

on

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

Trending

error: Content is protected !!