Hassan
ಫೆ.೨೪ ರಂದು ಎಲ್.ವಿ. ಪಾಲಿಟೆಕ್ನಿಕ್ ಅಮೃತಮಹೋತ್ಸವ
ವಿದ್ಯಾರ್ಥಿ-ಕ್ರೀಡಾ ಸಂಘದ ಸಮಾರೋಪ ಸಮಾರಂಭ: ಎಸ್.ಬಿ. ವೀಣಾ
ಹಾಸನ : ನಗದರದ ಡೈರಿ ವೃತ್ತದಲ್ಲಿರುವ ಶ್ರೀಮತಿ ಎಲ್ ವಿ. (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಯು ಇಡೀ ಕರ್ನಾಟಕದಲ್ಲಿ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಯಾಗಿ ಪ್ರಸಿದ್ದಿ ಪಡೆದಿದ್ದು, ಫೆಬ್ರವರಿ ೨೪ ರಂದು ಶನಿವಾರ ಬೆಳಿಗ್ಗೆ ೯:೩೦ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಎಸ್.ಬಿ. ವೀಣಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅಂದಿನ ಮಹಾರಾಜರ ಆಡಳಿತದ ಮೈಸೂರು ಸರ್ಕಾರವು ಸರಿಸುಮಾರು ೧೯೩೨ ಇಸವಿಯಲ್ಲಿ ಇಂಡಸ್ಟ್ರಿಯಲ್ ಸ್ಕೂಲ್ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, ಆಕುಪೇಷನಲ್ ಇನಸ್ಟಿಸ್ಕೂಟ್ ಅಡಿಯಲ್ಲಿ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿತ್ತು. ತದನಂತರ ಈ ಸಂಸ್ಥೆಯನ್ನು ಉನ್ನತ ದರ್ಜೆಗೇರಿಸಿ, ೧೯೪೮ನೇ ಇಸವಿಯಲ್ಲಿ ಎರಡು ವರ್ಷದ ಸಿವಿಲ್, ಯಾಂತ್ರಿಕ ಮತ್ತು ವಿದ್ಯುತ್ ಇಂಜಿನಿಯರಿಂಗ್‌ನಲ್ಲಿ ಲೈಸೆನ್ಸ್ ನೀಡುವ ಕೋರ್ಸ್‌ಗಳನ್ನು ಪ್ರಾರಂಭಿಸಲಾಯಿತು. ೧೯೫೮ ರಲ್ಲಿ ಈ ಸಂಸ್ಥೆಯನ್ನು ಮೂರು ವರ್ಷಗಳ ಡಿಪ್ಲೋಮ ಪದವಿಯನ್ನು ನೀಡುವ ಪಾಲಿಟೆಕ್ನಿಕ್ ಆಗಿ ಪರಿವರ್ತಿಸಲಾಯಿತು. ಈ ಸಂಸ್ಥೆಗೆ ಅರಸೀಕೆರೆಯ ಕೊಡುಗೈ ದಾನಿಗಳಾದ ಶ್ರೀಮತಿ ಲಕ್ಷಮ್ಮ ಮತ್ತು ಶ್ರೀ ವೆಂಕಟಸ್ವಾಮಿಯವರು ಭೂಮಿಯನ್ನು ದಾನ ಮಾಡಿದ್ದರಿಂದ ಅವರ ಹೆಸರನ್ನು ಈ ಸಂಸ್ಥೆಗೆ ಇಡಲಾಗಿದೆ. ವಿವಿಧ ಕಾಲಗಟ್ಟಿಗಳಲ್ಲಿ ಇನ್ನಿತರೆ ಕೋರ್ಸ್‌ಗಳಾದ ಮೆಷಿನ್ ಟೂಲ್ ಟೆಕ್ನಾಲಜಿ, ಆಟೋಮೊಬೈಲ್ ಮತ್ತು ಗಣಕಯಂತ್ರ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ ಎಂದರು. ಈ ಸಂಸ್ಥೆಯಲ್ಲಿ ಒಟ್ಟು ಆರು ಕೋರ್ಸ್‌ಗಳಿದ್ದು ಸುಮಾರು ೧೦೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಈ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಸಂಯೋಜನೆ ಯಡಿಯಲ್ಲಿ ಸಮುದಾಯ ಪಾಲಿಟೆಕ್ನಿಕ್ ಇದ್ದು, ಅರ್ಹ ನಿರುದ್ಯೋಗಿ ಯುವ ಸಮುದಾಯಕ್ಕೆ ಅಲ್ಪಾವದಿ, ತರಬೇತಿ ನೀಡಿ ಸ್ವಾವಾಲಂಬಿ ಜೀವನ ನಡೆಸಲು ಸಹಾಯ ಮಾಡಲಾಗಿದೆ. ಅದೇ ರೀತಿ ವಿಶೇಷ ವ್ಯಕ್ತಿಗಳು ( ದೈಹಿಕ ದುರ್ಬಲ) ವಿದ್ಯಾರ್ಥಿಗಳಿಗೆ ಧನಸಹಾಯದೊಂದಿಗೆ ಅಲ್ಪವಾವಧಿ ತರಬೇತಿ ಮತ್ತು ಮೂರು ವರ್ಷದ ಡಿಪ್ಲೋಮ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಇದರ ಜೊತೆಗೆ ಎನ್.ಸಿ.ಸಿ ಘಟಕ, ಎನ್.ಎಸ್.ಎಸ್ ಘಟಕ ಮತ್ತು ರೆಡ್ ಕ್ರಾಸ್ ಘಟಕ ಕಾರ್ಯನಿರ್ವಹಿಸುತ್ತಿವೆ.
೨೦೦೯ ರಲ್ಲಿ ಸ್ಮೃತಿ ಮಂದಾರ” ಅಲ್ಯುಮ್ಮಿ ಅಸೋಸಿಯೇಷನ್ (ರಿ) ಎಂಬ ಹೆಸರಿನಡಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಿ, ಈ ಸಂಘವನ್ನು ಸಂಸ್ಥೆಯ ಹಳೇ ವಿದ್ಯಾರ್ಥಿಯಾಗಿರುವ ಮಾಜಿ ಪ್ರಧಾನಿಗಳು ಮತ್ತು ಹಾಲಿ ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಹೆಚ್.ಡಿ ದೇವೆಗೌಡರು ಉದ್ಘಾಟಿಸಿರುತ್ತಾರೆ. ಇದೇ ರೀತಿಯಲ್ಲಿ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ತಾಂತ್ರಿಕ ಕುಶಲತೆ ಹೋಂದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ಈ ಪ್ರಸ್ತುತ ವರ್ಷಕ್ಕೆ ಶ್ರೀಮತಿ ಎಲ್ ವಿ. (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಯು ೭೫ ವಸಂತಗಳು ಪೂರೈಸುತ್ತಿದ್ದು, ಇದರ ಅಮೃತ ಮಹೋತ್ಸವವನ್ನು ೨೦೨೪ ಫೆಬ್ರವರಿ ೨೪ ನೇ ಶನಿವಾರ “ಸ್ಮೃತಿ ಮಂದಾರ” ಅಲ್ಯುಮ್ಮಿ ಅಸೋಸಿಯೇಷನ್ (ಹಳೇ ವಿದ್ಯಾರ್ಥಿಗಳ ಸಂಘ) ಇದರ ಸಹಯೋಗದೊಂದಿಗೆ ಬಹಳ ವಿಜೃಂಬಣೆಯಿಂದ ಆಚರಿಸಲಾಗುತ್ತಿದ್ದು, ಎಲ್ಲಾ ಹಳೇ ವಿದ್ಯಾರ್ಥಿಗಳು ಈ ಸಮಾರಂಭಕ್ಕೆ ಭಾಗವಹಿಸಿ, ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಇದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭಾಗವಹಿಸಲಿದ್ದಾರೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ, ಉನ್ನತ ಶಿಕ್ಷಣ ಸಚಿವ ಡಾ|| ಎ.ಸಿ. ಸುಧಾಕರ್, ಶಾಸಕ ಹೆಚ್.ಪಿ. ಸ್ವರೂಪ್, ಸಂಸದರಾದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ವಿಧಾನ ಪರಿಷತ್ತು ಸದಸ್ಯ ಮರಿತಿಬ್ಬೇಗೌಡ, ಶಾಸಕ ಕೆ.ಎಂ> ಶಿವಲಿಂಗೇಗೌಡ ಇತರರು ಪಾಲ್ಗೊಳ್ಳುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಎಲ್ ವಿ. ಪಾಲಿಟೆಕ್ನಿಕ್ ಸರಕಾರಿ ಸಂಸ್ಥೆಯ ರಿಜಿಸ್ಟರ್ ಎಸ್. ವಿಜಯಶ್ರೀ, ಸಂಸ್ಥಾಪಕ ಅಧ್ಯಕ್ಷ ಮೇಜರ್ ವೆಂಕಟೇಶ್, ಸಿವಿಲ್ ವಿಭಾಗಧಿಕಾರಿ ಡಿ .ಕುಮಾರ್, ಉಪನ್ಯಾಸಕರಾದ ಲೋಕೇಶ್, ಡಾ. ಬಿ.ವಿ. ಮಧು, ಹೆಚ್.ಪಿ. ಚಂದನ್ ಇತರರು ಉಪಸ್ಥಿತರಿದ್ದರು
Hassan
ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳಿಂದ ಮನವಿ
ಆಲೂರು: ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೆಚ್ಚು ಸೇವೆಗಳನ್ನು ನಿರ್ವಹಿಸುವ ಕಾರ್ಯವಹಿಸಿದ್ದು, ಕೆಲಸ ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ನಂದಕುಮಾರ್ ಗೆ ಮನವಿ ಸಲ್ಲಿಸಿದರು.
ಆಲೂರು ಪಟ್ಟಣದ ಕಂದಾಯ ಇಲಾಖೆಗೆ ಭೇಟಿ ನೀಡಿದ ಗ್ರಾಮ ಆಡಳಿತ ಅಧಿಕಾರಿಗಳು ಮಾನ್ಯ ಘನ ಸರ್ಕಾರವು ರೈತಪರ/ ಸಮಾಜಮುಖಿ ಕೆಲಸಗಳಾದ ನಮೂನೆ 1 ರಿಂದ 5 (ದುರಸ್ಥಿ) ಇ_ ಅಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್ ಆಫ್ ಸಂಯೋಜನೆ, ನವೋದಯ, ಗರುಡ ಆಫ್, ಇ ಜನ್ಮ ತಂತ್ರಾಂಶಗಳ ಮೂಲಕ ಬಗರ್ ಹುಕುಂ, ಹಕ್ಕುಪತ್ರ, ಬೆಳೆ ಸಂರಕ್ಷಣೆ, ( ಬೆಳೆ ಕಟಾವ್, ಮೊಬೈಲ್ ಆಪ್) ಪಿ.ಎಂ. ಕಿಸಾನ್ ವೆಬ್ ಆಪ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ಸಿ- ವಿಜಯ್, ಹಾಗೂ ಇನ್ನೂ ಹತ್ತು ಹಲವಾರು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ಈ ಎಲ್ಲಾ ಕೆಲಸಗಳ ನಿರ್ವಹಣೆಗೆ ಮೊಬೈಲ್, ಸಿಮ್, ಹಾಗೂ ದಿನ ಬಳಕೆಗೆ ಮೊಬೈಲ್, ಡಾಟಾ, ಲ್ಯಾಪ್ ಟಾಪ್, ಪ್ರಿಂಟಿಂಗ್, ಸ್ಕ್ಯಾನರ್ ಸೌಲಭ್ಯ ೀ ಹಲವು ಕೆಲಸ ನಿರ್ವಹಣೆಗೆ ಮಾಸಿಕ ಹೆಚ್ಚುವರಿ ಭತ್ಯೆ 5000 ರೂಗಳನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಂ ಡಿ ಅಭಿಷೇಕ್, ಉಪಾಧ್ಯಕ್ಷ ಸಂಜೀವ್ ಚೌಹಣ್, ಕಾರ್ಯದರ್ಶಿ ದೇವೆಂದ್ರಪ್ಪ ಪೂಜಾರಿ, ಖಜಾಂಚಿ ರಾಘವೇಂದ್ರ ಭಂಡಾರಿ,ಗ್ರಾಮ ಆಡಳಿತ ಅಧಿಕಾರಿಗಳಾದ ರವಿ ನಾಯ್ಕ್. ಗೀತಾ. ಚಂದ್ರಶೇಖರ್ ಬಿ.ಎಸ್ ಹೇಮರಾಜ್, ಮನು, ಚಂದ್ರೇಶೇಖರ್, ರಂಗಸ್ವಾಮಿ ಕರಿಬಸವರಾಜು, ಮುಂತಾದವರು ಉಪಸ್ಥಿತರಿದ್ದರು.
ವರದಿ ಸತೀಶ್ ಚಿಕ್ಕಕಣಗಾಲು
Hassan
ಯುವ ರೈತನ ಮೇಲೆ ಚಿರತೆ ದಾಳಿ
ಹಾಸನ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವ ರೈತನ ಮೇಲೆ ಚಿರತೆ ದಾಳಿ
ಚಿರತೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ
ಚಿರತೆ ದಾಳಿಯಿಂದ ಯುವಕನ ಕೈ, ಕಾಲಿಗೆ ಗಾಯ
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದಲ್ಲಿ ಘಟನೆ
ನವೀನ್ (24) ಚಿರತೆ ದಾಳಿಯಿಂದ ಗಾಯಗೊಂಡ ರೈತ
ಎಂದಿನಂತೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ನವೀನ್
ಈ ವೇಳೆ ಏಕಾಏಕಿ ನವೀನ್ ಮೇಲೆ ದಾಳಿ ಮಾಡಿದ ಚಿರತೆ
ಕೈಯಲ್ಲಿ ಕುಡುಗೋಲು ಹಿಡಿದಿದ್ದರಿಂದ ಚಿರತೆ ವಿರುದ್ಧ ಸೆಣೆಸಾಡಿದ ನವೀನ್
ನವೀನ್ ಕಿರುಚಿಕೊಳ್ಳುತ್ತಿದ್ದಂತೆ ಓಡಿ ಬಂದ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು
ಕೂಡಲೇ ಕಾಡಿನೊಳಗೆ ಓಡಿ ಹೋದ ಚಿರತೆ
ಗಾಯಾಳು ನವೀನ್‌ಗೆ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಗೋಪನಹಳ್ಳಿ ಕೆರಗೋಡು ಭಾಗದಲ್ಲಿ ಹೆಚ್ಚಾಗಿರುವ ಚಿರತೆಗಳು
ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ
Hassan
ದೇಶಾಭೀಮಾನ ಮೂಡಿಸುವ ವಿವಿಧ ಕಾರ್ಯಕ್ರಮ: ಹರ್ಷಿತ್
ಹಾಸನ: ಸ್ವಾತಂತ್ರ ದಿನಾಚರಣೆ ಅಂಗವಾಗಿ ಬಿಜೆಪಿ ಪಕ್ಷದವತಿಯಿಂದ ದೇಶಾಭಿಮಾನ ಮೂಡಿಸುವ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಸಹ ಸಂಚಾಲಕ ಹರ್ಷಿತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಮೃತ ಮಹೋತ್ಸವದ ಬಳಿಕ ಪ್ರತೀ ವರ್ಷ ದೇಶಾಭಿಮಾನ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅದರಂತೆ ಈ ವರ್ಷವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ೧೪ ರಂದು ಬೆಳಿಗ್ಗೆ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ತಿರಂಗ ಯಾತ್ರೆ ಹಾಗೂ ಬೈಕ್ ರಾಲಿ ಏರ್ಪಡಿಸಲಾಗಿದೆ. ಸಮಾಜದಲ್ಲಿರುವ ಎಲ್ಲಾ ವರ್ಗದವರನ್ನು ಸೇರಿಸಿ ತ್ರಿವರ್ಣ ಧ್ವಜಾ ಹಿಡಿದುಕೊಂಡು ದೇಶ ಭಕ್ತಿಯ ಘೋಷಣೆ ಕೂಗಿ ಎಲಲಾರಲ್ಲೂ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಅದೇ ದಿನ ಮಧ್ಯಾಹ್ನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸ್ವತಂತ್ರ ಸಿಕ್ಕ ಅವಧಿಯಲ್ಲಿ ದೇಶ ವಿಭಜನೆ, ದೇಶಕ್ಕೆ ಬಂದ ಸವಾಲುಗಳ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದರು. ಮತ್ತೊಂದು ಕಾರ್ಯಕ್ರಮ ಎಂದರೇ ಮನೆ ಮನೆ ಮೇಲೆ ತ್ರಿವರ್ಣ ಧ್ವಜಾ ಹಾರಿಸುವ ಕಾರ್ಯಕ್ರಮವಾಗಿದೆ. ಜೊತೆಗೆ ಜಿಲ್ಲೆಯಾದ್ಯಂತ ಇರುವ ಸ್ವತಂತ್ರ ಹೋರಾಟಗಾರರ ಪ್ರತಿಮೆ, ಹಾಗೂ ಹೋರಾಟ ಮಾಡಿರುವ ಪುತ್ಥಳಿಗಳನ್ನ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ. ಗಿರೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುನೀತ್, ನಗರಾಧ್ಯಕ್ಷ ಮಂಜು ಇತರರು ಉಪಸ್ಥಿತರಿದ್ದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.