Connect with us

Hassan

ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

Published

on

 

ಹಾಸನ : ಲೋಕಾಯುಕ್ತ ಬಲೆಗೆ ಬಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ

ಫಣೀಂದ್ರ.ಎನ್.ಎಸ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಕಾಯಿಮಟ್ಟೆ ಶೇಖರಣಾ ಘಟಕ ಮಾಡಲು 1 ಲಕ್ಷ 77 ಸಾವಿರ ಸಬ್ಸಿಡಿ ನೀಡಲು ರೈತನ ಬಳಿ ಲಂಚ ಕೇಳಿದ್ದ ಫಣೀಂದ್ರ

ರೈತನಿಂದ ಆರು ಸಾವಿರ ಲಂಚ ಕೇಳಿದ್ದ ಫಣೀಂದ್ರ ಎನ್.ಎಸ್.

ಆರು ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು

ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದಲ್ಲಿ ದಾಳಿ

ಚನ್ನರಾಯಪಟ್ಟಣ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಫಣೀಂದ್ರ.ಎನ್.ಎಸ್.

Continue Reading
Click to comment

Leave a Reply

Your email address will not be published. Required fields are marked *

Hassan

ಬಾರಿ ಮಳೆ ಗಾಳಿಗೆ ಕುಸಿದು ಬಿದ್ದ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ

ಬಾರಿ ಮಳೆ ಗಾಳಿಗೆ ಕುಸಿದು ಬಿದ್ದ ವಾಸದ ಮನೆಯ ಗೋಡೆ ಹಾಗೂ ಮೇಲ್ಛಾವಣಿ

ಸಕಲೇಶಪುರ ತಾಲ್ಲೂಕಿನ, ಹೊಸೂರು ಹಾಗೂ ಗೊದ್ದು ಗ್ರಾಮಗಳಲ್ಲಿ ಘಟನೆ

ಹೊಸೂರು ಗ್ರಾಮದ ಗಂಗಮ್ಮ, ಗೊದ್ದು ಗ್ರಾಮದ ಎಚ್.ಎನ್.ಸಣ್ಣಪ್ಪಗೌಡ ಎಂಬುವವರಿಗೆ ಸೇರಿದ ಮನೆ

ಎಚ್.ಎನ್.ಸಣ್ಣಪ್ಪಗೌಡರಿಗೆ ಸಣ್ಣಪುಟ್ಟ ಗಾಯ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಗಾಯಾಳು

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಆಗ್ರಹ

ಮನೆ ಹಾನಿಗೆ ಸೂಕ್ತ ಪರಿಹಾರ ‌ನೀಡುವಂತೆ ಒತ್ತಾಯ

Continue Reading

Hassan

ಮಳೆಯ ಅಬ್ಬರ: ಸಕಲೇಶಪುರ, ಬೇಲೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರಿದ ‌ಮಳೆಯ ಅಬ್ಬರ

ಇಂದು ಸಕಲೇಶಪುರ, ಬೇಲೂರು ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಆಲೂರು ತಾಲ್ಲೂಕಿನ, ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಣೆ

ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ

ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಬಾರಿ ಏರಿಕೆ

ಹೇಮಾವತಿ ಜಲಾಶಯಕ್ಕೆ 32087 ಕ್ಯೂಸೆಕ್ ಒಳಹರಿವು

ಹೇಮಾವತಿ ಜಲಾಶಯದಿಂದ 32925 ಕ್ಯೂಸೆಕ್ ಹೊರಹರಿವು

ಆರು ಕ್ರಸ್ಟ್‌‌ಗೇಟ್‌ಗಳ ಮೂಲಕ ನೀರು ಬಿಡುಗಡೆ

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ

ಸದ್ಯ ಜಲಾಶಯದಲ್ಲಿರುವ ನೀರು – 37.006ಟಿಎಂಸಿ

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2921.90 ಅಡಿ

ಒಳಹರಿವು – 32087 ಕ್ಯೂಸೆಕ್

ಹೊರಹರಿವು – 32925 ಕ್ಯೂಸೆಕ್

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ

Continue Reading

Hassan

ಎಡಪಂಥೀಯರು ಸರ್ಕಾರದೊಂದಿಗೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

Published

on

ಸಕಲೇಶಪುರ: ಎಡಪಂಥೀಯರು ಸರ್ಕಾರದ ಜೊತೆ ಸೇರಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಕಳಂಕ‌ ತರುವ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ಇಂದು ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರಲು ಕೆಲವರು ಪ್ರಾರಂಭ ಮಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಒಮ್ಮೆ ಅಂತ್ಯ ಹಾಡಲಿ ಎಂದು ಸುಮ್ಮನ್ನಿದ್ದರು. ಇದನ್ನು ಶಬರಿಮಲೆಯಲ್ಲೇ ಮೊದಲು ಪ್ರಾರಂಭ ಮಾಡಿದರು. ಆದರೆ ಅಲ್ಲಿ ಏನು ಮಾಡಲು ಆಗಲಿಲ್ಲ. ಆನಂತರ ಒಂದೊಂದೆ ಕ್ಷೇತ್ರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದು ಯಾರು, ಇವತ್ತು ಏನು ಸಿಕ್ಕಿದೆ ನಿಮಗೆ ಮಣ್ಣು ಸಿಕ್ಕಿದೆ, ಮಣ್ಣನ್ನೇ ಅಗೆದು ಮಣ್ಣನ್ನೇ ತೆಗೆದಿದ್ದೀರಿ ಬೇರೇನು ಸಿಕ್ಕಿಲ್ಲ. ಆ ಅನಾಮಿಕ ಕ್ರಿಮಿನಲ್ ಇದ್ದಾನೆ. ಎಡಪಂಥೀಯರು ಸೇರಿ ಒಬ್ಬನನ್ನು ಕ್ರಿಯೇಟ್ ಮಾಡಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಭಕ್ತರು ಕೋಪಗೊಂಡಿದ್ದಾರೆ, ಬೇಸರಗೊಂಡಿದ್ದಾರೆ, ನೊಂದುಕೊಂಡಿದ್ದಾರೆ. ನಾವು ಕೂಡ ಭಕ್ತರೇ, ಅವರ ಜೊತೆ ನಾವು ಸೇರಿ ಕಳಂಕ ಹೋಗಲಾಡಿಸಲು ದೇವರ ದರ್ಶನ ಮಾಡಿದ್ದೇವೆ ಎಂದು ಕಿಡಿಕಾರಿದರು.

ವೀರೇಂದ್ರ ಹೆಗ್ಗಡೆ ಅವರು ನೊಂದುಕೊಂಡಿದ್ದರು, ಅವರ ಜೊತೆ ನಾವೀದ್ದೇವೆಂದು ಹೇಳಿ ಬಂದಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಕಳ್ಳರು ಯಾವಾಗಲೂ ಬೇರೆಯವರನ್ನ ಕಳ್ಳರು ಮಾಡಲು ಹೋಗುತ್ತಾರೆ. ಕಾಂಗ್ರೆಸ್‌ನವರು ಪಿಕ್‌ಪ್ಯಾಕೇಟ್ ಕಳ್ಳರಿದ್ದಂತೆ. ಬುರುಡೆ ತಂದಿದ್ದು ಯಾರು, ಆ ಅನಾಮಿಕ, ಅವನು ಕಾಂಗ್ರೆಸ್‌, ಎಡಪಂಥೀಯರ ಕೈವಶದಲ್ಲಿದ್ದಾನೆ. ಇದನ್ನು ಮಾಡಿಸಿರುವ ಕಳ್ಳರು ಯಾರು ಎಂದರೆ ಕಾಂಗ್ರೆಸ್‌ನವರು, ಎಡಪಂಥೀಯರು ಎಂದರು.

ಬೆಂಗಳೂರು ಕಾಲ್ತುಳಿತ ಆದಾಗ ಪೊಲೀಸರ ಮೇಲೆ ಹಾಕಿದ್ರು. ಈಗ ಯೂಟರ್ನ್ ಹೊಡೆಯುತ್ತಿದ್ದಾರೆ. ಈಗ ಸಿಕ್ಕಿಬಿದ್ದಿದ್ದೀವಿ ಎನ್ನುವ ಕಾರಣಕ್ಕೆ ನಿರೀಕ್ಷಿಣಾ ಜಾಮೀನು ತೆಗೆದುಕೊಳ್ಳಲು‌ ನೋಡುತ್ತಿದ್ದಾರೆ. ದೇವರ ವಿಷಯದಲ್ಲಿ ಯಾರು ಕೂಡ ಆಟವಾಡಬಾರದು. ಭಕ್ತರು ಒಂದು ಸಾರಿ ತಿರುಗಿ ನಿಮ್ಮ ಮೇಲೆ ಬಿದ್ದರೆ ಏನಾಗುತ್ತೆ ನೋಡಿ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದು ಟರ್ನ್ ಕೊಟ್ಟರೆ ಜನರು ಬೇರೆ ಕಡೆ ಗಮನಹರಿಸುತ್ತಾರೆ ಎಂದು ಇದನ್ನು ಬಳಸಿಕೊಂಡರು ಎಂದು ಹೇಳಿದರು. ಮತಗಳ್ಳತನ ನಡಿತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಜನ ಯಾರಿಗೆ ಓಟು ಹಾಕಬೇಕು ಅವರಿಗೆ ಹಾಕುತ್ತಿದ್ದಾರೆ. ಜನಮನ್ನಣೆ ಕೊಡದಿದ್ದಾಗ ಈ ರೀತಿ ಹೇಳುತ್ತಾರೆ. ಅರವತ್ತು ವರ್ಷ ಕಾಂಗ್ರೆಸ್ ಅಧಿಕಾರ ಮಾಡಿದಾಗ ಎಲೆಕ್ಷನ್ ಕಮಿಷನ್ ಇದೆ ಅನ್ನುವುದು ಗೊತ್ತಿರಲಿಲ್ಲ. ನೀವು ಮಾಡಿರುವ ಕಳ್ಳತವನ್ನು ನಮ್ಮ ಮೇಲೆ ಹಾಕುತ್ತಿದ್ದೀರಿ. ಅವರ ಮಾಡಿದ್ದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ಆಪಾದನೆ ಮಾಡುತ್ತಿದ್ದಾರೆ ಎಂದರು.

Continue Reading

Trending

error: Content is protected !!