Connect with us

Kodagu

ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಭಾಗಮಂಡಲ ಚುನಾವಣೆ – ಹೊಸೂರು ಸತೀಶ್ ನೇತೃತ್ವದ ತಂಡಕ್ಕೆ ಮತ್ತೆ ಗೆಲುವಿನ ಸಿಹಿ

Published

on

ಮಡಿಕೇರಿ : ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಭಾಗಮಂಡಲದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಹೊಸೂರು ಸತೀಶ್ ನೇತೃತ್ವದ ತಂಡ ಮತ್ತೆ ಗೆಲುವಿನ ಸಿಹಿ ಕಂಡಿದೆ.

ಸತೀಶ್ ಜೋಯಪ್ಪ ತಂಡ ಪಾರಮ್ಯ ಸಾಧಿಸಿದ್ದು, 2023 ರಿಂದ 2028 ರವರೆಗಿನ ಆಡಳಿತ ಮಂಡಳಿಯ ಚುನಾವಣೆ ನಡೆದಿದೆ.
ತೀವ್ರ ಕುತೂಹಲ ಮೂಡಿಸಿದ್ದ ಈ ಬಾರಿಯ ಚುನಾವಣೆಯಲ್ಲಿ
ಹಾಲಿ ಆಡಳಿತ ಮಂಡಳಿಯ ಮೇಲೆ ಹಗರಣಗಳ ಆರೋಪ ಹೊರಿಸಲಾಗಿತ್ತು. ಆದರೆ ಅದನ್ನು ಸಾಬೀತು ಮಾಡಲು ದೂರುದಾರರು ವಿಫಲವಾಗಿದ್ದರು.

ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತ ಭಾಗಮಂಡಲದ ನೂತನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ವಿಭಾಗದಿಂದ ಸಾಮಾನ್ಯ ಕ್ಷೇತ್ರದಿಂದ ಹರಗ ದಿನೇಶ್, ಕೆ ಕೆ ಗೋಪಾಲ .ಮಾಹಿಳಾ ಮೀಸಲು ಕ್ಷೇತ್ರದಿಂದ ಕೆ‌. ಕೆ ಸೌಮ್ಯ ಅವಿರೋಧವಾಗಿ ಆಯ್ಕೆಯಾಗಿದ್ದು ಸೋಮವಾರಪೇಟೆಯಿಂದ ಸರ್ದಿಸಿದ ಹಿಂದುಳಿದ ವರ್ಗದಿಂದ ಬೋಪಣ್ಣ 82ಮತಗಳಿಸಿದರು . ಪ್ರತಿಸ್ಪರ್ಧಿ ಉದಯಕುಮಾರ್ 46 ಮತಗಳಿಸಿ ಸೋಲು ಅನುಭವಿಸಿದರು.
ಸತೀಶ್ ಕುಮಾರ್ ನೇತೃತ್ವದ ಬಿಜೆಪಿ ಬೆಂಬಲಿತರಾಗಿ ಪರಿಶಿಷ್ಟ ಜಾತಿಯಿಂದ ಜಯಂತ್ ತಲಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ಹಿಂದುಳಿದ ವರ್ಗದ
ಕ್ಷೇತ್ರ ದಿಂದ ಅಯ್ಯಣಿರ ಎಂ.ದಿನೇಶ್ ಸ್ಪರ್ದಿಸಿದ್ದು 527 ಗಳಿಸಿ ಆಯ್ಕೆಯಾಗಿದ್ದರೆ ಪ್ರತಿಸ್ಪರ್ಧಿ ಬಿಲ್ಲವರ ಬೈರಪ್ಪ 163 ಮತ ಗಳಿಸಿ ಸೋಲನ್ನು ಅನುಭವಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್. ಎನ್.ಕುಸುಮ ಶಿರಕಜೆ 417 ಮತಗಳಿಸಿದರೆ ಪ್ರತಿಸ್ಪರ್ದಿ ಅಮೆ ಜಿ.ಸರೋಜಾ 178 ಮತಗಳಿಸಿ ಸೋಲನ್ನು ಅನುಭವಿಸಿದ್ದಾರೆ.

ನಂತರ ನಡೆದ ಸಾಮಾನ್ಯ ವರ್ಗದ ನಿರ್ದೇಶಕ ರ ಎರಡನೇ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ರಾಗಿ ಹೊಸೂರು ಸತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಿದ ಸತೀಶ್ ಕುಮಾರ್ (457)ಕುದುಕುಳಿ ಅಶ್ವತ್ 402 ಮತ ಪಡೆದರು. ದೇವಂಗೋಡಿ ಬಾಸ್ಕರ 370 ಮತ,ಕೆದಾಂಬಾಡಿ ಯು.ಮೋಹನ 360, ಮತ,ಪಾಣತ್ತಲೆ ಎ.ಲೋಕನಾಥ್.411, ಶಿರಕಜೆ.ಎಂ.
ಲೋಕ ಪ್ರಕಾಶ419, ಪೊಡನೋಳನ ಸಿ.ವಿಠಲ374 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಗಳಾದ ಕೋಡಿ ಮೋಟಯ್ಯ 215,
ಕೆದಾಂಬಾಡಿ ಚೇತನ್ 136, ಬಾರಿಕೆ ನಿರಂಜನ್ 126, ಅಮೆ ಮಾದಪ್ಪ 158, ಕೆದಾಂಬಾಡಿ ಟಿ.ರಮೇಶ್ 185, ಚೆದುಕಾರು ರವಿ150, ದೇವಂಗೋಡಿ ವೇಗೆಂದ್ರ 123 ರವರನ್ನು ಪರಾಭವ ಗೊಳಿಸಿದರು..

Continue Reading
Click to comment

Leave a Reply

Your email address will not be published. Required fields are marked *

Kodagu

ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಗೆ ಶೀಘ್ರ ಮುಕ್ತಿ ! ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ತಡೆಗೋಡೆ ಪರಿಶೀಲನೆ

Published

on

ಮಡಿಕೇರಿ : ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭದಲ್ಲಿ ಬಹು ಸದ್ದು ಮಾಡಿದ ಕೊಡಗು ಜಿಲ್ಲಾಡಳಿತ ಕಛೇರಿ (ಮಡಿಕೇರಿ ಡಿ.ಸಿ.ಕಛೇರಿ ತಡೆಗೋಡೆ) ತಡೆಗೋಡೆಗೆ ಮುಕ್ತಿ ಸಿಗಲಿದ್ದು, ಸರಕಾರ ಹೊಸ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ತಡೆಗೋಡೆ ಕೆಡವಲು ಕ್ಷಣಗಣನೆ ಆರಂಭಗೊAಡಿದ್ದು, ಮಾ. ೧೪ ರಂದು ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಸಮಿತಿ ಸದಸ್ಯರು ತಡೆಗೋಡೆಯ ಪರಿಶೀಲನೆ ನಡೆಸಲಿದ್ದಾರೆ.

ಏಳು ಕೋಟಿ ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ನಡೆದ ತಡೆಗೋಡೆ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆರೋಪ ನಡೆಸಿ ಹೋರಾಟ ಮಾಡಿತ್ತು.

ಅಂದು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ತಮ್ಮ ಚುನಾವಣೆ ಪ್ರಚಾರದಲ್ಲಿ ಅವೈಜ್ಞಾನಿಕವಾಗಿರುವ ಈ ಜರ್ಮನ್ ಟೆಕ್ನಾಲಜಿಯ ತಡೆಗೋಡೆಯನ್ನು ಕೆಡವಿ ಇಂಡಿಯನ್ ಟೆಕ್ನಾಲಜಿಯ ಸುಭದ್ರ ತಡೆಗೋಡೆ ನಿರ್ಮಿಸುವುದಾಗಿ ಜನತೆಗೆ ಭರವಸೆ ನೀಡಿದ್ದರು. ತದನಂತರ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಡಾ ಮಂತರ್ ಗೌಡ ಹಾಗೂ ಪೊನ್ನಣ್ಣ ಶಾಸಕರುಗಳಾಗಿ ಆಯ್ಕೆಯಾದರು.

ತಡೆಗೋಡೆ ನಿರ್ವಹಣೆ ಹೊತ್ತ ಇಂಜಿನಿಯರ್ ಅಮಾನತ್ತಿಗೆ ಒಳಗಾದರೆ ಈ ಕಾಮಗಾರಿಗೆ ಸಂಬAಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸೂಪರಿಂಟೆAಡೆAಟ್ ಇಂಜಿನಿಯರ್, ಚೀಫ್ ಇಂಜಿನಿಯರ್ ವರ್ಗಾವಣೆ ಶಿಕ್ಷೆಗೆ ಒಳಪಟ್ಟರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಪ್ರಥಮ ಅಧಿವೇಶನದಲ್ಲಿ ಡಿ.ಸಿ.ಕಛೇರಿ ತಡೆಗೋಡೆ ಅವೈಜ್ಞಾನಿಕವಾಗಿದ್ದು ಯಾವತ್ತಾದರೂ ಬಿದ್ದು ಅನಾಹುತ ಸಂಭವಿಸಲಿರುವುದರಿAದ ಸುಭದ್ರ ತಡೆಗೋಡೆ ನಿರ್ಮಾಣಕ್ಕೆ ಸದನದಲ್ಲಿ ಒತ್ತಾಯಿಸಿದ್ದರು. ಈಗ ಡಾ. ಮಂತರ್ ಒತ್ತಡದಿಂದ ಸರ್ಕಾರ ನವೀನ ತಂತ್ರಜ್ಞಾನವನ್ನು ಉಪಯೋಗಿಸಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಉಪ ವಿಧಾನ ಸಭಾ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಈ ತುಕಾರಾಮ್, ಎ.ಮಂಜು, ಸುರೇಶ್ ಬಾಬು ತಂಡ ಮಾ.೧೪ ರಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಲಿದ್ದಾರೆ.

ಬಾಕ್ಸ್
ಜರ್ಮನ್ ತಂತ್ರಜ್ಞಾನ ಅನುಸರಿಸಿ ನಿರ್ಮಿಸಲಾದ ಬೃಹತ್ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳುದರ ಒಳಗಾಗಿಯೇ ಅಪಾಯದ ಮುನ್ಸೂಚನೆ ನೀಡಿತ್ತು. ಬರೆಗೆ ಅಡ್ಡಲಾಗಿ ಮಳೆ ನೀರು ನುಗ್ಗದಂತೆ ಹೊದಿಸಿದ್ದ ಟಾರ್ಪಲ್ ಅಲ್ಲಲ್ಲಿ ಕಿತ್ತು ಮಣ್ಣು ಜರಿಯಲಾರಂಭಿಸಿ ಆತಂಕ ಸೃಷ್ಟಿ ಮಾಡಿತ್ತು. ನೂತನ ತಂತ್ರಜ್ಞಾನ ಹೆದ್ದಾರಿಗೆ ರಕ್ಷಣೆ ನೀಡಲಿದೆ ಎಂದು ಭಾವಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿ ಆಗಿ ಮಳೆಗಾಲದಲ್ಲಿಯೇ ಉಬ್ಬು ಹಾಗೂ ಬಿರುಕು ಕಾಣತೊಡಗಿತ್ತು.

Continue Reading

Kodagu

ಶೇ.90 ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳ ತಲುಪುತ್ತಿದೆ: ಮೆಹರೋಜ್ ಖಾನ್

Published

on

ಕುಶಾಲನಗರ,: ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಶೇ.90 ರಷ್ಟು ಜನರಿಗೆ ತಲುಪುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮೆಹರೋಜ್ ಖಾನ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಪ್ರಥಮವಾಗಿ ಕೊಡಗು ಜಿಲ್ಲೆಗೆ ಭೇಟಿ‌ ನೀಡಿದ ಮೆಹರೋಜ್ ಖಾನ್ ಅವರಿಗೆ ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ಪಕ್ಷ ಎಂದು ಸಾಬೀತು ಪಡಿಸಿದೆ. ಇದರ ಉಪಯೋಗವನ್ನು ರಾಜ್ಯದ ಮಹಿಳೆಯರು, ಬಡವರು,‌ ಮಧ್ಯಮ ವರ್ಗದವರು ಪಡೆಯುತ್ತಿದ್ದಾರೆ. ಬಡವರ ವಿರೋಧಿ, ಜನ ವಿರೋಧಿ ಬಿಜೆಪಿ ಪಕ್ಷಕ್ಕೆ ತಕ್ಕ‌ ಪಾಠ ಕಲಿಸುವ ಸಮಯ ಬಂದಿದೆ ಎಂದ ಅವರು,ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜಯಗಳಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಕುಶಾಲನಗರ ಪುರಸಭಾ ಸದಸ್ಯ ಶೇಖ್ ಖಲೀಮುಲ್ಲಾರವರ ನಿವಾಸಕ್ಕೆ ತೆರಳಿದ ಮೆಹರೋಜ್ ಖಾನ್ ಕಾಂಗ್ರೆಸ್ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿದರು. ಗ್ಯಾರೆಂಟಿ‌ ಅನುಷ್ಠಾನ ಸಂಬಂಧ ಉಂಟಾಗಿರುವ ಸಮಸ್ಯೆಗಳ‌ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸದಸ್ಯ ನಟೇಶ್ ಗೌಡ, ಯಾಕೂಬ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಮುಖರಾದ ಹನೀಫ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಾರ್ಮಿಕ ಘಟಕದ ಶಿವಶಂಕರ್, ಪ್ರಮುಖರಾದ ರಜಾಕ್, ಅಬ್ದುಲ್ ಲತೀಫ್, ಕೈಸರ್ ಪೋರ್ ಶೆರಾ, ಸೈಯದ್ ಬಾವಾ, ಕೋಲುಮಂಡ ರಫೀಕ್, ಟಿ.ಪಿ.ಹಮೀದ್, ಮುನ್ನಾ, ಶರ್ಫುದ್ದಿನ್, ರೋಷನ್, ಮತ್ತಿತರರು ಇದ್ದರು.

ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ

Continue Reading

Kodagu

ಬೆಂಗಳೂರು – ಕೊಡ್ಲಿಪೇಟೆ ನಡುವೆ ಹೊಸ ಬಸ್ ಸೇವೆ ಪ್ರಾರಂಭ

Published

on

ಕೊಡ್ಲಿಪೇಟೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಬೆಂಗಳೂರು – ಕೊಡ್ಲಿಪೇಟೆ ನಡುವೆ ಹೊಸ ಬಸ್ ಸೇವೆಯನ್ನು ಮಾ.3 ರಿಂದ ಪ್ರಾರಂಭಿಸಲಾಗಿದೆ. ಈ ಬಸ್ ಪ್ರತಿದಿನ ಮಧ್ಯಾಹ್ನ 3.30 ಕ್ಕೆ ಬೆಂಗಳೂರು {ಮೆಜೆಸ್ಟಿಕ್} ನಿಂದ ಹೊರಟು ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಮಾರ್ಗವಾಗಿ ಕೊಡ್ಲಿಪೇಟೆಗೆ ರಾತ್ರಿ 9 ಕ್ಕೆ ತಲುಪುತ್ತದೆ.
ಪುನಃ ಮರುದಿನ ಬೆಳಗ್ಗೆ 4 ಗಂಟೆಗೆ ಕೊಡ್ಲಿಪೇಟೆಯಿಂದ ಹೊರಟು ಅರಕಲಗೂಡು ಹೊಳೆನರಸಿಪುರ ಚನ್ನರಾಯಪಟ್ಟಣ ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ {ಮೆಜೆಸ್ಟಿಕ್} 9 ಗಂಟೆಗೆ ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.
ಈ ಬಸ್ ಸೇವೆಯನ್ನು ಪ್ರಾರಂಭಿಸಲು ಸಹಕರಿಸಿದ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕ ಡಾ. ಮಂತರ್ ಗೌಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಹೈಕೋರ್ಟ್ನ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿರವರಿಗೆ ಕೊಡ್ಲಿಪೇಟೆಯ ಜನತೆ ಧನ್ಯವಾದ ಸಲ್ಲಿಸಿದ್ದಾರೆ.
ಹೊಸ ಬಸ್ ಸೇವೆಗೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ ಮುಂಭಾಗ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ವೇಳೆ ಡಾಕ್ಟರ್ ಉದಯ್ ಕುಮಾರ್, ವರ್ತಕರಾದ ಶಿವರಾಜ್, ಬಿಕೆ ಯತೀಶ್, ಔರಂಗಜೇಬ್, ವಾಹಾಬ್,ನಜೀರ್ ಅಹಮದ್, ವೇದಕುಮಾರ್, ಮುಂತಾದವರು ಹಾಜರಿದ್ದರು.

Continue Reading

Trending

error: Content is protected !!