Connect with us

Chamarajanagar

ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡು ಅವರನ್ನು ಗೌರವಿಸಲಾಯಿತು

Published

on

ದಿನಾಂಕ 15/09/2023 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಯಳಂದೂರು ಇಲ್ಲಿ ಸತತ 10 ,12 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರು ವರ್ಗಾವಣೆ ಯಾಗಿದ್ದರು. ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡು ಅವರನ್ನು ಗೌರವಿಸಲಾಯಿತು. ಉಪನ್ಯಾಸಕರುಗಳಾದ ಎಸ್,ಮಹದೇವಪ್ರಭು, ಶ್ರೀಮತಿ ಎಂ.ಸುಧನ್ಯ, ಶ್ರೀಮತಿ ಆರ್ ಶುಭಮಂಗಳ ರವರನ್ನು ಬೀಳ್ಕೊಡಲಾಯಿತು.ಅತಿಥಿ ಉಪನ್ಯಾಸಕರಾದ ಶ್ರೀ ಅಶೋಕ .ಯು ಮತ್ತು ಶ್ರೀ ಜಯಶಂಕರ್ ರವರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ಶ್ರೀ ನಾಗರಾಜು, ಯಳಂದೂರು ಮತ್ತು ಶ್ರೀ ನಾರಾಯಣ ಸ್ವಾಮಿ ರವರು ಕೂಡ ಭಾಗವಹಿಸಿದ್ದರು.ಗೌರವ ಸ್ವೀಕರಿಸಿದ ಉಪನ್ಯಾಸಕರು ತಾವು ಸಲ್ಲಿಸಿದ ಸೇವೆ,ಪಡೆದ ಅನುಭವವನ್ನು ತಿಳಿಸಿದರು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ಫಲಿತಾಂಶ ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಪ್ರಭಾರ ಪ್ರಾಂಶುಪಾಲರಾದ ಶ್ರೀ ಎಲ್ ಮಹೇಶ್, ಹಿರಿಯ ಉಪನ್ಯಾಸಕರಾದ ಜಿ ಸ್ಟೀವನ್ ರವರು ,ಉಪನ್ಯಾಸಕರಾದ ನಾಗರಾಜು, ಚಂಪಕ,ಮೇರಿಅಶ್ವಿನಿ,ಪುಷ್ಪ ಲತಾ, ಅಜಯ್ ಕುಮಾರ್, ರೋಹಿತ್ ಶರ್ಮಾ ಮತ್ತು ಸಂಗೀತ, ಮಂಜುಳಾ, ನಂದಿನಿ ರವರುಗಳು ಹಾಗೂ ಗುಮಾಸ್ತರಾದ ಶ್ರೀ ಕೃಷ್ಣರಾಜ ರವರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಗಂಗಾಧರೇಶ್ವರ ಬ್ರಹ್ಮರಥೋತ್ಸವ

Published

on

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಯ ಮಹಾಶಿವರಾತ್ರಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು.

ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಮತ್ತು ಅಭಿಷೇಕ,ಅರ್ಚನೆ ಸೇರಿದಂತೆ ದೇವತಾ ಕಾರ್ಯಗಳಗಳು ಜರುಗಿದವು. ಬೆಳಿಗ್ಗೆ 9.30 ರಿಂದ 9.40 ರ ಸಮಯದಲ್ಲಿ ಶುಭ ಮೀನ ಲಗ್ನದಲ್ಲಿ ಮೈಸೂರು ಮಹಾರಾಜರಾದ ಶೀ ಜಯಚಾಮರಾಜ ಒಡೆಯರ್ ಬಹೂದ್ದೂರು ರವರು ಸ್ವಾಮಿಗೆ ಅರ್ಪಿಸಿದ ಸ್ವರ್ಣ ಕೊಳಗಧಾರಣೆ ಮಾಡಲಾಯಿತು.


ನಂತರ ಮಧ್ಯಾಹ್ನ 12 26 ರಿಂದ 12:48 ಗಂಟೆ ಒಳಗೆ ಸಲ್ಲುವ ರ ಒಳಗೆ ಸಲ್ಲುವ ಶುಭ ಮಿಥುನ ಲಘ್ನದ ಶುಭ ನವಾಂಶದ ಶುಭ ಮೂಹೂರ್ತದಲ್ಲಿ ರಥಾರೋಹಣಕ್ಕೆ ದೇವಾಲಯದ ಪ್ರಧಾನ ಅರ್ಚಕರಾದ ರಂಗಣ್ಣ ಪೂಜೆ ಸಲ್ಲಿಸದ ಬಳಿಕ ಶಾಸಕ ಎ ಆರ್ ಕೃಷ್ಣಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹಣ್ಣು ಜವಾನ ಎಸೆದ ಭಕ್ತರು : ಸೋಲಿಗರ ಆರಾಧ್ಯ ದೈವ ಶ್ರೀ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವಕ್ಕೆ ಸೋಲಿಗರು ಕಾಡು ಜಾತಿ ಹಣ್ಣು ಹೂವುಗಳನ್ನು ಎಸದು ತಮ್ಮ ಭಕ್ತಿಯ ಪರಿಕಾಷ್ಠೆ ಅರ್ಪಿಸಿದರು.
ದಾವಸ ಧಾನ್ಯ ಅರ್ಪಿಸಿದ ಜನರು : ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರನಿಗೆ ಬಾಳೆ,ಕಬ್ಬು, ರಾಗಿ,ಜೋಳ,ಬತ್ತ ಸೇರಿದಂತೆ ವಿವಿಧ ರೀತಿ ದವಾಸ ಧಾನ್ಯಗಳನ್ನು ತೇರಿಗೆ ಎಸದು ಉತ್ತಮ ಮಳೆ,ಬೆಳೆ ಬರಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಜಯಪ್ರಕಾಶ್ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಕಾರ್ಯನಿರ್ವಾಕಾಧಿಕಾರಿ ಮೋಹನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜೆ.ಯೋಗೇಶ್ , ಕೇತಮ್ಮ , ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ , ಕಿನಕಹಳ್ಳಿ ಪ್ರಭುಸ್ವಾಮಿ,ರಾಘವೇಂದ್ರ, ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ ಸಿ. ಡಿಸಿಸಿ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಶಾಸಕರ ಆಪ್ತ ಕಾರ್ಯದರ್ಶಿ ಚೇತನ್,ಅಂಬಳೆ ನವೀನ್,ವಿಶ್ವ, ಸಚಿನ್ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

Chamarajanagar

ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಆರ್ ಕೃಷ್ಣಮೂರ್ತಿ ಭೂಮಿ ಪೂಜೆ

Published

on

ಯಳಂದೂರು : ತಾಲೂಕಿನ ಯರಗಂಬಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಒಂದು ಕೋಟಿ 40 ಲಕ್ಷ ರೂಪಾಯಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಆರ್ ಕೃಷ್ಣಮೂರ್ತಿ ಭೂಮಿ ಪೂಜ ನೆರವರಿಸಿದರು.

ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿಗಳ ಪರಿಶಿಷ್ಟ ಜಾತಿಯ ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿ 40 ಲಕ್ಷ ರೂಪಾಯಿಗಳ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುತ್ತಿದ್ದು , ಇದರಿಂದ ಪರಿಶಿಷ್ಟ ಜಾತಿಯ ಕಾಲೋನಿಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಗುಂಬಳ್ಳಿ – ಯರಗಂಬಳ್ಳಿ ರಸ್ತೆ ಅಭಿವೃದ್ಧಿಗೆ ಸುಮಾರು 70 75 ಲಕ್ಷಗಳ ಅನುದಾನ ಗಣಿ ಇಲಾಖೆ ವತಿಯಿಂದ ಬಿಡುಗಡೆಯಾಗುತ್ತಿದ್ದು ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಅದಕ್ಕೂ ಸಹ ಭೂಮಿ ಪೂಜೆ ಮಾಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಉಪ್ಪಿನ ಮೊಳೆಯಿಂದ ಬಿಳಿಗಿರಿರಂಗಪ್ಪನ ಬೆಟ್ಟದ ಮುಖ್ಯ ರಸ್ತೆ ಅಭಿವೃದ್ಧಿಗೂ ಸಹ ಅನುಮೋದನೆ ದೊರಕ್ಕಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ವೈ.ಕೆ ಮೊಳೆ ರಸ್ತೆ ಯಿಂದ ಚಂಚಳ್ಳಿ ಅಡ್ಡ ರಸ್ತೆ ವರೆಗೂ ಸುಮಾರು 6 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದು ಅದನ್ನು ಸಹ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಯರಗಂಬಳ್ಳಿ ಗ್ರಾಮಸ್ಥರು ಶಾಸಕರಿಗೆ ವಿವಿಧ ಮನವಿಗಳನ್ನು ಸಲ್ಲಿಸಿದರು. ಶಾಸಕರು ಸ್ಪಂದಿಸಿ ಶೀಘ್ರದಲ್ಲೇ ತಮ್ಮ ಮನವಿಗಳೆಲ್ಲವನ್ನು ಒಂದೊಂದಾಗಿ ಆದ್ಯತೆ ನೀಡಿ ಬಗೆಹರಿಸಲಾಗುವುದು ಅಲ್ಲಿಯವರೆಗೂ ತಾಳ್ಮೆ ಕಳೆದುಕೊಳ್ಳದೆ ಇರಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಭಾಗ್ಯ, ಉಪಾಧ್ಯಕ್ಷ ಮಂಜುಳಾ, ಸದಸ್ಯರಾದ ಮಹೇಶ್, ಸಿದ್ದರಾಜು, ಸೋಮಣ್ಣ ,ಮಲ್ಲಿಕಾರ್ಜುನ, ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಮಂಜುಳಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನಂದೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಶಾಸಕರ ಆಪ್ತ ಕಾರ್ಯದರ್ಶಿ ಚೇತನ್, ವಿಜಯ್ , ಪರಶಿವಮೂರ್ತಿ
ಸೇರಿದಂತೆ ಇತರರು ಹಾಜರಿದ್ದರು.

Continue Reading

Chamarajanagar

ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ

Published

on

ಯಳಂದೂರು: ಪಟ್ಟಣದ ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ IQAC, ಅರ್ಥಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ಎಸ್‌.ಬಿ.ಐ ಮುಂತಾದ ಬ್ಯಾಂಕುಗಳ ಸಹಯೋಗದಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ರಾಧಾಕೃಷ್ಣನ್ ರಾಯ್ AGM ಪ್ರಾದೇಶಿಕ ಕಚೇರಿ ಚಾಮರಾಜನಗರ ರವರು ವಿದ್ಯಾರ್ಥಿ ಜೀವನದಲ್ಲಿ ಹಣಕಾಸಿನ ಅರಿವಿನ ಅವಶ್ಯಕತೆ ಉಳಿತಾಯ ಹೂಡಿಕೆ ಕುರಿತಂತೆ ಮಾಹಿತಿ ನೀಡಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳಂದೂರು ಶಾಖೆ ಇಲ್ಲಿನ ಆಪ್ತ ಸಮಾಲೋಚಕರಾದ ಶ್ರೀಯುತ ಮಧುಸೂಧನ್ ರವರು ಮಾತನಾಡಿ ಡಿಜಿಟಲ್ ಬ್ಯಾಂಕಿಂಗ್, ಎಟಿಎಂ, ಆನ್ಲೈನ್ ವಂಚನೆ ಮುಂತಾದ ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು. ಮತ್ತೋರ್ವ ಅತಿಥಿಗಳಾಗಿದ್ದ ವೀರಭದ್ರ ಸ್ವಾಮಿ ರವರು ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳಂದೂರು ರವರು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಜಯ ರವರು ವಿದ್ಯಾರ್ಥಿಗಳು ಈ ರೀತಿಯ ಕಾರ್ಯಗಾರಗಳ ಆಶಯವನ್ನು ಅಗತ್ಯವಾಗಿ ಅರಿಯುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಹಿತನುಡಿದರು.

ಕಾರ್ಯಕ್ರಮದ ಆಯೋಜಕರಾದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಗಿರಿಜಾ ರವರು ಕಾರ್ಯಕ್ರಮವನ್ನು ನಿರೂಪಿಸುವುದರೊಂದಿಗೆ ಆರ್ಥಿಕ ಜ್ಞಾನ ಇಂದಿನ ಜಾಗತಿಕ ಯುಗದಲ್ಲಿ ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳು ಅದನ್ನು ತಾವು ಅರಿತು ಸಮಾಜಕ್ಕೂ ಅದರ ಅಗತ್ಯತೆಯನ್ನು ತಿಳಿಸುವಂತೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಧ್ಯಾಪಕರಾದ ಡಾ, ಲಿಖಿತಾ ಎಸ್ ಅನುರಾಧ, ಪ್ರೊ. ಶ್ವೇತ, ಪ್ರೊ. ದಾಕ್ಷಾಯಣಿಬಿ. ವಿ, ಪ್ರೊ. ವಿಕಾಸ್, ಪ್ರೊ. ಪದ್ಮ ಹೆಚ್. ಎಸ್ ಹಾಗೂ ಅರುಣ್ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Continue Reading

Trending

error: Content is protected !!