Connect with us

Hassan

ಲಯನ್ಸ್ ಸೇವಾಸಂಸ್ಥೆಯಿಂದ ಮಾಜಿ ಅಧ್ಯಕ್ಷರುಗಳಿಗೆ ಆತ್ಮೀಯ ಸನ್ಮಾನ

Published

on

ಹಾಸನ: ನಗರದ ಬಿ.ಎಂ. ರಸ್ತೆ, ಹುಡಾ ಕಛೇರಿ ಎದುರು ಕುವೆಂಪು ನಗರದಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಮಾಜಿ ಅಧ್ಯಕ್ಷರುಗಳಿಗೆ ಉಡುಗರೆ ಕೊಡುವ ಮೂಲಕ ಆತ್ಮೀಯ ಗೌರವ ಸಮರ್ಪಣೆಯನ್ನು ಮಾಡಲಾಯಿತು

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಡಾ. ಎ.ಎಸ್. ಜಯಣ್ಣ, ಬಿ.ಕೆ. ಶ್ಯಾಮರಾಜು, ಪ್ರಕಾಶ್ ಯಾಜಿ, ಹೆಚ್.ಪಿ. ಅಶೋಕ್ ಕುಮಾರ್, ಎಸ್.ಪಿ. ಅನಂತರಾಜು, ಎಸ್.ಕೆ. ಸತ್ಯನಾರಾಯಣ್, ಹೆಚ್.ಎಸ್. ಆನಂದ್, ಸಿ. ಶಿವಸ್ವಾಮಿ, ಹೆಚ್.ಆರ್. ಚಂದ್ರೇಗೌಡ, ಎಸ್.ಪಿ. ಪ್ರಕಾಶ್, ಬಿ.ಈ. ನಟೇಶ್ ಕುಮಾರ್, ಕೆ.ಆರ್. ಮಲ್ಲೇಶಗೌಡ (ದೇವ್ರು), ಕೆ. ರಮೇಶ್, ಕೆ.ಜೆ. ನಾಗರಾಜು, ಸಂಜೀವ ಬಿ. ಹೆಗ್ಡೆ, ಬಿ.ಎಸ್. ಸೋಮಶೇಖರ್, ಹೆಚ್.ಕೆ. ನಾಗೇಶ್, ರೂಪ ಆನಂದ್ ಇತರರನ್ನು ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಕನ್ನಿಕ ಪರಮೇಶ್ವರಿ ಬ್ಯಾಂಕಿನ ಅಧ್ಯಕ್ಷರಾಗಿ ಬಿ.ಕೆ. ಶ್ಯಾಮರಾಜು, ಸದಸ್ಯರಾಗಿ ಡಾ. ಗಂಗಾಧರ್, ಕೃಷಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾಗಿ ಹೆಚ್.ಆರ್. ಚಂದ್ರೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾಜಿ ಅಧ್ಯಕ್ಷ ಸತ್ಯನಾರಾಯನ್ ಮಾಜಿ ಅಧ್ಯಕ್ಷರ ಪರವಾಗಿ ಮಾತನಾಡಿ, ಒಬ್ಬ ಅಧ್ಯಕ್ಷರಾದವರು ಅವರ ಅವಧಿಯಲ್ಲಿ ನಿಬಾಯಿಸುವುದು ಸಾಮಾನ್ಯದ ಮಾತಲ್ಲ. ಮಾಜಿ ಅಧ್ಯಕ್ಷರೆಲ್ಲಾ ಸೇರಿ ಒಂದು ಉತ್ತಮ ಕಾರ್ಯಕ್ರಮವನ್ನು ವರ್ಷದಲ್ಲಿ ಮಾಡುತ್ತಾರೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆ ವರ್ಷದಲ್ಲಿ ನೆನಪಾಗಿ ಉಳಿಯುವಂತಹ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ಅನುಭವದ ಮಾತನ್ನು ಹಂಚಿಕೊಳ್ಳುತ್ತಾ, ಲಯನ್ಸ್ ಎಂದರೇ ಇದು ಸೇವೆ ಮಾಡಲು ಇರುವ ಅತ್ಯುತ್ತಮ ಸಂಸ್ಥೆ. ಎಲ್ಲಾರು ಒಟ್ಟಿಗೆ ಸೇರಿ ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು ಎಂದರು. ಉತ್ತಮ ಕೆಲಸ ಮಾಡುವ ಈ ಸಂಸ್ಥೆಯು ಇನ್ನು ಸಾವಿರಾರು ವರ್ಷ ಇರಬೇಕು ಎಂದು ನೆರೆದಿದ್ದ ಯುವ ಲಯನ್ಸ್ ಸದಸ್ಯರಿಗೆ ಸಲಹೆ ನೀಡಿದರು. ಮನುಷ್ಯನಾಗಿ ಜನ್ಮ ತಾಳಿರುವ ನಮಗೆ ಸಾಧನೆ ಬೇಕು. ಸಾಧನೆ ಇಲ್ಲವಾದರೇ ಜೀವನವೇ ವ್ಯರ್ಥ. ಜೀವನ ಎಂದರೇ ಅದು ಸೇವೆ ಆಗಬೇಕೆ ವರತು, ಸ್ವಾರ್ಥವಾಗಬಾರದು ಎಂದು ಕಿವಿಮಾತು ಹೇಳಿದರು. ಲಯನ್ಸ್ ಸಂಸ್ಥೆಯಲ್ಲಿ ಪ್ರೀತಿ ಇರಬೇಕು. ಎಲ್ಲಾ ಸಹಕಾರ ಇದ್ದರೆ ಸಾಧನೆ ಮಾಡಲು ಸಾಧ್ಯ. ಮಾಜಿ ಅಧ್ಯಕ್ಷರು ಮಾಡಿದ ಕೆಲಸಗಳೂ ಇಂದಿನ ಯುವ ಅಧ್ಯಕ್ಷರಿಗೆ ಮಾಧರಿಯಾಗಲಿ. ಇಂದಿನ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷರುಗಳು ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಕರೆ ನೀಡದರು. ಇಂದು ಹಾಸನ ಲಯನ್ಸ್ ಸಂಸ್ಥೆಯು ೫೦ನೇ ವಸಂತಕ್ಕೆ ಕಾಲಿಟ್ಟಿದೆ. ಮುಂದೆ ಇದು ಸೇವಾ ಕಾರ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಶುಭ ಹಾರೈಸಿದರು.

ಈಸಂದರ್ಭದಲ್ಲಿ ಲಯನ್ಸ್ ಸೇವಾ ಸಂಸ್ಥೆ (ಕ್ಲಬ್) ಅಧ್ಯಕ್ಷ ಐ.ಜಿ. ರಮೇಶ್, ಕಾರ್ಯದರ್ಶಿ ರವಿಕುಮಾರ್ ಬಲ್ಲೇನಹಳ್ಳಿ, ಖಜಾಂಚಿ ನಾಗರಾಜು ಚಿಲ್ಕೂರ್, ವಲಯ ಅಧ್ಯಕ್ಷೆ ರೂಪ ಆನಂದ್, ಪ್ರಾಂತೀಯ ಅಧ್ಯಕ್ಷ ಕೆ.ಜೆ. ನಾಗರಾಜು, ಮಾಜಿ ಅಧ್ಯಕ್ಷ ಹೆಚ್.ಕೆ. ನಾಗೇಶ್, ಲಿಯೋ ಕ್ಲಬ್ ನ ಚಿರಂತನ, ಎಸ್.ಪಿ. ಅನಂತರಾಜು, ಹೆಚ್.ಆರ್. ಚನ್ನೇಗೌಡ, ಹೆಚ್. ರಮೇಶ್ ಇತರರು ಪಾಲ್ಗೊಂಡಿದ್ದರು.

Continue Reading

Hassan

ದೆಹಲಿ ನೋಟಿಸ್‌, ಕಾರ್ಟಿಯರ್ ವಾಚ್‌ ವಿವಾದದ ಬಗ್ಗೆ ಆತ್ಮವಿಶ್ವಾಸದ ನಿಲುವು ಘೋಷಿಸಿದ ಡಿಸಿಎಂ ಡಿಕೆಶಿ

Published

on

ಹಾಸನ: ನಗರದಲ್ಲಿ ರಾಜಕೀಯವಾಗಿ ಚುರುಕು ಕಂಡು ಬಂದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ಪ್ರಮುಖ ವಿವಾದಗಳಾದ ದೆಹಲಿ ನೋಟಿಸ್ ಮತ್ತು ಕಾರ್ಟಿಯರ್ ವಾಚ್ ಬಗ್ಗೆ ಒಂದೇ ವೇದಿಕೆಯಲ್ಲಿ ಸ್ಪಷ್ಟ, ತೀವ್ರ ಮತ್ತು ಆತ್ಮವಿಶ್ವಾಸದ ನಿಲುವು ಘೋಷಿಸಿದರು.

ಡೆಹಲಿ ಪೊಲೀಸರು ನೀಡಿದ ನೋಟಿಸ್ ಕುರಿತು ಗರಂ ಪ್ರತಿಕ್ರಿಯೆ ನೀಡಿ, ಉಪಮುಖ್ಯಮಂತ್ರಿಗಳು ಮೊದಲ ಬಾರಿಗೆ ನೋಟಿಸ್ ಕುರಿತು ಬಾಯ್ಬಿಟ್ಟಿದ್ದು, ಸ್ಪಷ್ಟ ಅಸಮಾಧಾನ ವ್ಯಕ್ತಪಡಿಸಿದರು. ನನಗೆ, ಸುರೇಶ್‌ಗೂ ನೋಟಿಸ್ ಕೊಡುತ್ತಾರೆ ಅಂತ ನಿರೀಕ್ಷೆಯೇ ಇರಲಿಲ್ಲ. ನಮ್ಮನ್ನು ಅವರು ಕರೆಯೋ ಅಗತ್ಯವೇ ಇರಲಿಲ್ಲ. ಇಡಿಗೆ ನಾವು ಎಲ್ಲ ಡೀಟೇಲ್ ಕೊಟ್ಟಿದ್ದೇವೆ ಎಂದರು.

ಇಡಿಯ ಚಾರ್ಜ್‌ಶೀಟ್‌ನಲ್ಲಿ ನಮ್ಮ ಹೆಸರೇನು ಸೇರಿಸಲಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು. ಈ ಹಂತದಲ್ಲಿ ಏಕಾಏಕಿ ಕರೆಯೋದು ಯಾಕೆ ಎಂಬುದು ಅರ್ಥವಾಗ್ತಿಲ್ಲ. ನೋಟಿಸ್ ಫುಲ್ ಓದಿದ್ದೇನೆ. ಲಾಯರ್ ಜೊತೆ ಮಾತಾಡಿ ವಿಚಾರಣೆಗೆ ಹೋಗ್ತಿನಿ. ನನ್ನನ್ನು ಹೆದರಿಸಲು ಹೋಗುತ್ತಿದ್ದರೂ ಅದು ಹೀಲ್ಡ್ ಆಗಲ್ಲ. ನೋಟಿಸ್ ಕೊಡುವಂತಹದ್ದೇನಿತ್ತು? ಎಲ್ಲ ಬ್ಲಾಕ್ ಅಂಡ್ ವೈಟ್‌ನಲ್ಲಿ ಇದೆ. ನಮ್ಮ ಪಕ್ಷಕ್ಕೆ ನಾವು ದುಡ್ಡು ಕೊಡದೆ ಯಾರಿಗೆ ಕೊಡೋಣ? ಈ ಹೇಳಿಕೆಗಳ ಮೂಲಕ ಡಿಸಿಎಂ ಕೇಂದ್ರ ತನಿಖಾ ಸಂಸ್ಥೆಗಳ ಕ್ರಮಗಳ ಕುರಿತು ಗಂಭೀರ ಅಸಮಾಧಾನ ತೋರಿಸಿದರು.

ಕಾರ್ಟಿಯರ್ ವಾಚ್ ವಿವಾದ? ಡಿಕೆಶಿ ನೇರ ಪ್ರತಿಕ್ರಿಯೆ ನೀಡಿ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ನೀಡಿದ ಟೀಕೆಗೆ ಡಿಕೆಶಿ ಹಾಸನದಿಂದಲೇ ಗಟ್ಟಿಯಾಗಿ ತಿರುಗೇಟು ಕೊಟ್ಟರು. ಯಾರು ಶರ್ಟ್ ಹಾಕುತ್ತಾರೆ, ಯಾರು ವಾಚ್ ಹಾಕುತ್ತಾರೆ, ಯಾರು ಕನ್ನಡಕ ಹಾಕುತ್ತಾರೆ? ಇದು ಅವರ ವೈಯಕ್ತಿಕ ವಿಚಾರ. ಕೆಲವರು ಸಾವಿರದ ಶೂ ಹಾಕುತ್ತಾರೆ, ಕೆಲವರು ಹತ್ತು ಸಾವಿರದ ಶೂ ಹಾಕುತ್ತಾರೆ, ಕೆಲವರು ಒಂದು ಲಕ್ಷದ ಶೂ ಹಾಕುತ್ತಾರೆ. ನಾನು ಒಂದು ಸಾವಿರದ ವಾಚೂ ಹಾಕ್ತೀನಿ, ಹತ್ತು ಲಕ್ಷದ ವಾಚೂ ಹಾಕ್ತೀನಿ? ಇದು ನನ್ನ ಸಂಪಾದನೆ, ನನ್ನ ಕಷ್ಟ, ನನ್ನ ಶ್ರಮ ಎಂದು ಹೇಳಿದರು.

ವಿರೋಧ ಪಕ್ಷದವರು ಗೊತ್ತಿಲ್ಲದೆ ಮಾತನಾಡಿದ್ದಾರೆ, ಪಾಪ. ಅವರಿಗೆ ರಾಜಕೀಯದ ಅನುಭವವೂ ಇಲ್ಲ. ಅವರು ಚುನಾವಣೆಗೆ ನಿಂತವರೂ ಅಲ್ಲ. ನನ್ನ ವ್ಯವಹಾರ, ನನ್ನ ಬದುಕು, ನನ್ನ ಹೋರಾಟ? ಬಿಜೆಪಿಯ ಶೇ.90% ಜನರಿಗೆ ಗೊತ್ತಿದೆ. ನಾನು ಏನು ಹಾಕಿಕೊಂಡು ತಿರುಗ್ತೀನಿ ಎಂಬುದು ಯಾರಿಗೂ ತಲೆನೋವಾಗಬಾರದು. ನನ್ನ ವೈಯಕ್ತಿಕ ಜೀವನಕ್ಕೆ ರಾಜಕೀಯ ತಗಲಿಸಬೇಡಿ ಎಂದು ತಿರುಗೇಟು ನೀಡಿದರು.

ಗ್ಯಾರೆಂಟಿ ಯೋಜನೆ ಮತ್ತು ಕಾಂಗ್ರೆಸ್ ಸಾಧನೆಗಳ ಕುರಿತು ಡಿಕೆಶಿ ಮತ್ತಷ್ಟು ಹೇಳಿಕೆ ನೀಡಿ, ನಮ್ಮ ಗ್ಯಾರೆಂಟಿಗಳು ಜನರಿಗೆ ಮುಟ್ಟುತ್ತಿವೆ. 1,11,000 ಕೋಟಿ ರೂ. ಜನರ ಕೈಗೆ ತಲುಪಿದೆ. ಅದೇ ಕಾರಣಕ್ಕೆ ಗ್ಯಾರೆಂಟಿ ಸಮಾವೇಶಗಳನ್ನು ಮುಂದುವರಿಸುತ್ತೀನಿ. ಹೊಸ ಪರ್ವ ಜನರಿಗೆ ತಲುಪುತ್ತಿದೆ ಎಂದು ಹೇಳಿದರು.

Continue Reading

Hassan

ಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.

Published

on

ಹಾಸನ: ಕ್ರೀಡೆಯು ಕೇವಲ ಮನರಂಜನೆಗೋ ಅಥವಾ ಆರೋಗ್ಯ ವರ್ಧನೆಗೂ ಮಾತ್ರವಲ್ಲ. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಮ್ಮಿಷ್ಟದ ಹೊರಾಂಗಣದ ಆಟವೊಂದನ್ನು ಅಳವಡಿಸಿಕೊಂಡರೆ, ಅದು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು ಎಂದು ಚನ್ನರಾಯಪಟ್ಟಣದ ಆಯುರ್ವೇದ ತಜ್ಞ ವೈದ್ಯ ಡಾ. ಅಕ್ಷಯ್ ಎಸ್. ಗೌಡ ತಿಳಿಸಿದರು.

ನಗರದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ನಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳ “ ಕ್ರೀಡಾ ತರಂಗ-2025 ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರು ಅನಾರೋಗ್ಯಕರ ಆಹಾರ, ದುಶ್ಚಟಗಳು, ಮೊಬೈಲ್ ದುರ್ಬಳಕೆಯಿಂದ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಿತ್ಯವೂ ನಡಿಗೆ, ಲಘುವ್ಯಾಯಾಮ, ಆಟ, ಯೋಗದಂತಹ ಕ್ರಿಯೆಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಲೇಬೇಕಿದೆ. ಆಯುರ್ವೇದದ ಚಿಕಿತ್ಸೆಗಳು ಕ್ರೀಡಾಳುಗಳ ಆರೋಗ್ಯದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಈವರೆಗೂ 1000 ಕ್ಕೂ ಹೆಚ್ಚು ಕ್ರೀಡಾಪಟುಗಳ ವಿವಿಧ ನೋವಿನ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮಗಳ ಮೂಲಕವೇ ಚಿಕಿತ್ಸೆ ನೀಡಿರುವುದನ್ನು ನೆನೆಸಿಕೊಂಡರು. ತಾವು ವ್ಯಕ್ತಿಯಲ್ಲಿ ವೈದ್ಯರಾದರೂ ತಮ್ಮಲ್ಲಿ ಇಂದಿಗೂ ಕಡಾ ಆಸಕ್ತಿ ಇರಲು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಒಂದು ಬಲವಾದ ಕಾರಣ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ.ಉಪ್ಪಿನಕುದುರು ಅವರು ಮಾತನಾಡಿ, ಇತರ ವೃತ್ತಿಗಳಂತೆ ಆರೋಗ್ಯ ಕ್ಷೇತ್ರದ ವೃತ್ತಿಗಳಲ್ಲೂ ಒತ್ತಡ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ನಮ್ಮ ದಿನಚರಿಯ ಭಾಗವಾಗಿಸಬೇಕು ಎಂದರು. ಎಸ್.ಡಿ.ಎಂ.ಅಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಎಲ್ಲ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಆ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್.ಪಿ.ಪೂಜಾರ್, ಉಪಪ್ರಾಂಶುಪಾಲರಾದ ಡಾ.ಅಶ್ವಿನಿಕುಮಾ‌ರ್.ಎಂ ಮತ್ತು ಡಾ.ಪ್ರಕಾಶ್. ಎಲ್. ಹೆಗಡೆ ಹಾಗು ದೈಹಿಕ ನಿರ್ದೇಶಕ ಶ್ರೀ ಗಣೇಶ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.

Continue Reading

Hassan

ನಾವು ತೆರೆದ ಪುಸ್ತಕ ಎಲ್ಲವನ್ನೂ ಎದುರಿಸೋದಕ್ಕೆ‌ ಸಿದ್ಧರಿದ್ದೇವೆ: ಸಿಎಂ ಸಿದ್ದರಾಮಯ್ಯ

Published

on

ಹಾಸನ: ಅಹಿಂದ ಸಂಘಟನೆ ಮಾಡಿದ್ದು‌ ನಾನು, ಭಾಗ್ಯಗಳು, ಗ್ಯಾರೆಂಟಿ ಯೋಜನೆಗಳನ್ನು ಮಾಡಿರೋದು ಯಾರಿಗೆ, ಬಡವರಿಗೆ ದಲಿತರಿಗೆ ಹಿಂದುಳಿದವರಿಗೆ ಇದು ಅಹಿಂದಕ್ಕಾಗಿ ಅಲ್ವಾ? ಅಹಿಂದಕ್ಕೆ ಅವರದ್ದೇನು ಕೊಡುಗೆ? ರೈತರ ಮಗನ ಮಗ ಮಗ ಅಷ್ಟೇ ಅಲ್ವಾ? ಮೇಕೆದಾಟಿಗೆ ಒಪ್ಪಿಗೆ ಕೊಡೊಸೋಕೆ ಅವರಿಗೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 

ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ಕಡಿಮೆ ಮಾಡಿದ್ದಕ್ಕೆ ನಮಗೆ ನಷ್ಟ ಎಷ್ಟು ಗೊತ್ತಾ? ಜಿಎಸ್‌ಟಿ ತಂದಿದ್ದು ನರೇಂದ್ರ ಮೋದಿಯವರು, ಮಧ್ಯದಲ್ಲಿ ಅದನ್ನು ಕಡಿಮೆ‌ ಮಾಡಿದ್ದಾರೆ. ಶೇ.12% ಗ್ರೋತ್ ಇತ್ತು, ಈಗ 3% ಗೆ ಬಂದಿದೆ, ಇದನ್ನೆಲ್ಲಾ ನೀವು ಕೇಳೋದೆ‌ ಇಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಮಿಸಸ್ ನಿರ್ಮಲಾ ಸೀತಾರಾಮನ್ ಹೇಳಿದ್ಲು, ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್ ನಲ್ಲೂ ಅದು ಪಾಸ್ ಆಗಿದೆ, ಇದರಬಗ್ಗೆ ಮೇಕೆದಾಟು ಬಗ್ಗೆ ಕುಮಾರಸ್ವಾಮಿ‌ ಮಾತನಾಡಿದ್ದಾರಾ? ನಮ್ಮ ನೆರವಿಗೆ ಬಂದಿದ್ದು ನ್ಯಾಯಾಲಯ. ಕಾವೇರಿ ಅಥಾರಿಟಿಯಲ್ಲಿ ಇವತ್ತಿನವರೆಗೆ ಪಾಸ್ ಮಾಡೋದಕ್ಕೆ ಆಗಿಲ್ಲ. ಇದು ಯಾರಿಗೆ ಅನ್ಯಾಯ ಇದು ಮಂಡ್ಯಕ್ಕೆ ಅನ್ಯಾಯ ಅಲ್ವಾ? ಜಿಎಸ್‌ಟಿನಲ್ಲಿ‌12 ಸಾವಿರ ಕೋಟಿ ನಷ್ಟ ಆಗಬಹುದು ಎಂಬ ನಿರೀಕ್ಷೆ ಇದೆ. 88 ಸಾವಿರ ಕೋಟಿ ತಲುಪೋದು ಕೂಡ ಕಷ್ಟ ಆಗುತ್ತಿದೆ ಎಂದರು.

ಸಿದ್ದರಾಮಯ್ಯ ಅಹಿಂದಾಕ್ಕೆ‌ ಏನು ಮಾಡಿದ್ದರು.. ಇದನ್ನೆಲ್ಲಾ ಯಾರು ಮಾಡಿರೋದು, ಇದರ ಬಗ್ಗೆ ಯಾವತ್ತಾದ್ರೂ ಪಾರ್ಲಿಮೆಂಟ್‌ನಲ್ಲಿ ಮಾತಾನಾಡಿದ್ದಾರಾ? ನಾವು ಗ್ಯಾರೆಂಟಿಗಾಗಿ ಲಕ್ಷ ಕೋಟಿ ಹಣ ನೀಡಿದ್ದೇವೆ. ಬೇಕಿದ್ದರೆ ವೆರಿಫಿಕೇಷನ್ ಮಾಡಲಿ, ಮೋದಿ‌ ಈ ಯೋಜನೆಯನ್ನು ನೀಡೋದಕ್ಕೆ ಆಗೊಲ್ಲ ಎಂದು ಹೇಳಿದರು.

ಕರ್ನಾಟಕ ಆರ್ಥಿಕ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಈಗ ನಾವು ಕೊಟ್ಟಿಲ್ವಾ ಎಂದ ಸಿಎಂ, ಯಾವ ಅವುಶ್ವಾಸವಾದರೂ ತರಲಿ ಏನಾದರೂ ತರಲಿ. ನಾವು ಎದುರೊಸೋದಕ್ಕೆ ತಯಾರಾಗಿದ್ದೇವೆ ಎಂದು ತಿಳಿಸಿದರು.

 

Continue Reading

Trending

error: Content is protected !!