State
ಕೆಯುಡಬ್ಲ್ಯೂಜೆ: ಬೆಂಗಳೂರು ನಗರ ಘಟಕ ಚುನಾವಣೆಗೆ ತಡೆಯಾಜ್ಙೆ ತೆರವು ಮಾಡಿದ ನ್ಯಾಯಲಯ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ, ಬೆಂಗಳೂರು ನಗರ ಘಟಕ ಚುನಾವಣೆಯನ್ನು ನಡೆಸಲು ಗ್ರೀನ್ ಸಿಗ್ನಲ್ ನೀಡಿರುವ ನ್ಯಾಯಾಲಯ, ಚುನಾವಣೆಗೆ ನೀಡಿದ್ದ ತಡೆಯಾಜ್ಣೆ ತೆರವು ಮಾಡಿ ಆದೇಶಿಸಿದೆ.
ಒಂದು ತಿಂಗಳೊಳಗಾಗಿ ಅರ್ಜಿದಾರನ ನಾಮಪತ್ರವನ್ನು ಪರಿಗಣಿಸಿ ಚುನಾವಣೆ ನಡೆಸಲು ನ್ಯಾಯಲಯ ಸೂಚಿಸಿದೆ.
ಬೆಂಗಳೂರಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ವಾದಿಯ ನಾಮಪತ್ರವನ್ನು ಪರಿಗಣಿಸುವಂತೆ ಸೂಚಿಸಿರುವ ನ್ಯಾಯಾಲಯ, ಚುನಾವಣೆಯನ್ನು ಕ್ಯಾಲೆಂಡರ್ ಪ್ರಕಾರ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಿಳಿಸಿದೆ. ಅಲ್ಲದೆ, ವಾದಿಯು ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವವನ್ನು ವಜಾಗೊಳಿಸಿದೆ.
ನ್ಯಾಯಾಲಯ ತೀರ್ಪಿಗೆ ಸ್ವಾಗತ:
ನ್ಯಾಯಾಲಯ ನೀಡಿರುವ ತೀರ್ಪು ನ್ನು ಸ್ವಾಗತಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ನಿಯಮಾವಳಿ ಪ್ರಕಾರ ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
National
ಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
ನವದೆಹಲಿ: ಕಾಂಗ್ರೆಸ್ ಸಂಸದರು ಸಂಸತ್ ಆವರಣದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಆಗಮಿಸುವ ಮುನ್ನ ಸಂಸತ್ತಿನಲ್ಲಿ ನಡೆದ ಘಟನೆ ತೀವ್ರ ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ಪೀಠದವರೆಗೂ, ಗದ್ದಲದ ನಡುವೆಯೂ ವಿರೋಧ ಪಕ್ಷದ ಸಂಸದರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರದ್ದು ಚರ್ಚೆ ಆಗಿರಲಿಲ್ಲ. ಪ್ರತಿಭಟನೆಯೂ ಆಗಿರಲಿಲ್ಲ. ಇದು ಕೇವಲ ಉದ್ದೇಶಪೂರ್ವಕವಾದಂತಹ ಪ್ರಚೋದನೆಯಾಗಿತ್ತು ಎಂದು ಆರೋಪ ಮಾಡಿದ್ದಾರೆ.
ಒಬ್ಬ ಸಂಸದರಾಗಿ ಸದನದ ಘನತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಕಾಂಗ್ರೆಸ್ ಸಂಸದರ ನಡೆ ತೀವ್ರ ವಿರೋಧಾಭಾಸವಾಗಿದೆ. ಸಂಸತ್ತಿನ ಆವರಣದೊಳಗೆ ಗೌರವಾನ್ವಿತ ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹೊತ್ತೊಯ್ಯುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಖಜಾನೆ ಖಾಲಿ ಮಾಡಿದವರು ಮೊದಲು ತಮ್ಮನ್ನೇ ಪ್ರಶ್ನಿಸಿಕೊಳ್ಳಲಿ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ಟೀಕಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರು, ಆರ್ಥಿಕ ಸಂಪದ್ಭರಿತವಾಗಿದ್ದ ರಾಜ್ಯದ ಖಜಾನೆ ಖಾಲಿ ಮಾಡಿರುವ ಬಗ್ಗೆ ತಮ್ಮನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಆರ್ಥಿಕ ಸಂಪತ್ತಿನಿಂದ ಕೂಡಿದ್ದ ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಇಂದು ಖಾಲಿ ಮಾಡಿದ್ದಲ್ಲದೆ, ಸಂಪೂರ್ಣ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ. ಹೂಡಿಕೆದಾರರ ವಿಶ್ವಾಸವನ್ನು ಸಹ ಕಳೆದುಕೊಂಡಿದೆ. ಇದೆಲ್ಲಾ ಏಕೆ? ಎಂಬುದನ್ನು ಸಿಎಂ ಉತ್ತರಿಸಲಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷ ಮೊದಲು ಭಾರತದ ಹಿತಾಸಕ್ತಿ ಕುರಿತು ಉಪನ್ಯಾಸ ನೀಡುವುದೊಳಿತು. 2008ರಲ್ಲಿ 26/11ರ ನಂತರ ಮುಂಬೈ ಹೊತ್ತಿ ಉರಿಯುತ್ತಿದ್ದರೂ ಕಾಂಗ್ರೆಸ್ ಮೌನವಹಿಸಿತು. ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಗೃಹ ಸಚಿವರು ಬಾಹ್ಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪರಿಣಾಮ ಭಾರತ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು ಎಂಬುದನ್ನು ತಿಳಿಸಿದ್ದಾರೆ.
2020 ಮತ್ತು ಹಿಂದಿನ ವರ್ಷಗಳಲ್ಲಿ ನಮ್ಮ ಸೈನಿಕರು ಪಿಎಲ್‌ಎ ಆಕ್ರಮಣವನ್ನು ಎದುರಿಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಚೀನಾದ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದರು. ಯಾವುದೊಂದು ಬಹಿರಂಗವಾಗದಂತೆ ನೋಡಿಕೊಂಡರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀತಿಗಳು ನಿಷ್ಕ್ರಿಯಗೊಂಡವು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಾರತದ ನೀತಿಗಳನ್ನು ದುರ್ಬಲಗೊಳಿಸಿ, ಅವಮಾನಿಸಲಾಯಿತು. ಜಾಗತಿಕ ವಿಶ್ವಾಸ ಮತ್ತು ಕಾರ್ಯತಂತ್ರದ ನಿಲುವನ್ನು ಹಾಳು ಮಾಡಿತು. ಅಲ್ಪಾವಧಿಯ ರಾಜಕೀಯಕ್ಕಾಗಿ ಭಾರತದ ಸ್ಥಾನಮಾನವನ್ನು ದುರ್ಬಲಗೊಳಿಸಿತು. ಇದೆಲ್ಲಾ ಗೊತ್ತಿಲ್ಲದ ವಿಚಾರವೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ದೃಢತೆ, ಆತ್ಮವಿಶ್ವಾಸ ಮತ್ತು ಅತ್ಯಂತ ಸ್ಪಷ್ಟವಾಗಿ ಜಾಗತಿಕವಾಗಿ ಯಶಸ್ವಿ ಮಾತುಕತೆ ನಡೆಸುತ್ತಿದೆ. ಕಾಂಗ್ರೆಸ್ ಇದನ್ನು ಅರಿತುಕೊಳ್ಳಲಿ. ಏನೇನೋ ಬಡಬಡಿಸುವುದನ್ನು ನಿಲ್ಲಿಸಲಿ ಎಂದು ತಿಳಿಸಿದ್ದಾರೆ.
Special
ಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹೊಸ ‘ಸ್ತ್ರೀ ಶಕ್ತಿ ಪ್ಯಾಕೇಜ್’ ಆದ ಸಾಲದ ಯೋಜನೆಯನ್ನು ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಜಾರಿ ಮಾಡಿದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಿ, ಸ್ವಂತ ಉದ್ಯಮ ಆರಂಭಿಸಲು ಸಹಾಯಮಾಡುವುದಾಗಿದೆ.
ಸಾಲದ ಷರತ್ತುಗಳು:
* ಮಹಿಳೆಯರು ಕನಿಷ್ಟ 50 % ಪಾಲುದಾರಿಕೆ ಹೊಂದಿರಬೇಕು.
* ಸಾಲದ ಮೊತ್ತ ₹50,000 ರಿಂದ ₹25 ಲಕ್ಷದವರೆಗೆ ಇರಬಲ್ಲದು.
* ಕೆಲವು ಸಂದರ್ಭಗಳಲ್ಲಿ ಗರಿಷ್ಠ ₹50 ಲಕ್ಷವರೆಗೆ ಸಹ ವಿಸ್ತರಣೆ ಸಾಧ್ಯವಾಗಿದೆ.
* ₹10 ಲಕ್ಷವರೆಗೆ ಯಾವುದೇ ಭದ್ರತೆ ಅಗತ್ಯವಿಲ್ಲ — ಇದರಿಂದ ಆಸ್ತಿ ಇಲ್ಲದವರಿಗೂ ಸಾಲ ಸಿಗುವುದು ಸುಲಭ.
* 2 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ ಬಡ್ಡಿ ದರದಲ್ಲಿ 0.5% ರಿಯಾಯಿತಿ ನೀಡಲಾಗುತ್ತದೆ.
•MSME ಅಡಿಯಲ್ಲಿ ನೋಂದಾಯಿತ ವ್ಯವಹಾರಗಳಾಗಿರಬೇಕು.

ಯಾರು ಅರ್ಹರು?
•ಚಿಲ್ಲರೆ ವ್ಯಾಪಾರಿಗರು, ಸಣ್ಣ ಕೈಗಾರಿಕೆ, ಸೇವಾ ವಲಯ, ಗೃಹ ಉತ್ಪಾದನೆ, ಹಾಲು ಉತ್ಪಾದನೆ ಮುಂತಾದ ಉದ್ಯಮಗಳು.
•ವೃತ್ತಿಪರ ಮಹಿಳೆಯರು (ಡಾಕ್ಟರ್, CA, ಆರ್ಕಿಟೆಕ್ಟ್, ಬ್ಯೂಟಿ ಪಾರ್ಲರ್ ಮುಂತಾದವರು) ಸಹ ಅರ್ಹತೆ ಹೊಂದಿದ್ದಾರೆ.
ಮುಖ್ಯ ಪ್ರಯೋಜನಗಳು:
* ಮಹಿಳಾ ಉದ್ಯಮಕ್ಕೆ ಬೇಕಾದ ಆರಂಭಿಕ ಬಂಡವಾಳಕ್ಕೆ ಹಣಕಾಸು ಪಡೆಯಬಹುದು.
* ಬಡ್ಡಿ ದರದಲ್ಲಿ ರಿಯಾಯಿತಿ ಮತ್ತು ಭದ್ರತೆ ರಹಿತ ಸಾಲ ಮಾರುಕಟ್ಟೆಯಲ್ಲಿ ಸಿಗುವುದು ವಿರಳ.
* ವ್ಯಾಪಾರ ವಿಸ್ತರಣೆ, ಕೈಗಾರಿಕೆ ಸಾಮಗ್ರಿ ಖರೀದಿಗೆ ಹಣ ಬಳಸಬಹುದು.

ಈ ಸ್ತ್ರೀ ಶಕ್ತಿ ಪ್ಯಾಕೇಜ್ ಯಾರು ಬಿಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿದ್ದಾರೋ, ಅವರಿಗೆ ಹಣಕಾಸಿನ ಬೆಂಬಲವಾಗಿ ಅವರ ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಸಾಧನವಾಗಿದೆ. ಇದರ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯಬೇಕು.
Special
ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮ (PMFME) – 15 ಲಕ್ಷ ರೂ. ಸಹಾಯಧನ
ಭಾರತ ಸರ್ಕಾರವು ಗ್ರಾಮೀಣ ಹಳ್ಳಿಗಳಲ್ಲಿ ಸ್ವತಂತ್ರ ಉದ್ದಿಮೆ ಸ್ಥಾಪಿಸಲು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯ ಉದ್ದೇಶ:
ಇದರ ಪ್ರಮುಖ ಉದ್ದೇಶ ರೈತರು, ಮಹಿಳೆಯರು ಮತ್ತು ಯುವಕರಿಗೆ ಆಹಾರ ಪೂರೈಕೆಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುವುದು. ಈ ಯೋಜನೆಯಡಿ ಗರಿಷ್ಠ ₹15,00,000 ವರೆಗೆ ಸಹಾಯಧನ (ಸಬ್ಸಿಡಿ) ಲಭಿಸುತ್ತದೆ.
ಸಹಾಯಧನದ ಬಗ್ಗೆ ಮಾಹಿತಿ:
ಈ ಯೋಜನೆಯಡಿ ಒಟ್ಟು ₹15 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಇದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ. 60:40 ದರದಲ್ಲಿ ಹಂಚಿಕೊಳ್ಳುತ್ತಿದ್ದು, ಕೇಂದ್ರದಿಂದ ₹6 ಲಕ್ಷ ಮತ್ತು ರಾಜ್ಯದಿಂದ ₹9 ಲಕ್ಷ ವರ್ಷಕ್ಕೆ ನೀಡಲಾಗುತ್ತದೆ.

ಯಾರು ಅರ್ಹರು?
ಸಹಾಯಧನ ಪಡೆಯಲು ಯಾವುದೇ ವಿಶೇಷ ವಿದ್ಯಾರ್ಹತೆ ಅಗತ್ಯವಿಲ್ಲ; 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು ಮತ್ತು ಬ್ಯಾಂಕ್ ಸಾಲ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆಯನ್ನು ಅಧಿಕೃತ ಪೋರ್ಟ್‌ಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬೇಕು.
ಯಾರು ಲಾಭ ಪಡೆಯಬಹುದು?
* ವೈಯಕ್ತಿಕ ಉದ್ಯಮಿಗಳು
* ರೈತರು ಹಾಗೂ ಯೂವಕರು
* ಮಹಿಳಾ ಉದ್ಯಮಿಗಳು
* ಸ್ವ ಸಹಾಯ ಸಂಘಗಳು (SHG)
* ರೈತ ಉತ್ಪಾದಕ ಸಂಘಗಳು (FPO)
ಯಾವ ಉದ್ಯಮಗಳಿಗೆ ಸಹಾಯಧನ?
ಸಹಾಯಧನಕ್ಕಾಗಿ ವಿವಿಧ ಬಗೆಯ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು.
* ಸಿರಿಧಾನ್ಯ (ಮಿಲೆಟ್ಸ್) ಸಂಸ್ಕರಣಾ ಘಟಕ
* ಬೆಲ್ಲ, ಸಕ್ಕರೆ ಹಾಗೂ ನಿಂಬೆ ಉತ್ಪನ್ನ ಘಟಕಗಳು
* ಬೇಕರಿ ಅಥವಾ ಮಸಾಲಾ ಘಟಕ
* ಎಣ್ಣೆ (ಕೋಲ್ಡ್-ಪ್ರೆಸ್) ಘಟಕ
* ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ
* ಕೋಳಿ, ಮೀನು ಮತ್ತು ಇತರ ಆಹಾರ ಘಟಕಗಳು.

ಯೋಜನೆಯ ಪ್ರಗತಿ:
ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆ ಮೂಲಕ ಸಾವಿರಾರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿವೆ. ಉದಾ., ಸಿರಿಧಾನ್ಯ, ಎಣ್ಣೆ, ಬೆಲ್ಲ ಮತ್ತು ಮಸಾಲಾ ಘಟಕಗಳು ದೇಶಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಯೋಜನೆ ಗ್ರಾಮೀಣ ಭಾರತೀಯರಿಗೆ ಉದ್ಯಮ ಸ್ಥಾಪನೆಯಲ್ಲಿ ಬೃಹತ್ ಅವಕಾಶ ಒದಗಿಸುತ್ತದೆ ಮತ್ತು ಕಳೆದ ವರ್ಷಕ್ಕಿಂತ ಹೆಚ್ಚು ಹೊಸ ಅರ್ಜಿಗಳನ್ನು ಸ್ವೀಕರಿಸಲು ಮುಂದುವರಿಸಿದೆ. ರೈತರು, ಮಹಿಳೆಯರು ಮತ್ತು ಯುವಕರು ತಮ್ಮ ಹಳ್ಳಿಯಲ್ಲೇ ಸ್ವಂತ ಆಹಾರ ಸಂಸ್ಕರಣಾ ಉದ್ಯಮ ಆರಂಭಿಸಲು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು.
-
Mysore7 hours agoರಾಜ್ಯದಲ್ಲಿ ಯತೀಂದ್ರ ಸೇಲ್ಸ್ ಟ್ಯಾಕ್ಸ್ ಕಡ್ಡಾಯ: ಪ್ರತಾಪ್ ಸಿಂಹ ಆರೋಪ
-
Mandya24 hours agoಫೆ.13 ರಿಂದ 19 ರವರೆಗೆ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ
-
Mandya2 hours agoಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು :ಡಾ. ಬಿ.ವಿ. ನಂದೀಶ್
-
Chikmagalur19 minutes agoಮುಳ್ಳಯ್ಯನಗಿರಿ ದೇವಸ್ಥಾನದ ಕಾಮಗಾರಿ: ಸೀತಾಳಯ್ಯನ ಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕ ನಿರ್ಬಂಧ
-
National51 minutes agoಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೊಯ್ದಿರುವುದು ಪ್ರಚೋದನಕಾರಿ ನೀತಿ: ಪ್ರಹ್ಲಾದ್ ಜೋಶಿ
-
Mysore1 hour agoಕಳ್ಳತನ ಮಾಡಿದ್ದ ಕಾರು ವಶ: ಆರೋಪಿ ಬಂಧನ
-
Mysore22 hours agoಇಲಾಖೆಗಳ ಸಮನ್ವಯದೊಂದಿಗೆ ಮಾಜಿ ಸೈನಿಕರ ಕುಂದುಕೊರತೆ ನಿವಾರಣೆ: ಜಿ.ಲಕ್ಷ್ಮೀಕಾಂತ್ ರೆಡ್ಡಿ
-
Special21 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
