Connect with us

Chamarajanagar

ಕುವೆಂಪು ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಪ್ರತಿರೂಪ – ಎ.ಆರ್.ಕೆ.

Published

on

ಯಳಂದೂರು : ವಿಶ್ವಮಾನವ ಸಂದೇಶ ಸಾರಿದ ರಾಷ್ಟಕವಿ ಕುವೆಂಪು ಅವರು ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಪ್ರತಿರೂಪವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಜ್ವಲಿಸಿದ್ದಾರೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕಿನ ಹೊನ್ನೂರು ಗ್ರಾಮದ ಡಾ.ಭೀಮ್‌ರಾವ್ ರಾಮ್‌ಜೀ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಧ್ವನಿ ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಡಾ. ಭೀಮ್‌ರಾವ್ ರಾಮ್‌ಜೀ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟçಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡು ಕಂಡ ಶ್ರೇಷ್ಠ ದಾರ್ಶನಿಕ, ಸಾಹಿತ್ಯ ಲೋಕದ ಅಗ್ರಮಾನ್ಯ ದೈತ್ಯ ಪ್ರತಿಭೆಯಾದ ಕುವೆಂಪು ಅವರು, ಮಂತ್ರಮಾAಗಲ್ಯ ಪದ್ಧತಿಯ ಮೂಲಕ ಸರಳ ವಿವಾಹಕ್ಕೆ ನಾಂದಿ ಹಾಡಿದರು. ಮಾನವರು ಜಾತಿ, ಮತ, ಮೌಢ್ಯಗಳಿಂದ ಅಲ್ಪಮಾನವರಾಗದೇ ವಿಶ್ವಮಾನವರಾಗಬೇಕೆಂದು ಕರೆ ನೀಡಿದರು. ಮೈಸೂರಿನಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ತಂದೆಯವರಾದ ಬಿ.ರಾಚಯ್ಯ ರವರ ಜೊತೆಗೆ ಕುವೆಂಪು ಅವರನ್ನು ನಾನು ಕಣ್ತುಂಬಿಕೊAಡಿದ್ದುದು ನನ್ನ ಸೌಭಾಗ್ಯ. ಅಂತಹ ಮಹಾತ್ಮರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲು ಕಾರಣವಾದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಚಿರಋಣಿಯಾಗಿರುತ್ತೇನೆ. ಹೊನ್ನೂರು ಗ್ರಾಮದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಡಾ. ಭೀಮ್‌ರಾವ್ ರಾಮ್‌ಜೀ ಶಾಲೆಯು ಉತ್ತಮವಾದ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಪರಿಸರವೂ ಉತ್ತಮವಾಗಿದೆ. ಈ ಶಾಲೆಯಲ್ಲಿ ಕೊಠಡಿ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದೆಂದು ಭರವಸೆ ನೀಡಿದರು.

ಮುಖ್ಯಭಾಷಣಾಕಾರರಾದ ಸಾಹಿತಿ, ಶಿಕ್ಷಕ ಮದ್ದೂರು ದೊರೆಸ್ವಾಮಿ ಅವರು ಮಾತನಾಡಿ, ಕುವೆಂಪು ಮನುಜ ಮತದ ಸಂದೇಶವಾಹಕರಾಗಿದ್ದರು, ಅವರು ಬರೆದಿರುವ ಜಲಗಾರ, ಬೆರಳ್ಗೆ ಕೊರಳ್, ಶೂದ್ರತಪಸ್ವಿ ನಾಟಕಗಳು ಸಾಮಾಜಿಕ ಪರಿವರ್ತನೆ ಹಾಗೂ ಸಮಾನತೆಯ ಜೊತೆಗೆ ಮಾನವೀಯತೆಯನ್ನು ಪ್ರತಿಬಿಂಬಿಸುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾಕಾವ್ಯವಾದ ಶ್ರೀರಾಮಾಯಣದರ್ಶನಂ ಕಾವ್ಯವು ಶ್ರೀರಾಮನ ಶ್ರೇಷ್ಠಗುಣಗಳ ಮೂಲಕ ಹೊಸ ಸಮಾಜವನ್ನು ಕಟ್ಟಲು ಅಡಿಪಾಯವಾಗಿದೆ. ತಮ್ಮ ಕೃತಿಗಳ ಮೂಲಕ ಶೋಷಿತ ಸಮುದಾಯದವರನ್ನೇ ನಾಯಕರನ್ನಾಗಿ ರೂಪಿಸುವುದರ ಜೊತೆಗೆ ಸುಳ್ಳನ್ನು ಸತ್ಯ ಎಂದು ಬಿಂಬಿಸುತ್ತಿದ್ದ ಪ್ರಬಲ ವರ್ಗವನ್ನು ಎದುರು ಹಾಕಿಕೊಂಡರೂ ಕೂಡ ತಮ್ಮ ನಿಲುವಿನಲ್ಲಿ ರಾಜೀ ಮಾಡಿಕೊಳ್ಳದೇ ಬರೆದಂತೆ ಬದುಕಿ, ಬದುಕಿದಂತೆ ಬರೆದವರು ಎಂದು ಶ್ಲಾಘಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್. ಪ್ರಮೋದ್ ಚಂದ್ರನ್, ಗ್ರಾಪಂ ಅಧ್ಯಕ್ಷ ಶಂಕರ್ ರೂಪೇಶ್, ಉಪಾಧ್ಯಕ್ಷ ಎಚ್.ಜಿ. ನಾಗರಾಜು, ಸದಸ್ಯ ಆರ್. ಪುಟ್ಟಬಸವಯ್ಯ, ಸಮಾಜ ಸೇವಕ ಲೋಕೇಶ್ ಸೀಗಡಿ, ಡಾ. ಸುಗಂಧರಾಜನ್, ರುದ್ರಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ತೋಟೇಶ್, ಲಿಖಿತ, ಪ್ರಮೋದ್, ಲಿಂಗರಾಜಮೂರ್ತಿ, ರಾಜಪ್ಪ, ಕಂದಹಳ್ಳಿ ನಂಜುAಡಸ್ವಾಮಿ, ಸಿದ್ದಪ್ಪಸ್ವಾಮಿ, ಗುರು ಸೇರಿದಂತೆ ಅನೇಕರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಸುನಿಲ್ ಬೋಸ್ ಅವರಿಗೆ ಮತ ನೀಡುವಂತೆ ಎರಡನೇ ವಾರ್ಡಿನ ಸದಸ್ಯ ರಂಗನಾಥ್ ಮನವಿ

Published

on

ಯಳಂದೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಮತ ನೀಡುವಂತೆ ಎರಡನೇ ವಾರ್ಡಿನ ಸದಸ್ಯ ರಂಗನಾಥ್ ಮನವಿ ಮಾಡಿದರು.

ಅವರು ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಮನೆಮನೆಗಳಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದರು. ಈಗಾಗಲೇ ನುಡಿದಂತೆ ನಡೆಯುತ್ತಿರುವ ರಾಜ್ಯ ಸರ್ಕಾರ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಕೇಂದ್ರದಲ್ಲೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ ಮೊದಲ ಉದ್ಯೋಗದ ಗ್ಯಾರೆಂಟಿಯ ಯುವ ನ್ಯಾಯ, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ವರ್ಷ ಒಂದು ಲಕ್ಷ ಮಹಿಳಾ ನ್ಯಾಯ, ಸಾಮಿನಾಥನ ಆಯೋಗದ ಸೂತ್ರದ ಪ್ರಕಾರ ಎಂ ಎಸ್ ಪಿ ಗೆ ಕಾನೂನು ಸ್ಥಾನಮಾನ ಮತ್ತು ಸಾಲ ಮನ್ನದ ರೈತ ನ್ಯಾಯ, ನರೇಗಾ ಯೋಜನೆ ಅಡಿಯಲ್ಲಿ ದಿನಕ್ಕೆ 400 ರೂಪಾಯಿ ಕನಿಷ್ಠ ವೇತನದ ಶ್ರಮಿಕ ನ್ಯಾಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರ ವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯವನ್ನು ಪರಿಗಣಿಸಲಾಗುವುದು ಪಾಲುದಾರಿಕೆ ನ್ಯಾಯ ಹೀಗೆ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ನಲ್ಲಿ ಪಂಚ ನ್ಯಾಯಗಳಿದ್ದು ಇವೆಲ್ಲವೂ ಜಾರಿಗೆ ಬರುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಗೆಲ್ಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರಾದ ಕೋಸ ಮಂಜು, ಶಬ್ಬೀರ್, ರಿಜ್ವಾನ್, ಭರತ, ರಾಮು, ನಾಗ ಸೇರಿದಂತೆ ಇತರರು ಹಾಜರಿದ್ದರು.

Continue Reading

Chamarajanagar

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳು ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಆರ್ ನರೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

Published

on

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರುಗಳು ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಆರ್ ನರೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಪಕ್ಷ ಸೇರ್ಪಡೆ ನಂತರ ಮುಖಂಡ ವೆಂಕಟೇಶ್ ಮಾತನಾಡಿ ಸ್ಥಳೀಯ ಶಾಸಕ ಎಂಆರ್ ಮಂಜುನಾಥ್ ರವರ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದೆವು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ, ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿ ಕೊಡುವುದೇ ನನ್ನ ಮೊದಲ ಆದ್ಯತೆ ಎಂದು ಇನ್ನಿಲ್ಲದ ಭರವಸೆಗಳನ್ನು ನೀಡಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ರಸ್ತೆ ತುಂಬಾ ದುರಸ್ತಿಗೊಂಡಿರುವುದರಿಂದ ದ್ವಿಚಕ್ರ ವಾಹನಗಳಲ್ಲಿಯೂ ಸಂಚಾರ ಮಾಡುವುದೇ ಕಷ್ಟವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬರಗಾಲವಿದ್ದರೂ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ, ನಿರುದ್ಯೋಗಿ ಯುವಕ ಯುವತಿಯರಿಗೆ ಯಾವುದೇ ಉದ್ಯೋಗ ಕಲ್ಪಿಸಿಕೊಡದೇ ಇರುವುದರಿಂದ ಬೇರೆ ಕಡೆ ವಲಸೆ ಹೋಗಿದ್ದಾರೆ, ಇವರು ಕೊಟ್ಟ ಭರವಸೆಯನ್ನು ಈಡೇರಿಸದೆ ಇರುವುದರಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ, ನಾವು ಬೇರೆಯವರ ರೀತಿ ಇನ್ನಿಲ್ಲದ ಸುಳ್ಳು ಆಶ್ವಾಸಗಳನ್ನು ಕೊಡುವುದಿಲ್ಲ, ಬದಲಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಯೇ ತೀರುತ್ತೇವೆ, ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಕ್ಕೆ ಧ್ವನಿಯಾಗಿ ಇರುತ್ತೇನೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಗೆ ತಮ್ಮ ಗ್ರಾಮಗಳಲ್ಲಿ ಹೆಚ್ಚಿನ ಮತ ಕೊಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೂಗ್ಯಂ ಗ್ರಾಮದ ಹುಚ್ಚಯ್ಯ, ವೆಂಕಟೇಶ್, ಚಿನ್ನರಾಜು, ಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುಕುಂದವರ್ಮ, ಈಶ್ವರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜು, ರಾಮಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉದ್ದನೂರು ಸಿದ್ದರಾಜು, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾದೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Continue Reading

Chamarajanagar

ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Published

on

ಯಳಂದೂರು ಏಪ್ರಿಲ್ 23

ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆಯಿಂದಲೇ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಮತ್ತು ಆಲಮೇಲು ರಂಗನಾಯಕಿ ಅಮ್ಮ ನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವೈಖಾನಾಸ ಆಗ ಮೊಕ್ತವಾಗಿ ಪೂರ್ವ ಪದ್ಧತಿಯಂತೆ ವೇದ ಮಂತ್ರಗಳನ್ನು ಉಚ್ಚರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಚಂಪಕಾರಣ್ಯವಾಸಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಗೆ ವಿಜಯಭ್ಯುದಯ ಶಾಲಿವಾಹನ ಶಕ ೧೯೪೫ನೇ ಶ್ರೀ ಶೋಭಾಕ್ಕೃತ್ ನಾಮ ಸಂವತ್ಸರದ ಉತ್ತರಾಯಣ ವಸಂತ ಋತು ವೈಖಾಸನ ಶುದ್ಧ ಚತುರ್ದಶಿ ತಿಥಿಮಾಸ ಪೂರ್ವ ಪದ್ಧತಿಯಂತೆ ಬೆಳಗ್ಗೆ 4 ಗಂಟೆಗೆ ಕಲ್ಯಾಣೋತ್ಸವ, 6:00ಗೆ ಪ್ರಸನ್ನ ಮಂಟಪೋತ್ಸವ ಗಳು ನಡೆಯಿತು. ನಂತರ ಬೆಳಗ್ಗೆ
10 .53 ರಿಂದ 11. 08ಎಂಟರ ಒಳಗೆ ಸಲ್ಲುವ ಶುಭ ಮಿಥುನ ಲಗ್ನದ ಮೇಷ ಕುಜ ನವಾಂಶದ ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರಂಗನಾಥಸ್ವಾಮಿ, ಪದ್ಮಾವತಿ, ತುಳಸಿ ಅಮ್ಮನವರ ಉತ್ಸವ ಮೂರ್ತಿಯನ್ನು ರಂಗನಾಥ ಸ್ವಾಮಿ ದೊಡ್ಡ ರಥೋತ್ಸವದಲ್ಲಿ ಕೂರಿಸಿ ಆಕಾಶದಲ್ಲಿ ಗರುಡ ಪಕ್ಷಿ ದೊಡ್ಡ ರಥೋತ್ಸವವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ಸೋಲಿಗರು ಹಾಗೂ ಭಕ್ತರು ಶ್ರೀ ಬಿಳಿಗಿರಂಗನಾಥನ ನಾಮಸ್ಮರಣೆ ಮಾಡುತ್ತಾ ರಂಗಪ್ಪನ ತೇರು ಎಳೆದು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಮಜ್ಜಿಗೆ ಪಾನಕ ವಿತರಣೆ.

ಬಿಳಿಗಿರಿ ರಂಗನಾಥ ಸ್ವಾಮಿ ತೆರಿಗೆ ರಾಜ ಬೀದಿಯಲ್ಲಿ ಅರವಟ್ಟಿಕೆಗಳಲ್ಲಿ ಭಕ್ತರು ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಿದರು. ಅಲ್ಲದೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನ್ನ ಸಂತರ್ಪಣೆ ಮಾಡಿದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಹ ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ವರ್ಷದಂತೆ ಸಹ ಈ ವರ್ಷವೂ ಬಸ್ಸಿಗೆ ಸಮಸ್ಯೆ ಉಂಟಾಯಿತು. ಈ ಬಾರಿ ಜಿಲ್ಲಾಡಳಿತ 60ಕ್ಕೂ ಹೆಚ್ಚು ಬಸ್ಸುಗಳನ್ನು ಬಿಟ್ಟಿದ್ದರು ಸಹ ಬಸ್ ಬಾರದೆ ಭಕ್ತರು ಚಡಪಡಿಸಿದರು. ದ್ವಿಚಕ್ರ ವಾಹನ ನಿಷೇಧ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆ ಇರಲಿಲ್ಲ. ದಾರಿ ಉದ್ದಕ್ಕೂ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜನೆಗೊಂಡಿದ್ದರಿಂದ ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು.

ಬಹುಪರಾಕ್.

ಗ್ರಾಮೀಣ ಜನರು ಅಕ್ಕಿ, ಬೆಲ್ಲ, ಎಳ್ಳು ,ಕಾಯಿ, ಹಸಿಗಡಲೆ, ಕಜ್ಜಾಯ ಪುರಿ ಪಳಾರ ಮಾಡಿ ಬಿಳಿಗಿರಿ ರಂಗನಾಥ ಸ್ವಾಮಿ ದಾಸಯ್ಯರಿಂದ ಬ್ಯಾಟ ಮನೆ ಹಾಕಿಸಿ ಹಾಪರ ಗೋಪರ ಕೂಗಿ ಬಿಳಿಗಿರಿ ರಂಗನಾಥ ಸ್ವಾಮಿಗೆ ಬಹುಪರಾಕ್ ಹಾಕಿಸಿದರು.

ಮಳೆಗಾಗಿ ಪ್ರಾರ್ಥನೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಬರದೇ ಇರುವುದರಿಂದ ಮೈಸೂರು ಚಾಮರಾಜನಗರ ಮಂಡ್ಯ ಜಿಲ್ಲೆಗಳಿಂದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಉತ್ತಮ ಮಳೆ ಬೆಳೆಯಾಗುವಂತೆ ರಂಗನಾಥ ಸ್ವಾಮಿಯಲ್ಲಿ ಬೇಡಿಕೊಂಡರು.

ನವ ಜೋಡಿಗಳ ಕಲರವ

ಬಣ್ಣ ಬಣ್ಣದ ಉಡುಗೆ ತೊಟ್ಟ ನವ ಜೋಡಿಗಳು ಬಿಳಿಗಿರಿ ರಂಗನಾಥ ಸ್ವಾಮಿ ರಥೋತ್ಸವಕ್ಕೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹಣ್ಣು ಜವನ ಎಸೆದು ಜೀವನ ಸುಖಮಯವಾಗಿರಲಿ ಎಂದು ರಂಗನಾಥ ಸ್ವಾಮಿಯಲ್ಲಿ ಕೋರಿದರು.

ಜಿಲ್ಲೆಯ ನಾನಾ ಭಾಗದ ಸೋಲಿಗ ಸಮುದಾಯದ ಜನರು ಜಾತ್ರೆಗೆ ಬಂದಿದ್ದು, ಬಿಳಿಗಿರಿರಂಗನಾಥ ಸ್ವಾಮಿ ತಮ್ಮದೇ ಸಮುದಾಯದ ಕುಸುಮಲೆಯನ್ನು ವರಿಸಿದ ಎಂಬ ಇತಿಹಾಸ ಇರುವುದರಿಂದ ಸೋಲಿಗರು ರಂಗನಾಥ ಸ್ವಾಮಿಯನ್ನು ರಂಗಾಭಾವ ಎಂದು ಕರೆಯುವ ಪದ್ಧತಿ ಹಿಂದಿನಿಂದಲೂ ಬಂದಿದ್ದು ತೇರಿನ ದಿವಸ ಎಲ್ಲಾ ಸೋಲಿಗರು ಬಿಳಿಗಿರಿರಂಗನ ಬೆಟಕ್ಕೆ ಆಗಮಿಸಿ ರಂಗನಾಥ ಸ್ವಾಮಿ ದರ್ಶನ ಪಡೆಯುತ್ತಾರೆ.

Continue Reading

Trending

error: Content is protected !!