Connect with us

Mysore

ಕುವೆಂಪು ರವರ ಜನ್ಮದಿನಕ್ಕೆ ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಸಂದೇಶ

Published

on

ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹರಾದ ಕುವೆಂಪು ಅವರು ತಮ್ಮ ವೈಚಾರಿಕತೆ ಹಾಗೂ ವೈಜ್ಞಾನಿಕ ಹಾದಿಯ ಮೂಲಕ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ. ಮನುಜ ಮತ ವಿಶ್ವಪಥ ಎಂಬ ಮಹತ್ವದ ತಿಳುವಳಿಕೆಯನ್ನು ನಮ್ಮೆಲ್ಲರಿಗೂ ನೀಡಿದ ರಾಷ್ಟ್ರಕವಿ ಕುವೆಂಪು ಅವರು ಕೆಳವರ್ಗಗಳು ಸಾಕ್ಷರತೆ ಹೊಂದಿ, ಪ್ರಜ್ಞಾವಂತರಾಗಿ ಮೌಡ್ಯತೆ ಹಾಗೂ ಕಂದಾಚಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕೆಂದು ಬಯಸಿದ್ದರು.

ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಕುವೆಂಪು ಅವರು ತಮ್ಮೆಲ್ಲಾ ಕೃತಿಗಳಲ್ಲಿ ಸಮಾನ ಹಕ್ಕುಗಳ ಜೊತೆಗೆ ನಿಸರ್ಗದ ಮಹತ್ವವನ್ನೂ ಕೂಡಾ ಪ್ರತಿಪಾದಿಸಿದ್ದಾರೆ. ಇನ್ನು ಯುವ ಸಮುದಾಯದಲ್ಲಿ ಅತ್ಯಂತ ನಂಬಿಕೆ ಇಟ್ಟುಕೊಂಡಿದ್ದ ಕುವೆಂಪು ಅವರು ಸಾಹಿತ್ಯದ ಮೂಲಕ ಮೊದಲ ಬಾರಿಗೆ ಅವರಿಗೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಓರ್ವ ದಾರ್ಶನಿಕ ವ್ಯಕ್ತಿ.

ಇನ್ನು ತಮ್ಮ ಮಹಾಛಂದಸ್ಸಿನ ಮೂಲಕ ‘ರಾಮಾಯಣ ದರ್ಶನಂ’ ಕೃತಿಯನ್ನು ಬರೆದು, ಶೂದ್ರ ವರ್ಗಗಳೂ ಕೂಡಾ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಸ್ಪರ್ಶವನ್ನು ನೀಡಿದಂತವರು.

ಇನ್ನು ನಮ್ಮ ಮೈಸೂರಿನ ನೆಲದಲ್ಲಿ ಇದ್ದು ಸಾಕಷ್ಟು ಬರಹ ಕೃಷಿ ಮಾಡಿದ ಈ ಉದಯರವಿ, ಬಹುದೊಡ್ಡ ವಿದ್ಯಾರ್ಥಿ ಪರಂಪರೆಯನ್ನು ಬೆಳೆಸಿ ಹೋಗಿದ್ದಾರೆ ಎಂಬುದುನ್ನು ಮನದುಂಬಿ ನೆನೆಯುತ್ತೇನೆ.

ಜಗದ ಕವಿ ಯುಗದ ಕವಿ ಎಂದೇ ಹೆಸರಾದ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಮೊದಲಿಗೆ ತಮ್ಮೆಲ್ಲರಿಗೂ ವಿಶ್ವ ಮಾನವ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಕುವೆಂಪು ಅವರು ಹೇಳಿಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ನಮ್ಮ ವ್ಯಕ್ತಿತ್ವದಲ್ಲಿ ರೂಪಿಸಿಕೊಂಡು ಸಮಾಜವನ್ನು ಮೌಡ್ಯ ರಹಿತವಾಗಿ ಮತ್ತು ಸಮಾನತೆಯ ನೆಲೆಯಲ್ಲಿ ಆರೋಗ್ಯಕರವಾಗಿ ಕಟ್ಟೋಣ ಎಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಬಯಸುತ್ತೇನೆ.

ಡಾ. ಹೆಚ್.ಸಿ.ಮಹದೇವಪ್ಪ
ಮಾನ್ಯ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು

Continue Reading
Click to comment

Leave a Reply

Your email address will not be published. Required fields are marked *

Mysore

ಆಸ್ಪತ್ರೆ, ಗ್ರಂಥಾಲಯಕ್ಕೆ ಶಾಸಕ ದರ್ಶನ್ ಧೃವ ನಾರಾಯಣ್ ದಿಢೀರ್ ಭೇಟಿ : ಅವ್ಯವಸ್ಥೆ ಕಂಡು ಅಧಿಕಾರಿ , ಸಿಬ್ಬಂದಿಗಳ ವಿರುದ್ಧ ಗರಂ

Published

on

ನಂಜನಗೂಡು: ಇಂದು  ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಕ್ಷೇತ್ರದ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ದಿಡೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿರುವ ವ್ಯವಸ್ಥೆಗಳು, ಅನುಕೂಲತೆಗಳು ಹಾಗೂ ಸ್ವಚ್ಛತೆ ಮತ್ತು ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚೆ ನಡೆಸಿದರು.

ಬಳಿಕ ಆಸ್ಪತ್ರೆಯ ವಾತಾವರಣವನ್ನು ವೀಕ್ಷಿಸಿ, ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿ, ಜೊತೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.

ನಂತರ ನಂಜನಗೂಡು ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಶಾಸಕರು ಭೇಟಿ ನೀಡಿ, ವಿದ್ಯಾರ್ಥಿಗಳ ಮನವಿಯ ಮೇರೆಗೆ ಸೋಮವಾರವೂ ಗ್ರಂಥಾಲಯವನ್ನು ಒಂದು ದಿನ ಹೆಚ್ಚುವರಿಯಾಗಿ ತೆರೆಯಬೇಕೆಂಬ ಕೋರಿಕೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ವಿದ್ಯಾರ್ಥಿಗಳ ಶಿಕ್ಷಣ ಹಿತದೃಷ್ಟಿಯಿಂದ ವಿಷಯವನ್ನು ಪರಿಗಣಿಸಿ ಸೋಮವಾರವೂ ಗ್ರಂಥಾಲಯವನ್ನು ಹೆಚ್ಚುವರಿಯಾಗಿ ತೆರೆಯಲು ಸೂಚನೆ ನೀಡಿ ಇದರಿಂದಾಗಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ನಂತರ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ನಟೇಶ್ W/o ಚಿನ್ನಮ್ಮ ಎಂಬುವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಸುಟ್ಟು ಕರಗಿದ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಸ್ಥಿತಿಯನ್ನು ವೀಕ್ಷಿಸಿದರು. ಜೊತೆಗೆ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸರ್ಕಾರದ ವತಿಯಿಂದ ಹೊಸ ಮನೆ ಮಂಜೂರಾತಿ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ನಂಜನಗೂಡು ನಗರದಲ್ಲಿ ಇಂದಿನಿಂದ ಪ್ರಾರಂಭವಾಗುತ್ತಿರುವ ರಾಯಲ್ ವಾರಿಯರ್ಸ್ ಬೇಕರಿಯನ್ನು ಶಾಸಕರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವ ಮೂರ್ತಿ, ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ , ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದನ್ ಗೌಡ , ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್ , ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್ , ನಗರಸಭೆ ಮಾಜಿ ಸದಸ್ಯರಾದ ರವಿ, ಬಸವರಾಜು, ಕಾಂಗ್ರೆಸ್ ಮುಖಂಡ ಕಳಲೆ ರಾಜೇಶ್,
ಸೇರಿದಂತೆ ಹಲವರು ಮುಖಂಡರು ಹಾಜರಿದ್ದರು

Continue Reading

Mysore

ಮೈಸೂರು ಸಂತೆಗೆ ಚಾಲನೆ

Published

on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಮೈಸೂರು ಸಂತೆ’ ಕಾರ್ಯಕ್ರಮವು ಶುಕ್ರವಾರ ಉದ್ಘಾಟನೆಯಾಯಿತು. ಕಾರ್ಯಕ್ರಮವನ್ನು ಗಣ್ಯರು ಹಾಗೂ ಅತಿಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂತೆಯಲ್ಲಿ ಗ್ರಾಮೀಣ ಕೈಗಾರಿಕೆಗಳು, ಹಸ್ತಕಲಾ ವಸ್ತುಗಳು, ಜೈವಿಕ ಉತ್ಪನ್ನಗಳು, ಮನೆಮದ್ದು ಆಹಾರ ಪದಾರ್ಥಗಳು, ಸ್ವಯಂ ಸಹಾಯ ಸಂಘಗಳ ತಯಾರಿತ ವಸ್ತುಗಳು ಸೇರಿದಂತೆ ವಿವಿಧ ಸ್ಥಳೀಯ ಉತ್ಪನ್ನಗಳ ಮಳಿಗೆಗಳನ್ನು ಏರ್ಪಾಟು ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಖರೀದಿಗೆ ಮುನ್ನುಡಿ ಬರೆದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿ, ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹದಿಂದ ಸ್ವಯಂ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಇಂತಹ ಸಂತೆಯು ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ನೇರ ಮಾರುಕಟ್ಟೆ ಒದಗಿಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ಸಂತೆಯು ಇನ್ನೂ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ತೆರೆಯಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಈ ‘ಮೈಸೂರು ಸಂತೆ’ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.


ಆರ್ಗ್‌ಯಾನಿಕ್ ಮಂಡ್ಯ ಸಂಸ್ಥಾಪಕ ಮಧು ಚಂದನ್, ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಜಯಚಂದ್ರ ರಾಜು, ದಕ್ಷ ಕಾಲೇಜಿನ ನಿರ್ದೇಶಕ ಹರೀಶ್, ಪಾಲಿಕೆ ಉಪ ಆಯುಕ್ತೆ ಪ್ರತಿಭಾ, ನಟಿ ಮಿಸ್ ಜಾನ್ವಿ, ಆರ್ ವಿವಿ ಉಪಕುಲಪತಿ ಪ್ರೊ. ಉನಿಯಾಲ್, ಮೈಸೂರು ಸಂತೆ ತಂಡದ ಸದಸ್ಯರೊಂದಿಗೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Continue Reading

Mysore

ಬಿಲ್ಡರ್ಸ್ ಅಸೋಸಿಯೇಷನ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 1941 ರಲ್ಲಿ ಮಹಾರಾಷ್ಟ್ರದಲ್ಲಿ ಆರಂಭವಾದ ಸಂಸ್ಥೆ ನೂರಾರು ಜನರಿಗೆ ಉದ್ಯೋಗ ಕೊಟ್ಟು, ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಜನರ ವಿಶ್ವಾಸಗಳಿಸಿದೆ. ಈ ಸಂಸ್ಥೆ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹಾರೈಸಿದರು.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕದ  ವತಿಯಿಂದ ಇಂದು  ನಂಜನಗೂಡು ಪಟ್ಟಣದ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಎಐ ತಾಲೂಕು ಸಮಿತಿ ಸದಸ್ಯರ ಸಮಿತಿ ಅನುಷ್ಠಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಂಜನಗೂಡು ಪಟ್ಟಣದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಒಂದು ಉತ್ತಮ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಭಾಗಿಯಾಗಿ ಸಂತೋಷ ತಂದಿದೆ. ಸಂಘ ಇದೇ ರೀತಿ ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ನೀಡಿ ಇನ್ನಷ್ಟು ಅಭಿವೃದ್ಧಿಯಾಗಲಿ. ಇದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ನಾನು ನೀಡುವುದಾಗಿ ಹೇಳಿದರು.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಈ ಸಂಸ್ಥೆ ಕರ್ನಾಟಕದಲ್ಲಿ 1987ರಲ್ಲಿ ಆರಂಭವಾಯಿತು. ಆ ದಿನ ಹಿರಿಯ ರಾಜಕೀಯ ನಾಯಕರದ ಹೆಚ್.ಡಿ. ದೇವೇಗೌಡ ಹಾಗೂ ಹಲಿಸಿಎಂ ಸಿದ್ದರಾಮಯ್ಯ ಆಗಮಿಸಿ ಸಂಘಕ್ಕೆ ಶುಭ ಹಾರೈಸಿದ್ದರು. ಆದರೆ ಇದೇ ಪ್ರಥಮ ಬಾರಿಗೆ ನಂಜನಗೂಡಿನಲ್ಲಿ ನೂತನ ಶಾಖೆ ಆರಂಭ ಮಾಡಿದ್ದು , ಇದಕ್ಕೆ ಶಾಸಕ ದರ್ಶನ್ ಧೃವ ನಾರಾಯಣ್ ಆಗಮಿಸಿ ಶುಭಕೋರಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜಕೀಯವಾಗಿ ಉನ್ನತ ಸ್ಥಾನಮಾನ ಅಲಂಕರಿಸಲಿ ಅಂತ ಶುಭ ಹಾರೈಸಿದರು.

ಭಾರತದಲ್ಲಿ ನಮ್ಮ ಸಂಸ್ಥೆಯ ಹಲವಾರು ಘಟಕಗಳಿವೆ. ಇವುಗಳ ಸಾಲಿಗೆ ಇದೀಗ ನಂಜನಗೂಡು ಸಹ ಸೇರ್ಪಡೆಯಾಗಿದ್ದು, ಈ ಮೂಲಕ ಉತ್ತಮ ಸಮಾಜ ಸೇವೆ ಮೂಲಕ ಈ ಶಾಖೆ ಬೆಸ್ಟ್ ಅವಾರ್ಡ್ ಪಡೆಯಲಿ ಅಂತ ಯಾಕೆ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು.

 

ತಾಲೂಕು ಘಟಕದ ನೂತನ ಅಧ್ಯಕ್ಷ ಕೃಷ್ಣಪ್ಪ ಗೌಡ ಮಾತನಾಡಿ ನಂಜನಗೂಡಿನಲ್ಲಿ ಎಂಟು ವರ್ಷದಿಂದಲೂ ಬಿಲ್ಡರ್ ಅಸೋಸಿಯನ್ನು ಸ್ಥಾಪನೆ ಮಾಡಬೇಕು ಅಂತ ಚರ್ಚಿಸುತ್ತಿದ್ದೇವು , ಕಳೆದ ವರ್ಷದ ನವೆಂಬರ್ ನಲ್ಲಿ ಸಂಸ್ಥೆ ರವರು ನಂಜನಗೂಡಿಗೆ ಬಂದಿದ್ದಾಗ ತಿಳಿಸಿದರು ಆಗ ನಾನು ಕೇವಲ 20 ದಿನಗಳಲ್ಲಿ ಸದಸ್ಯರನ್ನು ಆಯ್ಕೆ ಮಾಡಿ ಇಂದು ಸ್ಥಾಪಿಸಿದ್ದೇವೆ. ಈ ಜವಾಬ್ದಾರಿಯನ್ನು ಸ್ವೀಕರಿಸಿ ನಿಷ್ಟೆಯಿಂದ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಬಿಲ್ಡರ್ಸ್ ಅಸೋಸಿಯನ್ ಆಫ್ ಇಂಡಿಯಾ ಕಾರ್ಯದರ್ಶಿ ಶ್ರೀನಾಥ್, ಸಿ.ಡಿ. ಕೃಷ್ಣ, ಯೋಗರಾಜಸಿಂಹ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ಘಟಕ ನೂತನ ಎನ್.ಆರ್.ಕೃಪ್ಣಪ್ಪಗೌಡ, ಕಾರ್ಯದರ್ಶಿ ಈ. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಲ್ಡರ್ಸ್ ತಾಲೂಕು ಅಧ್ಯಕ್ಷ ಎನ್.ಆರ್. ಕೃಷ್ಣಪ್ಪ ಗೌಡ, ಉಪಾಧ್ಯಕ್ಷರಾದ ಮಹದೇವ ಶೆಟ್ಟಿ, ಕಾರ್ಯದರ್ಶಿ ಈ ರಮೇಶ್, ಸಹ ಕಾರ್ಯದರ್ಶಿ ದಿಲೀಪ್ ಕುಮಾರ್, ಖಜಾಂಚಿ ಜಿ ಮಂಜುನಾಥ್, ಜಂಟಿ ಖಜಾಂಚಿ ತಿರು ಮಲ್ಲೇಶ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರು ಎನ್ ಉಮೇಶ್, ಸೋಮಶೇಖರ್, ಗೌತಮ್ ಕುಮಾರ್ ಬೊಹರ, ಸತೀಶ್ ಗಾಣಿಗ, ವೀರೇಂದ್ರ ಕುಮಾರ್, ಬಸವರಾಜ್, ಸಹ ಕಾರ್ಯಕಾರಿ ಸಮಿತಿಯ ಸದಸ್ಯರು ಶಶಾಂಕ್, ಶಹಾಬ್, ರವೀಶ್, ಸುರೇಶ್ ,ಸುಪ್ರೀತ್ , ನಟರಾಜ್, ಶಿವಶಂಕರ್, ವರುಣ್, ಇದ್ದರು.

ಸಮಾರಂಭಕ್ಕೆ ಭಾಗವಹಿಸಿದ ನಗರಸಭಾ ಪೌರಾಯುಕ್ತ ಧಿಕಾರಿ ಎಂ ಬಸವರಾಜು, ನರಸಿಂಹ ಸ್ವಾಮಿ ,ಪ್ರಥಮ ಗುತ್ತಿಗೆದಾರರು ಪದ್ಮನಾಭ ರಾವ್, ಆರ್.ವಿ.ಮಹದೇವಸ್ವಾಮಿ, ಇಟ್ಟಿಗೆ ಕೃಷ್ಣಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್, ಇನ್ನು ಹಲವಾರು ಮುಖಂಡರು ಭಾಗಿಯಾಗಿದ್ದರು.

Continue Reading

Trending

error: Content is protected !!