Connect with us

Hassan

ಕುರುಬ ಸಮಾಜದಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಬೇಡಿ ಡಾಕ್ಟರ್ ಶ್ರೀನಾಥ್ ವಿರುದ್ಧ ಚಂದ್ರಶೇಖರ್ ಆಕ್ರೋಶ

Published

on

ಹಾಸನ: ಡಾಕ್ಟರ್ ಶ್ರೀನಾಥ್ ಚೌಡಪ್ಪ ಎನ್ನುವ ವ್ಯಕ್ತಿ ತನ್ನ ವಿರುದ್ಧ ದಾಖಲಾಗಿರುವ ದೂರುಗಳಿಂದ ನುಣಿಚಿಕೊಳ್ಳಲು ಹಾಸನ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ ಮೇಲೆ ವಿನಾಕಾರಣ ಆಪಾದನೆ ಮಾಡುವ ಮೂಲಕ ಕುರುಬ ಸಮಾಜದಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕುರುಬರ ಸಂಘದ ಸದಸ್ಯ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ದೂರು ಕೊಟ್ಟ ವ್ಯಕ್ತಿಯ ಹಿನ್ನಲೆ ಏನು, ಆತ ಯಾರು ಎನ್ನುವ ಬಗ್ಗೆ ಮೊದಲು ತಿಳಿಯಬೇಕು. ಆರೋಪಿಸಿ ದೂರು ಕೊಟ್ಟಿರುವವರು ಡಾಕ್ಟರ್ ಶ್ರೀನಾಥ್ ಚೌಡಪ್ಪ ಎನ್ನುವ ವ್ಯಕ್ತಿ. iತ ಮೂಲತಃ ಹಾಸನ ಜಿಲ್ಲೆಯವನಲ್ಲ. ಇತನ ಮೇಲೆ ಕ್ರಿಮಿನಲ್ ಮೊಕದಮ್ಮೆಗಳೆಲ್ಲಾ ದಾಖಲಾಗಿರುವ ಬಗ್ಗೆ ದಾಖಲಾತಿ ಕೊಡಲಾಗುವುದು ಎಂದರು. ಡಾಕ್ಟರ್ ಶ್ರೀನಾಥ್ ನಾನಾ ರೀತಿ ಮೋಸಗಳನ್ನು ಮಾಡಿದ್ದು, ಪ್ರಮುಖವಾಗಿ ಕುರುಬ ಸಮಾಜದ ಹೆಣ್ಣು ಮಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರನ್ನು ಅಕ್ರಮ ಬಂಧನದಲ್ಲಿಟ್ಟು, ಮದುವೆಯಾಗಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿರುವುದಾಗಿ ನೊಂದ ಹೆಣ್ಣು ಮಗಳು ೨೦೧೬ ಮೇ ತಿಂಗಳಲ್ಲಿ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಪೊಲೀಸರು ಶ್ರೀನಾಥ್ ಚೌಡಪ್ಪ ಮೇಲಿನ ಆರೋಪಗಳು ತನಿಖೆಯಲ್ಲಿ ಸಾಕ್ಷಿ ಸಮೇತ ರುಜುವಾತಾಗಿದೆಯೆಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಕುರುಬ ಸಮಾಜದ ಮಹಿಳೆ ಕುಳಿತಿರುವಾಗ ಅವಳೊಂದಿಗೆ ಅಸಭ್ಯ ವರ್ತನೆ ಮತ್ತು ಲೈಂಗಿಕವಾಗಿ ಸಹಕರಿಸದಿದ್ದರೆ ನಿನ್ನ ಮತ್ತು ನಿನ್ನ ಕುಟುಂಬದವರ ಮರ್ಯಾದ ಹರಾಜು ಹಾಕುತ್ತೇನೆಂದು ಬೆದರಿಕೆ ಹಾಕಿರುವ ಬಗ್ಗೆ ೨೦೧೭ ಫೆಬ್ರವರಿ ತಿಂಗಳು ದೂರು ದಾಖಲಾಗಿರುವ ಸಂಬಂಧಿಸಿದ ವಿಚಾರಣೆ ನಡೆಸಿದ ಪೊಲೀಸರು ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಶ್ರೀನಾಥ್ ಗೆ ನಾನ್ ಬೇಲಬಲ್ ವಾರಂಟ್ ಜಾರಿ ಮಾಡಿರುತ್ತದೆ ಎಂದು ದೂರಿದರು. ಇಷ್ಟಲ್ಲದೆ ಇದೆ ಶ್ರೀನಾಥರು ಕುರುಬ ಸಮಾಜದ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಇನ್ನೊಬ್ಬ ಮುಖಂಡರ ಮೇಲೆ ಮಾನವ ಕಳ್ಳ ಸಾಗಣೆ ಮತ್ತು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವ ಆರೋಪ ವರಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಧೀಶರು ಲಿಖಿತ ಹೇಳಿಕೆಯ ಮೂಲಕ ಶ್ರೀನಾಥ್ ರವರ ಉತ್ತೇಕ್ಷೆಯಿಂದ ದೂರು ಸುಳ್ಳು ನೀಡಿ ಹಾಗೂ ಕಪೋಲಕಲ್ಪಿತ ಕೂಡಿರುತ್ತದೆ, ಮತ್ತು ತನ್ನ ವಿರುದ್ಧ ದಾಖಲಾಗಿರುವ ದೂರುಗಳಿಂದ ನುಣಿಚಿಕೊಳ್ಳಲು ವಿನಾಕಾರಣ ಆಪಾದನೆ ಮಾಡಿರುತ್ತಾನೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಹೇಳಿಕೆ ನೀಡಿರುತ್ತಾರೆ ಎಂದು ಹೇಳಿದರು.

ಶ್ರೀನಾಥ್ ಕುರುಬ ಸಮಾಜದ ೫ ಜನ ವ್ಯಕ್ತಿಗಳ ಮೇಲೆ ಕೆ ಪಿ ಜೆ ನಗರ ಪೊಲೀಸ್ ಠಾಣೆ ದಾವಣಗೆರೆ ಇಲ್ಲಿ ದೂರು ದಾಖಲು ಮಾಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿ ಆರೋಪಗಳು ಸತ್ಯಕ್ಕೆ ದೂರವೆಂದು ಬಿ. ರಿಪೋರ್ಟ್ ನೀಡಿ ಸದರಿ ಮುಕದ್ದಮೆಯನ್ನು ಅಂತ್ಯಗೊಳಿಸಿರುತ್ತಾರೆ. ಇನ್ನು ಇದೇ ಶ್ರೀನಾಥ್ ೬ ಜನ ಸಮಾಜದ ಮತ್ತು ಸಬ್ ರಿಜಿಸ್ಟರ್ ಚಾಮರಾಜಪೇಟೆ ಅವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುತ್ತಾರೆ. ಇದೆ ಕೇಸಿಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಸಬ್ ರಿಜಿಸ್ಟರ್ ಮೇಲಿನ ಆರೋಪಗಳು ಸುಳ್ಳೇಂದು ಪ್ರಕರಣವನ್ನು ವಜಾ ಮಾಡಿರುತ್ತಾರೆ ಎಂದು ಹಿಂದಿನ ಆರೋಪಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟೊಂದು ಕೇಸು ದಾಖಲಿದ್ದರೂ ಹಾಸನಕ್ಕೆ ಬಂದು ನಮ್ಮ ಕುರುಬರ ಸಂಘದ ಅಧ್ಯಕ್ಷರ ವಿರುದ್ಧ ಇಲಸಲ್ಲದ ಜಾಮೀನು ರಹಿತ ವಾರೆಂಟ್ ದೂರು ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ರಂಗನಾಥ್, ಸಿದ್ದೇಗೌಡ, ಪ್ರದೀಪ್, ಮಹೇಶ್, ಕುಮಾರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

Published

on

ಎಸ್ಐಟಿ ಪೊಲೀಸರಿಂದ ಭಾವನಿ ರೇವಣ್ಣ ಕಾರು ಚಾಲಕನಿಗೆ ಸಮನ್ಸ್ ಜಾರಿ

ಕಾರು ಚಾಲಕ ಅಜಿತ್ ಗೆ ಎಸ್ಐಟಿ ಸಮನ್ಸ್ ಜಾರಿ

ಸಂತ್ರಸ್ಥೆ ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಬಾರಿ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ

ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್

ಕಿಡ್ನಾಪ್ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಕಾರು ಚಾಲಕ ಅಜಿತ್

ಸಂತ್ರಸ್ಥೆಯನ್ನ ಕಾರಿನಲ್ಲಿ ಕರೆದೊಯ್ದಿದ್ದ ಕಾರು ಚಾಲಕ ಅಜಿತ್ ಎಂಬ ಆರೋಪ

ಕಿಡ್ನಾಪ್ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿರುವ ಎಸ್ಐಟಿ ಪೊಲೀಸರು

Continue Reading

Hassan

ಯಾರು ಆತಂಕಪಡಬೇಕಾಗಿಲ್ಲ ಕಾಲವೇ ಉತ್ತರ ಕೊಡಲಿದೆ ಜೆಡಿಎಸ್ ಕಾರ್ಯಕರ್ತರಿಗೆ ದೈರ್ಯ ತುಂಬಿದ ಹೆಚ್.ಡಿ. ರೇವಣ್ಣ

Published

on

ಹಾಸನ : ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕಾಗುತ್ತದೆ ಅಷ್ಟೇ. ನಮ್ಮ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ದೈರ್ಯ ತುಂಬಿದರು.

ನಗರದ ಕುವೆಂಪು ಬಡಾವಣೆಯಲ್ಲಿರುವ ಡಿ.ಟಿ. ಪರಮೇಶ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನತೆಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ. ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡುವುದಿಲ್ಲ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕೆಲಸ ಮಾಡ್ತಿವಿ, ೪೮ ಗಂಟೆಗಳಲ್ಲಿ ಪ್ರಜ್ವಲ್ ರೇವಣ್ಣ ಬಾ ಎಂಬ ಕುಮಾರಸ್ವಾಮಿ ಮನವಿ ಮಾಡಿದ ವಿಚಾರವಾಗಿ ಮಾತನಾಡಿ, ಕೋರ್ಟ್‌ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡುವುದಿಲ್ಲ. ಹೇಸಿಗೆಯಂತಹ ವಿಚಾರವವು ರಾಜ್ಯಕ್ಕೆ, ನಮಗೆ ಗೌರವ ತಂದುಕೊಡುವುದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ತೆಗದುಕೊಂಡು ಹೋಗಲಾಗುತ್ತಿದೆ. ಈದಕ್ಕೆಲ್ಲಾ ಮೂಲ ಯಾರಿದ್ದಾರೆ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಲಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿದರು. ತಮ್ಮ ಮೇಲೆ ಎರಡು ಪ್ರಕರಣ ದಾಖಲು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು, ಯಾರು ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕು ಅಷ್ಟೇ. ನಮ್ಮ ಜಿಲ್ಲೆಯ ಜನರನ್ನು ಅರವತ್ತು ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನೀದ್ದೀನಿ, ಎ.ಮಂಜು, ಸ್ವರೂಪ್ ಪ್ರಕಾಶ್ ಇದ್ದಾರೆ. ಕಾರ್ಯಕರ್ತರು ಯಾರು ಭಯಪಡುವ, ಆತಂಕಪಡುವ ಅಗತ್ಯವಿಲ್ಲ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದ್ದು, ಈ ಸರ್ಕಾರದ ವೇಳೆ ಯಾವುದಾದರೂ ರಸ್ತೆ ಗುಂಡಿ ಮುಚ್ಚಿಲ್ಲ. ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದರು. ರಾಜ್ಯ ಸರ್ಕಾರದ ಮಂತ್ರಿಗಳೇ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮಲ್ಲಿ ಇದ್ದು ಆ ಕಡೆ ಹೋಗಿದ್ದಾರಲ್ಲಾ ಕೆಲವರು ಸರ್ಕಾರ ಬಂದು ಒಂದು ವರ್ಷ ಆಗಿದೆ ಹಾಸನ ಜಿಲ್ಲೆಗೆ ಏನು ಕೊಡುಗೆ ಕೊಡಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ನಮ್ಮ ಆಡಳಿತದಲ್ಲಿ ನಾವು ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಕೊಟ್ಟು ತೋರಿಸಿದ್ದೇವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈ ಬಾರಿ ಹದಿನೈದನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈ ರೀತಿಯಾಗಲೂ ಕಾರಣ ಯಾರು ಕಾರಣ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರೆ ಅದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾತ್ರ. ಕುಮಾರಸ್ವಾಮಿ ಆಡಳಿತದಲ್ಲಿ ರಾಜ್ಯದಲ್ಲಿ ೧೫೦೦ ಹೈಸ್ಕೂಲ್, ೨೪೦ ಪ್ರಥಮ ದರ್ಜೆ ಕಾಲೇಜು ತೆರೆದರು. ಖಾಲಿ ಇದ್ದ ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿ ಎಂದರು. ಐವತ್ತು ವರ್ಷ ಆಡಳಿತದ ಕಾಂಗ್ರೆಸ್ ಕೈಯಲ್ಲೂ ಆಗಿರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇಡೀ ಇಂಡಿಯಾ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು. ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆ ಮಾಡಿಲ್ಲ. ಆದರೇ ಶಿಕ್ಷಕರ ಮಕ್ಕಳಿಗೆ ಉದ್ಯೋಗದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಅರಕಲಗೂಡು ಶಾಸಕ ಎ. ಮಂಜು.ಸ್ವರೂಪ ಪ್ರಕಾಶ್. ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ. ಮಾಜಿ ಶಾಸಕರಾದ ಕೆ.ಎಸ್. ಲಿಂಗೇಶ್ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಿವೇಕಾನಂದ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!