Connect with us

Mandya

ಎಚ್‌ಡಿಕೆ ಪರ ಅಬ್ಬರ ಪ್ರಚಾರ ನಡೆಸಿದ ಮೈತ್ರಿ ಮುಖಂಡರು

Published

on

ಭಾರತೀನಗರ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಸಂತೋಷ್ ತಮ್ಮಣ್ಣ ಹಾಗೂ ಎಸ್.ಪಿ.ಸ್ವಾಮಿ ರವರು ಅಬ್ಬರದ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ಭಾರತೀನಗರ ಸಮೀಪದ ತೊರೆಬೊಮ್ಮನಹಳ್ಳಿ, ಎಸ್.ಐ.ಹೊನ್ನಲಗೆರೆ, ಮೆಣಸಗೆರೆ ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ತಮ್ಮಣ್ಣ, ಈ ರಾಜ್ಯದ ಮಣ್ಣಿನ ಮಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಹೆಚ್ಚಿನ ಮತಗಳಲ್ಲಿ ಗೆಲ್ಲಿಸಬೇಕು. ಕಳೆದ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪರ ಹಾಗೂ ರೈತ ಪರವಾಗಿ ಆಡಳಿತ ನೀಡಿ ರೈತರ ಸಾಲಮನ್ನಾ ಮಾಡಿದ್ದಾರೆ, ಆ ಮೂಲಕ ರೈತಪರ ಸರ್ಕಾರ ಎಂಬುದನ್ನು ಸಾಬೀತು ಪಡಿಸಿದ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರೋಣ ಎಂದು ಮನವಿ ಮಾಡಿದರು.

ಎಸ್.ಪಿ.ಸ್ವಾಮಿ ಮಾತನಾಡಿ, ಈ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಎಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಮುಖಂಡರಾದ ಗುರುಚರಣ್, ಚಿಕ್ಕತಿಮ್ಮೇಗೌಡ, ಸತೀಶ್, ರಘುಗೌಡ, ಕರಡಕೆರೆ ಹನುಮಂತೇಗೌಡ, ದಿವ್ಯಾ, ಎ.ಟಿ ಬಲ್ಲೆಗೌಡ, ಅಣ್ಣೂರು ನವೀನ್, ವಿನು, ಯೋಗೇಂದ್ರ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನ ಹಾಗೂ ಜಮೀನಿಗೆ ತೆರಳುವ ರಸ್ತೆ ತೆರವಿಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಅರೋಹಾತ್ರಿ ಪ್ರತಿಭಟನೆ

Published

on

ಶ್ರೀರಂಗಪಟ್ಟಣ : ತಾಲೂಕಿನ ಮುಂಡುಗದೊರೆ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನ ಹಾಗೂ ಜಮೀನಿಗೆ ತೆರಳುವ ಸರ್ಕಾರಿ ಖರಾಬು ರಸ್ತೆಯನ್ನು ತೆರವು ಮಾಡಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತಕ್ಕೆ ಮವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಅರೋಹಾತ್ರಿ ಹೋರಾಟ ಆರಂಭಿಸಿ, ತಹಸೀಲ್ಧಾರ್ ಸೇರಿದಂತೆ ತಾಲೂಕು ಆಡಳಿದ ವಿರುದ್ಧ ಆಕ್ರೋಶ ಹೊರಹಾಕಿದರು.

ಗ್ರಾಮದ ಪರಿಶಿಷ್ಟ ಜನಾಂಗದವರಿಗೆ ಸ್ಮಶಾನಕ್ಕೆ ಮತ್ತು ಜಮೀನಿಗೆ ಹೋಗಲು ಮೀಸಲಿಟ್ಟಿರುವ ಸರ್ವೆ ನಂ ೩೫೧ ರಲ್ಲಿನ ಸಾರ್ವಜನಿಕರ ಬಳಕೆಗೆ ಮೀಸಲಾಗಿದ್ದ ಓಣಿ ಮತ್ತು ರಸ್ತೆ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಒತ್ತುವರಿ ಮಾಡಿದ್ದು, ಸ್ಮಶಾನಕ್ಕೆ ಹೋಗುವ ದಾರಿ ಇಲ್ಲದಂತಾಗಿದೆ. ಇದರಿಂದ ದಲಿತ ಸಮುದಾಯದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶ್ರೀಕಂಠಯ್ಯ ಮಾತನಾಡಿ, ದೊಡ್ಡಪಾಳ್ಯ ಗ್ರಾಮದ ಪಟೇಲ್ ಲೇಟ್ ರಾಮೇಗೌಡ ರವರ ಮಗ ಈರೇಗೌಡ ಎಂಬುವವರು ತಮ್ಮ ಪ್ರಭಾವ ಬಳಸಿ, ರಸ್ತೆ ಒತ್ತುರವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಿಸಿದ್ದಾರೆ. ಇದರ ವಿರುದ್ಧ ಕಳೆದ ೫ ತಿಂಗಳ ಹಿಂದೆ ಅಹೋರಾತ್ರಿ ಧರಣಿ ಸೇರಿದಂತೆ ಪ್ರತಿಭಟನೆ ನಡೆಸಿ ತಾಲೂಕು ಆಡಳಿತವನ್ನ ಎಚ್ಚರಿಸಲಾಗಿತ್ತು. ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಭರವಸೆ ನೀಡಿದ್ದರು ಆದರೂ ಯಾವುದೇ ಪ್ರಯೋಜವಾಗಿಲ್ಲ. ಹಾಗಾಗಿ ನ್ಯಾಯ ಸಿಗುವ ತನಕ ಅನಿರ್ಧಿಷ್ಟಾವದಿ ಅಹೋರಾತ್ರಿ ಹೋರಾಟ ನಡೆಸುವುದಾಗಿ ಕರ್ನಾಟಕ ಎಚ್ಚರಿಸಿದರು.

ಶಾಸಕ ರಮೇಶಬಾಬುಬಂಡಿದ್ದೇಗೌಡ ಅವರು ಸಹ ಗ್ರಾಮದ ಸಮಸ್ಯೆಯನ್ನ ಬಗೆ ಹರಿಸಿಕೊಡುವುದಾಗಿ ಹೇಳಿದ್ದರು, ಆದರೆ ಅವರಿಂದಲೂ ಸಹ ತಾಲೂಕು ಆಡಳಿವನ್ನ ಎಚ್ಚರಿಸುವಂತೆ ಕೆಲಸವಾಗಿಲ್ಲ. ಇದರಿಂದ ನಮ್ಮ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. ಶಾಸಕರಿಂದ ಇದೇ ದೋರಣೆ ಮುಂದುವರೆದಲ್ಲಿ ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನ ಬಹಿಷ್ಕರಿಸುವುದಾಗಿ ಶಾಸಕರಿಗೆ ಎಚ್ಚರಿಕೆ ನೀಡಿದರು.

ಈ ವೇಳೆ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ರವಿಚಂದ್ರ, ರೈತ ಹೋರಾಟಗಾರ ಪಾಂಡು, ಪ.ಜಾ/ಪ.ಪಂ ಹಿತರಕ್ಷಣಾ ಸಮಿತಿ ಸದಸ್ಯ ಮೋಹನ್‌ಕುಮಾರ್, ಮಹದೇವು, ಕೇಶವಮೂರ್ತಿ, ಪ್ರಕಾಶ್, ಪುಟ್ಟಸ್ವಾಮಿ, ಮಹದೇವು, ನಂದೀಶ, ಕಲಾವತಿ ಸೇರಿದಂತೆ ಮುಂಡುಗದೊರೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.

Continue Reading

Mandya

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿ ಡಾ. ಕುಮಾರ ಸೂಚನೆ

Published

on

ಮಂಡ್ಯ : ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ನಗರ ಸ್ಧಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿಗಳ ಉಪಟಳ ತಡೆಯಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಸಾರ್ವಜನಿಕ ಕಟ್ಟಡಗಳ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಬಸ್ ನಿಲ್ದಾಣದಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ, ಎಲ್ಲೆಂದರಲ್ಲಿ ತಿನಿಸು ಪದ್ದಾರ್ಥಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಸಂತಾನಹರಣ ಶಸ್ತ್ರಚಿಕಿತ್ಸೆ

ಎಲ್ಲಾ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಸೂಕ್ತ ಆಶ್ರಯತಾಣಕ್ಕೆ ಸ್ಥಳಾಂತರಿಸಿ ರೇಬಿಸ್ ಲಸಿಕೆಗಳನ್ನು ಹಾಕಬೇಕಾಗುತ್ತದೆ.ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತಿಳಿಸಿದರು.

ಆಶ್ರಯ ತಾಣಗಳ ನಿರ್ಮಾಣ

ಪ್ರತಿ ತಾಲ್ಲೂಕಿನ ಸ್ಧಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂದರಂತೆ ಒಟ್ಟು 8 ಆಶ್ರಯ ತಾಣಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಇನ್ಸ್ಟಿಟ್ಯೂಟ್ ಆವರಣದಲ್ಲಿ ( ಶಾಲಾ, ಕಾಲೇಜು, ಬಸ್ ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ) 190 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಮುಂದಿನ ದಿನಗಳಲ್ಲಿ ಆಶ್ರಯತಾಣಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಿ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಆಹಾರದ ತ್ಯಾಜ್ಯಗಳು ನಾಯಿಗಳನ್ನು ಆಕರ್ಷಿಸುತ್ತವೆ, ಆದ್ದರಿಂದ ಕಸದ ಡಬ್ಬಿಗಳನ್ನು ಮುಚ್ಚಿಡಿ ಮತ್ತು ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಿ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗಯ್ಯ, ನಗರಸಭೆ ಆಯುಕ್ತರಾದ ಪಂಪಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ನಾಳೆ ಮುದ್ರಣಕಾರರ ದಿನಾಚರಣೆ ಕಾರ್ಯಕ್ರಮ : ಜಿ.ಲಕ್ಷ್ಮಿನಾರಾಯಣ್

Published

on

ಮಂಡ್ಯ: ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಮುದ್ರಣ ರಂಗದ ಪಿತಾಮಹಾ ಜೋಹಾನ್ಸ್ ಗುಟೆನ್ ಬರ್ಗ್‌ರವರ ಸವಿನೆನಪಿನಲ್ಲಿ ನಾಳೆ (ಫೆ.24) ಬೆಳಿಗ್ಗೆ 10.30ಕ್ಕೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮುದ್ರಣಕಾರರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಲಕ್ಷ್ಮಿನಾರಾಯಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನದ ಕೆಲಸ ಮಾಡುತ್ತಿದ್ದ ಜೋಹಾನ್ಸ್ ಗುಟೆನ್ ಬರ್ಗ್ ಅವರು ಬೈಬಲ್‌ನ ಪ್ರತಿಗಳನ್ನು ಇತರರಿಗೆ ಒದಗಿಸುವ ಉದ್ದೇಶದಿಂದ ಕಬ್ಬಿಣದಿಂದ ಮುದ್ರಣದ ಅಚ್ಚುಗಳನ್ನು ತಯಾರಿಸಿ ಒಂದು ರೂಪಕೊಟ್ಟು ಮುದ್ರಣ ಮಾಡುವ ವಿಧಾನ ಕಂಡು ಹಿಡಿದರು ಎಂದರು.

ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಗೌಡ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಜಿ.ಲಕ್ಷ್ಮಿನಾರಾಯಣ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭರಾಣಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಉಪಸಂಚಾಲಕ ಎಂ.ಎಸ್.ಸತೀಶ್, ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಉಪಸ್ಥಿತರಿರುವರು.

ಇದೇ ವೇಳೆ ಹಿರಿಯ ಮುದ್ರಣಕಾರ ಎ.ಎಂ.ಗಿರೀಶ್, ಅಂಗವಿಕಲ ಮುದ್ರಣಾಕಾರ ಜೆ.ಎನ್.ಮುಕುಂದರಾವ್ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಂ.ಎಸ್.ಸತೀಶ್, ಕಾರ್‍ಯದರ್ಶಿ ಆರ್.ರವೀಂದ್ರ ಇದ್ದರು.

Continue Reading

Trending

error: Content is protected !!