Connect with us

Mysore

ಕುಲದೇವತೆ ಗೆ ಪೂಜೆ ಸಲ್ಲಿಸಿ ಬಳಿಕ ಮತದಾನ ಮಾಡಿದ್ದ ಯದುವೀರ್ ಒಡೆಯರ್ ಕುಟುಂಬ

Published

on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೆಳ್ಳಿಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು. ಅಭ್ಯರ್ಥಿಗಳು ಮತದಾನ ಮಾಡಿದ್ದರೆ, ಮೊದಲ ಬಾರಿಗೆ ಮತದಾನ ಮಾಡಿದ್ದ ಯುವಜನತೆ ಸಂತೋಷ ವ್ಯಕ್ತಪಡಿಸಿದರು, ಇದರ ಜೊತೆಗೆ ವಯಸ್ಸು ಆದವರು ವಿಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದದ್ದು ವಿಶೇಷವಾಗಿತ್ತು. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ

 


ಬೆಳ್ಳಿಗೆ 7 ಗಂಟೆಯಿಂದಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು. ಎರಡು ಪಕ್ಷದ ಅಭ್ಯರ್ಥಿಗಳು ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ, ಮೊದಲ ಬಾರಿಗೆ ಮತ ಚಲಾಯಿಸಿದ ಯುವಜನತೆ ಮತದಾನ ಮಾಡಿದ್ದಕೆ ಸಂತೋಷ ವ್ಯಕ್ತಪಡಿಸಿದ್ದು, ಇದರ ಜೊತೆಗೆ ವಯಸ್ಸು ಆದವರು ವಿಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಕುಲದೇವತೆ ಗೆ ಪೂಜೆ ಸಲ್ಲಿಸಿ ಬಳಿಕ ಮತದಾನ ಮಾಡಿದ್ದ ಯದುವೀರ್ ಒಡೆಯರ್ ಕುಟುಂಬ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು, ಪತ್ನಿ ತ್ರಿಶಿಕಾ ಒಡೆಯರ್, ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಜೊತೆಯಲ್ಲಿ ನಾಡ ಅಧಿದೇವತೆ ಹಾಗೂ ಕುಲದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ. ಬಳಿಕ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.

ಬಳಿಕ ಮಾಧ್ಯಮಗಳ ಜೊತೆ ಮಾತಾನಾಡಿದ ಪ್ರಮೋದಾ ದೇವಿ ಒಡೆಯರ್. ಮತದಾನ ಮಾಡುವುದು 5 ವರ್ಷಕ್ಕೊಮ್ಮೆ ಸಿಗುವ ಹಕ್ಕು ಆಗಿದ್ದು, ಇದನ್ನ ಎಲ್ಲರೂ ತಪ್ಪದೇ ಮಾಡಬೇಕು ಇದು ನಮ್ಮ ಕರ್ತವ್ಯ. ಈ ಬಾರಿ ಮಗ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಸಂತೋಷ ನಮ್ಮಗೆ ಚುನಾವಣೆ ಹೊಸದಲ್ಲ, ಆದರೂ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಮೇಲೆ ಒಳ್ಳೆಯ ಕೆಲಸ ಮಾಡು ಎಂದು ಹೇಳಿದ್ದೇನೆ ಎಂದರು.

 

ಇದೇ ಸಂದರ್ಭದಲ್ಲಿ ಮಾತಾನಾಡಿದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ಸಂತೋಷ. ಪ್ರತಿ ಬಾರಿಯೂ ಮತ ಚಲಾಯಿಸುತ್ತಾ ಇದ್ದೆ, ಈ ಬಾರಿ ಮತ ಚಲಾಯಿಸಿದ್ದು ವಿಶೇಷವಾಗಿದ್ದು. ತಪ್ಪದೇ ಎಲ್ಲರೂ ಮತದಾನ ಮಾಡಿ ಯುವಜನತೆ ಹೆಚ್ಚಾಗಿ ಮತದಾನ ಮಾಡಿ ಎಂದು ಕರೆ ನೀಡಿದ್ದರು. ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ ಎಂದು ಹೇಳಿದ್ದರು.

 

ಮೊದಲ ಬಾರಿಗೆ ಮತದಾನ ಮಾಡಿದ್ದ ಯುವ ಜನತೆ ಹೇಳಿದ್ದೇನು ?

ಮೊದಲ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿಯಾಗಿದೆ. ವೋಟ್ ಮಾಡಬೇಕು ಎಂದು ಬೆಳ್ಳಿಗೆ ಬೇಗ ಎದ್ದು ರೆಡಿ ಆಗಿ ಬಂದಿದೆವು. ಮತದಾನ ಮಾಡುವುದು ನಮ್ಮ ಹಕ್ಕು. ಆ ಮೂಲಕ ನಾವು ಆಯ್ಕೆ ಮಾಡಿದ್ದ ಜನನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದನ್ನ ತಿಳಿಯಲು ಸಹಾಯಕವಾಗುತ್ತದೆ ಎಂದರು. ಹಾಗೂ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯಗಳನ್ನು ಮಾಡಬೇಕು. ಆ ಮೂಲಕ ದೇಶಕ್ಕೆ ಒಳ್ಳೆಯ ನಾಯಕರನ್ನ ಆಯ್ಕೆ ಮಾಡಬೇಕು. ಮತದಾನ ನಮ್ಮ ಹಕ್ಕು ಮೊದಲ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ತಮ್ಮ ಸಂತೋಷವನ್ನ ಗೆಳತಿಯರಾದ ಹಂಷಿಣಿ ಹಾಗೂ ಹಿಮ್ಮಣಿ ಹಂಚಿಕೊಂಡರು.

ಇದೆ ಸಂದರ್ಭದಲ್ಲಿ 101 ವರ್ಷದ ತಿಮ್ಮಮ್ಮ ಆಟೋದಲ್ಲಿ ಬಂದು ಮತ ಚಲಾಯಿಸಿದ್ಧರೆ. 84 ವರ್ಷದ ನಿವೃತ್ತ ವಿಜ್ಞಾನಿ ಅಶೋಕ್ ಮಜಲಿ ವಿಲ್ ಚೇರ್ ನಲ್ಲಿ ಆಗಮಿಸಿ ಮತ ಚಲಾಯಿಸಿದ್ದು ವಿಶೇಷ ಆಗಿತ್ತು.

ಒಟ್ಟಾರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬೆಳ್ಳಿಗೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು. ಅದರಲ್ಲೂ ಯುವ ಜನತೆ ಹೆಚ್ಚಾಗಿ ಮತದಾನ ಮಾಡಲು ಆಗಮಿಸುತ್ತಾ ಇರುವುದು ವಿಶೇಷ ಆಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

Published

on

ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನೂತನ ಪಶು ಸಂಗೋಪನೆಯ ಆಸ್ಪತ್ರೆಯನ್ನು ಸಚಿವ ಕೆ ವೆಂಕಟೇಶ್ ,ಮತ್ತು ನಂಜನಗೂಡು ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ರವರುಗಳು ಉದ್ಘಾಟಿಸಿದರು.

ಬಳಿಕ ಸಚಿವ ವೆಂಕಟೇಶ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ಸಾಕುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಾರೆ ಈ ಗ್ರಾಮದಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸುಮಾರು 20 ಕಿ ಮೀ ದೂರ ಹೋಗಬೇಕಾದ ದೃಷ್ಟಿಯಿಂದ ಈ ಕ್ಷೇತ್ರದ ಶಾಸಕರು ಒತ್ತಾಡದ ಮೇರೆಗೆ ಈ ಗ್ರಾಮಕ್ಕೆ ಪಶು ಸಂಗೋಪನೆ ಆಸ್ಪತ್ರೆಗೆ ಅನುದಾನ ನೀಡಲಾಗಿದೆ ಪ್ರತಿಯೊಬ್ಬ ರೈತರು ಸದ್ದುಪಯೋಗ ಪಡೆದುಕೊಳ್ಳಿ ಎಂದರಲ್ಲದೆ ನಮ್ಮ ಸರ್ಕಾರದಿಂದ ಜಾನುವಾರುಗಳು ಸಾವನ್ನಾಪ್ಪಿದರೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ ಕುರಿ ಸಾವನ್ನಾಪ್ಪಿದರೆ 5 ಸಾವಿರ ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತಿದೆ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತೊಂದು ಆಸ್ಪತ್ರೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಕಾಡಾಂಚಿನ ಗ್ರಾಮದಲ್ಲಿ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತುಂಭಾ ತೊಂದರೆಯಾಗಿರುವ ಬಗ್ಗೆ ನನಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಚಿವರ ಗಮನಕ್ಕೆ ತಂದು ಆಸ್ಪತ್ರೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್,
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅದ್ಯಕ್ಷರಾದ ಕೆ ಜಿ ಮಹೇಶ್, ಶ್ರೀಕಂಠನಾಯಕ,ಗ್ರಾ ಪಂ ಅದ್ಯಕ್ಷ ಹರೀಶ್ ಕುಮಾರ್, ಸದಸ್ಯ ಕೃಷ್ಣಮೂರ್ತಿ,ಮಹದೇವು,ನಿಂಗಮಣಿ,ಮುಖಂಡರುಗಳಾದ ದೊರೆಸ್ವಾಮಿ ನಾಯಕ,ಸೇರಿದಂತೆ ಪ್ರಮುಖರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Mysore

ಕಳ್ಳಿಮುದ್ದನಹಳ್ಳಿ ಸಣ್ಣ ಜವರಯ್ಯ ನಿಧನ 

Published

on

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ತಾಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಸಣ್ಣ ಜವರಯ್ಯ (74 ವರ್ಷ ) ನಿಧಾನರಾದರು.

ಮೃತರು, ಪತ್ನಿ, ದಲಿತ ಸಂಫರ್ಷ ಸಮಿತಿ (ಅಂಭೇಡ್ಕರ್ ವಾದ)  ಸಂಘಟನೆಯ ಜಿಲ್ಲಾ ಸಂಚಾಲಕ ಚಂದ್ರು, ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಿತು.

ಎಸ್ ಸಿ ಘಟಕದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿ ಕುಮಾರ್, ಪತ್ರಕರ್ತರಾದ ಎಸ್ ಬಿ ಹರೀಶ್,ಲಕ್ಕಿಕುಪ್ಪೆ ರಮೇಶ್, ರಾಂಪುರ ಲೋಕೇಶ್ ಸಂತಾಪ ಸೂಚಿಸಿದ್ದಾರೆ.

Continue Reading

Mysore

ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಸಾವು

Published

on

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ : ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಚಾಲಕ  ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹಳೆ ಮಿರ್ಲೆ ಗ್ರಾಮದಲ್ಲಿ  ನಡೆದಿದೆ.


ಘಟನೆಯಲ್ಲಿ ಗ್ರಾಮದ ಕುಮಾರ್ ಎಂಬುವರ‌ ಪುತ್ರ ಮನೋಜ್ (23) ಎಂಬಾತನೇ ಮೃತಪಟ್ಟವನಾಗಿದ್ದಾನೆ.
ಮೃತ ಮನೋಜ್ ಜಮೀನು ಒಂದನ್ನು ಉಳುಮೆ ಮಾಡಲು ಚಾಮರಾಜ ನಾಲೆಯ ಏರಿಯ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ಯಾಕ್ಟರ್ ಜಮೀನಿಗೆ ಉರುಳಿ, ಈ ಅವಘಡ ಸಂಭವಿಸಿದೆ.


ಘಟನೆ ನಡೆದ ತಕ್ಷಣವೇ ಮಗುಚಿ ಬಿದ್ದ ಟ್ಯಾಕ್ಟರ್ ನ ಅಡಿಯಲ್ಲಿ ಸಿಲುಕಿದ್ದ ಮನೋಜ್ ನನ್ನ ಮೇಲಕ್ಕೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ವತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!