Connect with us

Manglore

 ಪ್ರೈವೇಟ್ ಜೆಟ್ ಖರೀದಿಸಿದ ಕುಡ್ಲದ ಉದ್ಯಮಿ- ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಎಂಬ್ರೇಯರ್ ಲೆಗಸಿ 650 ವಿಮಾನ

Published

on

ಮಂಗಳೂರು: ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿಯವರು ಖರೀದಿಸಿರುವ ಎಂಬ್ರೇಯರ್ ಲೆಗಸಿ 650 ಖಾಸಗಿ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಅಮೆರಿಕದಿಂದ ತರಿಸಲಾಗಿರುವ 14 ಆಸನಗಳ ಎಂಬ್ರೇಯರ್ ಲೆಗಸಿ 650 ಖಾಸಗಿ ವಿಮಾನವನ್ನು ಡಾ.ಕೆ.ಪ್ರಕಾಶ್ ಶೆಟ್ಟಿಯವರು ಎಂಆರ್‌ಜಿ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದಾರೆ‌. ಸುಮಾರು 190ಕೋಟಿ ರೂಪಾಯಿಯ ವಿಮಾನ ಇದಾಗಿದ್ದು ಎಂದು ಹೇಳಲಾಗಿದೆ. ಈ ವಿಮಾನವು ದೀರ್ಘ ದೂರದ ಪ್ರಯಾಣ ಸಾಮರ್ಥ್ಯ ಹೊಂದಿದೆ. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳಿಗೆ ಎಂಬ್ರೇಯರ್ ಲೆಗಸಿ 650 ವಿಮಾನವು ಹೆಸರಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ವಿಮಾನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ಪ್ರಕಾಶ್ ಶೆಟ್ಟಿಯವರ ಕುಟುಂಬ ಸದಸ್ಯರು, ಆಪ್ತರು ಹಾಗೂ ಹಿತೈಷಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

Continue Reading

Manglore

 ನಿಷೇಧಿತ ಮಾದಕದ್ರವ್ಯ ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌‌ಗಳು ಅರೆಸ್ಟ್

Published

on

ಉಡುಪಿ: ನಿಷೇಧಿತ ಮಾದಕದ್ರವ್ಯ ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು ಉಡುಪಿ ಪೊಲೀಸರ ವಿಶೇಷ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ ರವಿವಾರ ಬಂಧಿಸಿದ್ದಾರೆ.

ಉಡುಪಿ ತಾಲೂಕಿನ ಪಿತ್ರೋಡಿ ಉದ್ಯಾವರ ನಿವಾಸಿ ವಿಜಯ ಪೂಜಾರಿ (36), ಕುಕ್ಕಂದೂರು ನಿವಾಸಿ ಪಿ. ಎ. ಮೊಹಮ್ಮದ್ ಸಮ್ಮಾಸ್ (24) ಮತ್ತು ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಆಕಾಶ್‌ ಶೆಟ್ಟಿ (20) ಬಂಧಿತ ಆರೋಪಿಗಳು. ಎಂ.ಡಿ.ಎಂ.ಎ ಪೌಡರ್, ಹೈಡ್ರೋ ಗಾಂಜಾ ಹಾಗೂ ಕಾರು ಸೇರಿದಂತೆ ಒಟ್ಟು 3,31,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬುಡ್ನಾರ್ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಈ ಆರೋಪಿಗಳು ಸಾರ್ವಜನಿಕರಿಗೆ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ದಸ್ತಗಿರಿ ಮಾಡಿದ್ದಾರೆ.

ಈ ವೇಳೆ ಆರೋಪಿಗಳಿಂದ 4 ಗ್ರಾಂ ತೂಕದ ಎಂ.ಡಿ.ಎಂ.ಎ. ಪೌಡರ್, 2.5ಗ್ರಾಂ ಹೈಡ್ರೋಗಾಂಜಾ ಟ್ಯಾಬ್ಲೆಟ್ ಹಾಗೂ 3 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಡ್ರಗ್ಸ್ ಸಾಗಾಟಕ್ಕೆ ಬಳಸುತ್ತಿದ್ದ ಒಂದು ಕಾರು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 95/2026 ಕಲಂ 8(C) 20 (2), 22 (2) NDPS ACT 1985 03 ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಚರಣೆಯಲ್ಲಿ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರ ಮಾರ್ಗದಶನದಲ್ಲಿ ಮಲ್ಪೆ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ, ಉಡುಪಿ ಸಂಚಾರ ಠಾಣೆಯ ಪಿ.ಎಸ್.ಐ ಮಹೇಶ್ ಟಿ.ಎಂ, ಸೈಬರ್ ಅಪರಾಧ ಪೊಲೀಸ್‌ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಹಿರಿಯಡ್ಕ ಪೊಲೀಸ್‌ ಠಾಣೆಯ ಪ್ರವೀಣ್ ಶೆಟ್ಟಿಗಾರ್, ಮಲ್ಪೆ ವೃತ್ತ ಕಛೇರಿಯ ಇಂದ್ರೇಶ್, ಹನುಮಂತ ಅಸ್ಕಿ, ಮನು ಕುಮಾ‌ರ್, ರಶ್ಮೀ ಹೆಗಡೆ, ರವಿ ಕುಮಾರ್ ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಹಾಗೂ ದಿನೇಶ್ ರವರನ್ನೊಳಗೊಂಡ ವಿಶೇಷ ತಂಡವು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Continue Reading

Manglore

ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವಿಶ್ವ ಉರಗ ದಿನಾಚರಣೆ

Published

on

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ವಿಭಾಗದ ವತಿಯಿಂದ ವಿಶ್ವ ಉರಗ ದಿನಾಚರಣೆಯ ಪ್ರಯುಕ್ತ ಉರಗ ಸಂರಕ್ಷಣಾ ಮಾಹಿತಿ ಕಾರ್ಯಾಗಾರವನ್ನು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಸುರತ್ಕಲ್‌ನ ಉರಗ ಸಂರಕ್ಷಕ ಪ್ರಶಾಂತ್ ಕೃಷ್ಣ ಎಂ.ಸಿ. ಅವರು ಪ್ರಕೃತಿಯ ಸಮತೋಲನದಲ್ಲಿ ಹಾವುಗಳ ಮಹತ್ವ ಹಾಗೂ ವಿವಿಧ ಜಾತಿಯ ಉರಗಗಳ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉರಗ ಜಾಗೃತಿಯ ಬೀದಿ ನಾಟಕ ಪ್ರದರ್ಶಿಸಿದರು. ವೇದಿಕೆಯಲ್ಲಿ ಡಾ. ಸನತ್ ಕುಮಾರ್ ಡಿ.ಜಿ. ಹಾಗೂ ಡಾ. ರಾಜಶೇಖರ ಎನ್. ಉಪಸ್ಥಿತರಿದ್ದರು. ಅಗದತಂತ್ರ ವಿಭಾಗದ ಮುಖ್ಯಸ್ಥ ಡಾ. ಅವಿನಾಶ್ ಕೆ.ವಿ. ಸ್ವಾಗತಿಸಿ, ಡಾ. ಪೂಜಾ ಕೆ. ವಂದಿಸಿದರು. ಕುಮಾರಿ ನೀಲಿಮಾ ಬಳಗ ಪ್ರಾರ್ಥನೆ ನೆರವೇರಿಸಿ, ಚಂದನ ಮತ್ತು ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Continue Reading

Manglore

ನೀಟ್-2026: ಅದ್ವಿತೀಯ ಸಾಧನೆಗೈದ ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು

Published

on

ಮೂಡುಬಿದಿರೆ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-2026)ಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ಕಾಲೇಜಿನ ವಿದ್ಯಾರ್ಥಿ ನಿಖಿಲ್ ಎಸ್.ಎಸ್. ಅವರು 720ಕ್ಕೆ 650 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಇವರೊಂದಿಗೆ ತನ್ಮಯಿ ಎ. ಕೋಟಿ ಅವರು 647 ಅಂಕ, ಚಿನ್ಮಯಿ ಬೆಳ್ಳೂರು 629 ಅಂಕ, ಹೇಮಾ ಯು. ಅವರು 624 ಅಂಕ, ಶ್ಲೋಕ್ ರಾಘವೇಂದ್ರ ರಾವ್ ಅವರು 615 ಅಂಕ, ಈಶ್ವರ ಪುಂಡಲೀಕಪ್ಪ ಕೊಪ್ಪಲ್ 612 ಹಾಗೂ ಮೋಹಿತ್ ವೈ.ಪಿ. ಅವರು 611 ಅಂಕ ಗಳಿಸಿ ಕಾಲೇಜಿನ ಸಾಧನೆಗೆ ಮೆರುಗು ತಂದಿದ್ದಾರೆ.

ಈ ಬಾರಿಯ ಅದ್ಭುತ ಫಲಿತಾಂಶದಲ್ಲಿ 600ಕ್ಕೂ ಅಧಿಕ ಅಂಕಗಳನ್ನು 7 ವಿದ್ಯಾರ್ಥಿಗಳು, 550 ಕ್ಕಿಂತ ಹೆಚ್ಚು ಅಂಕಗಳನ್ನು 32 ವಿದ್ಯಾರ್ಥಿಗಳು, 500 ಕ್ಕಿಂತ ಹೆಚ್ಚು ಅಂಕಗಳನ್ನು 70 ವಿದ್ಯಾರ್ಥಿಗಳು ಹಾಗೂ 450 ಕ್ಕಿಂತ ಹೆಚ್ಚು ಅಂಕಗಳನ್ನು 124 ವಿದ್ಯಾರ್ಥಿಗಳು ಗಳಿಸಿದ್ದಾರೆ. ಒಟ್ಟಾರೆಯಾಗಿ 216 ವಿದ್ಯಾರ್ಥಿಗಳು 400 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ವೈದ್ಯಕೀಯ ಪ್ರವೇಶಕ್ಕೆ ಭರವಸೆಯ ಸಾಧನೆ ಮಾಡಿದ್ದಾರೆ. ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿ ವರ್ಷ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾದ ಎಐಐಎಂಎಸ್ (AIIMS), ಎಎಫ್‌ಎಂಸಿ (AFMC), ಜಿಪ್ಮರ್ (JIPMER) ಸೇರಿದಂತೆ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.


ಈ ವರ್ಷದ ನೀಟ್ ಸಾಧಕರೂ ತಮ್ಮ ಅತ್ಯುತ್ತಮ ಅಂಕಗಳ ಮೂಲಕ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಭರವಸೆ ಮೂಡಿಸಿದ್ದು ಅತ್ಯಂತ ಹರ್ಷ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಗಮನಾರ್ಹ ಯಶಸ್ಸಿಗೆ ಅವರ ಪರಿಶ್ರಮ, ಪೋಷಕರ ಪ್ರೋತ್ಸಾಹ, ಅನುಭವಿ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಹಾಗೂ ಎಕ್ಸಲೆಂಟ್ ಪಿಯು ಕಾಲೇಜಿನ ವ್ಯವಸ್ಥಿತ ತರಬೇತಿ ಮತ್ತು ಶಿಸ್ತುಬದ್ಧ ಶೈಕ್ಷಣಿಕ ವಾತಾವರಣವೇ ಪ್ರಮುಖ ಕಾರಣವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.

ಈ ಮಹೋನ್ನತ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ಶ್ರಿಮತಿ ರಶ್ಮಿತಾ ಜೈನ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕರಾದ ಡಾ. ಪ್ರಶಾಂತ್ ಹೆಗ್ಡೆ, ನೀಟ್ ಸಂಯೋಜಕರಾದ ರಾಮಮೂರ್ತಿ, ಪ್ರಾಂಶುಪಾಲರು ಹಾಗೂ ಆಡಳಿತ ನಿರ್ದೇಶಕರುಗಳಾದ ಪುಷ್ಪರಾಜ್ ಹಾಗೂ ಡಾ. ಸಂಪತ್ ಕುಮಾರ್ ಡಿ.ಪಿ., ಡೀನ್ ಡಾ. ದಯಾನಂದ್, ಉಪಪ್ರಾಂಶುಪಾಲರುಗಳಾದ ಸುನಾದ್ ರಾಜ್, ತೇಜಸ್ವಿ ಭಟ್, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ. ನೀಟ್-2026ರ ಈ ಅದ್ಭುತ ಫಲಿತಾಂಶವು ಎಕ್ಸಲೆಂಟ್ ಪಿಯು ಕಾಲೇಜಿನ ಗುಣಮಟ್ಟದ ಶಿಕ್ಷಣ, ಗುರಿನಿಷ್ಠ ತರಬೇತಿ ಮತ್ತು ವಿದ್ಯಾರ್ಥಿ-ಕೇಂದ್ರಿತ ಶೈಕ್ಷಣಿಕ ವ್ಯವಸ್ಥೆಗೆ ಮತ್ತೊಂದು ಸ್ಪಷ್ಟ ಸಾಕ್ಷಿಯಾಗಿದೆ.

Continue Reading

Trending

error: Content is protected !!