Connect with us

Sports

IPL-2026ರ ಪಂದ್ಯಗಳು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫಿಕ್ಸ್‌: KSCA ಅಧಿಕೃತ ಘೋಷಣೆ

Published

on

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಐಪಿಎಲ್- 2026 ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಅಧಿಕೃತವಾಗಿ ಘೋಷಣೆ ಮಾಡಿದೆ.

ಬೆಂಗಳೂರಿನಲ್ಲಿ ಇಂದುನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್‍ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಜಿಬಿಎ, ಬೆಸ್ಕಾಂ, ಜಲಮಂಡಳಿಗೂ ಮನವಿ ಮಾಡಿದ್ದೇವೆ. ಕೆಎಸ್‍ಸಿಎ ಸುರಕ್ಷತೆಗೆ ಅಧಿಕ ಆದ್ಯತೆ ನೀಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿತ್ತು.

Continue Reading

Sports

LSG ತಂಡದ ನಾಯಕತ್ವಕ್ಕೆ ರಿಷಬ್‌ ಪಂತ್‌ ರಾಜೀನಾಮೆ

Published

on

ಲಕ್ನೋ:  ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಬೇಕಿದೆ. ಇದಾದ ಬಳಿಕ ಮೇ. 31 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ.

ಫೈನಲ್‌ ಪಂದ್ಯಕ್ಕೂ ಮುನ್ನವೇ ಲಕ್ನೋ ಸೂಪರ್​ಜೈಂಟ್ಸ್ ತಂಡದಿಂದ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವವಹಿಸಿದ್ದ ವಿಕೆಟ್ ಕೀಪರ್ ಮತ್ತು  ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ವಾಸ್ತವವಾಗಿ ಈ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಐಪಿಎಲ್ ಮುಗಿದ ಬಳಿಕ ಪಂತ್ ತಲೆದಂಡ ಖಚಿತ ಎಂದು ಹೇಳಲಾಗುತ್ತಿತ್ತು. ಅದರಂತೆ ಈಗ ಫ್ರಾಂಚೈಸಿ ಹಂಚಿಕೊಂಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್​ನಲ್ಲಿ ರಿಷಭ್ ಪಂತ್ ನಾಯಕತ್ವ ತ್ಯಜಿಸಿದ್ದಾರೆ ಎಂಬುದನ್ನು ತಿಳಿಸಲಾಗಿದೆ.

Continue Reading

National - International

ಇಂದಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ಟಿ-20 ಸರಣಿ ಆರಂಭ

Published

on

ಚೆಲ್ಮ್ಸ್‌ಫೋರ್ಡ್‌:  ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಮುಂಬರುವ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಗಾಗಿ ಮಹತ್ವದ ಸರಣಿಯನ್ನು ಆಡಲು ಸಜ್ಜಾಗಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ ನಡುವೆ 4 ಪಂದ್ಯಗಳ ಟಿ20 ಸರಣಿ ಮತ್ತು ಒಂದು ಟೆಸ್ಟ್ ಪಂದ್ಯ ನಡೆಯಲಿದೆ. ಸರಣಿಯ ಮೊದಲ ಟಿ20 ಪಂದ್ಯ ಮೇ 28 (ಗುರುವಾರ) ಇಂಗ್ಲೆಂಡ್‌ನ ಚೆಲ್ಮ್ಸ್‌ಫೋರ್ಡ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಇಂಗ್ಲೆಂಡ್ ತಂಡದ ನಾಯಕತ್ವವನ್ನು ಚಾರ್ಲೆಟ್ ಡೀನ್ ವಹಿಸಿದ್ದಾರೆ. ಈ ಸರಣಿ ಟಿ20 ವಿಶ್ವಕಪ್‌ಗೆ ಮುನ್ನ ಉಭಯ ತಂಡಗಳಿಗೂ ತಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳುವ ಪ್ರಮುಖ ಅವಕಾಶವಾಗಿದೆ.

ಹೆಡ್-ಟು-ಹೆಡ್ ದಾಖಲೆಯಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದ್ದು, ಒಟ್ಟು 35 ಟಿ20 ಪಂದ್ಯಗಳಲ್ಲಿ 24 ಗೆಲುವು ಸಾಧಿಸಿದೆ. ಭಾರತ 11 ಪಂದ್ಯಗಳಲ್ಲಿ ಜಯ ಪಡೆದಿದೆ. ಆದಾಗ್ಯೂ, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಯಶಸ್ಸು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಪಂದ್ಯಗಳ ನೇರ ಪ್ರಸಾರವನ್ನು Sony Sports Network ಚಾನೆಲ್‌ಗಳಲ್ಲಿ ಹಾಗೂ SonyLIV ಆಪ್‌ನಲ್ಲಿ ವೀಕ್ಷಿಸಬಹುದು.

Continue Reading

Sports

ಧರ್ಮಶಾಲಾದಲ್ಲಿ ಆರ್‌ಸಿಬಿಗೆ ಗುಡ್ ನ್ಯೂಸ್: ಫಿಲ್ ಸಾಲ್ಟ್ ಕಮ್‌ಬ್ಯಾಕ್ ಸಾಧ್ಯತೆ

Published

on

ಧರ್ಮಶಾಲಾ: ಆರ್‌ಸಿಬಿ ತಂಡಕ್ಕೆ ಮಹತ್ವದ ಹಂತದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ  ಜಿಟಿ ವಿರುದ್ಧ ಸೆಣಸಲಿರುವ ಆರ್‌ಸಿಬಿ ತಂಡಕ್ಕೆ ಆರಂಭಿಕ ಬ್ಯಾಟರ್ ಫಿಲ್‌ ಸಾಲ್ಟ್‌ ಮರಳುವ ಸಾಧ್ಯತೆ ಎದುರಾಗಿದೆ.

ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌, ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ಈಗಾಗಲೇ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅವರು ಅಂತಿಮವಾಗಿ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆಯುವರೋ ಇಲ್ಲವೋ ಎಂಬುದರ ಕುರಿತು ತಂಡದ ಮ್ಯಾನೇಜ್‌ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಾಲ್ಟ್ ತಂಡಕ್ಕೆ ಮರಳಿದರೆ ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಬಲ ಸಿಗಲಿದೆ. ಈ ಸೀಸನ್‌ನಲ್ಲಿ ಅವರು ಪವರ್‌ಪ್ಲೇ ಓವರ್‌ಗಳಲ್ಲೇ ಬೌಲರ್‌ಗಳ ಮೇಲೆ ಅಬ್ಬರಿಸಿ ವೇಗದ ಆರಂಭ ನೀಡುತ್ತಿದ್ದರು. ಹೀಗಾಗಿ ಪ್ಲೇಆಫ್‌ನಂತಹ ಮಹತ್ವದ ಪಂದ್ಯದಲ್ಲಿ ಅವರ ಅನುಭವ ಮತ್ತು ಆಕ್ರಮಣಕಾರಿ ಆಟ ತಂಡಕ್ಕೆ ನೆರವಾಗಬಹುದು.

ಇನ್ನೊಂದೆಡೆ, ಜಾಕೋಬ್‌ ಗಾಯಗೊಂಡಿರುವುದು ಆರ್‌ಸಿಬಿಗೆ ಹಿನ್ನಡೆಯಾಗಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಡಗೈ ಉಂಗುರದ ಬೆರಳಿಗೆ ಗಾಯವಾದ ಕಾರಣ ಅವರು ಹೊರಬಿದ್ದಿದ್ದರು. ಸಾಲ್ಟ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿದರೆ, ತಂಡದ ಬ್ಯಾಟಿಂಗ್ ಕ್ರಮಾಂಕ ಮತ್ತೆ ಸಮತೋಲನಕ್ಕೆ ಬರಲಿದೆ.

ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ, ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.

Continue Reading

Trending

error: Content is protected !!