Connect with us

Kodagu

ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

Published

on

ಕುಶಾಲನಗರ : ಸ್ಕೂಟಿ ಶೋರೂಂನಲ್ಲಿ ಮಾಲೀಕನ ಕುರ್ಚಿಯಲ್ಲಿ ಕುಳಿತ ಗ್ರಾಹಕನೋರ್ವನನ್ನು ಮಾಲೀಕನೇ ಕತ್ತರಿಯಿಂದ ಇರಿದು ಸಾಯಿಸಿರುವ ಘಟನೆ ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫೆ. 5 ರಂದು ಮಡಿಕೇರಿ ನಗರದ ಗೌಳಿಬೀದಿ ನಿವಾಸಿಗಳಾದ ಫವಾಜ್, ಇಸ್ಸಾಂ ಮತ್ತು ಸದಿದ್, ಫವಾಜ್‌ರ ಸ್ಕೂಟಿಯನ್ನು ಸರ್ವಿಸ್ ಮಾಡುವ ಸಲುವಾಗಿ ಕುಶಾಲನಗರದ ಬಿ.ಎಂ ರಸ್ತೆಯಲ್ಲಿರುವ ಶೋರೂಂಗೆ ಆಗಮಿಸಿದ್ದರು. ಈ ಸಂದರ್ಭ ಸದಿದ್ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತ್ತಿದ್ದ. ಸುಮಾರು 6 ಗಂಟೆಗೆ ಶೋರೂಂಗೆ ಬಂದ ಮಾಲೀಕ ತನ್ನ ಕುರ್ಚಿಯಲ್ಲಿ ಕೂರಲು ನೀನು ಯಾರು ಎಂದು ಸದಿದ್ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅಲ್ಲೇ ಇದ್ದ ಶ್ರೀನಿಧಿಯ ಸ್ನೇಹಿತ ಅಲೀಂ ಕೂಡ ಶ್ರೀನಿಧಿಗೆ ಬೆಂಬಲವಾಗಿ ಗ್ರಾಹಕರಿಗೆ ನಿಂದಿಸಿದ್ದಾರೆ. ಈ ಸಂದರ್ಭ ಶ್ರೀನಿಧಿ ಶೋರೂಂ ಒಳಗೆ ಇದ್ದ ಟೈಲರಿಂಗ್ ಮಿಷನ್ ಮೇಲಿದ್ದ ಕತ್ತರಿಯಿಂದ ಸದಿದ್‌ನ ಎದೆಯ ಭಾಗಕ್ಕೆ ಚುಚ್ಚಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಶ್ರೀನಿಧಿ ಸ್ನೇಹಿತ ಅಲೀಂ ಕೂಡ ಶ್ರೀನಿಧಿಗೆ ಬೆಂಬಲ ನೀಡಿದ್ದಾನೆ ಎಂದು ದೂರುದಾರರು ಪ್ರಕರಣ ದಾಖಲಿಸಿದ್ದಾರೆ.


ಗಾಯಾಳುವನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸೂಚನೆ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ, ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸದಿದ್ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಯಾಜ್, ಶ್ರೀನಿಧಿ ಹಾಗೂ ಅಲೀಂ ಮೇಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣ ವಲಯ ಮೈಸೂರು ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷö್ಯಧಾರಗಳ ಮಾಹಿತಿ ಪಡೆದು ತನಿಖಾಧಿಕಾರಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದರು. ಹಾಗೂ ದೂರುದಾರರ ಮಾಹಿತಿ ಅನ್ವಯ ಅಪರಾಧ ಕೃತ್ಯ ಎಸಗಿದ ಆರೋಪಿಗಳಾದ ಶ್ರೀನಿಧಿ ಹಾಗೂ ಅಲೀಂರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ನಾಪೋಕ್ಲುವಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

Published

on

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಗರದಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಶಾಸಕರ 15 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಪಶು ವೈದ್ಯಕೀಯ ಕಟ್ಟಡ ನಿರ್ಮಾಣಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ಸದಸ್ಯರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಕಂಗಾಂಡ ಶಶಿ ಮಂದಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಚೇಟ್ಟಿರ ಕುಶು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ಕೆ.ವೈ.ಅಶ್ರಫ್, ಇಸ್ಮಾಯಿಲ್, ಕುಲ್ಲೇಟಿರ ಹೇಮಾವತಿ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ, ಸಹಾಯಕ ನಿರ್ದೇಶಕ ಕೆ.ಎ. ಪ್ರಸನ್ನ, ಪಶುವೈದ್ಯಾಧಿಕಾರಿ ಡಾ. ಶಿಲ್ಪ ಶ್ರೀ, ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಮಕ್ಕಿದಿವಾಕರ್ ನೆರವೇರಿಸಿದರು.

Continue Reading

Kodagu

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ಪೂರ್ಣ 

Published

on

ಗೋಣಿಕೊಪ್ಪ: ಎರಡು ದಿನಗಳ ಕಾಲ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದೆ.
ಗುರುವಾರ ಮತ್ತು ಶುಕ್ರವಾರ ಮಾಯಮುಡಿ, ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಚರಣೆಯನ್ನು ಇಲಾಖೆ ಕೈಗೊಂಡಿತ್ತು.
ಮಾಯಮುಡಿ ಗ್ರಾಮದ ಅಂಬುಕೋಟೆಯಿಂದ 7 ಕಾಡಾನೆಗಳು ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 2 ಗಂಡಾನೆಗಳನ್ನು ದೇವಮಚ್ಚಿಯ ಮಾವುಕಲ್ ಮೀಸಲು ಅರಣ್ಯಕ್ಕೆ ಆನೆಗಳನ್ನು ಅಟ್ಟಲಾಯಿತು.
ಅರುವತ್ತೊಕ್ಲು ಗ್ರಾಮದಲ್ಲಿ ಬೀಡುಬಿಟ್ಟಿದ್ದ 9 ಕಾಡಾನೆಗಳನ್ನು ಕುಂಜುರಾಮನ ಕಟ್ಟೆ ಅರಿಕೇರಿ ಮೀಸಲು ಅರಣ್ಯಕ್ಕೆ  ಅಟ್ಟಲಾಗಿದೆ.
ವಿರಾಜಪೇಟೆ ವಿಭಾಗ ಉಪಸಂರಕ್ಷಣಾಧಿಕಾರಿ ಎನ್. ಜಗನ್ನಾಥ್ ಮಾರ್ಗದರ್ಶನದಲ್ಲಿ ತಿತಿಮತಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ. ಗೋಪಾಲ್, ತಿತಿಮತಿ ಪ್ರಾದೇಶಿಕ ವಲಯ, ಆನೆಚೌಕೂರು ವನ್ಯಜೀವಿ ವಲಯ, ತಿತಿಮತಿ ಆನೆ ಕಾರ್ಯಪಡೆ, ಪೊನ್ನಂಪೇಟೆ ವಲಯ ಹಾಗೂ ಮಾಕುಟ್ಟ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.
Continue Reading

Kodagu

ಬಂದೂಕು ವಿನಾಯಿತಿ ಪ್ರಮಾಣ ಪತ್ರ : ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಿಎನ್‌ಸಿ ಸಲಹೆ

Published

on

ಮಡಿಕೇರಿ: ಕೊಡವರು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಪಡೆಯಲು ಜಮ್ಮಾ ಪ್ರಮಾಣ ಪತ್ರಗಳನ್ನು ಅವಲಂಬಿಸುವ ಬದಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಲಹೆ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವ ಕೊಡವ ಸಮುದಾಯದ ಹಕ್ಕನ್ನು ಧಾರ್ಮಿಕ ಸಂಸ್ಕಾರವಾಗಿ ಸಂರಕ್ಷಿಸಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವ ಕ್ರಮ ಸಹಕಾರಿಯಾಗಲಿದೆ. ಕೊಡವ ಸಮುದಾಯದ ಸಂಪ್ರದಾಯ ಮತ್ತು ಹಕ್ಕುಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕೊಡವ ಜನಾಂಗ ಪ್ರಮಾಣ ಪತ್ರದ ಅಗತ್ಯವಿದೆ. ಕೊಡವ ಪ್ರಮಾಣ ಪತ್ರವು ಜಮ್ಮಾ ಹೊಂದಿರುವವರ ಪ್ರಮಾಣ ಪತ್ರಗಳನ್ನು ಅವಲಂಬಿಸದೆ ಬಂದೂಕು ವಿನಾಯಿತಿಯ ಹಕ್ಕನ್ನು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಜಮ್ಮಾ ಭೂಮಿಯನ್ನು ಖರೀದಿಸುವ ಮೂಲಕ ಅಥವಾ ಈ ಉದ್ದೇಶಕ್ಕಾಗಿ ಮಾತ್ರ ಕೊಡವ ಮಹಿಳೆಯರೊಂದಿಗೆ ವಿವಾಹವಾಗುವ ಮೂಲಕ ಕೊಡವರಲ್ಲದ ಹೊರಗಿನವರು ಬಂದೂಕು ವಿನಾಯಿತಿ ಸವಲತ್ತನ್ನು ಬಳಸಿಕೊಳ್ಳುವುದನ್ನು ತಡೆಯಬೇಕು. ಕೊಡವ ಸಮುದಾಯದ ಜಾನಪದ ಕಾನೂನು ವ್ಯವಸ್ಥೆಗಳು ಮತ್ತು ಆದಿಮಸಂಜಾತ ಏಕ-ಜನಾಂಗೀಯ ಗುರುತನ್ನು ಬಲಪಡಿಸಬೇಕು. ಕೊಡವ ಸಮುದಾಯದ ಅರ್ಹ ಸದಸ್ಯರು ಬಂದೂಕು ವಿನಾಯಿತಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ಮತ್ತು ಸುರಕ್ಷತೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ಹೊರಗಿನ ಕೆಲವು ವ್ಯಕ್ತಿಗಳು ಭಾಗಮಂಡಲದಲ್ಲಿ ಜಮ್ಮಾ ಭೂಮಿಯನ್ನು ಖರೀದಿಸಿ, ಜಮ್ಮಾಲ್ಯಾಂಡ್ ಒಕ್ಕಲುತನದ ನೆಪದಲ್ಲಿ ಬಂದೂಕು ಪರವಾನಗಿ ವಿನಾಯಿತಿ ಪ್ರಮಾಣಪತ್ರಗಳನ್ನು ಪಡೆದು ಬಂದೂಕುಗಳನ್ನು ಹೊಂದಿದ್ದರು. ಇದರಿಂದಾಗಿ ಆದಿಮಸಂಜಾತ ಕೊಡವರು ಮತ್ತು ಜಮ್ಮಾ ಒಕ್ಕಲುದಾರರಿಗೆ ಮಾತ್ರ ಇರುವ ಈ ಶಾಸನಬದ್ಧ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ರಾಜದ್ರೋಹ ಎಸಗಿದರು ಮತ್ತು ದುರುಪಯೋಗಪಡಿಸಿಕೊಂಡರು. ಇದನ್ನು ಇತ್ತೀಚೆಗೆ ಪೊಲೀಸ್ ಇಲಾಖೆಯೂ ಖಚಿತಪಡಿಸಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಕೊಡಗರು ಮತ್ತು ಕೊಡವ ಸರ್ಕಾರಿ ದಾಖಲೆಗಳಲ್ಲಿ ಕೊಡವ ಸಮುದಾಯದ ನಾಮಕರಣವನ್ನು ಸರಿಪಡಿಸುವಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಣಾಯಕ ಪಾತ್ರ ವಹಿಸಿದೆ. ಕೊಡಗರು ಎಂದು ತಪ್ಪಾಗಿದ್ದ ಕೊಡವ ನಾಮಕರಣದ ವಿಷಯವನ್ನು ಸಿಎನ್‌ಸಿ ಸಂಘಟನೆ 2008 ರಲ್ಲಿ ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಆಯೋಗದ (ಕೆಎಸ್‌ಬಿಸಿ) ಗಮನಕ್ಕೆ ತಂದಿತು. 2009 ರಲ್ಲಿ, ಸಿಎನ್‌ಸಿ ಸಮಾಜ ವಿಜ್ಞಾನಿ ಡಾ. ದ್ವಾರಕನಾಥ್ ನೇತೃತ್ವದ ಆಯೋಗಕ್ಕೆ, ಕೊಡವ ಜನಾಂಗೀಯ ಸಮುದಾಯದ ಜಾನಪದ ಸಂಪತ್ತನ್ನು ಅನಾವರಣಗೊಳಿಸುವ ಮೂಲಕ “ಕೊಡಗರು” ನಿಂದ “ಕೊಡವ” ಗೆ ನಾಮಕರಣವನ್ನು ಸರಿಪಡಿಸಲು ಮನವರಿಕೆ ಮಾಡಿತು. ನಮ್ಮ ಮನವಿಗೆ ಸ್ಪಂದಿಸಿದ ದ್ವಾರಕನಾಥ್ ಆಯೋಗವು ಕೊಡಗರು ಬದಲಿಗೆ ಕೊಡವರು ಎಂದು ತಿದ್ದುಪಡಿ ಮಾಡಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

ಆಯೋಗದ ಶಿಫಾರಸು ವರದಿಯನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ವಿಫಲವಾದಾಗ ಕೊಡವರ ಸಂವಿಧಾನಿಕ ಹಕ್ಕುಗಳನ್ನು ಅನುಷ್ಠಾನಗೊಳಿಸುವಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತು. ಹೈಕೋರ್ಟ್ ಅಂತಿಮ ಆದೇಶವನ್ನು ಕೂಡ ಪಾಲಿಸದ ಕಾರಣ ಕೊಡವ ನ್ಯಾಷನಲ್ ಕೌನ್ಸಿಲ್ ನ್ಯಾಯಾಂಗ ನಿಂಧನೆ ಪ್ರಕ್ರಿಯೆ ಮುಂದುವರಿಸಿತು. 14 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಹೈಕೋರ್ಟ್ ಮೆಟ್ಟಿಲೇರಿತು.

ಡಿಸೆಂಬರ್ 8, 2021 ರಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಹೊರಡಿಸಿದ ಹೈಕೋರ್ಟ್‌ನ ಅಂತಿಮ ತೀರ್ಪು ದ್ವಾರಕನಾಥ್ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿತ್ತು. ಸದರಿ ಹೈಕೋರ್ಟ್ ಆದೇಶವನ್ನು ಜಾತಿಗೆ ತರುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗುವುದರೊಂದಿಗೆ ಕೊಡವರ ದೀರ್ಘಕಾಲಿನ ಸಂವಿಧಾನಿಕ ಹಕ್ಕುಗಳನ್ನು ವಿಳಂಬಗೊಳಿಸುತ್ತಾ ಬಂತು. ಈ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಮುಂದುವರೆಸಿತು.

ಅಂತಿಮವಾಗಿ, ಸರ್ಕಾರವು ಡಿಸೆಂಬರ್ 2023 ರಲ್ಲಿ ಗೆಜೆಟ್ ಅಧಿಸೂಚನೆಯ ಮೂಲಕ ಬದಲಾವಣೆಯನ್ನು ಜಾರಿಗೆ ತಂದಿತು, ಸಮುದಾಯದ ಏಕ-ಜನಾಂಗೀಯ ಗುರುತನ್ನು “ಕೊಡವ” ಎಂದು ಗುರುತಿಸಿತು. ಈ ಸಾಧನೆಯು ಆದಿಮಸಂಜಾತ, ಏಕ-ಜನಾಂಗೀಯ ಕೊಡವ ಸಮುದಾಯದ ಗುರುತು, ಹಕ್ಕುಗಳು ಮತ್ತು ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಿಎನ್‌ಸಿಯ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಈ ದೀರ್ಘ ಕಾಲದ ಕಾನೂನು ಪ್ರಯಾಣದಲ್ಲಿ ಹೈಕೋರ್ಟ್ ವಕೀಲ ಬಲ್ಲಚಂಡ ಬೊಳ್ಳಿಯಪ್ಪ ಅವರು ಯಶಸ್ಸು ಸಾಧಿಸುವವರೆಗೂ ಬಂಡೆಯಂತೆ ನಿಂತರು.

ಸಾಂವಿಧಾನಿಕ ವಕೀಲರು ಮತ್ತು ಪ್ರಾದೇಶಿಕ ಸ್ವಾಯತ್ತತೆಯ ಪರಿಣಿತರಾದ ವಿಕ್ರಮ್ ಹೆಗ್ಡೆ ಅವರು ೨೦೨೨ ರ ಗನ್ ವಿನಾಯಿತಿ ಮೇಲ್ಮನವಿ ಪ್ರಕರಣ, ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 2925ರಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಪರವಾಗಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾಗುತ್ತಿದ್ದಾರೆ. ಇದರಲ್ಲಿ ತಾವು ಕೂಡ ಪ್ರತಿವಾದಿಯಾಗಿರುವುದಾಗಿ ಎನ್.ಯು.ನಾಚಪ್ಪ ವಿವರಿಸಿದ್ದಾರೆ.

Continue Reading

Trending

error: Content is protected !!