Connect with us

Kodagu

ಮಾ.16 ಹಾಗೂ 17ರಂದು ಕೊಳಕೇರಿ ಬೊಮ್ಮಂಜಿ ಭದ್ರಕಾಳಿ ಉತ್ಸವ

Published

on

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಶ್ರೀ ಭದ್ರಕಾಳಿ ದೇವರ ಉತ್ಸವವು ಮಾ.16ಮತ್ತು17ರಂದು ನಡೆಯಲಿದೆ.

ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Continue Reading

Kodagu

ಸಿ.ಐ.ಪಿ.ಯು.ಕಾಲೇಜಿನ ಉಮ್ಮತ್ತಾಟ್ ನೃತ್ಯ ತಂಡಕ್ಕೆ ದ್ವಿತೀಯ ಸ್ಥಾನ

Published

on

ಪೊನ್ನಂಪೇಟೆ : ಪೊನ್ನಂಪೇಟೆಯ ಕೊಡವ ಸಮಾಜದ ವತಿಯಿಂದ ಹುತ್ತರಿ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ವಿಶೇಷವಾಗಿ ಕೊಡವ ಸಾಂಪ್ರದಾಯಿಕ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಪೊನ್ನಮ್ಮ ಎಂ.ಸಿ, ದೃಶ್ಯ ಗಂಗಮ್ಮ ಡಿ.ಎಂ, ದಿಶಾ ಚಂಗಪ್ಪ .ಎ, ಕಾವೇರಮ್ಮ. ಎಂ.ಪಿ, ಕಾವೇರಮ್ಮ. ಸಿ.ಎಂ ಮತ್ತು ರಿಚಿ ಸುಬ್ಬಯ್ಯ .ಎಂ , ಸಹನ .ಸಿ.ವಿ, ನೀಲಮ್ಮ ಹಾಗೂ ಶ್ರೇಯಾ ಪೊನ್ನಮ್ಮ .ಸಿ.ಎ , ಜಾಗೃತಿ ಬೋಜಕ್ಕ , ನಿಯಾ ನೀಲಮ್ಮ , ನಿತ್ಯಾ ನೀಲಮ್ಮ, ತೃಷಾ ತಂಗಮ್ಮ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇವರನ್ನು ಸಿ.ಐ.ಪಿ.ಯು.ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಮತ್ತು ಉಪನ್ಯಾಸಕರ ವೃಂದದವರು ಹಾಗೂ ವಿದ್ಯಾರ್ಥಿವೃಂದದವರು ಅಭಿನಂದಿಸಿದ್ದರು.

Continue Reading

Kodagu

ನಾಪೋಕ್ಲು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ: ಟ್ರಂಚ್ ತೆಗೆದು ದಂಧೆಗೆ ಕಡಿವಾಣ ಹಾಕಿದ ಪೊಲೀಸರು

Published

on

ವರದಿ: ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿದಡದಿಂದ ಅಕ್ರಮವಾಗಿ ಮರಳು ದಂದೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮರಳು ಸಾಗಿಸುವ ದಾರಿಗೆ ಅಡ್ಡಲಾಗಿ ಟ್ರಂಚ್ ತೆಗೆದು ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು, ಕೂರುಳಿ ಗ್ರಾಮದಲ್ಲಿರುವ ಕಾವೇರಿ ನದಿ ದಡದಿಂದ ಆಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಧಾವಿಸಿದ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಜೆಸಿಬಿ ಯಂತ್ರದ ಮೂಲಕ ಕಾವೇರಿ ನದಿ ದಡಕ್ಕೆ ಮರಳು ತೆಗೆಯಲು ತೆರಳುವ ರಸ್ತೆಗೆ ಅಡ್ಡಲಾಗಿ ಟ್ರಂಚ್ (ಚೆರಂಡಿ )ತಗೆದು ವಾಹನಗಳು ತೆರಳದಂತೆ ಕ್ರಮ ಕೈಗೊಂಡು ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ.


ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ನಾಪೋಕ್ಲು ಪೊಲೀಸ್ ಠಾಣೆಗೆ ಅಥವಾ ಗಣಿ ಮತ್ತು ಭೂವಿಜ್ಞಾನಿ ಇಲಾಖೆಗೆ ಮಾಹಿತಿ ನೀಡುವಂತೆ ಪೋಲಿಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

Kodagu

ಡಿ.18ಕ್ಕೆ ಮಟ್ನಳ್ಳಿ, ಕಿಬ್ಬೆಟ್ಟ ಸೇರಿದಂತೆ ವಿವಿಧೆಡೆ  ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : 66/ 11 ಕೆ.ವಿ ಸೋಮವಾರಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1-ದೊಡ್ಡಮಳ್ತೆ ಫೀಡರ್‌ನಲ್ಲಿ ಡಿ. 18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಫೀಡರ್ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಈ ಫೀಡರ್‌ನಿಂದ ಹೊರಹೊಮ್ಮುವ ಬಿಳಿರೆಕೊಪ್ಪ, ಮಟ್ನಳ್ಳಿ, ಕಿಬ್ಬೆಟ್ಟ, ಅಯ್ಯಪ್ಪ ಕಾಲೋನಿ, ದೊಡ್ಡಹನಕೋಡು, ಗೆಜ್ಜೆಹನಕೋಡು, ಕಾಡುಮನೆ, ಚಿಕ್ಕತೊಳೂರು, ಕಾಗಡೀಕಟ್ಟೆ, ದೊಡ್ಡಮಳ್ತೆ, ಒಳಗುಂದ, ಸುಳಿಮಳ್ತೆ, ಹೊನ್ನಾವಳ್ಳಿ, ಕೂಗೆಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ

Continue Reading

Trending

error: Content is protected !!