Connect with us

Chikmagalur

ಕೋಡಿ ಬಿದ್ದ ಹಿರೇಕೊಳಲೆ ಕೆರೆ

Published

on

ಚಿಕ್ಕಮಗಳೂರು : ನಗರಕ್ಕೆ ನೀರೊದಗಿಸುವ ಹತ್ತಿರದ ಪ್ರವಾಸಿ ಸ್ಥಳ ಹಿರೇಕೊಳಲೆ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.

ಕಳೆದ 15 ದಿನಗಳ ನಿರಂತರ ಮಳೆಗೆ ತುಂಬಿ ಹರಿಯುತ್ತಿದ್ದು ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಕೈ ಬೀಸಿ ಕರೆಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಭಾರೀ ವರ್ಷಧಾರೆಯಿಂದಾಗಿ ಐತಿಹಾಸಿಕ ಹಿರೇಕೊಳಲೆಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದ್ದು ನಗರವಾಸಿಗಳ ನೀರ ಕೊರತೆ ನೀಗಿಸಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದಂತಾಗಿದೆ. ವರ್ಷವಿಡಿ ಹಲವು ಬಡಾವಣೆಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಆಸರೆಯಾಗಿದೆ.

ತುಂಬಿದ ಕೆರೆಯ ಸೌಂದರ್ಯ ನೋಡಲು ಸ್ಥಳೀಯರು ಮುಗಿಬಿದ್ದು ಆಗಮಿಸುತ್ತಿದ್ದಾರೆ. ಗಿರಿ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೊಳಲೆ ಕೆರೆ ಭರ್ತಿಯಾಗಿದೆ

Continue Reading

Chikmagalur

ಚಿಕ್ಕಮಗಳೂರಿನಲ್ಲಿ ಭೀಕರ ಗಾಳಿ-ಮಳೆ: ಮರ, ವಿದ್ಯುತ್ ಕಂಬಗಳು ಉರುಳಿ ಜನಜೀವನ ಅಸ್ತವ್ಯಸ್ತ

Published

on

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಭೀಕರ ಮಳೆಗೆ ಇಡೀ ಜಿಲ್ಲಾ ಕೇಂದ್ರ ತತ್ತರಿಸಿ ಹೋಗಿದೆ. ವರುಣನ ಅಬ್ಬರಕ್ಕೆ ನಗರದಾದ್ಯಂತ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದ್ದು, ಸಾರ್ವಜನಿಕರ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಭಾರೀ ಗಾಳಿಯ ರಭಸಕ್ಕೆ ನಗರದ ಪ್ರಮುಖ ರಸ್ತೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಸಾಲು ಸಾಲು ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿವೆ. ವಿಶೇಷವಾಗಿ ಹೊಸಮನೆ ಸರ್ಕಲ್ ಹಾಗೂ ಕೋರ್ಟ್ ಮುಂಭಾಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದರೆ, ಕೋಟೆ ಬಡಾವಣೆಯಲ್ಲಿ ಹಳೆಯದಾದ ದೊಡ್ಡ ಮರಗಳು ಧರೆಗುರುಳಿವೆ. ಗಾಳಿಯ ತೀವ್ರತೆಗೆ ಕೆಲವು ಮನೆಗಳ ಮೇಲ್ಪಾವಣಿಯ ಹೆಂಚುಗಳು ಹಾರಿಹೋಗಿದ್ದು, ಐಬಿ ಮುಂಭಾಗದ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ನಗರದಾದ್ಯಂತ ವ್ಯಾಪಕವಾಗಿ ಮರ ಮತ್ತು ಕಂಬಗಳು ಮುರಿದು ಬಿದ್ದಿರುವ ಕಾರಣ ಚಿಕ್ಕಮಗಳೂರು ನಗರದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಕತ್ತಲೆ ಆವರಿಸಿದೆ. ಪ್ರಸ್ತುತ ಮೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿರುವ ಮರ ಹಾಗೂ ಕಂಬಗಳನ್ನು ಯುದ್ಧೋಪಾದಿಯಲ್ಲಿ ತೆರವುಗೊಳಿಸುತ್ತಿದ್ದಾರೆ. ಸದ್ಯ ನಗರದಲ್ಲಿ ಸಂಚಾರ ಸುಗಮಗೊಳಿಸಲು ಮತ್ತು ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ತೀವ್ರ ಕಾರ್ಯಾಚರಣೆ ಮುಂದುವರಿದಿದೆ.

Continue Reading

Chikmagalur

ಜಯಪುರದಲ್ಲಿ ಬಕ್ರೀದ್ ಹಬ್ಬ ಸಂಭ್ರಮದಿಂದ ಆಚರಣೆ

Published

on

ವರದಿ : ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.

ಜಯಪುರ: ತ್ಯಾಗ, ಬಲಿದಾನ ಹಾಗೂ ಸಹೋದರತ್ವದ ಸಂಕೇತವಾದ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಜಯಪುರ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಗುರುವಾರ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ನಡೆದ ವಿಶೇಷ ಈದ್ ನಮಾಝ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಿ ದೇಶದ ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು. ಪ್ರಾರ್ಥನೆಗೆ ಮಸೀದಿಯ ಧರ್ಮಗುರು ಬಹು ಮುನೀರ್ ಸಖಾಫಿ ಉಳ್ಳಾಲ ನೇತೃತ್ವ ವಹಿಸಿ, ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹೋದರತ್ವ ಮತ್ತು ಸೌಹಾರ್ದತೆ ಬೆಳೆಸಿಕೊಳ್ಳುವ ಅಗತ್ಯವನ್ನು ತಮ್ಮ ಸಂದೇಶದಲ್ಲಿ ತಿಳಿಸಿದರು.


ಇಸ್ಲಾಂ ಧರ್ಮವು ಶಾಂತಿ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತದೆ ಎಂದು ಅವರು ಹೇಳಿದರು. ಎಲ್ಲ ಸಮುದಾಯದ ಜನರು ಪರಸ್ಪರ ಗೌರವ, ಸಹಕಾರ ಮತ್ತು ಸೌಹಾರ್ದತೆಯಿಂದ ಬದುಕುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ನಮಾಝ್ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಭಕ್ತರು ಬಕ್ರೀದ್ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ನಾಸೀರ್ ಹುಸೇನ್ ಬಿ ಬಿ, ಪ್ರಧಾನ ಕಾರ್ಯದರ್ಶಿಗಳಾದ ಖಾದರ್, ಉಪಾಧ್ಯಕ್ಷರಾದ ಮಹಮ್ಮದ್, ಪತ್ರಿಕಾ ವಿತರಕರಾದ ಎಂ ಅಬ್ದುಲ್ ಲತೀಫ್, ಸಮಿತಿಯ ಸದಸ್ಯರು ಹಾಗೂ ಗಣ್ಯರು, ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

 

Continue Reading

Chikmagalur

ತೋಟದ ಗೋಡೋನ್‌ನಿಂದ ₹2.5 ಲಕ್ಷ ಮೌಲ್ಯದ 7 ಅಡಿಕೆ ಮೂಟೆ ಕಳ್ಳತನ

Published

on

ಎನ್.ಆ‌ರ್.ಪುರ: ತೋಟದ ಗೋಡೋನ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಕ್ಕಣಕ್ಕಿಯ ಸರ್ವೆ ನಂ 224 ರ ತೋಟದ ಮಾಲೀಕರಾದ ಕೆ. ಪ್ರಸಾದ್ ಮೂರ್ತಿ ಅವರು ಪ್ರತಿವರ್ಷದಂತೆ ರೈತರಿಂದ ಹಸಿ ಅಡಿಕೆ ಖರೀದಿಸಿ, ಸಂಸ್ಕರಿಸಿ ಗೋಡೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಏಪ್ರಿಲ್ 1 ರಂದು ಗೋಡೋನ್ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು.

ಆದರೆ ಏಪ್ರಿಲ್ 3 ರಂದು ಸಂಜೆ ಬಾಗಿಲು ತೆಗೆದು ನೋಡಿದಾಗ ಗೋಡೋನ್‌ನ ಮೇಲ್ಬಾಗದ ಹೆಂಚುಗಳನ್ನು ತೆಗೆದಿರುವುದು ಪತ್ತೆಯಾಗಿದೆ. ಒಟ್ಟು 149 ಮೂಟೆಗಳಲ್ಲಿ 7 ಅಡಿಕೆ ಮೂಟೆಗಳು ನಾಪತ್ತೆಯಾಗಿದ್ದು, ಕಳ್ಳರು ಹೆಂಚು ತೆಗೆದು ಒಳನುಗ್ಗಿ ಮುಂಭಾಗದ ಡೋರ್ ಮೂಲಕ ಮೂಟೆಗಳನ್ನು ಸಾಗಿಸಿರುವುದು ತಿಳಿದುಬಂದಿದೆ.

ಕಳ್ಳತನವಾದ 70 ಕೆಜಿಯ 7 ಮೂಟೆಗಳ ಅಂದಾಜು ಮೌಲ್ಯ 2,50,000 ರೂಪಾಯಿಗಳಾಗಿದ್ದು, ವೈಯಕ್ತಿಕ ಕಾರಣಗಳಿಂದ ತಡವಾಗಿ ಪ್ರಸಾದ್ ಮೂರ್ತಿ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೂರು ಗ್ರಾಮದ ಜಕ್ಕಣಕ್ಕಿಯಲ್ಲಿ ತೋಟದ ಗೋಡೋನ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಜಕ್ಕಣಕ್ಕಿಯ ಸರ್ವೆ ನಂ 224 ರ ತೋಟದ ಮಾಲೀಕರಾದ ಕೆ. ಪ್ರಸಾದ್ ಮೂರ್ತಿ ಅವರು ಪ್ರತಿವರ್ಷದಂತೆ ರೈತರಿಂದ ಹಸಿ ಅಡಿಕೆ ಖರೀದಿಸಿ, ಸಂಸ್ಕರಿಸಿ ಗೋಡೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಏಪ್ರಿಲ್ 1 ರಂದು ಗೋಡೋನ್ ಸ್ವಚ್ಛಗೊಳಿಸಿ ಬೀಗ ಹಾಕಲಾಗಿತ್ತು.

ಆದರೆ ಏಪ್ರಿಲ್ 3 ರಂದು ಸಂಜೆ ಬಾಗಿಲು ತೆಗೆದು ನೋಡಿದಾಗ ಗೋಡೋನ್‌ನ ಮೇಲ್ಬಾಗದ ಹೆಂಚುಗಳನ್ನು ತೆಗೆದಿರುವುದು ಪತ್ತೆಯಾಗಿದೆ. ಒಟ್ಟು 149 ಮೂಟೆಗಳಲ್ಲಿ 7 ಅಡಿಕೆ ಮೂಟೆಗಳು ನಾಪತ್ತೆಯಾಗಿದ್ದು, ಕಳ್ಳರು ಹೆಂಚು ತೆಗೆದು ಒಳನುಗ್ಗಿ ಮುಂಭಾಗದ ಡೋರ್ ಮೂಲಕ ಮೂಟೆಗಳನ್ನು ಸಾಗಿಸಿರುವುದು ತಿಳಿದುಬಂದಿದೆ.

ಕಳ್ಳತನವಾದ 70 ಕೆಜಿಯ 7 ಮೂಟೆಗಳ ಅಂದಾಜು ಮೌಲ್ಯ 2,50,000 ರೂಪಾಯಿಗಳಾಗಿದ್ದು, ವೈಯಕ್ತಿಕ ಕಾರಣಗಳಿಂದ ತಡವಾಗಿ ಪ್ರಸಾದ್ ಮೂರ್ತಿ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

Continue Reading

Trending

error: Content is protected !!