Kodagu
ಡಿ.11ಕ್ಕೆ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಲೋಕಾರ್ಪಣೆ
ಪೊನ್ನಂಪೇಟೆ: ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಮಾತ್ರ ಸೀಮಿತಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ಇದೇ ತಿಂಗಳ 11ರಂದು ಗುರುವಾರ ಉದ್ಘಾಟನೆಗೊಳ್ಳಲಿದೆ ಎಂದು ಅಕಾಡೆಮಿ ಅಧ್ಯಕ್ಷ ಆಲೀರ ರಶೀದ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಯೊಂದಕ್ಕೆ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸುವ ಮೂಲಕ ಕೆ.ಎಂ.ಎಸ್.ಎ.ಯನ್ನು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಈ ಕುರಿತು ವಿರಾಜಪೇಟೆಯಲ್ಲಿ ನಡೆದ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅಕಾಡೆಮಿಯನ್ನು ಮಾದರಿ ಕ್ರೀಡಾ ಸಂಘಟನೆಯಾಗಿ ಮುನ್ನೆಡೆಸುವ ಉದ್ದೇಶದಿಂದಾಗಿ ಇದನ್ನು ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆ.ಎಂ.ಎಸ್.ಎ. ಪೂರ್ಣರೂಪದ ಕ್ರೀಡಾ ಸಂಸ್ಥೆಯಾಗಿರುವುದರಿಂದ ಇದನ್ನು ಸಾಮಾನ್ಯ ರೀತಿಯಲ್ಲಿ ಉದ್ಘಾಟಿಸುವ ಬದಲು ಬೇರೆ ಬೇರೆ ಕಾರಣಗಳಿಂದ ಕ್ರೀಡಾ ಪರಿಕರಗಳ ಕೊರತೆ ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸುವುದರ ಮೂಲಕ ಅಕಾಡೆಮಿಯನ್ನು ಅರ್ಥಪೂರ್ಣವಾಗಿ ಉದ್ಘಾಟಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಶೀದ್ ಅವರು ಮಾಹಿತಿ ನೀಡಿದರು.

ಸಭೆಯಲ್ಲಿದ್ದ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೀತಲತಂಡ ಇಸ್ಮಾಯಿಲ್ ಮಾತನಾಡಿ, ಅಂದು ಬೆಳಿಗ್ಗೆ 10:00 ಗಂಟೆಗೆ ಅಕಾಡೆಮಿ ಅಧ್ಯಕ್ಷ ಆಲೀರ ರಶೀದ್ ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಕ್ಕಬ್ಬೆ ಗ್ರಾ. ಪಂ. ಅಧ್ಯಕ್ಷರಾದ ಶಿಲ್ಪಾ ಲೋಕೇಶ್, ಸದಸ್ಯರಾದ ಕಲಿಯಂಡ ಸಂಪನ್ ಅಯ್ಯಪ್ಪ, ಹೊದ್ದೂರು ಗ್ರಾ. ಪಂ. ಅಧ್ಯಕ್ಷರಾದ ಹೆಚ್. ಎ. ಹಂಸ, ಜಿಲ್ಲಾ ಕೆ. ಡಿ. ಪಿ. ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಅಕಾಡೆಮಿಯ ಉಪಾಧ್ಯಕ್ಷರಾದ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಕ್ರೀಡಾ ಸಂಚಾಲಕರಾದ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ), ಜಂಟಿ ಕಾರ್ಯದರ್ಶಿ ಕಣ್ಣಪ್ಪಣೆ ವೈ. ಅಶ್ರಫ್, ನಿರ್ದೇಶಕರಾದ ಆಲೀರ ಎ. ಹುಸೈನ್, ಪುಂಜೆರ ಹೆಚ್. ಅಬ್ದುಲ್ಲ, ಕುಪ್ಪೋಡಂಡ ಮಹಮ್ಮದ್, ಮಂದಮಾಡ ರಫೀಕ್ (ಮುನ್ನ) ಅಕ್ಕಳತಂಡ ಎ. ಶಫೀಕ್ ಮತ್ತು ಪರವಂಡ ಎ. ಸಿರಾಜುದ್ದೀನ್ ಉಪಸ್ಥಿತರಿದ್ದರು.
Kodagu
ಕೆಎನ್‌ಎಸ್‌ಎಸ್ ಗೋಣಿಕೊಪ್ಪ ಘಟಕದ ಅಧ್ಯಕ್ಷರಾಗಿ ವಕೀಲ ಸಂಜೀವ್ ಅವಿರೋಧ ಆಯ್ಕೆ
ಪೊನ್ನಂಪೇಟೆ : ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ (ಕೆಎನ್‌ಎಸ್‌ಎಸ್) ಗೋಣಿಕೊಪ್ಪ ಘಟಕದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲ ಸಂಜೀವ್ ಅವರು ಅವಿರೋಧವಾಗಿ ಆಯ್ಕೆಯಾದರು.
ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ವೇಣುಗೋಪಾಲ್ ಮೆನನ್ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದಲ್ಲಿ ನೂರಕ್ಕೂ ಹೆಚ್ಚು ಸದಸ್ಯರಿದ್ದು, ನಾಯರ್ ಸಮುದಾಯದ ಸಾಂಪ್ರದಾಯಿಕ ಉಡುಗೆ-ತೊಡುಗೆ, ಆಚರಣೆಗಳು ಹಾಗೂ ಹಬ್ಬ-ಹರಿದಿನಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸದಸ್ಯರ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಲು ಸನ್ಮಾನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎನ್‌ಎಸ್‌ಎಸ್ ಮೈಸೂರು ವಿಭಾಗದ ನಿರ್ದೇಶಕ ಶಿವಕೃಷ್ಣ ಹಾಗೂ ಕಾರ್ಯದರ್ಶಿ ರಾಜೀಶ್ ಪಲಕ್ಕಲ್ ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.ಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉತ್ತಮ್, ಕಾರ್ಯದರ್ಶಿಯಾಗಿ ಅಜಿತ್, ಜಂಟಿ ಕಾರ್ಯದರ್ಶಿಯಾಗಿ ಉಣ್ಣಿಕೃಷ್ಣ, ಖಜಾಂಚಿಯಾಗಿ ಭಾಸ್ಕರನ್, ಸಹ ಖಜಾಂಚಿಯಾಗಿ ವಿಜಯ್ ಕುಮಾರ್ ಹಾಗೂ ಸಲಹೆಗಾರರಾಗಿ ವೇಣುಗೋಪಾಲ್ ಮೆನನ್ ಮತ್ತು ಎನ್.ಜಿ. ಭರತ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ ನಾಯರ್, ಸಿ.ಕೆ. ವೇಣುಗೋಪಾಲ್, ರಾಧಾಕೃಷ್ಣನ್, ಸುರೇಶ್ ಬಾಬು, ಶಶಿಕುಮಾರ್, ರಾಮಕೃಷ್ಣ, ಸುಬ್ರಮಣಿ, ವಿನೋದ್ ಕುಮಾರ್, ಚಂದ್ರನ್, ಸರಳ ಮಣಿಲಾಲ್ ಹಾಗೂ ಗೀತಾ ಜಯಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕೆಎನ್‌ಎಸ್‌ಎಸ್ ಮಹಿಳಾ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷರಾಗಿ ಜಯಶ್ರೀ ಸಂಜೀವ್, ಉಪಾಧ್ಯಕ್ಷರಾಗಿ ವಿಮಲಾ ಶ್ರೀಧರನ್, ಕಾರ್ಯದರ್ಶಿಯಾಗಿ ಲಿನೀಷ್ ಉಣ್ಣಿಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ವಿನ್ಯಾ ವೇಣುಗೋಪಾಲ್, ಖಜಾಂಚಿಯಾಗಿ ಗೀತಾ ವಿಜಯ್ ಕುಮಾರ್ ಹಾಗೂ ಪದಾಧಿಕಾರಿಗಳಾಗಿ ಕಾರ್ತಿಯಾಯಿನಿ ಭಾಸ್ಕರ್, ಪ್ರಸೀತಾ ಅಜಿತ್, ಮೇಘ ಉತ್ತಮ್, ನಿಶಾ ಚಂದ್ರನ್, ಲೀನಾ ಲೋಹಿಕ್ಷನ್, ಪ್ರಿಯ ಚಂದ್ರನ್, ದೀಪ ಸುರೇಂದ್ರನ್, ಚಂದ್ರವತಿ ರಾಧಾಕೃಷ್ಣನ್, ಜ್ಯೋತಿ ಮೋಹನ್ ಮತ್ತು ಜಯ ಶಶಿಕುಮಾರ್, ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು.
Kodagu
ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆ
ಮಡಿಕೇರಿ : ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಸಮಿತಿಯ ನಾಯಕರುಗಳು ಹಾಗೂ ಬ್ಲಾಕ್ ಅಧ್ಯಕ್ಷರುಗಳೊಂದಿಗೆ ಚರ್ಚಿಸಿ ಫ್ಯಾನ್ಸಿ ಪಾರ್ವತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಿ.ಆರ್.ಪುಷ್ಪಲತಾ ಅವರು ತಿಳಿಸಿದ್ದಾರೆ.
ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷೆ ಜಿ.ಆರ್.ಪುಷ್ಪಲತಾ, ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ನಾಪೋಕ್ಲು ಬ್ಲಾಕ್ ಕಾರ್ಯಾಧ್ಯಕ್ಷ ಶೌಕತ್ ಆಲಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ಮತ್ತಿತರ ಪ್ರಮುಖರು ಫ್ಯಾನ್ಸಿ ಪಾರ್ವತಿ ಅವರಿಗೆ ಆದೇಶ ಪತ್ರ ನೀಡಿದರು.

ಮಹಿಳಾ ಕಾಂಗ್ರೆಸ್ಸಿನ ವಿವಿಧ ಹುದ್ದೆಗಳಲ್ಲಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಫ್ಯಾನ್ಸಿ ಪಾರ್ವತಿ ಅವರು ಪ್ರಸ್ತುತ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಮಡಿಕೇರಿ ತಾಲ್ಲೂಕು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಲಿ ಎಂದು ಪ್ರಮುಖರು ಶುಭ ಹಾರೈಸಿದರು.
Kodagu
ವಿಧ್ಯಾರ್ಥಿಗಳ ಭವಿಷ್ಯಕ್ಕೆ ಬಿಜೆಪಿ ಮಾರಕವಾಗಿದೆ : ಎ.ಎಸ್.ಪೊನ್ನಣ್ಣ ಆತಂಕ
ವಿರಾಜಪೇಟೆ : ಪ್ರಸ್ತುತ ಸನ್ನಿವೇಶದಲ್ಲಿ ಮುಂದಿನ ಪ್ರಜೆಗಳಾಗಬೇಕಿರುವ ವಿಧ್ಯಾರ್ಥಿಗಳ ಭವಿಷ್ಯಕ್ಕೆ ಕೇಂದ್ರದ ಬಿಜೆಪಿ ಮಾರಕವಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಖಂಡಿಸಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ 25 ಲಕ್ಷ ವಿಧ್ಯಾರ್ಥಿಗಳು ಭಾದಿತರಾಗಿದ್ದಾರೆ, m20 ಕ್ಕೂ ಹೆಚ್ಚು ಹದಿಹರೆಯದ ವಿಧ್ಯಾರ್ಥಿಗಳು ಸಾವನಪ್ಪಿದ್ದಾರೆ.
ಆದರೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರ ಏನೂ ಆಗಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೇಶದ ಭವಿಷ್ಯವನ್ನು ಕರಾಳತೆಗೆ ತಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆ ಎಂಬುದು ವ್ಯಾಪಾರೀಕರಣವಾಗಿದೆ.ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಪ್ರಭಾವಶಾಲಿ ವ್ಯಕ್ತಿಗಳು ಕೋಚಿಂಗ್ ಸೆಂಟರ್ ಎಂದು ಪ್ರತಿವರ್ಷ ಲಕ್ಷಾಂತರ ವಿಧ್ಯಾರ್ಥಿಗಳಿಂದ ಕೋಟಿ,ಕೋಟಿ ಹಣ ಲೂಟಿ ಮಾಡುವ ಧಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ನವರು ಮಾತನಾಡಿ,ಈ ದೇಶದ ಮಕ್ಕಳ ಬಗ್ಗೆ ಕಾಳಜಿ ಇಲ್ಲದ ಪ್ರಧಾನಿಯಾಗಲಿ ,ಕೇಂದ್ರ ಸರ್ಕಾರವಾಗಲಿ,
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಿ.ಜೆ.ಪಿ ವಿರುದ್ದ,ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನ ಮಂತ್ರಿಗಳು,ಕೇಂದ್ರ ಗೃಹಸಚಿವರು ಮತ್ತು ಕೇಂದ್ರ ಶಿಕ್ಷಣ ಸಚಿವರ ವಿರುದ್ದ ಧಿಕ್ಕಾರ ಕೂಗಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್,ಕೆ.ಪಿ.ಸಿ.ಸಿ ಜಿಲ್ಲಾ ವಕ್ತಾರ ತೆನ್ನಿರ ಮೈನಾ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಹನೀಫ್ ,ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಆಧ್ಯಕ್ಷರಾದ ಕೊಳ್ಳಿಮಾಡ ಪ್ರಶಾಂತ್,ಪ್ರಚಾರ ಸಮಿತಿ ಅಧ್ಯಕ್ಷರಾದ ಟಾಟು ಮೊಣ್ಣಪ್ಪ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಂಕಜ,ಬಾನಂಡ ಪ್ರಥ್ಯು,ಪೆಮ್ಮಂಡ ಕೆ.ಪೊನ್ನಪ್ಪ,ಕುಶಾಲಪ್ಪ,ಗೋಣಿಕೊಪ್ಪ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್,ಬಗರ್ ಹುಕುಂ ಸಮಿತಿ ಅಧ್ಯಕ್ಷರಾದ ಲಾಲ ಅಪ್ಪಣ್ಣ ಪ್ರಮುಖರಾದ ಆಶಾ ಪೂಣಚ್ಚ,ಎ.ಜೆ.ಬಾಬು,ವಿಲ್ಸನ್, ಕೋಳೆರ ಭಾರತಿ ಸೇರಿದಂತೆ ವಿವಿಧ ಘಟಕಗಳು,ಡಿಸಿಸಿ ಹಾಗೂ ಬ್ಲಾಕ್ ಸಮಿತಿ ಪ್ರಮುಖರು, ವಲಯ ಕಾಂಗ್ರೆಸ್ ಅಧ್ಯಕ್ಷರು,ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
-
Mandya17 hours agoಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ಯುವಜನತೆಯನ್ನು ರಕ್ಷಿಸಲು ಸಮನ್ವಯದ ಕ್ರಮ ಅಗತ್ಯ: ನ್ಯಾ.ಸುಬ್ರಮಣ್ಯ ಜೆ. ಎನ್
-
Mandya14 hours agoತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಆದೇಶ : ಮಂಡ್ಯದಲ್ಲಿ ಪ್ರತಿಭಟನೆ
-
Chamarajanagar10 hours agoಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ : ಕೋಟಿ ಒಡೆಯ ಮಾದಪ್ಪ 3.37 ಕೋಟಿ ಸಂಗ್ರಹ
-
Kodagu14 hours agoನಾಪೊಕ್ಲು ಬ್ಲಾಕ್ ವ್ಯಾಪ್ತಿಯ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರ ನೇಮಕ
-
Chamarajanagar9 hours agoಮಹಾಂತಸ್ವಾಮೀಜಿ ತ್ಯಾಗದಿಂದ ಸಂಸ್ಥೆ ಬೆಳವಣಿಗೆ: ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ
-
Mysore15 hours ago“ಅಕ್ಷರ, ಆರೋಗ್ಯ ರಾಜಕಾರಣಿಗಳ ಕೈಯಲ್ಲಿ; ಕೆಪಿಎಸ್ಸಿ ನೇಮಕಾತಿಯೂ ಅಕ್ರಮ” : ಎಚ್. ವಿಶ್ವನಾಥ್ ವಾಗ್ದಾಳಿ
-
Mandya16 hours agoಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಿಸದ ತನಿಖಾಧಿಕಾರಿ ಬದಲಾವಣೆಗೆ ಆಗ್ರಹ : ಸಿ.ಎಂ.ಕೃಷ್ಣ
-
Mysore13 hours agoಆಗಸ್ಟ್ 1ರಂದು ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ – ವಿಜಯೇಂದ್ರ
