Kodagu
ಕೊಡಗು ಜಿಲ್ಲೆಯ ಮಳೆ ವಿವರ
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 3.03 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.18 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1029.25 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 544.75 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.95 ಮಿ.ಮೀ. ಕಳೆದ ವರ್ಷ ಇದೇ ದಿನ 12.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1505.91 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1016 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1073 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 455.11 ಮಿ.ಮೀ. ಮಳೆಯಾಗಿತ್ತು.
ಪೆÇನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.13 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.41 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1014.92 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 378.50 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 10.85 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 841.41 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 460.66 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 711 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 413.45 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 2.80, ನಾಪೋಕ್ಲು 2.20, ಸಂಪಾಜೆ 1, ಭಾಗಮಂಡಲ 1.80, ವಿರಾಜಪೇಟೆ 2, ಹುದಿಕೇರಿ 1.50, ಪೊನ್ನಂಪೇಟೆ 1, ಬಾಳೆಲೆ 2, ಸೋಮವಾರಪೇಟೆ ಕಸಬಾ 1.80, ಶನಿವಾರಸಂತೆ 4.40, ಶಾಂತಳ್ಳಿ 7.20, ಕೊಡ್ಲಿಪೇಟೆ 30, ಕುಶಾಲನಗರ 0.40 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (12-07-2024) ವರದಿ
***************
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2851.30 ಅಡಿಗಳು. ಕಳೆದ ವರ್ಷ ಇದೇ ದಿನ 2840.17 ಅಡಿಗಳು. ಇಂದಿನ ನೀರಿನ ಒಳಹರಿವು 1673 ಕ್ಯುಸೆಕ್, ಕಳೆದ ವರ್ಷ ಇದೇ ದಿನ 946 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್.
Kodagu
ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ
ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ದೇವನೂರು- ಸುಳುಗೋಡು ಗ್ರಾಮದಲ್ಲಿ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಶನಿವಾರ ರಾತ್ರಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಗ್ರಾಮದ ರೈತ ಮುದ್ದಿಯಡ ದಿನು ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಕೊಂದು ಭಾಗಶ ತಿಂದಿದೆ.
ಸ್ಥಳಕ್ಕೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಮತ್ತು ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ಹಾಗೂ ಗಬ್ಬದ ಹಸು ಆಗಿರುವುದರಿಂದ ವಿಶೇಷ ಪ್ರಕರಣದಲ್ಲಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ನಿರ್ದೇಶನ ನೀಡಿದರು ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದರು.
ಇದಲ್ಲದೆ ಸಾಕಾನೆಗಳನ್ನು ಬಳಸಿ ಕಾಫಿ ಫಸಲಿಗೆ ನಷ್ಟವಾಗದಂತೆ ರಸ್ತೆಯ ಬದಿಯಲ್ಲಿ ಹುಲಿ ಸೆರೆಗೆ ಅರವಳಿಕೆ ನೀಡಿ ಕಾರ್ಯಚರಣೆ ಕೈಗೊಳ್ಳಲಾಗುವುದು. ಹಾಗೂ ಹುಲಿಯನ್ನು ಸಮೀಪದಲ್ಲಿ ಅರಣ್ಯ ಇರುವುದರಿಂದ ಅರಣ್ಯಕ್ಕೆ ಹುಲಿಯನ್ನು ಅಟ್ಟಲು ಕಾರ್ಯಚರಣೆಯನ್ನು ಸಹ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ, ತಿತಿಮತಿ ಆರ್. ಎಫ್. ಓ. ದೇವರಾಜ್ ಹಾಗು ಸಿಬ್ಬಂದಿಗಳು ಹಾಜರಿದ್ದರು.
Kodagu
ಕ್ರೀಡಾ ಪರಂಪರೆ ಮುಂದುವರೆಸಲು ಶಾಸಕ ಎ.ಎಸ್. ಪೊನ್ನಣ್ಣ ಕರೆ
ಶ್ರೀಮಂಗಲ: ಕ್ರೀಡೆ ಯಾವುದೇ ಇರಲಿ ಅದರಲ್ಲಿ ಕೊಡವ ಜನಾಂಗದಿಂದ ಒಬ್ಬ ಕ್ರೀಡಾಪಟು ಇದ್ದೇ ಇರುತ್ತಾರೆ. ಇದು ಕ್ರೀಡಾ ಸಾಧಕರ ಪರಂಪರೆಯಾಗಿ ಬಂದಿದೆ. ಕ್ರೀಡೆ ಹಾಗೂ ಸೇನೆಯಲ್ಲಿ ಕೊಡವ ಜನಾಂಗದ ಸಾಧನೆಯಿಂದ ಇಂದು ಹೆಸರುಗಳಿಸಿದ್ದೇವೆ, ಈ ಪರಂಪರೆಯನ್ನು ನಾವು ಮುಂದೆಯೂ ಮುಂದುವರೆಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯ ಪಟ್ಟರು.
ಹುದಿಕೇರಿ ಕೊಡವ ಸಮಾಜದಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿರುವ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಹಳ ಸುಂದರವಾದ ಲಾಂಛನ ನೋಡಲು ಸಂತೋಷವಾಗುತ್ತದೆ. ಹ ಗಂಡು ಹೆಣ್ಣು ಎಂಬ ಬೇಧ ಭಾವ ಕೊಡವ ಜನಾಂಗದಲ್ಲಿ ಕಂಡುಬರುವುದಿಲ್ಲ.ಐನ್ ಮನೆ ಸಾಂಸ್ಕೃತಿಕ ಹಿರಿಮೆಯನ್ನು ಮತ್ತು ಹೆಣ್ಣು ಗಂಡು ಇರುವ ಲಾಂಛನ ಬದುಕಿನಲ್ಲಿ ಸಮಪಾಲು ಎಂಬುದನ್ನು ಬಿಂಬಿಸುತ್ತದೆ ಎಂದು ವಿಶ್ಲೇಸಿದರು.
ಚೆಕ್ಕೇರ ಕುಟುಂಬದ ಬಗ್ಗೆ ಹೇಳಲು ಸಾಕಷ್ಟಿದೆ. ಈ ಕುಟುಂಬದ ಹಲವಾರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಚೆಕ್ಕೇರ ಪೂವಯ್ಯ ಮತ್ತು ರಾಜ್ಯ ಸರಕಾರ ವಾದದಲ್ಲಿ ಜಮ್ಮ ಬಾಣೆಯ ಹಿಡುವಳಿದಾರರ ಕೈಯಲ್ಲಿದೆ ಉಳಿಯುವುದ್ದಕ್ಕೆ ಎ. ಕೆ. ಸುಬ್ಬಯ್ಯ ಅವರ ಮೂಲಕ ಚೆಕ್ಕೇರ ಪೂವಯ್ಯ ವಕಾಲತ್ತು ಹಾಕಿ ಗೆಲುವು ಕೊಡಗಿಗೆ ಮಾಡಿದ ದೊಡ್ಡ ಕೊಡುಗೆ ಯಾಗಿದೆ.ಚೆಕ್ಕೇರ ಪೂವಯ್ಯ ಅವರು ಆರಂಭಿಸಿದ ಜಮ್ಮಾ ಬಾಣೆಯ ಹೋರಾಟಕ್ಕೆ ಸಹಕಾರ ನೀಡಿ ಈ ಹಕ್ಕನ್ನು ಕೊಡವ ಜನಾಂಗ ಬಾಂಧವರಿಗೆ ನೀಡಿದರು. ಭಾರತೀಯ ಕಾನೂನು ಸೆಕ್ಷನ್ 29, 59 ನನ್ನ ಜೀವ ಇರುವವರೆಗೆ ಮರೆಯುವುದಿಲ್ಲ. ಹಾಗೆಯೇ ಕಂದಾಯ ಕಾಯ್ದೆ ಸೆಕ್ಸ್ಷನ್ 18 ಮತ್ತು ಸೆಕ್ಸ್ಷನ್2 ರ ಅಡಿಯಲ್ಲಿ ಜಮ್ಮ ಭಾಣೆ ಹಕ್ಕನ್ನು ಜನಾಂಗ ಬಾಂಧವರಿಗೆ ನೀಡುವಲ್ಲಿ ಚೆಕ್ಕೇರ ಕುಟುಂಬವು ಬಹಳ ಶ್ರಮಿಸಿದೆ ಎಂದರು.
2002ರಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಂತರ ಹುದಿಕೇರಿಯಲ್ಲಿ ಇದೀಗ ದೊಡ್ಡ ಮಟ್ಟದ ಕ್ರೀಡಾಕೂಟ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಮೂಲಕ ಆಯೋಜಿಸಲಾಗುತ್ತಿದೆ. ಇಂತಹ ಪಂದ್ಯಾವಳಿ ನಡೆಸುವುದು ಹೆಮ್ಮೆಯ ವಿಚಾರ. ಕಳೆದ ಬಾರಿ ನಡೆದ ಕೊಡವ ಕೌಟುಂಬಿಕ ಹಾಕಿ ಹಬ್ಬ ಕುಂಡಿಯೋಳಂಡ ವಿಶ್ವ ದಾಖಲೆ ಬರೆಯಿತು. ಹಾಗೆಯೇ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟವು ವಿಶ್ವದಾಖಲೆ ಬರೆಯಲಿ ಎಂದು ಆಶಿಸುತ್ತೇನೆ ಎಂದರು.
ಹಲವು ರಾಜಕಾರಣಿಗಳು ಹಿಂದೆ ಒಂದು ಮುಂದೆ ಒಂದು ಮಾತನಾಡುತ್ತಾರೆ. ಆದರೆ ನನ್ನಲ್ಲಿ ನೇರ ನಡೆ ನುಡಿ ಇರುವುದರಿಂದ ಜನರ ಮೆಚ್ಚುಗೆ ಗಳಿಸಿದ್ದೇನೆ. ಮತಗಳಿಸುವ, ಕಳೆದುಕೊಳ್ಳುವ ಲೆಕ್ಕಾಚಾರದಲ್ಲಿ ನೇರ ನಡೆ ನುಡಿ ಬದಲಾಯಿಸಿಲ್ಲ. ಪ್ರಾಮಾಣಿಕತೆ ಇದ್ದಾಗ ಜನಾಂಗ ಉತ್ತಮ ಹೆಸರುಗಳಿಸಲು, ಈ ಮೂಲಕ ಜನಾಂಗ ಬೆಳೆಯಲು ಸಾಧ್ಯಎಂದರು.
ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಅವರು ಮಾತನಾಡಿ ಕೊಡಗಿನಲ್ಲಿ ಈಗ ಕ್ರೀಡಾಕೂಟದ ಸಮಯ. ಕೊಡಗು ಚಿಕ್ಕ ಜಿಲ್ಲೆಯಾದರೂ ಕ್ರೀಡೆ ಹಾಗೂ ಸೇನೆಗೆ ಹಲವಾರು ಪ್ರತಿಭೆಗಳನ್ನು ನೀಡಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ರೀಡೆ ಎನ್ನುವುದು ಆಂತರಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸುತ್ತದೆ. ಇದರಿಂದ ಬೇರೆ ಬೇರೆ ರೀತಿಯ ಕೌಶಲ್ಯವನ್ನು ಅರಿತುಕೊಳ್ಳಬಹುದು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಎದುರಾಳಿ ತಂಡವನ್ನು ಹೇಗೆ ಗೌರವದಿಂದ ನೋಡಬೇಕು. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಗೆಲುವು ಸಾಧಿಸಲು ಸಾಧ್ಯವಿಲ್ಲ. ವಿವೇಕಾನಂದರ ನುಡಿ, ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬಂತೆ ಸಮಸ್ಯೆಗಳನ್ನು ಎದುರಿಸಿ ಮರಳಿ ಪ್ರಯತ್ನವನ್ನು ಮಾಡಿದಾಗ ಕಾನೂನು ಬದ್ಧವಾಗಿ ಆಡಿದಾಗ ಕ್ರೀಡೆಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರು ಮರಳಿ ಮರಳಿ ಯತ್ನವ ಮಾಡಿದಾಗಲೇ ಅವರು ಸಾಧಿಸಲು ಸಾಧ್ಯವಾಗಿದೆ ಎಂದರು.
ಮತ್ತೋರ್ವ ಅತಿಥಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಮಾತನಾಡಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಚೆಕ್ಕೇರ ಕಪ್ ಪಂದ್ಯಾವಳಿ ಅಧ್ಯಕ್ಷ ಚಂದ್ರಪ್ರಕಾಶ್ ಮಾತನಾಡಿ ಕೊಡಗು ಜಿಲ್ಲೆಯ ನೆಲ ಗಾಳಿ ನೀರು ಪರಿಸರ ಮಳೆ ಬೆಳೆಯ ಆರಾಧಕರಾದ ಅತ್ಯಮೂಲ್ಯವಾದ ವಿಶೇಷ ಜನಾಂಗ ಕೊಡವ ಜನಾಂಗ. ನಮ್ಮ ಉಳಿವಿಗಾಗಿ ಇರುವ ಚಿಕ್ಕ ಕೊಡುಗೆ ಈ ಕೌಟುಂಬಿಕ ಕ್ರೀಡಾಕೂಟ. ಅದರಲ್ಲಿಯೂ ಈ ಕ್ರಿಕೆಟ್ ಹಬ್ಬ ವಿಶೇಷವಾದದ್ದು. ಆಟದ ವಿಷಯದಲ್ಲಿ ನಾವು ಸಹೋದರ- ಸಹೋದರಿ, ತಾಯಿ- ತಂದೆ,ಬಂಧು ಬಳಗ ಒಂದಾಗಿ ನಾವೆಲ್ಲ ಒಂದೇ ಕುಟುಂಬ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಗುರಿ ಹೊಂದಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತೇವೆ. ಈ ಕ್ರೀಡಾಕೂಟದ ಮೂಲಕ ಜನಾಂಗದಲ್ಲಿ ಒಗ್ಗಟ್ಟು, ಪ್ರೀತಿ ವಿಶ್ವಾಸ, ಬಾಂದವ್ಯ ಬಲಗೊಳ್ಳಲು ವೇದಿಕೆಯಾಗಲಿ ಎಂದರು.
ಯಾವುದೇ ಒಂದು ವಿಷಯ ಒಳ್ಳೆಯ ರೀತಿಯಲ್ಲಿ ಅದನ್ನು ಬೆಂಬಲಿಸಬೇಕು. ಸಮಾಜದಲ್ಲಿ ಹಲವಾರು ರೀತಿಯ ವಿಷಯಗಳು ಇರುತ್ತವೆ. ಅವುಗಳಲ್ಲಿ ನಮಗೆ ಬೇಕಾದ ಒಳ್ಳೆಯ ವಿಷಯವನ್ನು ಮಾತ್ರ ಪರಿಗಣಿಸಬೇಕು. ಹಾಗೆ ನೋಡಿದರೆ ಪ್ಲಾಸ್ಟಿಕ್ ಎನ್ನುವುದು ಬಹಳ ಕೆಟ್ಟ ವಿಷಯ ಆದರೆ ಅದಿಲ್ಲದೆ ನಮ್ಮ ಜೀವನ ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅದನ್ನು ನಿರ್ವಹಿಸುವುದು ಅಷ್ಟೇ ಮುಖ್ಯವಾಗಿದೆ. ಕ್ರೀಡೆಯನ್ನು ಕೊಡವ ಜನಾಂಗ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಚೆಕ್ಕೇರ ಕಪ್ ಕ್ರಿಕೆಟ್ ಕ್ರೀಡಾಕೂಟ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿದರು.
ಅಂಜಿಗೇರಿ ನಾಡ್ ತಕ್ಕ ಚೆಕ್ಕೇರ ರಾಜೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚೆಕ್ಕೇರ ಕುಟುಂಬ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಚೆಕ್ಕೇರ ಮೊ mಣ್ಣಯ್ಯ ಅವರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿ ಬ್ರಿಟಿಷ್ ಸರ್ಕಾರದಲ್ಲಿ ಎಂಟುವರೆ ವರ್ಷ ಸೆರೆವಾಸ ಅನುಭವಿಸಿದರು.ಚೆಕ್ಕೇರ ಮುತ್ತಣ್ಣ ಅವರು ಗೋಣಿಕೊಪ್ಪ ಕಾವೇರಿ ಕಾಲೇಜು ಹಾಗೂ ವಿರಾಜಪೇಟೆ ಕಾವೇರಿ ಕಾಲೇಜು ಸ್ಥಾಪನೆ ಮಾಡುವ ಮೂಲಕ ಪಿಯುಸಿ ಮೇಲ್ಪಟ್ಟು ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದರು. ಚೆಕ್ಕೇರ ಅಪ್ಪಯ್ಯ ಅವರು ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿ ಕೂರ್ಗ್ ಸ್ಟಾರ್ ಎಂಬ ಬಿರುದು ಪಡೆದರು. ಈ ಸಂಗೀತ ಸಾಹಿತ್ಯದ ಪರಂಪರೆಯನ್ನು ಅವರ ಪುತ್ರ ತ್ಯಾಜರಾಜ್ ಹಾಗೂ ಮೊಮ್ಮಗ ಪಂಚಮ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಸೇನೆಯಲ್ಲಿ ಚೆಕ್ಕೇರ ಹರೀಶ್ ಅವರು ವೀರ ಮರಣ ಅಪ್ಪಿ ಹುತಾತ್ಮರಾಗಿದ್ದಾರೆ ಎಂದು ವಿವರಿಸಿದರು.
ಕ್ರಿಕೆಟ್ ಟೂರ್ನಮೆಂಟಿನ ವೆಬ್ ಸೈಟ್ ಅನ್ನು ಕುಟುಂಬದ ಅಧ್ಯಕ್ಷರಾದ ಕಾಶಿಕಾಳಯ್ಯ ಅವರು ಬಿಡುಗಡೆ ಮಾಡಿದರು. ಕುಟುಂಬದ ದಾಖಲೆಗಳನ್ನು ತಕ್ಕ ರಾಜೇಶ್ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕುಟುಂಬದ ಪಟ್ಟೆದಾರ ಕಟ್ಟಿ ಕುಟ್ಟಣಿ ಹಾಜರಿದ್ದರ.
ಚೆಕ್ಕೇರಕುಟುಂಬದ ವಿಶೇಷತೆ: ತಾತಂಡ ಮತ್ತು ಅಳಮೇಂಗಡ ಕುಟುಂಬದ ನಂತರ ಕೌಟುಂಬಿಕ ಹಾಕಿ ಹಾಗೂ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ಮೂರನೇ ಕುಟುಂಬವಾಗಿ ಚೆಕ್ಕೇರ ಕುಟುಂಬಕ್ಕೆ ಹೆಗ್ಗಳಿಕೆ. ಎಂಟು ಬಾರಿ ಕೌಟುಂಬಿಕ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿರುವ ಚೆಕ್ಕೇರ ಕುಟುಂಬ ತಂಡದಿಂದ ಪಂದ್ಯಾವಳಿ ಆಯೋಜನೆ.2002ರಲ್ಲಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ ನಂತರ ಮತ್ತೆ 13 ವರ್ಷಗಳ ನಂತರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಕುಟುಂಬ. ಪಂದ್ಯಾವಳಿಯಲ್ಲಿ ಸಾಹಿತಿಗಳಿಗೆ ಉತ್ತೇಜನ ನೀಡಲು ಸಾಹಿತ್ಯ ಅಹ್ವಾನ, ನಗದು ಬಹುಮಾನ ನಿಗಧಿ.
ಪುಸ್ತಕ ಬುಡುಗಡೆ: ಇದೇ ವೇದಿಕೆಯಲ್ಲಿ ಪಂಚ ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿದ “ಪಾನೆಲಚಿಲ್ ಪೊನ್ನೆಳ್ತ್” ಪುಸ್ತಕವನ್ನು ಶಾಸಕರು ಬಿಡುಗಡೆ ಮಾಡಿದರು. ಈ ಸಂದರ್ಭ ಅತಿಥಿಗಳಾಗಿ ಉಳುವಂಗಡ ಕಮಲಾಕ್ಷಿ ಅವರು ಮಾತನಾಡಿದರು. ಈ ಸಂಧರ್ಭ ಚೆಕ್ಕೇರ ಪಂಚಮ್ ತ್ಯಾಜರಾಜ್ ಅವರು ರಚಿಸಿದ ಪಂದ್ಯಾವಳಿಯ ಹಾಡು ಬಿಡುಗಡೆ ಆಯಿತು.
ಚೆಕ್ಕೇರ ವಾಣಿ ಸಂಜು ಪ್ರಾರ್ಥಿಸಿ, ಅಧ್ಯಕ್ಷ ಚಂದ್ರ ಪ್ರಕಾಶ್ ಸ್ವಾಗತಿಸಿ,ಚೋಕಿರ ಅನಿತಾ ದೇವಯ್ಯ, ನೇರ್ಪಂಡ ಹರ್ಷ ಮಂದಣ್ಣ ನಿರೂಪಿಸಿ, ಚೆಕ್ಕೇರ ನಿರೂಪ ವಂದಿಸಿದರು.ಸಮಾರಂಭದಲ್ಲಿ ಮಹಿಳೆಯರು ಸೇರಿದಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಜನಾಂಗ ಭಾಂದವರು ಪಾಲ್ಗೊಂಡಿದ್ದರು.
Kodagu
ಮಡಿಕೇರಿಯಲ್ಲಿ ನಾಳೆ ನಡೆಯುವ ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಬೆಂಬಲ
ಮಡಿಕೇರಿ : ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ, ಮತ್ತು ಕೊಡವರ ಉಡುಪು ಹಾಗೂ ಸಂಸ್ಕೃತಿಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ, ಅಮಾಯಕ ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿ ನಾಳೆ ಮಡಿಕೇರಿಯಲ್ಲಿ, ವಿವಿಧ ಸಂಘಟನೆಗಳು ನಡೆಸಲು ಚಿಂತಿಸಿರುವ, ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಘಟನೆ ನಡೆದು ತಿಂಗಳಾದರೂ ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ಕಟ್ಟೆಮಾಡು ಮಹಾದೇವರ ಸಮಿತಿಯ ತೀರ್ಮಾನ ಸಂವಿಧಾನ ವಿರೋದಿಯಾಗಿದ್ದರೂ, ಜಿಲ್ಲಾಧಿಕಾರಿಗಳು ಅದೇ ದಿನ ಸಮಿತಿಯ ವಿರುದ್ದ ಕ್ರಮ ಕೈಗೊಂಡು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕಿತ್ತು. ಆದರೆ ಮತ್ತೆ ಮತ್ತೆ ಸಮಯ ಅವಕಾಶ ನೀಡುವ ಮೂಲಕ ಗೊಂದಲವನ್ನು ಮುಂದುವರೆಸಿರುವ ಜಿಲ್ಲಾಡಳಿತದ ನಿಲುವನ್ನ ಪ್ರಶ್ನಿಸಿ ಮತ್ತು ಕೊಡವರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿದ ವ್ಯಕ್ತಿಯು ಒಂದು ರಾಜಕೀಯ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾದರೂ ಆತನ ವಿರುದ್ಧ ಕ್ರಮ ಕೈಗೊಳ್ಳದ ಆ ಪಕ್ಷದ ನಿಲುವನ್ನು ಖಂಡಿಸಿ, ದಿನಾಂಕ 20ನೇ ಸೋಮವಾರ ಮಡಿಕೇರಿಯಲ್ಲಿ, ವಿವಿಧ ಕೊಡವ ಸಂಘಟನೆಗಳು ನಡೆಸಲು ಚಿಂತಿಸುತ್ತಿರುವ , ಶಾಂತಿಯುತ ಬೃಹತ್ ಜಾತಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ.
ಶಾಂತಿ ಸಹಬಾಳ್ವೆ ಕೊಡವರ ರಕ್ತದಲ್ಲಿಯೇ ಇದ್ದು, ಶತಮಾನಗಳಿಂದ ಸರ್ವ ಜನಾಂಗ ಮತ್ತು ಧರ್ಮಗಳೊಂದಿಗೆ ಶಾಂತಿಯಿಂದ ಬಾಳುತ್ತಿದ್ದು, ಆದರೆ ಸ್ವಾಭಿಮಾನಕ್ಕೆ ದಕ್ಕೆ ಆದರೂ ನಾವೇ ಶಾಂತಿ ಕಾಪಾಡಬೇಕೆಂಬುದು ಬಾಲಿಶತನದ ಹೇಳಿಕೆಯಾಗಿದ್ದು, ನಾವು ಕಾನೂನಿನ ವ್ಯಾಪ್ತಿಯಲ್ಲಿ ಮತ್ತು ನಮ್ಮ ಸಂಸ್ಕೃತಿಯ ಪರವಾಗಿ ಇರುವಾಗ ಅದನ್ನು ಕಾಪಾಡದೇ ಮತ್ತು ಕಾನೂನಿನ ಕ್ರಮ ಕೈಗೊಳ್ಳದೆ ಶಾಂತಿ ಸಭೆ ಅಥವಾ ಮೌನವಾಗಿ ಇರುವುದರಲ್ಲಿ ಅರ್ಥವಿಲ್ಲ. ಮೊದಲು ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಲಿ ನಂತರ ಶಾಂತಿ ತನ್ನಾಲೇ ನೆಲೆಸಲಿದೆ ಎಂದು ಹೇಳಿದೆ.
-
Mysore21 hours ago
ಮೈಸೂರು ಮಹಾರಾಜರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ
-
Sports20 hours ago
ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಸುರೇಶ್ ರೈನಾ
-
Sports19 hours ago
Kho Kho world cup 2025: ಭಾರತ ಮಹಿಳಾ ಹಾಗೂ ಪುರುಷ ತಂಡಗಳೇ ಚಾಂಪಿಯನ್
-
National - International19 hours ago
ಮಹಾ ಕುಂಭಮೇಳ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ವಿಶೇಷ ರೈಲು ವ್ಯವಸ್ಥೆ : ಈ ದಿನ ಮಾತ್ರ!
-
Mysore22 hours ago
ತಾಲೂಕು ಕಚೇರಿಗಳು ಪ್ರಾರಂಭವಾಗಲು ಒತ್ತಾಯ: ಹೊಸೂರು ಕುಮಾರ್
-
Mysore24 hours ago
ವಿಜಯೇಂದ್ರ ಮೊದಲು ಕುರ್ಚಿ ಭದ್ರಪಡಿಸಿಕೊಳ್ಳಲಿ: ಬಿ.ಸುಬ್ರಹ್ಮಣ್ಯ
-
Kodagu23 hours ago
ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ
-
Mysore21 hours ago
ಪ್ಲಾಸ್ಟಿಕ್ ತ್ಯಾಜ್ಯ ಕಾನನ ಪ್ರವೇಶಿಸದಂತೆ 2 ಹಂತದ ತಪಾಸಣೆ: ಈಶ್ವರ ಖಂಡ್ರೆ