Connect with us

Kodagu

ಜಮ್ಮಾಮಲೆ ಹಿಡುವಳಿದಾರರಿಂದ ಸನ್ಮಾನ : ಜಮ್ಮಾಬಾಣೆ, ಜಮ್ಮಾಮಲೆ ಗೊಂದಲ ನಿವಾರಣೆಗೆ ಕ್ರಮ

Published

on

ಜಮ್ಮಾಮಲೆ ಹಿಡುವಳಿದಾರರಿಂದ ಸನ್ಮಾನ : ಜಮ್ಮಾಬಾಣೆ, ಜಮ್ಮಾಮಲೆ ಗೊಂದಲ ನಿವಾರಣೆಗೆ ಕ್ರಮ : ಶಾಸಕ ಪೊನ್ನಣ್ಣ ಭರವಸೆ
==========
ಮಡಿಕೇರಿ : ಕೊಡಗಿನ ಜಮ್ಮಾಮಲೆ ಹಿಡುವಳಿದಾರರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು.
ಕಕ್ಕಬ್ಬೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಜಮ್ಮಾಮಲೆ ಅಸೋಸಿಯೇಷನ್ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಪರವಾದ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗಿನ ಜಮ್ಮಾಬಾಣೆ ಮತ್ತು ಜಮ್ಮಾಮಲೆ ಕುರಿತು ನ್ಯಾಯಾಂಗ ತೀರ್ಪು ಹಾಗೂ ಆಡಳಿತಾತ್ಮಕ ಪರಿಹಾರ ದೊರೆತ್ತಿದ್ದರೂ ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದೆ ಇರುವುದು ವಿಷಾದನೀಯ ಎಂದರು.
ನನಗೆ ಕೆಲವು ದಿನಗಳ ಸಮಯಾವಕಾಶ ನೀಡಿ ಸಹಕರಿಸಿದಲ್ಲಿ ಈ ಎಲ್ಲಾ ಗೊಂದಲಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಪರಿಶ್ರಮ ಪಡುವುದಾಗಿ ಭರವಸೆ ನೀಡಿದರು.
::: ಬೇಡಿಕೆಗಳು :::
ಜಮ್ಮಾಮಲೆ ಅಸೋಸಿಯೇಷನ್ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿತು. ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿಯೇ ಉಳಿಸಿಕೊಂಡು ಪಾವಿತ್ರö್ಯತೆ ಕಾಪಾಡಲು ಕ್ರಮ ಕೈಗೊಳ್ಳಬೇಕು, ಕಡಂಗದಿAದ ಭಾಗಮಂಡಲದವರೆಗೆ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ಕಕ್ಕಬ್ಬೆಯಿಂದ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯಕ್ಕೆ ಹೋಗುವ ರಸ್ತೆಯ ಶೇ.5 ರಷ್ಟು ವಿಸ್ತೀರ್ಣ ಕಾಂಕ್ರಿಟೀಕರಣಗೊಳ್ಳಬೇಕು, ಕಕ್ಕಬ್ಬೆ ಸುತ್ತಮುತ್ತ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಒದಗಿಸಲು ಪ್ರಸ್ತಾವನೆಯಲ್ಲಿರುವ 35 ಕೆ.ವಿ ಸಬ್ ಸ್ಟೇಷನ್ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು, ಕಡಂಗದಿAದ ಭಾಗಮಂಡಲದವರೆಗೆ ಗುಡ್ಡಗಾಡು ಗ್ರಾಮೀಣ ಪ್ರದೇಶ ಇರುವುದರಿಂದ ರಸ್ತೆಗಳನ್ನು ದುರಸ್ತಿಪಡಿಸಬೇಕು, ಕರಡದಿಂದ ಮಲೆತಿರಿಕೆ ದೇವಸ್ಥಾನದ ರಸ್ತೆ ಅಭಿವೃದ್ಧಿ ಪಡಿಸಬೇಕು, ನೂತನ ರಸ್ತೆಗಳನ್ನು ನಿರ್ಮಿಸಬೇಕು, ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮಿತಿ ಮೀರಿದ ಸಂಖ್ಯೆಯ ಪ್ರವಾಸಿಗರ ಆಗಮನದಿಂದ ಕೃಷಿ ಕಾರ್ಮಿಕರ ಹಾಗೂ ಕೃಷಿ ಸಂಬAಧಿತ ಸುಗಮ ಸಂಚಾರಕ್ಕೆ ತೊಡಕಾಗಿರುವುದರಿಂದ ಮುಂದೆ ಸಂಭವಿಸÀಬಹುದಾದ ಅನಾಹುತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಬೃಹತ್ ರೆಸಾರ್ಟ್ ಗಳ ನಿರ್ಮಾಣ ಮತ್ತು ಲೇಔಟ್ ಗಳಿಗಾಗಿ ಗದ್ದೆಗಳನ್ನು ಭೂಪರಿವರ್ತನೆ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಪ್ರಮುಖರು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಪೊನ್ನಣ್ಣ ಅವರು, ಮನವಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿರುವುದರಿಂದ ಈ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು.
ಜಮ್ಮಾಮಲೆ ಅಸೋಸಿಯೇಷನ್ ನ ಅಧ್ಯಕ್ಷ ಎನ್.ಕೆ.ಪೊನ್ನಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉದಿಯಂಡ ಮೋಹನ್ ಪೆಮ್ಮಯ್ಯ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು. ಚೋಯಮಾಡಂಡ ಶಶಿಕಲಾ ಪೂವಯ್ಯ ಪ್ರಾರ್ಥಿಸಿ, ಅಪುö್ಪಮಣಿಯಂಡ ಸನ್ನು ಸೋಮಣ್ಣ ನಿರೂಪಿಸಿದರು. ಮಾತೆ ಕಾವೇರಿಯ ಪ್ರತಿಮೆಯನ್ನು ನೀಡಿ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜಮ್ಮಾಮಲೆ ಅಸೋಸಿಯೇಷನ್ ಸಮಿತಿ ಸದಸ್ಯ ಪೊನ್ನೋಳ್ತಂಡ ಕೆ.ಚಿಣ್ಣಪ್ಪ, ಪೇರಿಯಂಡ ಸಾಬು ಪೂವಯ್ಯ, ಕರಿನೆರವಂಡ ರಮೇಶ್, ಪ್ರಮುಖರಾದ ಕೇಟೋಳಿರ ಗಣಪತಿ, ಅಪ್ಪಾರಂಡ ದೇವಯ್ಯ, ಪಾಂಡAಡ ನರೇಶ್, ಬೊಳಿಯಾಡಿರ ಸಂತು ಸುಬ್ರಮಣಿ, ಕಾರ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಚೋಯಮಾಡಂಡ ಹರೀಶ್, ಪಾರ್ಥ, ತೊತ್ತಿಯಂಡ ಈಶ್ವರ, ಕರ್ತಂಡ ಶೈಲ ಕುಟ್ಟಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕಾಳಚಂಡ ರವಿ, ಬಾಚಮಂಡ ರಾಜ ಪೂವಣ್ಣ ಹಾಗೂ ಜಮ್ಮಾಮಲೆ ಹಿಡುವಳಿದಾರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ನಾಲ್ ನಾಡ್ ಹಾಕಿ ಪಂದ್ಯಾವಳಿ ಮುಂದೂಡಿಕೆ

Published

on

ನಾಪೋಕ್ಲು: ನಾಲ್ ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮೆ 22 ರಿಂದ ನಾಪೋಕ್ಲು ಬಳಿಯ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ನಾಲ್ ನಾಡ್ ವ್ಯಾಪ್ತಿಯ ಅಂತರಗ್ರಾಮ ಹಾಕಿ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ.


ಪಂದ್ಯಾಟಗಳನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕ್ರೀಡಾಭಿಮಾನಿಗಳು ಮತ್ತು ನೋಂದಾಯಿತ ತಂಡಗಳು ಬದಲಿಸಲಾದ ದಿನಾಂಕವನ್ನು ಗಮನಿಸಿ ಸಹಕರಿಸುವಂತೆ ನಾಲ್’ನಾಡ್ ಹಾಕಿ ಕ್ಲಬ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Kodagu

ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಭೇಟೆ

Published

on

ಕೊಡಗಿನಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಭೇಟೆ

539 ಕೆ.ಜಿ ಕಾಡುಕೋಣ ಮಾಂಸ ಸೇರಿ ಓರ್ವನ ಬಂಧನ.

ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ಬಂಧಿತ ಆರೋಪಿ

ಬೆನ್ನಟ್ಟುವ ಸಂಧರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಪರಾರಿ.

ಕೊಡಗು ಜಿಲ್ಲೆ ಮಾದಪುರ ಸಮೀಪದ ನಂದಿಮೊಟ್ಟೆಯಲ್ಲಿ ನಡೆದ ಘಟನೆ‌.

ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ನಡೆದ ಕಾರ್ಯಚರಣೆ.

ತಡರಾತ್ರಿ ಅಪ್ಪಂಗಳದಲ್ಲಿ ವಾಹನವನ್ನ ಬೆನ್ನಟಿ ಹಿಡಿದ ಅರಣ್ಯ ಅಧಿಕಾರಿಗಳು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು .

ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ.

Continue Reading

Kodagu

ಕೊಡಗು ಜಿಲ್ಲೆಯ ಮಳೆ ವಿವರ

Published

on

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 17.21 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 198.24 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 122.89 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.25 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 296.79 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 179.33 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 122.85 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 74.11 ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 176.89 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 76.94 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.30 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 172.65 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 96.66 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 6.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 222 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 187.40 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 5.20, ನಾಪೋಕ್ಲು 9.20, ಸಂಪಾಜೆ 71, ಭಾಗಮಂಡಲ 55.60, ವಿರಾಜಪೇಟೆ ಕಸಬಾ 6.80, ಅಮ್ಮತ್ತಿ 10, ಹುದಿಕೇರಿ 1.30, ಶ್ರೀಮಂಗಲ 0.20, ಪೊನ್ನಂಪೇಟೆ 2, ಬಾಳೆಲೆ 90.10, ಸೋಮವಾರಪೇಟೆ ಕಸಬಾ 6.60, ಶನಿವಾರಸಂತೆ 11.20, ಶಾಂತಳ್ಳಿ 17.40, ಕೊಡ್ಲಿಪೇಟೆ 14, ಕುಶಾಲನಗರ 8.40, ಸುಂಟಿಕೊಪ್ಪ 5 ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ (20-05-2024) ವರದಿ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2823.09 ಅಡಿಗಳು. ಕಳೆದ ವರ್ಷ ಇದೇ ದಿನ 2819.78 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 31.40 ಮಿ.ಮೀ., ಇಂದಿನ ನೀರಿನ ಒಳಹರಿವು 287 ಕ್ಯುಸೆಕ್, ಕಳೆದ ವರ್ಷ ಇದೇ ದಿನ 89 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್.

Continue Reading

Trending

error: Content is protected !!