Connect with us

Kodagu

ಕೊಡಗು: ಹಾಕಿ ಉತ್ಸವದಿಂದ ರಾಷ್ಟ್ರೀಯ ಕ್ರೀಡಾಪಟುಗಳು ಉದಯವಾಗಲಿ

Published

on

ಮಡಿಕೇರಿ: ಇಡೀ ವಿಶ್ವದ ಗಮನ ಸೆಳೆದಿರುವ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಉತ್ಸವ ಈ ಬಾರಿ ’ಮುದ್ದಂಡ ಕಪ್ ಹಾಕಿ ಉತ್ಸವ’ದ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಲಿ ಮತ್ತು ರಾಷ್ಟ್ರೀಯ ಕ್ರೀಡಾಪಟುಗಳು ಉದಯವಾಗಲಿ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆಶಯ ವ್ಯಕ್ತಪಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು, ೧೯೯೭ರಿಂದ ಆರಂಭಗೊಂಡ ಕೊಡವ ಹಾಕಿ ಉತ್ಸವ ಈ ಬಾರಿ ೩೯೬ ತಂಡಗಳ ನೋಂದಣಿ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಕೊಡವ ಹಾಕಿ ಹಬ್ಬದ ಜನಕರಾದ ಪಾಂಡಂಡ ಕುಟ್ಟಪ್ಪ ಅವರು ಕಂಡ ಕನಸು ನನಸಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಮಾ.೨೮ ರಿಂದ ಏ.೨೭ ರವರೆಗೆ ನಡೆಯುವ ಹಾಕಿ ಉತ್ಸವದಲ್ಲಿ ಕ್ರೀಡಾಪಟುಗಳು ಹೆಚ್ಚು ಉತ್ಸಾಹದಿಂದ ಪಾಲ್ಗೊಂಡು ರಾಷ್ಟ್ರೀಯ ಹಾಕಿಯಲ್ಲಿ ಸ್ಥಾನ ಗಳಿಸುವಂತ್ತಾಗಲಿ ಎಂದು ತಿಳಿಸಿದ್ದಾರೆ.

ಹಾಕಿ ಹಬ್ಬದ ಯಶಸ್ಸಿಗೆ ಎಲ್ಲರ ಸಹಕಾರದ ಅಗತ್ಯವಿದೆ, ಕ್ರೀಡಾಭಿಮಾನಿಗಳು ಒಂದು ತಿಂಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಾಕಿಪಟುಗಳಿಗೆ ಪ್ರೋತ್ಸಾಹ ನೀಡಬೇಕು. ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಹಾಕಿ ಉತ್ಸವವನ್ನು ನಡೆಸಲು ಆಯೋಜಕರಾದ ಮುದ್ದಂಡ ಕುಟುಂಬಕ್ಕೆ ಸರ್ವರೂ ಬಲ ತುಂಬಬೇಕು. ರಾಷ್ಟ್ರೀಯ ಮಟ್ಟಕ್ಕೆ ಹಾಕಿ ಪಟುಗಳನ್ನು ಕೊಡುಗೆಯಾಗಿ ನೀಡುತ್ತಿರುವ ಮತ್ತು ಹಾಕಿ ಕ್ರೀಡೆಗೆ ಸ್ಫೂರ್ತಿ ತುಂಬುತ್ತಿರುವ ಕೊಡವ ಹಾಕಿ ಹಬ್ಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿ ಉತ್ತೇಜನ ನೀಡಬೇಕು. ಕೊಡಗಿನ ಯುವ ಸಮೂಹ ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಹಾಕಿ ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ವಿವರಿಸಿರುವ ಕುಕ್ಕೇರ ಜಯ ಚಿಣ್ಣಪ್ಪ ಅವರು, ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಹಾಕಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಕೈಜೋಡಿಸಲಿದೆ ಎಂದು ಹೇಳಿದ್ದಾರೆ.

Continue Reading

Kodagu

ಹುಲಿ ದಾಳಿಗೆ ಕರು ಬಲಿ 

Published

on

 

ಸಿದ್ದಾಪುರ :-

ಹುಲಿ ದಾಳಿಗೆ ಒಂದುವರೆ ವರ್ಷದ ಕರು ಬಲಿಯಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ.

 

ಗ್ರಾಮದ ಸಿ. ಟಿ. ಪೊನ್ನಪ್ಪ ಎಂಬುವರ ಮೇಯಲು ಬಿಟ್ಟ ಕರು ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.ಕಳೆದ ತಿಂಗಳ ಅಂತರದಲ್ಲಿ ಮಾಲ್ದಾರೆ,ಚೆನ್ನಯ್ಯನ ಕೋಟೆ , ಗ್ರಾಮ ವ್ಯಾಪ್ತಿಯಲ್ಲಿ ಐದು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ ಇದರಿಂದ ಸ್ಥಳೀಯರು ಜೀವಭಯದಲ್ಲಿ ಸಂಚಾರ ಮಾಡುವಂತಾಗಿದೆ.

ಹುಲಿಯನ್ನು ಶೀಘ್ರ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

 

ಈ ಭಾಗದಲ್ಲಿ ಹುಲಿಯ ಚಲನವಲನ ಪರಿಶೀಲಿಸಲು ಕ್ಯಾಮರಾ ಅಳವಡಿಸಲಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರೆ

 

ಕಾರ್ಯಾಚರಣೆಯಲ್ಲಿ ಆರ್‌,ಎಫ್‌,ಒ, ಗಂಗಾಧರ್, ನೇತೃತ್ವದಲ್ಲಿ ಡಿಆರ್‌ಎಫ್‌ಒ ಶಶಿ,

ರಾಜೇಶ್, ವಾಚರ್ ಸುನೀಲ್,

ಆರ್‌ಆರ್‌ಟಿ ತಂಡದ ಶಂಕರ್,ಮುತ್ತ, ರಂಜಿತ್, ಭರತ್, ರೋಷನ್, ಪ್ರದೀಪ್, ಇದ್ದರು

Continue Reading

Kodagu

ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ

Published

on

 

ಶ್ರೀಮಂಗಲ : ದಕ್ಷಿಣ ಕೊಡಗಿನ ಅರಣ್ಯದಂಚಿನ ಗ್ರಾಮಗಳಲ್ಲಿ ಜಾನುವರುಗಳನ್ನು ಬಲಿ ಪಡೆಯುತ್ತಿರುವ ಹಾಗೂ ಜನರಿಗೂ ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆ ಹಿಡಿಯಲು ಶನಿವಾರದಿಂದ ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ಆರಂಭವಾಗಲಿದೆ.

ದಕ್ಷಿಣ ಕೊಡಗಿನ ಅರಣ್ಯ ದಂಚಿನ ಗ್ರಾಮಗಳು ಹಾಗೂ ನೆರೆಯ ಗ್ರಾಮಗಳಲ್ಲಿ ಹುಲಿ ನಿರಂತರವಾಗಿ ಜಾನುವಾರುಗಳನ್ನು ಕಬಳಿಸುತ್ತಿದ್ದೂ, ಮಾನವನ ಮೇಲೆಯು ಹುಲಿ ದಾಳಿ ಮಾಡುವ ಆತಂಕದ ಛಾಯೆ ಜನರಲ್ಲಿ ಮೂಡಿಸಿದೆ.

ಈಗಾಗಲೇ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಈಸ್ಟ್ ಮತ್ತು ವೆಸ್ಟ್ ನೆಮ್ಮಲೆ,ಕುರ್ಚಿ, ಬೀರುಗ, ಬಾಡಗರಕೇರಿ,ಪರಕಟಕೇರಿ, ತೆರಾಲು ಗ್ರಾಮಗಲ್ಲಿ ಹುಲಿಯ ಉಪಟಳ ಹೆಚ್ಚಾಗಿದೆ. ಆದ್ದರಿಂದ ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳನ್ನು ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿದ ಬೆನ್ನಲ್ಲೇ ಹುಲಿ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ಗಳು, ಅರವಳಿಕೆ ತಜ್ಞರು ಹಾಗೂ ಪಶುವೈದ್ಯಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿ ಕಾರ್ಯಚರಣೆ ಸಿದ್ಧತೆ ಪರಿಶೀಲಿಸಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮಾಹಿತಿ ನೀಡಿದರು.

ಸ್ಥಳಕ್ಕೆ ಈಗಾಗಲೇ ದುಬಾರೆ ಸಾಕಾನೆ ಶಿಬಿರದಿಂದ ಶ್ರೀರಾಮ ಹಾಗೂ ಗೋಪಿ ಎಂಬ ಎರಡು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿದೆ. ಅಗತ್ಯವಾದರೆ ಕಾರ್ಯಾಚರಣೆಗೆ ಹೆಚ್ಚಿನ ಸಾಕಾನೆಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಶನಿವಾರದಿಂದ ಆರಂಭವಾಗುವ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಚರಣೆ ತಂಡ (ಆರ್. ಆರ್. ಎಫ್) ಕಾಡಾನೆ ಕಾರ್ಯಚರಣೆ ತಂಡ (ಇ. ಎಲ್. ಎಫ್) ಹಾಗೂ ಈ ವ್ಯಾಪ್ತಿಯ ವಿವಿಧ ಅರಣ್ಯ ಇಲಾಖೆಯ ವಿಭಾಗದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹುಲಿ ಗೆಜ್ಜೆ ಗುರುತು ಪತ್ತೆ ಹಚ್ಚಿ ನಡೆಯಲಿರುವ ಕಾರ್ಯಚರಣೆಯಲ್ಲಿ, ಹುಲಿಯ ಇರುವಿಕೆ ಪತ್ತೆಹಚ್ಚಿ ಕಾರ್ಯಚರಣೆ ನಡೆಸಲಾಗುವುದು, ತಾಜಾ ಹೆಜ್ಜೆ ಗುರುತು, ಹುಲಿ ತೆರಲಿರುವ ಜಾಡು ಹಿಡಿದು ಕಾರ್ಯಚಾರಣೆ ಆರಂಭವಾಗಲಿದೆ. ಈ ಹಿಂದೆ ಶ್ರೀಮಂಗಲ ವ್ಯಾಪ್ತಿಯ ನೆಮ್ಮಲೆ, ಬಾಳೆಲೆ ವ್ಯಾಪ್ತಿಯ ದೇವನೂರಿನಲ್ಲಿ ಹುಲಿ ಸೆರೆ ಕಾರ್ಯಚರಣೆಯಲ್ಲಿ ಹುಲಿ ಕಾರ್ಯಚರಣೆ ತಂಡಕ್ಕೆ ಹುಲಿ ಪ್ರತ್ಯೇಕ್ಷವಾಗದ ಹಿನ್ನಲೆ ಹುಲಿಗೆ ಕಾರ್ಯಚರಣೆಯಿಂದ ಅದರ ಇರುವಿಕೆಗೆ ತೊಂದರೆಯಾಗಿ ಹುಲಿಯು ಅರಣ್ಯಕ್ಕೆ ವಾಪಸು ತೆರಳಿತ್ತು. ಈ ಬಾರಿ ಕಾರ್ಯಚರಣೆಯಲ್ಲಿ ಹುಲಿ ಪ್ರತ್ಯೇಕ್ಷವಾದಲ್ಲಿ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿದು ಅದನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.

ಈ ಸಂದರ್ಭ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಮಾವುತರು ಕಾವಾಡಿಗರು ಹಾಜರಿದ್ದರಿರು.

Continue Reading

Kodagu

ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಗೆ ಆಟಗಾರರ ಆಯ್ಕೆ

Published

on

ಸಿದ್ದಾಪುರ : ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಆಶ್ರಯದಲ್ಲಿ ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಪಂದ್ಯಾವಳಿಗೆ 10 ಫ್ರಾಂಚೈಸಿಗಳಿಗೆ 100 ಕ್ಕೂ ಹೆಚ್ಚು ಆಟಗಾರರನ್ನು ಆಯ್ಕೆ ಮಾಡುವ ಹರಾಜು ಪ್ರಕ್ರಿಯೆ ಸಿದ್ದಾಪುರದ ಚರ್ಚೆ ಹಾಲ್ ಸಭಾಂಗಣದಲ್ಲಿ ನಡೆಯಿತು.
ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಗ್ರಾಮದ 100ಕ್ಕೂ ಹೆಚ್ಚು ಕ್ರಿಕೆಟಿಗರು ಹರಾಜಿನಲ್ಲಿ ಭಾಗವಹಿಸಿದ್ದರು, ಪ್ರತಿ ಫ್ರಾಂಚೈಸಿ ತಮ್ಮ ಬಿಡ್ ಹಣದ ಆಧಾರದ ಮೇಲೆ 10 ರಿಂದ 11 ಆಟಗಾರರನ್ನು ಆಯ್ಕೆ ಮಾಡಿದೆ.
ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ ಮೇ 19,20,ರಂದು ಲೀಗ್‌ ಮಾದರಿಯ ಪಂದ್ಯಾಟ ಎರಡು ದಿನ ನಡೆಯಲಿದ್ದು ಎಲ್ಲಾ ಪಂದ್ಯಗಳು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿವೆ ಹಾಗೂ ಕೊನೆಯ ದಿನ ಸಾಧಕರಿಗೆ ಸನ್ಮಾನ, ಹಲವಾರು ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಈ ಸಂದರ್ಭ ವಿರಾಜಪೇಟೆ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ರಜಿತ್ ಕುಮಾರ್ ,ಸಾಮಾಜಿಕ ಕಾರ್ಯಕರ್ತ ಮುಸ್ತಫಾ,
ಸಾಗರ್ ಸಂಘದ ಅಧ್ಯಕ್ಷ ರದೀಶ್, ಪ್ರಮುಖರಾದ ರವೀಂದ್ರ ಭಾವೆ, ಹಮೀದ್,ಜನಪರ ಸಂಘದ ಕಾರ್ಯದರ್ಶಿ ವಿನಿಲ್, ಮಾಜಿ ಅಧ್ಯಕ್ಷ ಅಂಟೋನಿ, ಮಂಜು, ಮುಂತಾದವರು ಹಾಜರಿದ್ದರು.

Continue Reading

Trending

error: Content is protected !!