Connect with us

Kodagu

ಕೊಡಗಿನ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳಿದ ಸಿಎಂ

Published

on

ಕಾಂಗ್ರೆಸ್ ಪಕ್ಷ ದೀರ್ಘ ಇತಿಹಾಸ ಹೊಂದಿರುವ ಪಕ್ಷ, ಸ್ವಾತಂತ್ರ್ಯಕ್ಕೆ ಹೋರಾಡಿದೆ

ಈಗಿರುವ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಿಲ್ಲ

ಬಿಜೆಪಿ ಯಾವತ್ತೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆದ ಪಕ್ಷ ಅಲ್ಲ

ಆರ್ಎಸ್ಎಸ್ ಆಗಲಿ ಜನಸಂಘ ಆಗಲೀ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ

ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ

1925ರಲ್ಲಿ ಆರ್ಎಸ್ಎಸ್ ಪ್ರಾರಂಭ ಆದರೂ ಯಾಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ

ಅವತ್ತು ನಿಮಗೆ ದೇಶ ಭಕ್ತಿ ಇರಲಿಲ್ವಾ ಅಂತ ಬಿಜೆಪಿಯವರನ್ನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಏನ್ ಮಾಡಿದೆ ಕಾಂಗ್ರೆಸ್ ಅಂತ ಕೇಳ್ತೀರ.. ದೇಶದ ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್

ಒಂದೇ ಒಂದು ಅಣೆಕಟ್ಟು ಕಟ್ಟಿದ್ದು ತೋರಿಸಿದ್ರೆ ನಾ ನಿಮ್ಮ ವಿರುದ್ಧ ಮಾತಾಡೋದನ್ನ ನಿಲ್ಲಿಸ್ತೀನಿ

ಹಸಿರು ಕ್ರಾಂತಿ ಮಾಡಿದ್ದು ಕಾಂಗ್ರೆಸ್, ಇದು ಬಿಜೆಪಿಯವರು ಮಾಡಿದ್ರಾ….?

ನಾವು ಬಂದಿದ್ದು ಸಂವಿಧಾನ ಬದಲಾಯಿಸಲು ಅಂತ ಅನಂತ್ ಕುಮಾರ್ ಹೆಗ್ಡೆ ಹೇಳ್ತಾರೆ

ಅವರ ವಿರುದ್ಧ ಬಿಜೆಪಿ ಕ್ರಮ ತೆಗೆದುಕೊಂಡಿಲ್ಲ, ಅಲ್ಲೇ ಎಲ್ಲವೂ ಗೊತ್ತಾಗುತ್ತದೆ

ಈ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಅಂತ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದು

ಇವತ್ತು ದೇಶ ಅಭಿವೃದ್ದಿ ಆಗಿದ್ರೆ ಅದಕ್ಕೆ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ಕಾರಣ

ಕಳೆದ ಬಾರಿ ಸಿಎಂ ಆಗಿದ್ದಾಗ 165 ಭರವಸೆಯಲ್ಲಿ 158 ಭರವಸೆ ಈಡೇರಿಸಿದ್ದೆ

ಅದೇ ಬಿಜೆಪಿಯವರು 2018ರಲ್ಲಿ 600 ಭರವಸೆ ಕೊಟ್ಟು ಕೇವಲ 10% ಭರವಸೆ ಈಡೇರಿಸಿದ್ದಾರೆ

ನರೇಂದ್ರ ಮೋದಿಜಿ ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀನಿ ಅಂದಿದ್ರಲ್ಲಾ ಮಾಡಿದೀರ..?

ಬೆಲೆ ಏರಿಕೆ ತಡೆದು ಅಚ್ಛೇ ದಿನ್ ತರುತ್ತೀವಿ ಅಂದಿದ್ರಿ, ಬೆಲೆ ಏನಾಗಿದೆ ಅಂತ ಗೊತ್ತಾ..?

ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಕಹಾಹೆ ಹೋ…?

ನರೇಂದ್ರ ಮೋದೀಜಿ ಕ್ಯೋ ಇತುನೆ ಜೂಟ್ ಬೋಲಿಯೇ..?

ಪ್ರಧಾನಿ ನರೇಂದ್ರ ಮೋದಿಯವರನ್ನ ಕಿಚಾಯಿಸಿದ ಸಿಎಂ ಸಿದ್ದರಾಮಯ್ಯ

ಹೀಗಾಗಿ ಬಿಜೆಪಿ, ಮೋದಿಯನ್ನ ನಂಬಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ

ನಾನು ಕಂಡ ಶಾಸಕರಲ್ಲಿ ಪೊನ್ನಣ್ಣ ಅತ್ಯಂತ ಕ್ರಿಯಾಶೀಲ ಶಾಸಕ ಅಂತ ಪೊನ್ನಣ್ಣನವರನ್ನ ಹೊಗಳಿದ ಸಿದ್ದು

ನಾವು ಯಾವತ್ತೂ ಜಾತಿ, ಭಾಷೆ ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡಲು ಹೋಗಲ್ಲ

ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ

NDRF ಹಣ ಕೇಂದ್ರದ ಅನುದಾನ ಅಲ್ಲ ನಮಗೆ ಕೊಡಬೇಕಾದ ಹಣ

ಇವತ್ತಿನವರೆಗೂ ಒಂದು ಬಿಡಿಗಾಸೂ ಕೂಡ ಕೇಂದ್ರ ಬಿಡುಗಡೆ ಮಾಡಿಲ್ಲ

ಮಿಸ್ಟರ್ ಪ್ರತಾಪ್ ಸಿಂಹ ಕೊಡಗಿಗೆ ಏನು ಮಾಡಿದೀರ..?

ಸುಳ್ಳು ಹೇಳೋದು, ರೈಲು ಬಿಡೋದು ಬಿಟ್ಟು ನೀನು ಬೇರೆ ಏನು ಮಾಡಿಲ್ಲ

ರೈಲು ಬಿಡೋದ್ರಲ್ಲಿ ಮಾತದರ ಪ್ರತಾಪ ನಿಂದು, ಸುಳ್ಳು ಹೇಳೋದನ್ನ ಬಿಡು

ಕೊಡಗು ಜಿಲ್ಲೆಯ ವಿರಾಜಪೇಟೆ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ವಿರಾಜಪೇಟೆಯ ಸೈಂಟ್ ಆ್ಯನ್ಸ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ

Continue Reading
Click to comment

Leave a Reply

Your email address will not be published. Required fields are marked *

Kodagu

ಅನುಭವ ಮಂಟಪದ ಛಾಯಾಚಿತ್ರಗಳ ಬಿಡುಗಡೆ ಹಾಗೂ ವಿತರಣೆ

Published

on

ಮಡಿಕೇರಿ : ವಿಧಾನ ಪರಿಷತ್ತಿನ ಸಭಾಪತಿಗಳ ಕಚೇರಿಯಲ್ಲಿ ಅನುಭವ ಮಂಟಪದ ಛಾಯಾಚಿತ್ರಗಳ ಬಿಡುಗಡೆ ಹಾಗೂ ಶಾಸಕರುಗಳಿಗೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಸಚಿವರಾದ ಬಸವರಾಜು, ಬೈರತಿ ಸುರೇಶ್ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ವಿಧಾನ ಪರಿಷತ್ತಿನ ಸದಸ್ಯರಾದ ನಾರಾಯಣಸ್ವಾಮಿ ಬೋಜೇಗೌಡ ಉಪಸ್ಥಿತರಿದ್ದರು.

Continue Reading

Kodagu

ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್‌ಗಳಲ್ಲಿ)

Published

on

ಮಡಿಕೇರಿ ಜು.೨೪(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೨.೭೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೦೨.೬೦ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೭೦೭.೧೫ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೯೬೬.೪೧ ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೫೧.೦೫ ಮಿ.ಮೀ. ಕಳೆದ ವರ್ಷ ಇದೇ ದಿನ ೧೭೩.೪೩ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೩೭೩.೭೦ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೬೩೮.೯೪ ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೭.೨೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೮.೯೫ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೬೦೬.೦೫ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೭೫೨.೩೬ ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೩೧.೦೨ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೭೯.೯೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೬೧೦.೧೩ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೮೦೧.೧೭ ಮಿ.ಮೀ. ಮಳೆಯಾಗಿತ್ತು.


ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೯೧.೬೫ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೨೯.೨೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೮೭೨.೮೧ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೧೦೧೬.೨೬ ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೨೨.೬೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೧.೫೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೦೭೩.೧೦ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೬೨೩.೨೫ ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ ೩೫.೨೦, ನಾಪೋಕ್ಲು ೪೬.೪೦, ಸಂಪಾಜೆ ೭೧, ಭಾಗಮಂಡಲ ೫೧.೬೦, ವಿರಾಜಪೇಟೆ ೧೯.೪೦, ಅಮ್ಮತ್ತಿ ೧೫, ಹುದಿಕೇರಿ ೪೦.೯೦, ಶ್ರೀಮಂಗಲ ೫೬, ಪೊನ್ನಂಪೇಟೆ ೧೭.೧೦, ಬಾಳೆಲೆ ೧೦.೦೭, ಸೋಮವಾರಪೇಟೆ ಕಸಬಾ ೮೪, ಶನಿವಾರಸಂತೆ ೫೮, ಶಾಂತಳ್ಳಿ ೧೮೪, ಕೊಡ್ಲಿಪೇಟೆ ೪೦.೬೦, ಕುಶಾಲನಗರ ೯.೨೦, ಸುಂಟಿಕೊಪ್ಪ ೩೬ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (೨೪-೦೭-೨೦೨೪) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೫೬.೨೭ ಅಡಿಗಳು. ಕಳೆದ ವರ್ಷ ಇದೇ ದಿನ ೨೮೫೩.೭೭ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೨೨.೨೦ ಮಿ.ಮೀ., ಕಳೆದ ವರ್ಷ ಇದೇ ದಿನ ೬೨.೪೦ ಮಿ.ಮೀ., ಇಂದಿನ ನೀರಿನ ಒಳಹರಿವು ೯೨೮೮ ಕ್ಯುಸೆಕ್, ಕಳೆದ ವರ್ಷ ಇದೇ ದಿನ ೧೭೯೭೨ ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ ೭೧೦೪ ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ ೨೩೯೩೭ ಕ್ಯುಸೆಕ್.

Continue Reading

Kodagu

ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಮಡಿಕೇರಿ : ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26 ನೇ ಸಾಲಿಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಈಗಾಗಲೇ ಆಹ್ವಾನಿಸಿದ್ದು, ಅರ್ಜಿಯನ್ನು 2024ರ ಸೆಪ್ಟೆಂಬರ್, 16 ರೊಳಗೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊಡಗು ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.


ವಿದ್ಯಾರ್ಥಿಯ ಪಾಲಕರು ಕೊಡಗು ಜಿಲ್ಲೆಯ ನಿವಾಸಿಯಾಗಿದ್ದು, ವಿದ್ಯಾರ್ಥಿಯೂ ಕೂಡಾ ಕೊಡಗು ಜಿಲ್ಲೆಯಲ್ಲೇ ಓದುತ್ತಿರಬೇಕು. ಅಭ್ಯರ್ಥಿ 2013 ರ ಮೇ, 01 ರಿಂದ 2015 ರ ಜುಲೈ, 31 ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 16 ಕೊನೆಯ ದಿನವಾಗಿದೆ. 2025 ರ ಜನವರಿ, 18 ರಂದು ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು https://navodaya.gov.in ಗಳಲ್ಲಿ ಸೂಕ್ತ ವಿವರ ಮತ್ತು ದಾಖಲೆಗಳನ್ನು ಅಪ್‍ಲೋಡ್ ಮಾಡಬಹುದು ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ.

Continue Reading

Trending

error: Content is protected !!