Connect with us

Crime

ನಿಷೇಧಿತ ಮಾದಕ ವಸ್ತು ಮಾರಟ ಮಾಡುತ್ತಿದ್ದವರ ಬಂಧನ

Published

on

ಮಡಿಕೇರಿ : ಮಡಿಕೇರಿ ನಗರ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಮಾದಕ ವಸ್ತುಗಳ ಮಾರಾಟ ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಅ.18 ರಂದು ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಮಾನು ಗೇಟ್ ಜಂಕ್ಷನ್ ಹತ್ತಿರ ನಿಷೇಧಿತ ವಾದಕ ವಸ್ತುಗಳನ್ನು ಸರಬರಾಜು/ಮಾರಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕೇರಳ ರಾಜ್ಯ ಕಾಸರಗೋಡು ಮೂಲದ ಅಮೀರ್.ಟಿ.ಎಂ (28) ಮಹಮ್ಮದ್ ಶಬೀರ್.ಕೆ, (30) ಎಂಬುವವರನ್ನು 20 ಗ್ರಾಂ MDMA ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ವಹಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Crime

ಕಟ್ಟಿನಮನೆ ಬಳಿ ಗಾಳಿ ಮಳೆಯಿಂದ ಮರ ಬಿದ್ದು ಓರ್ವ ಮಹಿಳೆ ಭೀಕರ ದುರ್ಮರಣ..ಮೂವರಿಗೆ ಗಾಯ

Published

on

ನರಸಿಂಹರಾಜಪುರ ತಾಲೂಕಿನ ಕಾನೂರು ಪಂಚಾಯತ್ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಲ್ಲಿ ಪೂಜೆ ಮುಗಿಸಿ ಮನೆಗೆ ತೆರುಳುವ ಸಂದರ್ಭದಲ್ಲಿ ಭಾರಿ ಗಾಳಿಯಿಂದಾಗಿ ಮರ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ.

Continue Reading

Crime

ಬಿಹಾರ : ಮದುವೆ ಮನೆಯಲ್ಲಿ ಪತ್ನಿ ಡಾನ್ಸ್‌ | ಬೇಸರಗೊಂಡು ಪತಿ ಆತ್ಮಹತ್ಯೆ

Published

on

ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬದಾರಿಯಾದಲ್ಲಿ ನಡೆದಿದೆ.
ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌, ರಸೂಲ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್‌ ಹಾಲ್ಟರ್‌ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗೋಪಾಲ್‌ ಸಿಂಗ್‌ ಬೇನತ್‌ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡು ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್‌ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದನು. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ನಡೆದಿದೆ.
ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Continue Reading

Crime

ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ

Published

on

*ಮದುವೆಗೆ ಬಂದ ಮಹಿಳೆ ಸ್ಮಶಾನ ಸೇರಿದರು.

ಸಂಬಂಧಿಕರ ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರು ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅಸು ನೀಗಿರುವ ಘಟನೆ ಇಂದು ಮಧ್ಯಾಹ್ನ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ಕಾಸರಗೋಡುವಿನ ರಾಬಿಯ ಎಂಬುವವರು ಮೃತ ದುರ್ದೈವಿ. 7ನೇ ಹೊಸಕೋಟೆಯಲ್ಲಿರುವ ಇವರ ಸಂಬಂಧಿಯ ವಿವಾಹ ಗದ್ದೆಹಳ್ಳದಲ್ಲಿ ನಡೆಯುತ್ತಿತ್ತು. ಮದುವೆಯಲ್ಲಿ ಪಾಲ್ಗೊಂಡಿದ್ದ ರಾಬಿಯ ರಸ್ತೆ ಬದಿಯಲ್ಲಿ ನಿಂತಿದ್ದರು.

ಈ ಸಂದರ್ಭ ಗಿರಿಯಪ್ಪ ಮನೆ ಗದ್ದೆ ನಿವಾಸಿ ಪೊನ್ನಪ್ಪ ಎಂಬುವವರ ಪುತ್ರ ಶರತ್ ಎಂಬಾತ ವೇಗವಾಗಿ ಚಲಾಯಿಸಿಕೊಂಡು ಬಂದ ಮಾರುತಿ ಕಾರು ಮೂವರು ಮಹಿಳೆಯರಿಗೆ ಡಿಕ್ಕಿಪಡಿಸಿ ಗಾಯಗೊಳಿಸಿದೆ. ಅಲ್ಲಿಯೂ ನಿಯಂತ್ರಣಕ್ಕೆ ಬಾರದ ಕಾರು ಮುಂದಕ್ಕೆ ಚಲಿಸಿ ರಾಬಿಯ ಅವರಿಗೆ ಗುದ್ದಿ ಅವರೊಂದಿಗೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಬಿಯ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ. ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ಇನ್ನುಳಿದ ಮೂವರು ಮಹಿಳೆಯರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

Trending

error: Content is protected !!