Connect with us

Kodagu

ಅರ್ಚಕರ ಮೇಲೆ ಹಲ್ಲೆ : ಕೊಡಗು ಬಿಜೆಪಿ ಖಂಡನೆ

Published

on

ಮಡಿಕೇರಿ: ಕಟ್ಟೆಮಾಡು ಗ್ರಾಮದ ಶ್ರೀಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಕೊಡಗು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅರ್ಚಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಅರ್ಚಕರ ಮನೆಯ ಬಳಿ ತೆರಳಿ ಅರ್ಚಕರು ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳಿಗೆ ಕಾನೂನಿನ ಬಗ್ಗೆ ಭಯವಿಲ್ಲದಾಗಿದೆ. ಹಲ್ಲೆ, ದೌರ್ಜನ್ಯ, ಜನಾಂಗೀಯ ಸಂಘರ್ಷ, ದರೋಡೆ, ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಜನಸಾಮಾನ್ಯರು ಭಯಮುಕ್ತರಾಗಿ ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರವಿ ಕಾಳಪ್ಪ ಆರೋಪಿಸಿದ್ದಾರೆ.

Continue Reading

Kodagu

ಯುರೋಕಿಡ್ಸ್ ಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ

Published

on

ಮಡಿಕೇರಿ : ನಗರದ ಹೊಸ ಬಡಾವಣೆಯಲ್ಲಿರುವ ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಸ್ಕೂಲ್ನಲ್ಲಿ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಯಿತು.


ಭಾತೃತ್ವ ಬೆಸೆಯುವ ಅಣ್ಣತಂಗಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಮಕ್ಕಳಿಗೆ ಆರತಿಯನ್ನು ಬೆಳಗಿ, ತಿಲಕವನ್ನಿಟ್ಟು, ರಾಖಿಯನ್ನು ಕಟ್ಟಲಾಯಿತು. ಶಾಲೆಯ ಪುಟಾಣಿ ಮಕ್ಕಳೆಲ್ಲ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ರಕ್ಷಾ ಬಂಧನದ ಮಹತ್ವವನ್ನು ಶಾಲೆಯ ಪ್ರಾಂಶುಪಾಲರಾದ ರಶ್ಮಿ ದೀಪ ಮಕ್ಕಳಿಗೆ ತಿಳಿಸಿಕೊಟ್ಟರು. ಸಾಂಪ್ರದಾಯದೊಂದಿಗೆ, ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕತೆಯೆಡೆಗೆ ಹೆಜ್ಜೆ ಹಾಕಬೇಕೆಂದು ತಿಳಿ ಹೇಳಿದರು. ಶಾಲೆಯ ಶಿಕ್ಷಕ ವೃಂದದವರು, ಆಡಳಿತ ಮಂಡಳಿ ಪೋಷಕರು ಈ ಸಂದರ್ಭ ಇದ್ದರು.

Continue Reading

Kodagu

ಮನವಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ : ಶಾಸಕ ಪೊನ್ನಣ್ಣ

Published

on

ಗೋಣಿಕೊಪ್ಪ : ಅಂತರರಾಷ್ಟ್ರೀಯ ಆದಿವಾಸಿ ಬುಡಕಟ್ಟು ದಿನಾಚರಣೆಯ ಪ್ರಯುಕ್ತ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಪೊನ್ನಂಪೇಟೆ ತಾಲೂಕಿನ ನಾಣಚಿ ಭಾಗಕ್ಕೆ ಭೇಟಿ ನೀಡಿದರು.

ಹಾಡಿಯ ನಿವಾಸಿಗಳು ನೀಡಿದ ಹಲವು ಬೇಡಿಕೆಗಳಿದ್ದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಬಾಂಧವರಿಗೆ ಶುಭಾಶಯಗಳು ಕೋರಿದ ಶಾಸಕರು ಬಳಿಕ ಮಾತನಾಡಿ, ಸಂವಿಧಾನ ಬದ್ಧವಾಗಿ ತಾವುಗಳು ನೀಡಿರುವ ಮನವಿಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ತಾನು ಪ್ರಯತ್ನಿಸಿ ಈಗಾಗಲೇ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಕಳೆದ ಎರಡು ವರ್ಷದಲ್ಲಿ ಕಲ್ಪಿಸಿದ ಹತ್ತಾರು ಸೌಲಭ್ಯಗಳ ಬಗ್ಗೆ ನೆನಪಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 16ಕ್ಕೂ ಅಧಿಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದನ್ನು ನೆನಪಿಸಿದ ಶಾಸಕರು, ಬಹುತೇಕ ಎಲ್ಲಾ ಆದಿವಾಸಿ-ಬುಡಕಟ್ಟು ಜನಾಂಗದವರು ವಾಸಿಸುವ ಕಡೆ ರಸ್ತೆಗಳನ್ನು, ಕುಡಿಯುವ ನೀರನ್ನು, ಹಕ್ಕು ಪತ್ರಗಳನ್ನು ಒದಗಿಸಿದ್ದನ್ನು ಸ್ಮರಿಸಿದರು.

ಆದಿವಾಸಿ ಮಕ್ಕಳ ಅಭಿವೃದ್ಧಿಗಾಗಿ ಶಾಲೆಯನ್ನು ತೆರೆಯುವುದರೊಂದಿಗೆ, ಚಾಲ್ತಿಯಲ್ಲಿರುವ ಶಾಲೆಯ ಸೌಲಭ್ಯಗಳ ಉನ್ನತೀಕರಣ, ಮಕ್ಕಳಿಗೆ ಶಾಲಾ ಮೈದಾನ, ಕ್ರೀಡಾಪೋತ್ಸಹ ಈ ಹಿಂದೆ ಅಧಿಕಾರದಲ್ಲಿದ್ದ ಯಾರು ನೀಡದೆ ಇದ್ದು ತಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸವಲತ್ತುಗಳನ್ನು ನೀಡಿರುವುದನ್ನು ನೆನಪಿಸಿಕೊಳ್ಳುವಂತೆ ಮನವಿ ಮಾಡಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು, ಆದಿವಾಸಿ-ಬುಡಕಟ್ಟು ಜನಾಂಗದವರ ಏಳಿಗೆಗಾಗಿ ರೂಪಿಸಿದ ಕಾನೂನನ್ನು ನೆನಪಿಸಿಕೊಂಡ ಮಾನ್ಯ ಶಾಸಕರು, ಇಂದು ಎಲ್ಲಾ ಆದಿವಾಸಿ-ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಒದಗಿಸಲು ಈ ಕಾನೂನೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ. ಬಾಡಗ ವಲಯ ಅಧ್ಯಕ್ಷರಾದ ರವಿ, ಪಂಚಾಯಿತಿ ಸದಸ್ಯರಾದ ಬೋಪಣ್ಣ, ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ನಾಲ್ಕೇರಿ ವಲಯ ಅಧ್ಯಕ್ಷರಾದ ಕಟ್ಟಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷರು ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಗೋಣಿಕೊಪ್ಪ ವಲಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಅಪ್ಪಣ್ಣ, ಪಕ್ಷದ ಪ್ರಮುಖರು ಹರೀಶ್, ಬುಡಕಟ್ಟು ಜನಾಂಗದ ಅಧ್ಯಕ್ಷರು, ಸದಸ್ಯರು, ಹಾಡಿ ನಿವಾಸಿಗಳು ,ಐಟಿಡಿಪಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.

Continue Reading

Kodagu

ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಪೊನ್ನಣ್ಣ ಭೇಟಿ 

Published

on

ವಿರಾಜಪೇಟೆ : ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ ತಾಲೂಕಿನ ಪ್ರವಾಸದಲ್ಲಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಳೆ ಹಾನಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿ, ಬೇಗೂರಿಗೆ ಭೇಟಿ ನೀಡಿದ ಶಾಸಕರು ಮೊದಲಿಗೆ ತೀವ್ರ ಮಳೆಯಿಂದ ಹಾನಿಗೀಡಾಗಿ ಕುಸಿರಿದ್ದ ಸೇತುವೆಯ ವೀಕ್ಷಣೆಯನ್ನು ಮಾಡಿದರು. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಇದರ ದುರಸ್ತಿಯ ಬಗ್ಗೆ ಕೂಡಲೇ ವರದಿ ನೀಡುವಂತೆ ಸೂಚಿಸಿದರು.


ಬಳಿಕ ಇದೆ ವ್ಯಾಪ್ತಿಯಲ್ಲಿ ಹಾಳಿಗೀಡಾದ ರಸ್ತೆ ಹಾಗೂ ಇದರಿಂದಾಗಿ ರಸ್ತೆಯು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದ ಶಾಸಕರು, ಇದರ ಬಗ್ಗೆ ವರದಿಯನ್ನು ನೀಡಿ ವೈಜ್ಞಾನಿಕವಾಗಿ ಇದರ ದುರಸ್ತಿ ಕಾರ್ಯಕ್ಕೆ ಯಾವುದೆಲ್ಲ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ಕೆ. ಬಾಡಗ ಪಂಚಾಯತಿ ಸದಸ್ಯರಾದ ಬೋಪಣ್ಣ, ಅಪ್ಪಣ್ಣ, ಪಕ್ಷದ ಪ್ರಮುಖರು,ಸ್ಥಳೀಯರು ಉಪಸ್ಥಿತರಿದ್ದರು.

Continue Reading

Trending

error: Content is protected !!