Connect with us

Mandya

ಹೇಮಾವತಿ ಬಡಾವಣೆಯ ಇ-ಸ್ವತ್ತು ಖಾತೆ ಬದಲಾವಣೆ, ಬಿಲ್ಡಿಂಗ್ ಲೈಸೆನ್ಸ್ ನೀಡುವಿಕೆಗೆ ವಿಳಂಬ

Published

on

ಪುರಸಭೆ ವ್ಯಾಪ್ತಿಯಲ್ಲಿ ಇರುವ ಹೇಮಾವತಿ ಬಡಾವಣೆಯ ಇ-ಸ್ವತ್ತು, ಖಾತೆ ಬದಲಾವಣೆಗೆ ಸಲುವಾಗಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತೆ ಸ್ಥಾಯಿ ಸಮಿತಿ ಅದ್ಯಕ್ಷ ಹೆಚ್ ಆರ್ ಲೋಕೇಶ್ ತಿಳಿಸಿದ್ರು

ಕೃಷ್ಣರಾಜಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಇರುವ ಹೇಮಾವತಿ ಬಡಾವಣೆಯ ಇ-ಸ್ವತ್ತು ಖಾತೆ ಬದಲಾವಣೆ, ಬಿಲ್ಡಿಂಗ್ ಲೈಸೆನ್ಸ್ ನೀಡುವಿಕೆ ಆಗುತ್ತಿರುವ ವಿಳಂಬ, ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣ ಮಾಡುತ್ತಿರುವ ವಾಸದ ಮನೆಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬದಿಂದ ಹೊಸಹೊಳಲು- ಕೆ.ಆರ್.ಪೇಟೆ ಪಟ್ಟಣದ ನಾಗರೀಕರು ತೊಂದರೆಗಳನ್ನು ಅನುಭವಿಸಿದ್ದು ಕೂಡಲೇ ಸರಿಪಡಿಸವುಂತೆ ತಿಳಿಸಿದ್ರು,

ಅಲ್ಲದೆ ಟಿಬಿ ವೃತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಹೊಸಹೊಳಲು ದೇವಾಲಯದ ಆರ್ಚ್ ನಿರ್ಮಾಣಕ್ಕೆ ಬಾಕಿ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹಣ ಬಿಡುಗಡೆ ಮಾಡಿಸುವಂತೆ ಹಾಗೂ ಹೊಸಹೊಳಲು ಚಿಕ್ಕಕೆರೆ ಅಭಿವೃದ್ಧಿ ಕೆಲಸಕ್ಕೆ ಸರ್ಕಾರದಿಂದ ಕಾಮಗಾರಿಗೆ ಹಸಿರು ನಿಶಾನೆ ಕೊಡಿಸಲು ಶಿಫಾರಸ್ಸು ಮಾಡಲು, ಹಾಗೂ ಪಟ್ಟಣದ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆಗೆ ಹೆಚ್ಚಿನ‌ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಆದ ಹೆಚ್.ಆರ್.ಲೋಕೇಶ್, ಹಿರಿಯ ಸದಸ್ಯರು ಆದ ಕೆ.ಸಿ. ಮಂಜುನಾಥ್, ಡಿ. ಪ್ರೇಮಕುಮಾರ್, ಗಿರೀಶ್, ಪ್ರವೀಣ್, ಮಂಜು ಮುಂತಾದವರು ಹಾಜರಿದ್ದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading
Click to comment

Leave a Reply

Your email address will not be published. Required fields are marked *

Mandya

ವೈದ್ಯ ಅಧಿಕಾರಿ ನಟರಾಜ್ ಆತ್ಮಹತ್ಯೆ ಪ್ರಕರಣ – ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ದಾಖಲೆ ಸಮೇತ ಸ್ಪಷ್ಟನೆ.

Published

on

ಮಂಡ್ಯ : ವೈದ್ಯ ಅಧಿಕಾರಿ ನಟರಾಜ್ ಆತ್ಮಹತ್ಯೆ ಪ್ರಕರಣ.
ನಟರಾಜ್ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲಾ.
ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ದಾಖಲೆ ಸಮೇತ ಸ್ಪಷ್ಟನೆ.
ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗ್ತಿದೆ.
ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ.


2-11-23 ರಲ್ಲಿ ನನಗೆ ಹೃದಯಾಘಾತವಾಗಿದೆ ಎಂದು ರಜೆ ಕೇಳಿದ್ದರು ನಂತರ ನಾನು ಅವ್ರಿಗೆ ರಜೆ ನೀಡಿದ್ದೆ.
ಬಳಿಕ 17-11-23 ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗ್ತಿಲ್ಲ ತಿಳಿಸಿದ್ದರು.
ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು.
ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರ ಕೂಡ ನೀಡಿದ್ದಾರೆ.
ನಟರಾಜ್ ಖಿನ್ನತೆಗೆ ಒಳಾಗಾಗಿದ್ದರು.
ಈಗಾಗಲೇ ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.


ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು.
ನನ್ನ ಮೇಲಿನ ಆರೋಪ ಪಿತೂರಿ.
ಇನ್ಮುಂದೆ ನನ್ನ ವಿರುದ್ದ ಯಾರು ಪಿತೂರಿ ಮಾಡ್ತಿದ್ದಾರೆ ಎಂದು ತಿಳಿದುಕೊಙಡು ಎಚ್ಚರಿಕೆ ವಹಿಸ್ತಿನಿ.
ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್ ಗೆ ಯಾವುದೇ ಸಂಬಂಧ ಇಲ್ಲಾ.

Continue Reading

Mandya

ಅಪರಿಚಿತ ವಾಹನ ಡಿಕ್ಕಿ: ಫಿಲ್ಡ್ ಆಫೀಸರ್ ಸ್ಥಳದಲ್ಲೇ ಸಾವು

Published

on

ಮದ್ದೂರು: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫೀಲ್ಡ್‌ಮನ್‌ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡಹೊಸಗಾವಿ ಗ್ರಾಮದ ಬಳಿ ಗುರುವಾರ ನಡೆದಿದೆ.

ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಫೀಲ್ಡ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್(40) ಎಂಬುವರೇ ಅಪಘಾತದಲ್ಲಿ ಮೃತರಾದ ವ್ಯಕ್ತಿಯಾಗಿದ್ದಾರೆ.

ಮಂಡ್ಯ ನಗರದ ಚಾಮುಂಡೇಶ್ವರಿನಗರ ಬಡಾವಣೆಯಲ್ಲಿ ವಾಸವಾಗಿದ್ದ ಮಂಜುನಾಥ್ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ವಾಪಸ್ಸು ಬರುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ ಮಂಜುನಾಥ್ ಅವರಿಗೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Mandya

ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Published

on

ಮಂಡ್ಯ ನಗರದ ಆನೆಕೆರೆ ಬೀದಿಯ ಕಾಳಿಕಾಂಬ ವೃತ್ತದ ಬಳಿಯಿರುವ ಐತಿಹಾಸಿಕ ಕೊಳವಾದ ಗಂಜೇಂದ್ರ ಮೋಕ್ಷ ಕೊಳದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಚೀವರ್ಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಾತನೂರು ಮತ್ತು ರೋಟರಿ ಸಂಸ್ಥೆ ,ಒನ್ ಇಂಡಿಯ ಟಿವಿ ಚಾನೆಲ್ ಹಾಗೂ ಜೈ ಕರ್ನಾಟಕ ಪರಿಷತ್ ಇವರ ಸಹಯೋಗದಲ್ಲಿ ರೋಟರಿ ಅಧ್ಯಕ್ಷೆ ಅನುಪಮ ರವರು,1 ಇಂಡಿಯ ಟಿವಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಇಂಡಿಯಾ ಟಿವಿ ಸಂಸ್ಥಾಪಕರಾದ ಜೈಕುಮಾರ್ ಹಾಗೂ ಜೈ ಕರ್ನಾಟಕ ಪರಿಷತ್ ರಾಜ್ಯಧ್ಯಕ್ಷರಾದ ಬೋರ್ ವೆಲ್ ನಾರಾಯಣ್ ರವರ ನೇತೃತ್ವದಲ್ಲಿ ಕರ್ನಾಟಕವೆಂಬ ನಾಮಕರಣದ 50ನೇ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಚೀವರ್ಸ್ ಶಾಲಾ ಮಕ್ಕಳಿಂದ ಕನ್ನಡ ಜಾಥಾ ಮತ್ತು ಐತಿಹಾಸಿಕ ಇತಿಹಾಸವುಳ್ಳ ಗಜೇಂದ್ರ ಮೋಕ್ಷ ಕೊಳವನ್ನು ಉಳಿಸುವ ಸಲುವಾಗಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.

ಜಾಥ ಉದ್ಘಾಟಿಸಿ ಮಾತಾನಾಡಿದ ಶಾಸಕ ಪಿ.ರವಿಕುಮಾರ್ ಗೌಡ, ಗಜೇಂದ್ರ ಮೋಕ್ಷ ಕೊಳವನ್ನು ಉಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಕೊಳದ ಅಭಿವೃದ್ಧಿ ಮಾಡಿ ಆಕರ್ಷಣೀಯ ಸ್ಥಳವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪೇಟೆಬೀದಿ ಯಿಂದ ಪ್ರಾರಂಭ ಆದ ಜಾಥಾ ಸಂಜಯ ವೃತ್ತದಿಂದ ಆರ್.ಪಿ ರಸ್ತೆಯ ಮೂಲಕ ಹಾದುಹೋಗಿ,ನೂರಡಿ ರಸ್ತೆಯ ಮೂಲಕ ವಿವಿ ರಸ್ತೆಯನ್ನ ಆದುಹೋಗಿ ಮಹಾವೀರ ಸರ್ಕಲ್ ಬಳಿ ಕನ್ನಡ ಸರಪಳಿಯನ್ನು ರೂಪಿಸಿ,ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿ ನಾಡಗೀತೆ ಯೊಟ್ಟಿಗೆ ಕಾರ್ಯವನ್ನು ಮುಕ್ತಾಯಗೊಳಿಸಲಾಯಿತು.

ಈ ವೇಳೆ ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷರಾದ ರಮೇಶ್, ಅನುಪಮ, ನಾರಾಯಣ್ ಸ್ವಾಮಿ,ಲಕ್ಕಪ್ಪ ಅಚೀವರ್ಸ್ ಶಾಲೆಯ ಪ್ರಾಂಶುಪಾಲರಾದ ವಿದ್ಯ ಹಾಗೂ ಅಡ್ಮಿನ್ ಆದ ರಾಮ್ ಸಿಂಗ್ ಜಗದೀಶ್ ಹಾಗೂ ಶಿಕ್ಷಕರು ಮತ್ತು ಇನ್ನಿತರರು ಉಪಸ್ಥಿತರಿದ್ದರು

ವರದಿ- ಮೋಹನ್ ರಾಗಿಮುದ್ದನಹಳ್ಳಿ

 

Continue Reading

Trending