Connect with us

Mysore

ಕಾಂಗ್ರೆಸ್ ಸರ್ಕಾರ ಅಹಿಂದ ವರ್ಗಕ್ಕೆ ದ್ರೋಹ ಮಾಡಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Published

on

ಮೈಸೂರು: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಬಂದಿದೆ. ಆದರೆ ಇಂದು ಅಹಿಂದ ವರ್ಗಕ್ಕೆ ದ್ರೋಹ ಮಾಡಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಚಾರ ಮಿತಿ ಮೀರಿ ಹೋಗಿದ್ದು, ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು, ತಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಶನಿವಾರ ಬೆಳಿಗ್ಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣ, ಹಾಗೂ ಎಸಿ/ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಹಾಗೂ ಜೆಡಿಎಸ್‌ ಮೈಸೂರು ಚಲೋ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.

ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ. ಇಂದು ಆರಂಭವಾಗಲಿರುವ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಪಾದಯಾತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ ಎಂದರು.

ಹಲವು ವಿಚಾರಗಳನ್ನು ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಜೆಡಿಎಸ್‌ ವಿರುದ್ಧ ಡಿ.ಕೆ.ಶಿವಕುಮಾರ್‌ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಈ ರೀತಿ ಮಾತನಾಡುವುದು ಆಗುತ್ತದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ, ಪಾದಯಾತ್ರೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನವರದು ಪಶ್ಚಾತ್ತಾಪದ ಯಾತ್ರೆಯಾಗಿದ್ದು, ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಿಲ್ಲ ಎಂದು ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಮ್ಮ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ಕಾಂಗ್ರೆಸ್‌ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು

ಇದೇ ವೇಳೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಇದ್ದರು

Continue Reading

Mysore

ಕೆ.ಬಿ.ಗಣಪತಿ ಅವರಿಗೆ ಶ್ರದ್ಧಾಂಜಲಿ ಅರ್ಪಣ ಕಾರ್ಯಕ್ರಮ

Published

on

ಮೈಸೂರು: ಮೈಸೂರು ಮಿತ್ರ ಮತ್ತು ಸ್ಟಾರ್ ಆಪ್ ಮೈಸೂರು ದಿನ ಪತ್ರಿಕೆ ಸಂಸ್ಥಾಪಕ ಸಂಪಾದಕರು ಡಾ.ಕೆ.ಬಿ.ಗಣಪತಿ ಜು.13 ದೈವದಿನರಾದರೂ
ಲೇಖಕರು ಬರಹಗಾರಾದ ಇವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಸರ್ಕಾರಗಳು ನೀಡಿದೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಅತಿ ಹೆಚ್ಚು ಪ್ರಶಸ್ತಿಗಳನ್ನು ಸ್ವೀಕರಿಸಿದ ಗಣ್ಯರು ಮಾಧ್ಯಮ ಲೋಕದಲ್ಲಿ ಕಿರಿಯರಿಗೆ ಬೆನ್ನೆಲುಬಾಗಿದ್ದವರು ರಾಜ್ಯದ ಹಿರಿಯ ಪತ್ರಕರ್ತರು ದಿವಂಗತ
ಡಾ.ಕೆ.ಬಿ.ಗಣಪತಿ ಶ್ರದ್ದಾಂಜಲಿಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಕೆ.ದೀಪಕ್ ರವರು ಚಾಮರಾಜ ಕ್ಷೇತ್ರದ ಹರೀಶ್ ಗೌಡರು ಶಾಸಕರು ಮಾಜಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹೇಂದ್ರರವರು ಸ್ಟಾರ್ ಆಫ್ ಮೈಸೂರು ಮೈಸೂರು ಮಿತ್ರ ದಿನಪತ್ರಿಕೆಯ ಪ್ರಸಾರಾಣಧಿಕಾರಿ ಗೋಪಿನಾಥ್ ರವರು ಹಾಗೂ ಅಧಿಕೃತ ಪತ್ರಕರ್ತರ ಸಂಘದ ಪಿ.ಸುರೇಶ್ ರವರುಚಿಕ್ಕ ಗಡಿಯಾರ ವೃತ್ತದಲ್ಲಿ ಪತ್ರಿಕೆಯ ವಿತರಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ದಿನಪತ್ರಿಕೆಯ ವ್ಯವಸ್ಥಾಪಕರು ಹಿರಿಯ ಪತ್ರಿಕ ವಿತರಕರು (ಏಜೆಂಟರ್ ಗಳು ) ದಿನಪತ್ರಿಕೆ ಮಾರಾಟ ಮಾಡುವ ಅಂಗಡಿಯ ಮಾಲೀಕರುಗಳು ಪತ್ರಿಕಾ ಸಮುದಾಯದ ಎಲ್ಲರೂ ಶ್ರದ್ಧ ಭಕ್ತಿಯಿಂದ ಮೌನವಾಗಿ ಅಂತರಾಳದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಮ್ಮ ಪತ್ರಿಕೆ ನಮ್ಮ ಹಿರಿಯರು ಪತ್ರಕರ್ತರನ್ನು ಎಂದೆಂದೂ ಗೌರವಿಸುವ ಅವರಿಲ್ಲದೆ ನಾವಿಲ್ಲ ಕೆಬಿಜಿಯವರು ಮೈಸೂರಿನ ನಗರ ಪತ್ರಿಕ ವಿತರಕರ ಸಂಘಕ್ಕೆ ಇವರ ಕೊಡುಗೆ ಅಪಾರ ವಿತರಕರ ಹಿತಕ್ಕಾಗಿ ಸಾಕಷ್ಟು ಶ್ರಮಿಸಿದವರು ಕಾರ್ಯ ಕ್ರಮಗಳನ್ನು ಮಾಡಲು ಅನುದಾನವನ್ನು ನೀಡಿ ಪತ್ರಿಕೆಯ ವಿತರಕರಿಗೆ ಅತಿ ಹೆಚ್ಚು ಲಾಭದಾಯಕದ ಕಮಿಷನ್ ನೀಡುವ ಮುಖಾಂತರ ಜೀವನ ನಡೆಸಲು ಪತ್ರಿಕ ವಿತರಕರ ಹಿತ ಕಾಪಾಡಿದವರು ಅವರ ನೆರಳಿನಲ್ಲಿ ನಾವು ಬದುಕನ್ನು ಆರಂಭಿಸಿದ್ದೇವೆ.

ಆದರ್ಶ ವ್ಯಕ್ತಿಯಾದ ಡಾಕ್ಟರ್ ಕೆ.ಬಿ. ಗಣಪತಿ ಇವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಭಗವಂತನ ಕೃಪೆ ಇರಲಿ ಎಂದೆಂದೂ
ಎಂದು ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು ಆತ್ಮೀಯ ಮೈಸೂರು ನಗರ ಪತ್ರಿಕ ವಿತರಕರ ಸಂಘ ಸಂಸ್ಥೆಯ ಪದಾಧಿಕಾರಿಗಳು ವಿತರಕರು ಭಾಗವಹಿಸಿದರು ಎಲ್ಲರಿಗೂ  ಧನ್ಯವಾದಗಳು

Continue Reading

Mysore

ಕೆಪಿಎ-ಪೋಸ್ಟಲ್‌ ತರಬೇತಿ ಸಂಸ್ಥೆ ನಡುವೆ ಒಡಂಬಡಿಕೆ ಸಹಿ

Published

on

ಮೈಸೂರು:  ಮೈಸೂರಿನ  ಕರ್ನಾಟಕ ಪೊಲೀಸ್‍ ಅಕಾಡೆಮಿ ಹಾಗೂ  ಮೈಸೂರಿನ  ಪೋಸ್ಟಲ್‍ತರಬೇತಿ ಸಂಸ್ಥೆ ನಡುವೆ ತರಬೇತಿ, ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಹಾಗೂ ನವೀನ ಮಾದರಿಯ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಜ್ಞಾಪಕ ಪಾತ್ರ ಮತ್ತು ಒಡಂಬಡಿಕೆಗೆ  ಇಂದು ಸಹಿ ಹಾಕಿ ವಿನಿಮಯ ಮಾಡಿಕೊಳ್ಳಲಾಯಿತು.

ಈ ಒಡಂಬಡಿಕೆಯ ಭಾಗವಾಗಿ, ಎರಡೂ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿಗಳು, ಎರಡೂ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನಜ್ಞಾನ ಪಡೆಯುವುದು ಅಲ್ಲದೇ, ಸದರಿ ವಿಷಯಗಳಲ್ಲಾಗುವ ಸಂಶೋಧನೆ ಮತ್ತುಅಭಿವೃದ್ಧಿ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನ ಪಡೆದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಅಂಚೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಸಂಬಂದಿಸಿದ ಸೈಬರ್ ಭದ್ರತೆ, ಬೆರಳಚ್ಚು ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ವಿಷಯಗಳ ಬಗ್ಗೆ ತಿಳಿದುಕೊಂಡರೆ, ಪೊಲೀಸ್‍ ಇಲಾಖೆಯ ಅಧಿಕಾರಿಗಳು , ಅಂಚೆ ಇಲಾಖೆಗೆ ಸಂಬಂಧಿಸಿದ ಸಣ್ಣ ಹೂಡಿಕೆ ಅವಕಾಶಗಳು, ಹಣಕಾಸು ನಿರ್ವಹಣೆ ಹಾಗೂ ಮಾಹಿತಿ ಮತ್ತುತಂತ್ರಜ್ಞಾನ ವಿಷಯಗಳ ಮೇಲೆ ಪರಿಣಿತಿ ಹೊಂದಬಹುದಾಗಿದೆ.

ಈ ಒಪ್ಪಂದ ಜ್ಞಾಪಕ ಪತ್ರ ಹಾಗೂ ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಚೆ ತರಬೇತಿ ಸಂಸ್ಥೆ, ಮೈಸೂರಿನ ನಿರ್ದೇಶಕ ಡಾ.ಆಶಿಶ್ ಸಿಂಗ್ ಠಾಕೂರ್ ಅವರು ‘ಅಂಚೆ ತರಬೇತಿ ಸಂಸ್ಥೆ, ಮೈಸೂರಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದ್ದು, ಎರಡೂ ಸಂಸ್ಥೆಗಳ ಅಧಿಕಾರಿಗಳಿಗೆ ಜ್ಞಾನ ಮತ್ತುಅನುಭವದ ವಿನಿಮಯವಾಗಿ, ಅವರ ಕಾರ್ಯಕ್ಷೇತ್ರದಲ್ಲಿ ಮೌಲ್ಯವರ್ಧನೆಯಾಗಲಿದೆ’ ಎಂದರು.

ಕರ್ನಾಟಕ  ಪೊಲೀಸ್‍ ಅಕಾಡೆಮಿ, ಮೈಸೂರಿನ ನಿರ್ದೇಶಕ ಚೆನ್ನಬಸವಣ್ಣ ಎಸ್‍ಎಲ್,  ಅವರು ಮಾತನಾಡಿ, ‘ಈ ದಿನ ಕರ್ನಾಟಕ ಪೊಲೀಸ್‍ ಅಕಾಡೆಮಿ ಹಾಗೂ  ಪೊಲೀಸ್ ಇಲಾಖೆಗೆ ಅವಿಸ್ಮರಣೀಯ ದಿನ. ಈ ಎರಡು ಐತಿಹಾಸಿಕ ಸಂಸ್ಥೆಗಳ ನಡುವಿನ ಒಡಂಬಡಿಕೆ ಬಹಳ ವಿಶೇಷವಾದದ್ದು. ಈ ಎರಡು ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಕೊಡುವುದಕ್ಕೆ ಈ ಒಡಂಬಡಿಕೆ ನಾಂದಿಯಾಗಲಿದೆ. ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಉತ್ತಮ ಅಭ್ಯಾಸಗಳ್ಳನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಅಭಿವೃದ್ಧಿಗೆ ಶ್ರಮಿಸಲಿವೆ’ ಎಂದರು.

ಒಡಂಬಡಿಕೆ ಸಹಿ ಮತ್ತು ವಿನಿಮಯ ಕಾರ್ಯಕ್ರಮದಲ್ಲಿ, ಕರ್ನಾಟಕ  ಪೊಲೀಸ್‍ ಅಕಾಡೆಮಿಯ ವತಿಯಿಂದ ಅಕಾಡೆಮಿಯ ಸಹಾಯಕ ನಿರ್ದೇಶಕರುಗಳಾದ  ರೇಣುಕಾರಾಧ್ಯ ಎಚ್‍ಎಸ್, ಸುದರ್ಶನ ಎನ್ ಮತ್ತು. ವೆಂಕಟೇಶ್‍. ಎಸ್, ಹಾಗೂ ಕ್ರಾಂತಿರಾಜ್‍ ಒಡೆಯರ್ ಎಂ, ಅಂಚೆ ತರಬೇತಿ ಸಂಸ್ಥೆ ವತಿಯಿಂದ, ಸಹಾಯಕ ನಿರ್ದೇಶಕರುಗಳಾದ, ಬಾಲರಾಜ್, ಶ್ರೀಧರ್, ಶ್ರದ್ಧಾ ವಿ ಗೋಕರ್ಣ,  ಮಂಜುನಾಥರಾವ್. ಕೆ ಹಾಗೂ ಇತರೆ ಸಿಬ್ಬಂದಿವರ್ಗದವರು ಹಾಜರಿದ್ದರು.

Continue Reading

Mysore

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುವೆ : ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ

Published

on

ವರದಿ: ಎಸ್‌.ಬಿ. ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಪ್ರತಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿ ಅವುಗಳ ನಿವಾರಣೆಗೆ ಆದ್ಯತೆ ನೀಡಿ ಕೆಲಸ ಮಾಡುವುದಾಗಿ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ‌ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಖಾಸಗಿ ರಸಗೊಬ್ಬರದ ಅಂಗಡಿಗಳಲ್ಲಿ ದುಬಾರಿ ದರ ತೆತ್ತು ರಸಗೊಬ್ಬರ ಪಡೆಯುವುದನ್ನ‌ ತಪ್ಪಿಸಲು ಪ್ರತಿ ಸಂಘಗಳಲ್ಲಿ ರೈತರಿಗೆ ಎಲ್ಲಾ ಬಗೆಯ ರಸಗೊಬ್ಬರಗಳನ್ನ ನಿಗದಿತ ದರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುದು ಎಂದರು.

ಕುಪ್ಪೆ ಮತ್ತು ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ಸಂಘಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಇವೆರಡು ಸಂಘದ ಆಡಳಿತ ಮಂಡಳಿಯವರು ನಿವೇಶನವನ್ನು ಒದಗಿಸಿ ಕೊಟ್ಟರೇ ತಕ್ಷಣವೇ ಅಪೆಕ್ಸ್ ಬ್ಯಾಂಕ್ ಮತ್ತು ಶಾಸಕರ ನಿಧಿಯಿಂದ ಅನುದಾನ ಕೊಡಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಉಪಾಧ್ಯಕ್ಷೆ ಕಲ್ಯಾಣಮ್ಮ, ನಿರ್ದೇಶಕರಾದ ಪುನೀತಧರ್ಮಪಾಲ್, ರುಕ್ಮಿಣಮ್ಮ, ಕೆ.ಆರ್.ಮಂಜುನಾಥ್,ಕುಮಾರಸ್ವಾಮಿ, ಸೋಮಪ್ಪ, ದಾಸಯ್ಯ, ಸಿ.ಟಿ.ಸ್ವಾಮಿಗೌಡ, ಮಾಜಿ ಅಧ್ಯಕ್ಷ ಸಿ.ಟಿ.ಪಾರ್ಥ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ದಿನೇಶ್ ಮೂಡಲಕೊಪ್ಪಲು, ಸಂಘದ ಸಿ.ಇ.ಓ ಪುನೀತ್, ಗುಮಾಸ್ತ ಸಿ.ಜಿ.ಜಗನ್ನಾಥ್ ಇದ್ದರು.

Continue Reading

Trending

error: Content is protected !!