Mysore
ತಾಲ್ಲೂಕಿನ ಅಣ್ಣೂರು- ಹೊಸಹಳ್ಳಿ ಗ್ರಾಮಕ್ಕೆ ಕಾಡಾನೆಯೊಂದು ದಾಳಿ ನಡೆಸಿ ಗ್ರಾಮದ ಪ್ರಭು ಎಂಬ ರೈತರ ಬೈಕು ಮತ್ತು ಎತ್ತನ್ನು ತುಳಿದಿದೆ.
ಎಚ್.ಡಿ.ಕೋಟೆ : ತಾಲ್ಲೂಕಿನ ಅಣ್ಣೂರು- ಹೊಸಹಳ್ಳಿ ಗ್ರಾಮಕ್ಕೆ ಕಾಡಾನೆಯೊಂದು ದಾಳಿ ನಡೆಸಿ ಗ್ರಾಮದ ಪ್ರಭು ಎಂಬ ರೈತರ ಬೈಕು ಮತ್ತು ಎತ್ತನ್ನು ತುಳಿದಿದೆ. ಬೈಕು ಸಂಪೂರ್ಣ ಜಖಂಡಿದ್ದರೆ ಎತ್ತು ತೀವ್ರ ಗಾಯಗೊಂಡಿದೆ.
ಗ್ರಾಮದಲ್ಲಿ ಸುಮಾರು ನಾಲ್ಕು ಸುತ್ತು ಗ್ರಾಮದಲ್ಲಿಯೇ ಆನೆ ಓಡಾಡಿದೆ, ಗ್ರಾಮದಲ್ಲಿದ್ದ ಹುಲ್ಲಿನ ಮೆದಿಗಳು ಹಾಗೂ ಸೌದೆ ಮೆದೆಗಳನ್ನು ಆನೆ ಕೆಳಕ್ಕೆ ಬೀಳಿಸಿದೆ, ಆನೆ ನಡೆದದ್ದೆ ದಾರಿ ಎಂಬಂತೆ ಗ್ರಾಮದ ಬೇಲಿಗಳನ್ನು ಹಾಳುಮಾಡಿತು, ನಂತರ ಗ್ರಾಮದ ಮಹದೇವ ತಾತ ದೇವಸ್ಥಾನದ ಸಮೀಪದಿಂದ ಕಾಡಿನ ಕಡೆಗೆ ಕಾಡಾನೆ ತೆರಳಿತು.
ಎಸಿಎಫ್ ದಯಾನಂದ್ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಈ ಆನೆಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ ಹಾಗಾಗಿ ಗ್ರಾಮದತ್ತ ಬಂದಿದೆ ಇನ್ನು ಮುಂದೆ ಗ್ರಾಮದ ಕಡೆ ಕಾಡಾನೆಗಳು ಬಾರದಂತೆ ಕಾವಲು ಕಾಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಅಭಿಷೇಕ್ ಮಾತನಾಡಿ ಗ್ರಾಮಸ್ಥರು ಆನೆಯನ್ನು ಓಡಿಸುವ ನೆಪದಲ್ಲಿ ಆನೆಯ ಹಿಂದೆಯೆ ಹಿಂಬಾಲಿಸುತ್ತಿದ್ದರು. ಆನೆ ಏನಾದರೂ ಹಿಂದಕ್ಕೆ ಬಂದು ಯಾರನ್ನಾದರು ತುಳದಿದ್ದರೆ ನಾಲ್ಕಾರು ಸಾವುಗಳು ಸಂಭವಿಸುವ ಸಾಧ್ಯತೆ ಇತ್ತು. ಸಾರ್ವಜನಿಕರು ಕಾಡುಪ್ರಾಣಿಗಳು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಳ್ಮೆಯಿಂದ ಸಮಾಧಾನದಿಂದ ವರ್ತಿಸಬೇಕು.
ಪ್ರಾಣಿಗಳ ಹಿಂದೆ ಬರುವುದು, ಕೂಗಾಟ ನಡೆಸುವುದರಿಂದ, ಚಿರಾಟದಿಂದ ವರ್ತಿಸುವುದರಿಂದ ಅಪಾಯಗಳು ಸಂಭವಿಸುತ್ತವೆ ಎಂದರು.
ಗ್ರಾಮದ ಮುಖಂಡರಾದ ಹೊಸಳ್ಳಿ ಆನಂದ್, ಗೇಟ್ ಸ್ವಾಮಿ, ಶಿವರಾಜಪ್ಪ, ಎಚ್.ಸಿ. ಶಿವಣ್ಣ, ಮಾದೇವಪ್ಪ, ರಾಮಣ್ಣ ಇದ್ದರು.

Mysore
ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ಪೋಷಕರಿಗೆ ಅರಿವು : ಸಿಎಚ್ಓ ಪಲ್ಲವಿ
ವರದಿ : ಎಸ್. ಬಿ.ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : 5 ವರ್ಷ ದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸುವ ಅರಿವನ್ನು ಪೋಷಕರಿಗೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಂರಕ್ಷಣಾಧಿಕಾರಿ ಪಲ್ಲವಿ ಹೇಳಿದರು.
ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಾವುಗಳು ಈ ವ್ಯಾಪ್ತಿಯ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ನಿರ್ಮೂಲನೆಗೆ ಎಲ್ಲರೂ ಸಹಕಾರ ನೀಡಿ ಎಂದು ತಿಳಿಸಿ, 0 ಯಿಂದ 5 ವರ್ಷ ದೊಳಗಿನ ಮಕ್ಕಳಿರುವ ಮನೆಗಳಲ್ಲಿ ಪೋಲಿಯೋ ಹನಿ ಹಾಕಿಸದಿರುವುದನ್ನು ಗಮನಿಸಿ ವಿಚಾರಿಸಿ,ಪೋಲಿಯೋ ಹನಿ ಹಾಕಿಸುತ್ತಿದ್ದೇವೆ ಎಂದು ಹೇಳಿದರು.
ಪೋಲಿಯೋ ಹನಿಯನ್ನು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಹನಿ ಹಾಕಿಸಿ ಪೋಲಿಯೋ ನಿರ್ಮೂಲನೆಗೆ ಮುಂದಾಗಬೇಕು ಎಂದರು.

ಇದಕ್ಕಾಗಿ ನಮ್ಮ ಆರೋಗ್ಯ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದೇವೆ, ಪೋಲಿಯೋ ಹನಿ ಹಾಕಿಸದೆ ಇರುವವರು ನಿರ್ಲಕ್ಷ ಮಾಡದೆ, ದಯವಿಟ್ಟು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ.ಶಿವಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿಯವರಾದ ಪೂಜಾ, ಲಕ್ಷ್ಮಿ, ಪೋಷಕರು, ಮಕ್ಕಳು ಇದ್ದಾರೆ.
Mysore
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಅಯೋಧ್ಯೆಗೆ ಸಾವಿರಾರು ಭಕ್ತರ ದತ್ತ ಯಾತ್ರೆ
ಮೈಸೂರು: ಅವಧೂತ ದತ್ತ ಪೀಠದ ಪೀಠಾಧ್ಯಕ್ಷ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಾರು ಭಕ್ತರು ಸೋಮವಾರ ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ಯಾತ್ರೆ ತೆರಳಿದರು.
ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ನಂತರ ಕರ್ನಾಟಕದ ದತ್ತ ಪೀಠಕ್ಕೆ ಅಲ್ಲಿ ಒಂದು ನಿವೇಶನ ನೀಡಲಾಗಿದೆ. ಅಲ್ಲಿ ಕರ್ನಾಟಕದ ಪರವಾಗಿ ದತ್ತ ಪೀಠದ ಶಾಖೆಯನ್ನು ಪ್ರಾರಂಭಿಸಲು ಮತ್ತು ವಿಗ್ರಹ ಪ್ರತಿಷ್ಠಾಪನೆ ಮಾಡಲು ತೆರಳುತ್ತಿದ್ದೇವೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ದತ್ತ ಪೀಠದ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ‘ರಾಮ ಪರಿವಾರ’ದ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ಬೃಹತ್ ‘ರಾಮ ತಾರಕ ಯಜ್ಞ’ ನಡೆಯಲಿದ್ದು, ಸುಮಾರು 10 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಲಕ್ಷಾಂತರ ಜನರಿಗೆ ಅನ್ನದಾನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕರ್ನಾಟಕ ಹನುಮಂತನ ನಾಡು. ಹಂಪಿಯ ಕಿಷ್ಕಿಂಧೆಯಲ್ಲಿ ಹನುಮಂತ ಅವತಾರ ತಾಳಿದ ಸ್ಥಳ ನಮ್ಮಲ್ಲಿದೆ. ಹೀಗಾಗಿ ರಾಮನಿಗೂ ಮತ್ತು ಕರ್ನಾಟಕಕ್ಕೂ ವಿಶೇಷವಾದ ಸಂಬಂಧವಿದೆ. ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯ ಬಾಲರಾಮನ ವಿಗ್ರಹವನ್ನು ನಮ್ಮ ಮೈಸೂರಿನ ಶಿಲ್ಪಿ ಹಾಗೂ ಆಶ್ರಮದ ಭಕ್ತ ಅರುಣ್ ಯೋಗಿರಾಜ್ ಕೆತ್ತಿರುವುದು ನಮ್ಮ ಹೆಮ್ಮೆ ಎಂದು ಸ್ಮರಿಸಿದರು.
ಆಶ್ರಮದ ಕಿರಿಯಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಪ್ರಮುಖರು ಯಾತ್ರೆಗೆ ಚಾಲನೆ ನೀಡಿದರು.
Mysore
ಭಾಷೆಯ ಉಳಿವಿಗೆ ಕನ್ನಡಿಗರು ಒಂದಾಗಿ ಸಾಗಬೇಕು: ಶಾಸಕ ಜಿ.ಟಿ.ದೇವೇಗೌಡ ಕರೆ
ಮೈಸೂರು: ರಾಜ್ಯದಲ್ಲಿರುವ ಎಲ್ಲಾ ಕನ್ನಡಪರ ಸಂಘಟನೆಗಳು ಒಂದಾಗಿ ಒಂದು ಕಡೆ ಸೇರಿ ನಾವೆಲ್ಲರೂ ಒಂದೇ. ಒಂದೇ ತಾಯಿಯ ಮಕ್ಕಳು ಎನ್ನುವಂತೆ ದೇಶಕ್ಕೆ ಸಂದೇಶ ಕೊಡಬೇಕು. ಭಾಷೆಯ ಉಳಿವಿಗೆ ಕನ್ನಡಿಗರು ಒಂದಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕರೆ ನೀಡಿದರು.
ಕಲಾಮಂದಿರದ ಕಿರುರಂಗಮಂದಿರದಲ್ಲಿ ಕನ್ನಡ ಸೇನೆ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶ,ಕನ್ನಡ ರಾಜ್ಯೋತ್ಸವ,ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡು, ನುಡಿ, ಜಲ, ನೆಲ, ಭಾಷೆಯ ಬಗ್ಗೆ ಅಪಾರವಾದ ಅಭಿಮಾನ ಇಟ್ಟುಕೊಂಡು ಭಾಷೆಯನ್ನು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಭಾಷೆ ಉಳಿದರೆ ನಾಡು ಉಳಿಯಲಿದೆ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಇರುವುದನ್ನು ಅರಿತುಕೊಳ್ಳಬೇಕು ಎಂದರು. ಕನ್ನಡಿಗರು ಸಹೃದಯಿರು. ಬೇರೆಯವರನ್ನು ಪ್ರೀತಿಸುವ, ಅಪ್ಪಿಕೊಳ್ಳುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಬೇರೆ ರಾಜ್ಯಗಳಲ್ಲಿ ಬೇರೆಯುವರನ್ನು ಪ್ರೀತಿಸುವ ಕಾಯಕ ಇಲ್ಲ. ಅವರವರ ಭಾಷೆಗೆ ಗಮನಹರಿಸುತ್ತಾರೆ. ಭಾಷೆಯ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯತೆ ಕರ್ನಾಟಕದಲ್ಲಿ ಮಾತ್ರ ಇದೆ. ಬೇರೆ ರಾಜ್ಯಗಳಲ್ಲಿ ಅಂತಹ ಸನ್ನಿವೇಶ ಕಾಣಿಸುತ್ತಿಲ್ಲ ಎಂದು ಬೇಸರಿಸಿದರು.
ಬೆಂಗಳೂರಿನಲ್ಲಿ ಇಂದಿಗೂ ಕನ್ನಡಕ್ಕೆ ಹೋರಾಟ ಮಾಡಬೇಕಾಗಿದೆ. ಅನ್ಯಭಾಷಿಕರ ಹಾವಳಿಯನ್ನು ತಡೆಯುವುದು, ಕನ್ನಡ ನಾಮಫಲಕ ಅಳವಡಿಕೆಗೆ ಹೋರಾಟ ಮಾಡಬೇಕಿದೆ ಎಂದರು.
ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಾಗ ಭಾಷೆಯ ಉಳಿಸಲು ಕೆಲಸ ಮಾಡಿದ್ದರು. ಅದೇ ರೀತಿ ಮುಖ್ಯಮಂತ್ರಿಯಾದ ನಂತರ ನ್ಯಾಯಾಂಗದಲ್ಲಿ ಕನ್ನಡ ಭಾಷೆ ಅಳವಡಿಕೆಗೆ ನಿರ್ಧಾರ ಮಾಡಿ ಜಾರಿ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಆರಂಭಿಸುವ ಕೈಗಾರಿಕೆಗಳಲ್ಲಿ ಬೇರೆ ರಾಜ್ಯದವರಿಗೆ ಉದ್ಯೋಗ ಸಿಗುತ್ತದೆ ಹೊರತು ಕನ್ನಡಿಗರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗುವುದಿಲ್ಲ. ಕನ್ನಡಿಗರು ತಂತ್ರಜ್ಞಾನ ಕಲಿಯಬೇಕು. ನಾವು ಎಲ್ಲಾ ರೀತಿಯ ಶಿಕ್ಷಣ ಕಲಿತು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎನ್ನುವುದನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಪಂಪ, ರನ್ನ, ಕುವೆಂಪು ಅವರು ಕನ್ನಡ ಭಾಷೆಗೆ ಶ್ರಮಿಸಿದ್ದಾರೆ. ಡಿ.ದೇವರಾಜ ಅರಸು ಸಿಎಂ ಆಗಿದ್ದಾಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದರು ಎಂದು ನುಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವಿಕ್ರಮ್, ಜಯಕೀರ್ತಿ, ಸರ್ವಮಂಗಳ, ಕೆ.ಸೌಭಾಗ್ಯವತಿ, ಕೆ.ಸಂಗೀತ, ಪುನೀತ್, ಚಂದನ್‌ಗೌಡ, ಜಯಮ್ಮ, ಪ್ರಣತಿ ಪ್ರಕಾಶ್, ಲೋಹಿತ್ ಹನುಮಂತಪ್ಪ, ಕಾರ್ತಿಕ್ ನಾಯಕ್, ರಾಚಪ್ಪ ಮತ್ತಿತರಿಗೆ ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕನ್ನಡ ಸೇನೆ-ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಜಿಲ್ಲಾಧ್ಯಕ್ಷರಾದ ಎಂ.ಯು.ಶೈಲಜಾ, ಬಿ.ಸುಂದರ್, ಗೌರವ ಅಧ್ಯಕ್ಷೆ ಕಮಲಾ ನಟರಾಜು, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್, ಎಂ.ಮಲ್ಲೇಶ್, ಪದಾಧಿಕಾರಿಗಳಾದ ಶಶಿಕಲಾ, ಯಶೋಧಮ್ಮ, ಶಶಿ, ಸಿದ್ದರಾಜು, ದ್ರಾಕ್ಷಾಯಿಣಿ, ಸುನೀಲ್ ನಾಗ್, ಪ್ರಜ್ವಲ್, ರಾಚು, ಕಾಳಸ್ವಾಮಿ ಮತ್ತಿತರರು ಹಾಜರಿದ್ದರು.
-
Hassan8 hours agoಎನ್.ಆರ್. ಸರ್ಕಲ್ನಲ್ಲಿ ಅವೈಜ್ಞಾನಿಕ ವಿನ್ಯಾಸ: ಸಂಚಾರ ದಟ್ಟಣೆ, ಅಪಘಾತ ಭೀತಿ – ತಕ್ಷಣ ಕ್ರಮಕ್ಕೆ ಹೆಚ್.ಎಂ. ಸುರೇಶ್ ಒತ್ತಾಯ
-
Mysore9 hours agoಕೂಡಿ ಬಾಳಿದರೆ ಸ್ವರ್ಗ ಸುಖ: ಸಿಂಚನಗೌಡ
-
Mysore7 hours agoಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ ಉಳಿಸಿ: ಗ್ರೇಡ್-1 ಮಹಾನಗರ ಪಾಲಿಕೆಯಿಂದ ಕೈಬಿಡುವಂತೆ ಸಿಎಂಗೆ ನಿವಾಸಿಗಳ ಮನವಿ
-
Special11 hours agoNHIDCL ನಲ್ಲಿ ಉದ್ಯೋಗಾವಕಾಶ
-
State41 minutes agoಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಗೌರವ ನೀಡುತ್ತೇವೆ: ಡಾ.ಜಿ. ಪರಮೇಶ್ವರ್
-
Mysore8 hours agoಜನರಿಂದ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
-
Kodagu23 hours agoಮಹಿಳೆಯರು ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ -ಜಿ.ವಿ. ಶ್ರೀನಾಥ್
-
Manglore7 hours agoಆ್ಯಂಬುಲೆನ್ಸ್ ಕಳವುಗೈದ ಅಸಾಮಿ ಅಂದರ್
