Mandya
ರೌಡಿ ಶೀಡರ್ ತೆರೆಯುವ ಬಗ್ಗೆ ಹಿಂದೂ ಕಾರ್ಯಕರ್ತರಿಗೆ ನೋಟೀಸ್
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ಸ್ತಂಭ ವಿವಾದ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದ್ದು, ರೌಡಿ ಶೀಟರ್ ತೆರೆಯುವ ಸಂಬಂಧ ಏಳು ದಿನಗಳ ಒಳಗೆ ಉತ್ತರಿಸುವಂತೆ ಪೋಲೀಸರು ಹಿಂದೂ ಕಾರ್ಯಕರ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ರೌಡಿ ಶೀಟರ್ ತೆರೆಯುವ ಬಗ್ಗೆ ಮೂವರೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರಿಗೆ ಕೆರಗೋಡು ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದ್ದು, ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯ ಕೋಮಿನ ಜನರನ್ನ ಬೆದರಿಸಿ ನಿಂದನೆ ಮಾಡುವುದು, ಹೆದರಿಸುವುದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಪ್ರಚೋದನೆಗೆ ಒಳಪಡಿಸುತ್ತಿದ್ದೀರಿ. ಮಾತ್ರವಲ್ಲದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವುದರಿಂದ ನಿಮ್ಮ ವಿರುದ್ಧ ರೌಡಿಶೀಟರ್ ತೆರೆಯಬಾರದೇಕೆ ಎಂದು ನೋಟೀಸ್ ಮೂಲಕ ಪೋಲೀಸರು ಪ್ರಶ್ನಿಸಿದ್ದಾರೆ.

ಜೊತೆಗೆ ನೋಟಿಸ್ ತಲುಪಿದ ಏಳು ದಿನದೊಳಗೆ ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮೇ.4ರಂದು ನೋಟೀಸ್ ನೀಡಲಾಗಿದ್ದು, ಇದೀಗ ಪೋಲೀಸರ ಈ ವರ್ತನೆಗೆ ಕೆರಗೋಡು ಗ್ರಾಮಸ್ಥರು ಹಾಗೂ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೋಲೀಸರ ವಿರುದ್ದ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಿದ್ದಾರೆ.

Mandya
ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬರು ಟೊಂಕಕಟ್ಟಿ ನಿಲ್ಲಬೇಕು: ಕೆ.ಎನ್.ನಂಜುಂಡಯ್ಯ
ಮದ್ದೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರತಿಯೊಬ್ಬರು ಟೊಂಕಕಟ್ಟಿ ನಿಲ್ಲಬೇಕು ಎಂದು ಶ್ರೀ ನಂಜುಂಡೇಶ್ವರ ಸೇವಾಭಿವೃದ್ಧಿ ಟ್ರಸ್ಟ್ ಧರ್ಮದರ್ಶಿ ಕೆ.ಎನ್.ನಂಜುಂಡಯ್ಯ ಮನವಿ ಮಾಡಿದರು.
ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ ಸೋಮವಾರ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ, ಶ್ರೀ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಪ್ರಧಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ಬೇಸರ ತಂದಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಿಗಿರುವ ಕೀಳಿರಮೆ ದೂರವಾಗಬೇಕು. ಸರ್ಕಾರಿ ಶಾಲೆಗಳು ಉಳಿಯ ಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿಬೇಕು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.

ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಪ್ರಪಂಚದಲ್ಲಿ ವಿದ್ಯೆಗೆ ಅಪಾರವಾದ ಗೌರವವಿದೆ ಹಾಗೂ ಶಕ್ತಿಯಿದೆ. ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ ಇದನ್ನರಿತು ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಉದ್ದೇಶದಿಂದ ಶ್ರೀ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ವತಿಯಿಂದ ವಿದ್ಯಾಥರ್ಿಗಳಿಗೆ ನಗದು ಪ್ರದಾನ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿರುವುದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹೆಚ್ಚು ಅಂಕಗಳಿಸಿದ ಕೊಕ್ಕರೆ ಬೆಳ್ಳೂರು, ಬೆಸಗರಹಳ್ಳಿ, ಚಿಕ್ಕಂಕನಹಳ್ಳಿ ಮದ್ದೂರು ಹಾಗೂ ಕೊಪ್ಪ ಸರ್ಕಾರಿ ಶಾಲಾ, ಕಾಲೇಜು ಗಣ್ಯರು ಅಭಿನಂದಿಸಿ ನಗದು ಪುರಸ್ಕಾರ ನೀಡಿದರು.
ವಿಶೇಷ ಪೂಜೆ: ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೈದ್ಯನಾಥಪುರ ಗ್ರಾಮದ ಶ್ರೀ ಶಾಂತೇಶ್ವರ ಕದಂಬ ಜಂಗಮ ಮಠದ ಶ್ರೀ ರೇಣುಕಾ ಶಿವಚಾಯ ಸ್ವಾಮಿಜಿ ವಹಿಸಿ ಮಾತನಾಡಿದರು.
ಬೇವೂರು ಮಠದ ಶ್ರೀ ಮಲ್ಲಿಕಾರ್ಜುನ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಜಿ, ಸಹ ಪ್ರಾಧ್ಯಾಪಕ ಎಂ.ಮಾದೇಗೌಡ, ಶ್ರೀ ನಂದಿ ಬಸವೇಶ್ವರ ದೇಗುಲದ ಪ್ರಧಾನ ಅರ್ಚಕ ಕಲ್ಲೇಶ್ ಕುಮಾರ್, ಶ್ರೀ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳಾದ ಎಸ್. ಎಂ.ಗಿರೀಶ್, ಅಣ್ಣೆದೊಡ್ಡಿ ನಂದೀಶ್, ಎ.ಎನ್.ರವಿ, ಮುಖಂಡ ಎಸ್.ಎಂ.ಸಂತೋಷ್, ಕೀಳಘಟ್ಟ ಗ್ರಾಮಸ್ಥರು ಹಾಜರಿದ್ದರು.
Mandya
ದೌರ್ಜನ್ಯ ಪ್ರಕರಣಗಳು, ಅಸ್ಪೃಶ್ಯತೆ ಯನ್ನು ಜಿಲ್ಲೆಯಿಂದ ಮುಕ್ತ ಗೊಳಿಸಿ.: ಡಾ.ಎಲ್. ಮೂರ್ತಿ
ಮಂಡ್ಯ : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು. ದೌರ್ಜನ್ಯ ಪ್ರಕರಣಗಳು ಮತ್ತು ಅಸ್ಪೃಶ್ಯತೆ ಆಚರಣೆಯ ಸಾಮಾಜಿಕ ಧೋರಣೆಯನ್ನು ತೊಲಗಿಸಬೇಕು ಎಂದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷರಾದ ಡಾ. ಮೂರ್ತಿ .ಎಲ್ ರವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಸಭೆಯಲ್ಲಿ ಮಾತನಾಡಿ ಅವರು, ಜಿಲ್ಲೆಯಲ್ಲಿ 46 ರಿಂದ 47 ದೌರ್ಜನ್ಯ ಪ್ರಕರಣಗಳು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ದಾಖಲಾಗಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾನೂನಾತ್ಮಕ ದೌರ್ಜನ್ಯ ಪ್ರಕರಣಗಳ ಗಂಭೀರ ತೊಡಕುಗಳನ್ನು ಬಗೆಹರಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳು ಮತ್ತು ನಗರಸಭೆಯ ಗಂಭೀರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಪರಿಶೀಲಿಸಬೇಕು. ಎಂದು ಹೇಳಿದರು.
ರಾಜ್ಯದಲ್ಲಿ 10 ಜಿಲ್ಲೆಗಳ ಪ್ರವಾಸ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಕ್ರಮವಹಿಸುವಂತೆ ಸೂಚಿಸಿದ್ದಾರೆ.

ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ಬಹಳ ಮುಖ್ಯ.ಜಿಲ್ಲೆಯು ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರದ್ದೆ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಅರಣ್ಯ ಪ್ರದೇಶದಲ್ಲಿ ವಾಸಿಸಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಪರಿಹರಿಸಬೇಕು
ಜಿಲ್ಲೆಯಲ್ಲಿ ಜಮೀನು ವಿಚಾರವಾಗಿ ದಾರಿ,ಸ್ಮಶಾನ, ಸರ್ವೆ ದುರಸ್ತಿ,ಪ್ರಕರಣಗಳನ್ನು ಶೀಘ್ರವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಮಾರ್ಚ್ 7 ರಂದು* ಜಿಲ್ಲಾಡಳಿತ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಅಸ್ಪೃಶ್ಯತಾ ನಿವಾರಣಾ ಕಾಯ್ದೆ ” ಯ ಅರಿವು ಕಾರ್ಯಾಗಾರವನ್ನು ನಗರದ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಸಮಾಜದ ಎಲ್ಲಾ ವರ್ಗದವರು ಮತ್ತು ಮುಖಂಡರುಗಳು ಕಾರ್ಯಗಾರವನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಸ್ಪೃಶ್ಯತೆ ಆಚರಣೆಯು ಸಮಾಜಕ್ಕೆ ಕಳಂಕವಾಗಿದೆ. ಎಲ್ಲಾ ಮುಖಂಡರುಗಳು ಮತ್ತು ಸಾರ್ವಜನಿಕರು ಅಸ್ಪೃಶ್ಯತೆ ನಿವಾರಣಾ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲರೂ ಕಾರ್ಯಕ್ರಮದ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಹವಾಲು ಸ್ವೀಕಾರ
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಸಭೆಯಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಘಟನೆಗಳ ಅಹವಾಲು ಸ್ವೀಕರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಕಾವ್ಯ, ಪೊಲೀಸ್ ಅಧಿಕ್ಷಕರು ಗಂಗಾಧರ್ ಸ್ವಾಮಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಉಪಾಧ್ಯಕ್ಷರು ವಿಜಯಲಕ್ಷ್ಮಿ, ಮೂಡ ಅಧ್ಯಕ್ಷರು ಬಿ.ಪಿ.ಪ್ರಕಾಶ್ ರವರು ಉಪಸ್ಥಿತರಿದ್ದರು.
Mandya
ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ : ಪರಿಶೀಲನೆ
ಮಂಡ್ಯ: ನಗರದ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ 11.30ಗಂಟೆಯ ವೇಳೆಗೆ ಬಾಂಬ್ ಬೆದರಿಕೆಯೊಂದು ಬಂದ ಹಿನ್ನೆಲೆಯಲ್ಲಿ ವಕೀಲರು ಹಾಗೂ ಕಕ್ಷಿದಾರರು ಕೆಲ ಕಾಲ ನ್ಯಾಯಾಲಯದ ಹೊರಗೆ ಬಂದು ಕಲಾಪದಿಂದ ದೂರ ಉಳಿದು ಆತಂಕಗೊಂಡ ಘಟನೆ ನಡೆದಿದೆ.
ಬಾಂಬ್ ಬೆದರಿಕೆಯಿಂದ ಸ್ಥಳದಲ್ಲಿದ್ದ ನೂರಾರು ವಕೀಲರು ಹಾಗೂ ಕಕ್ಷೀದಾರರದಲ್ಲಿ ಆತಂಕ ಮನೆ ಮಾಡಿತ್ತಲ್ಲದೆ, ಜೀವ ಭಯದಲ್ಲಿ ಓಡ ತೊಡಗುವಂತಾಯಿತು.

ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಸಂದೇಶ ಬಂದಿದ್ದು, ತಕ್ಷಣ ಮಾಹಿತಿ ತಿಳಿದ ಎಸ್ಪಿ ಶೋಭಾರಾಣಿ, ಸ್ಥಳೀಯ ಶ್ವಾನದಳ, ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಭಾವಿಸಿ ಪರಿಶೀಲನೆ ನಡೆಸಿದ್ದಾರೆ.
-
Hassan4 hours agoಸ್ಕೂಟಿ-ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸಾ*ವು
-
Kodagu7 hours agoಫೆ.28 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ| ಸುಗಮ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ: ಎಸ್.ಜೆ.ಸೋಮಶೇಖರ್
-
Hassan8 hours agoಹಾಸನದಲ್ಲಿ ಜೊಮ್ಯಾಟೋ ರೈಡರ್ಗಳ ಮುಷ್ಕರ ಎಂಟನೇ ದಿನಕ್ಕೆ; ಬೇಡಿಕೆಗಳಿಗೆ ಸ್ಪಂದನೆ ಇಲ್ಲದೆ ಸೇವೆ ವ್ಯತ್ಯಯ
-
Kodagu13 hours agoಮಾ. 2 ರಂದು ಪಾಡಿಯಲ್ಲಿ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ
-
Hassan15 hours agoಸಂಭ್ರಮದಿಂದ ಜರುಗಿದ ಶ್ರೀ ಗುಹೆಕಲ್ಲಮ್ಮ ಶ್ರೀ ಚಿಕ್ಕಮ್ಮ ದೇವಿ ಯವರ 30ನೇ ವರ್ಷದ ಅದ್ದೂರಿ ಕುಂಭ ಮಹೋತ್ಸವ
-
Manglore2 hours agoಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಕಸ್ಟೋಡಿಯನ್ಶಿಪ್ ಪ್ರಶಸ್ತಿ
-
Mysore4 hours agoವಿದ್ಯುತ್ ಇಲ್ಲದೆ ಒಣಗಿದ ಬೆಳೆ: ರೈತನ ಪ್ರಶ್ನೆಗೆ ಸೆಸ್ಕ್ ಅಧಿಕಾರಿಗಳು ಕಕ್ಕಾಬಿಕ್ಕಿ
-
Manglore5 hours agoಎಸ್ಸಿಡಿಸಿಸಿ ಬ್ಯಾಂಕ್ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆ ಯುಪಿಐ & ಐಎಂಪಿಎಸ್ ಆರಂಭ
