Kodagu
ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಕೇರಳ ಮೂಲದ ಯುವಕ ಮೃತ್ಯು
ವಿರಾಜಪೇಟೆ: ಕಾರು ಒಂದನ್ನು ಹಿಂಬಾಲಿಸಿ ಹಿಂದಿಕ್ಕುವ ತವಕದಲ್ಲಿ ಮುಂದಿನಿಂದ ಆಗಮಿಸಿದ ಲಾರಿಗೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಯುವಕನೋರ್ವ ಮೃತಪಟ್ಟ ಘಟನೆ ಪೆರುಂಬಾಡಿ ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕೇರಳ ರಾಜ್ಯದ ಇರಿಟ್ಟಿ ತಾಲೂಕು ಉಳಿಯಿಲ್ ಗ್ರಾಮದ ನಿವಾಸಿ ಆಲಿ ಮತ್ತು ಆಫ್ಸಿ ಎಂಬ ದಂಪತಿಗಳ ಪುತ್ರ ಸುನೀಫ್ ( ೩೩) ಅಪಘಾತ ದಲ್ಲಿ ಮೃತನಾದ ದುರ್ದೈವಿ.
ಮೃತ ಸುನೀಫ್ ವಿವಾಹಿತನಾಗಿದ್ದು ಬೆಂಗಳೂರು ಹೊರವಲಯದಲ್ಲಿ ಹೋಟೆಲ್ ನಡೆಸುತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಬೆಂಗಳೂರು ನಿಂದ ಸ್ವಗೃಹಕ್ಕೆ ವಿರಾಜಪೇಟೆ ಮಾರ್ಗವಾಗಿ ತನ್ನ ದ್ವಿಚಕ್ರ ವಾಹನದಲ್ಲಿ ಪೆರುಂಬಾಡಿ ಮಾಕೂಟ್ಟ ರಾಜ್ಯ ಹೆದ್ದಾರಿಯಲ್ಲಿ ತೆರಳುತಿದ್ದರು ಸುಮಾರು ೨-೩೦ ರ ವೇಳೆಯಲ್ಲಿ ಪೆರುಂಬಾಡಿ ಪೊಲೀಸ್ ತನಿಖಾ ಕೇಂದ್ರದಿಂದ. ಎರಡು ಕಿ.ಮೀ ದೂರದಲ್ಲಿ ಕಣ್ಣನ್ನೂರು ವಳವಟ್ಟಣಂ ನಿಂದ ಬೆಂಗಳೂರು ರಿಗೆ ಫ್ಲೈ ವುಡ್ಸ್ ಸರಕು ಹೊತ್ತ ಲಾರಿ ಎದುರುನಿಂದ ಆಗಮಿಸುತಿತ್ತು. ದ್ವಿಚಕ್ರ ವಾಹನ ಚಾಲಕ ಕಾರು ಒಂದನ್ನು ಹಿಂದಿಕ್ಕಿ ಮುಂದೆ ಚಾಲನೆ ಮಾಡಿದ್ದಾನೆ. ಈ ಭಾಗದಲ್ಲಿ ಮಳೆಯ ಹನಿಗಳು ಜಿನುಗುತಿದ್ದು ಮಂಜು ಕವಿದ ವಾತವರಣ ಸೃಷ್ಟಿಯಾಗಿತ್ತು.ವಾಹನವು ನಿಯಂತ್ರಣ ಕಳೆದುಕೊಂಡು ಎಡಕ್ಕೆ ವಾಲಿದೆ. ವಾಹನ ಸವಾರ ನೆಲಕ್ಕೆ ಉರುಳಿದ ತಕ್ಷಣವೇ ಲಾರಿಯ ಹಿಂಬದಿಯ ಚಕ್ರಗಳು ದೇಹದ ಮೇಲೆ ಹರಿದಿದೆ. ಪರಿಣಾಮ ಹೊಟ್ಟೆಯ ಕೆಳಭಾಗದ ಸಂಪೂರ್ಣ ಚಿದ್ರಗೊಂಡಿದ್ದು ಸ್ಥಳದಲ್ಲೇ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳಕ್ಕೆ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶಿವರುದ್ರ ಬಿ.ಎಸ್ ಮತ್ತು ಗ್ರಾಮಾಂತರ ಠಾಣೆಯ ಠಾಣಾಧಿಕಾರಿಗಳಾದ ಮಂಜುನಾಥ್ ಆಗಮಿಸಿ ಮಹಜರು ಮಾಡಿರುತ್ತಾರೆ. ಮೃತನ ಸಂಭಂದಿ ರಿಜ್ವಾನ್ ಎಂಬುವವರು ನೀಡಿದ ದೂರಿನ ಅನ್ವಯ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಲಾರಿ ಚಾಲಕ ಸುರೇಂದ್ರನ್ ಎಂಬುವವರ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಅಪಘಾತ ಪ್ರಕರಣ ದಾಖಲಾಗಿದ್ದು ಪೋಲಿಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
Kodagu
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಅಪ್ಪಚೆಟ್ಟೋಳಂಡ ಡಿಯಾ ಗೆ ಪ್ರಶಸ್ತಿ
ವರದಿ: ಝಕರಿಯ ನಾಪೋಕ್ಲು
ನಾಪೋಕ್ಲು: ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಪೋಕ್ಲು ಬಳಿಯ ಬಲ್ಲಮಾಟಿ ಗ್ರಾಮದ ಅಪ್ಪಚೆಟ್ಟೋಳಂಡ ಎ.ಎಂ. ಡಿಯಾ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.
ಕೊಡಗಿನ ಜವಾಹರ್ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಯಾಗಿರುವ ಡಿಯಾ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೊಳಂಡ ಮಿಥುನ್ ಮಾಚಯ್ಯ ಹಾಗೂ ನೀನಾ ಮಾಚಯ್ಯ ದಂಪತಿಗಳ ಪುತ್ರಿಯಾಗಿದ್ದಾರೆ.
Kodagu
ಕೊಡಗು ಎನ್.ಐ.ಎಂ.ಎ ಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ
ಮಡಿಕೇರಿ: ಕೊಡಗು ಜಿಲ್ಲೆಯ ನಿಮಾ 2022-24 ಸಾಲಿನಲ್ಲಿ ತೋರಿದ ಸರ್ವಾಂಗೀಣ ಚಟುವಟಿಕೆಗಳಿಗೆ ರಾಜ್ಯದ 34 ಶಾಖೆಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆದ ಹಿರಿಮೆಗೆ ಪಾತ್ರವಾಯಿತು.
ರಾಣಿಬೆನ್ನೂರು ನಲ್ಲಿ ನಡೆದ ಎನ್.ಐ.ಎಂ.ಎ ರಾಜ್ಯ ಸಮಿತಿ ಸಭೆಯಲ್ಲಿ ಕೊಡಗು ಜಿಲ್ಲೆಯ ನಿಮಾ, ಪ್ರಥಮ ಸ್ಥಾನ ಪಡೆದುಕೊಂಡಿರುವ ಅಧಿಕೃತ ಘೋಷಣೆ ಮಾಡಲಾಯಿತು.
ಕೊಡಗು ಜಿಲ್ಲೆಯಿಂದ ರಾಜ್ಯ ಪ್ರತಿನಿಧಿಗಳಾದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಶ್ಯಾಮ ಪ್ರಸಾದ್ ಪಿ.ಎಸ್ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ.ಎ.ಆರ್.ಜಿಲ್ಲೆಯ ಪರವಾಗಿ ಪ್ರಶಸ್ತಿ ಪಡೆದುಕೊಂಡರು.
ಕೊಡಗು ಜಿಲ್ಲೆಯ ನೀಮಾ ಮಹಿಳಾ ಘಟಕ ಕೂಡ ಮಹಿಳಾ ವಿಭಾಗದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.
25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಕೊಡಗು ನೀಮಾ ಈ ವರ್ಷದಲ್ಲಿ ಸಾರ್ವಜನಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ನಿಮಾ ಕೊಡಗು ಘಟಕದ ಅಧ್ಯಕ್ಷ ಡಾ. ರಾಜಾರಾಂ ತಿಳಿಸಿದ್ದಾರೆ.
Kodagu
ಜನವರಿ 26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ
ಮಡಿಕೇರಿ : ಉಪನ್ಯಾಸಕಿ ಮತ್ತು ಲೇಖಕಿ ಕೆ. ಜಯಲಕ್ಷ್ಮಿ ಅವರು ಬರೆದಿರುವ ಮತ್ತೆ ವಸಂತ ಹೆಸರಿನ ಕಥಾ ಸಂಕಲನ ಇದೇ ಜನವರಿ 26 ರಂದು ಲೋಕಾರ್ಪಣೆಯಾಗಲಿದೆ.
ನಗರದ ರೆಡ್ ಬ್ರಿಕ್ಸ್ ಇನ್ ಸಭಾಂಗಣದಲ್ಲಿ ಜನವರಿ 26 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮತ್ತೆ ವಸಂತ ಕಥಾ ಸಂಕಲನವನ್ನು ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಲೋಕಾರ್ಪಣೆ ಮಾಡಲಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ. ಪಿ ರಮೇಶ್ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಶಕ್ತಿ ಪತ್ರಿಕೆಯ ಸಂಪಾದಕ
ಜಿ . ಚಿದ್ವಿಲಾಸ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್ ಟಿ., ಬೆಳ್ತಂಗಡಿಯ ಎನ್. ಜಯಪ್ರಕಾಶ್ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮತ್ತೆ ವಸಂತ ಕಥಾ ಸಂಕಲನದ ಕಥೆಗಾರ್ತಿ ಜಯಲಕ್ಷ್ಮಿ ತಿಳಿಸಿದ್ದಾರೆ.
-
Chamarajanagar19 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
Hassan22 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
State14 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
Chamarajanagar11 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
National - International14 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
Hassan17 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
National - International12 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ
-
Kodagu11 hours ago
ಸಾರ್ವಜನಿಕರಿಗೆ ಪಂಗನಾಮ ಹಾಕಿದ್ದ ಫರ್ನೀಚರ್ ಅಂಗಡಿ ಮಾಲೀಕನ ಬಂಧನ