Connect with us

Hassan

ಕೆಲಸ ಮಾಡುವ ಶ್ರಮಿಕರಿಂದ ಸಮಾಜ ಆರೋಗ್ಯವಾಗಿದೆ – ಧರ್ಮೇಶ್

Published

on

ಹಾಸನ: ಇಡೀ ಮಾನವ ಜಗತ್ತು ನಡೆಯುತ್ತಿರುವುದು ಶ್ರಮಿಕರಿಂದ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಸಮಾಜ ಆರೋಗ್ಯವಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಸಿಐಟಿಯು ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಕಾರ್ಮಿಕ ದಿನವಾದ ’ಮೇ ದಿನ’ ಆಚರಣೆಯಲ್ಲಿ ಉದ್ಘಾಟನೆ ಭಾಷಣದಲ್ಲಿ ಮಾತನಾಡಿದ ಅವರು, ಮೇ ದಿನಾಚರಣೆಯನ್ನು ಎಲ್ಲಾ ದೇಶಗಳಲ್ಲಿ ಎಲ್ಲಾ ಕಾರ್ಮಿಕರು ಈ ದಿನವನ್ನು ಆಚರಣೆಯನ್ನು ಮಾಡುತ್ತಾರೆ. ನಮ್ಮ ಕೆಲಸ ಕೇವಲ ೮ ಗಂಟೆ ಮಾತ್ರ ಮಾಡಬೇಕು. ಕಾರ್ಮಿಕರನ್ನು ಯಂತ್ರಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಮಾಲೀಕರು, ಅಧಿಕಾರಿಗಳಿಗೆ ಯಾವುದೇ ರೀತಿಯಾಗಿ ಮಾತನಾಡಬಾರದು ಕಾರ್ಮಿಕರು ಸಮಸ್ಯೆಗಳನ್ನು ಹೇಳಿಕೊಳ್ಳದೇ ದುಡಿಯಬೇಕು ಹಾಗೂ ಪ್ರಶ್ನೆ ಮಾಡಬಾರದು. ಇದರಿಂದ ಸರಕಾರ ಏನು ಬಯಸುತ್ತದೆ ಅಂದರೆ ಕಾರ್ಮಿಕರು ಹೆಚ್ಚು ಸಂಬಳ ಕೇಳಬಾರದು ಎಷ್ಟು ಹಣವನ್ನು ಕೊಡುತ್ತಾರೊ ಅದಕ್ಕೆ ಕಾರ್ಮಿಕರು ದುಡಿಯಬೇಕು ಎಂದು ಅರ್ಥ ಎಂದರು. ಅಧಿಕಾರಿಗಳು ಮತ್ತು ಬಂಡವಾಳದಾರರು ಹೇಳಿದ ಹಾಗೆ ಕಾರ್ಮಿಕರು ದುಡಿಯಬೇಕು. ಈಗ ಭಾರತದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಒಳಪಡುವ ಹಂತಕ್ಕೆ ಈ ದೇಶ ಬಂದಿದೆ. ಮೇ ದಿನ ಆಚರಣೆಗೆ ಬರುವ ಮೊದಲು ಕಾರ್ಮಿಕರು ದಿನವಿಡೀ ರಾಯ್ರಿಯಿಡೀ ದುಡಿಸಿಕೊಳ್ಳಲಾಗುತ್ತಿತ್ತು. ಆಗ ಕಾರ್ಮಿಕರು ಸಣ್ಣ ಸಣ್ಣ ಸಭೆಯನ್ನು ಸೇರಿ ಅಂದರೆ ಗುಂಪುಗಳಾಗಿ ಸಂಘಟನೆಯನ್ನು ಕಟ್ಟುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸಂಘಟನೆಗಳು ವಿಸ್ತಾರವಾಗಿ ಬೆಳದಿದೆ. ೧೯೮೬ ರಲ್ಲಿ ಅಮೇರಿಕಾದಲ್ಲಿ ದಿನದಲ್ಲಿ ೮ ಗಂಟೆಯ ಕೆಲಸಕ್ಕೆ ಆಗ್ರಹಿಸಿ ಕಾರ್ಮಿಕರ ಹೋರಾಟ ನಡೆದು, ಆ ಹೋರಾಟದಲ್ಲಿ ನೂರಾರು ಕಾರ್ಮಿಕರ ನೆನಪಿಗಾಗಿ ಒಂದು ದಿನ ಅಂದರೆ ಕಾರ್ಮಿಕರು ಹುತಾತ್ಮರಾದರು. ಈ ಹೋರಾಟದ ಸ್ಮರಣೆಗಾಗಿ ೧ ರಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಜಗತ್ತಿನಾದ್ಯಂತ ನಡೆಸಲಾಗುತ್ತಿದೆ ಎಂದು ಕಿವಿಮಾತು ಹೇಳಿದರು. ಭಾರತದಲ್ಲಿ ಆಗಿನ ಮದ್ರಾಸು ಈಗಿನ ಚೆನೈನಲ್ಲಿ ಮೊದಲ ಮೇ ದಿನಾಚರಣೆಯು ಪ್ರಾರಂಭವಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕರಿಗೆ ಹಲವು ಹಕ್ಕುಗಳನ್ನು ಜಾರಿಗೆ ತಂದರು. ಕಾರ್ಮಿಕರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಕಾಯ್ದೆಯನ್ನು ಜಾರಿಗೆ ತಂದಿರುತ್ತಾರೆ. ಇಡೀ ಮಾನವ ಜಗತ್ತು ನಡೆಯುತ್ಯಿರುವುದೇ ಶ್ರಮಿಕರಿಂದ ಕಾರ್ಮಿಕರು ಎಲ್ಲಾ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವುದರಿಂದ ಈ ಸಮಾಜ ನೆಡೆಯುತ್ತಿರುವುದು. ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಹೋರಾಟವನ್ನು ನೆಡಸುತ್ತಿದ್ದಾರೆ ಎಂದು ಸಲಹೆ ನೀಡಿದರು. ಸ್ಕೀಮ್ ಗಳಲ್ಲಿ ಕೆಲಸವನ್ನು ಮಾಡುತ್ತಿರುವ ನೌಕರರಲ್ಲಿ ಬಿಸಿಯೂಟ ನೌಕರರನ್ನು ಅತ್ಯಂತ ಕಡಿಮೆ ವೇತನವನ್ನು ಕೊಟ್ಟು ದುಡಿಸಿಕೊಳ್ಳಲಾಗುತ್ತಿದೆ. ಮೋದಿ ಸರ್ಕಾರ ಕಾರ್ಮಿಕರಿಗೆ ನೆಲಮಟ್ಟದ ಕೂಲಿಯನ್ನು ದಿನವೊಂದಕ್ಕೆ ೧೭೮ ರೂ ನಿಗದಿ ಮಾಡಿ ಕಾರ್ಮಿಕರನ್ನು ಶೋಷಣೆಯನ್ನು ಮಾಡಲು ಹೊರಟಿದೆ. ಕಾರ್ಮಿಕರ ಶ್ರಮ ಶಕ್ತಿಯನ್ನು ಕಾನೂನಗಳ ಕಾಯಿದೆ ಅಂದರೆ ಕನಿಷ್ಠ ವೇತನ ಕಾಯಿದೆಯನ್ನು ತೆಗೆದು ಎಲ್ಲಾ ವಿಭಾಗದಲ್ಲಿ ಗುತ್ತಿಗೆ ಕಾರ್ಮಿಕ ಕಾಯಿದೆಯನ್ನು ತರಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಇತರೆ ಇಲಾಖೆಯಲ್ಲಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಾರ್ಮಿಕರ ಶ್ರಮ ಶಕ್ತಿಯನ್ನು ಲೂಟಿ ಮಾಡುತ್ತಿದೆ ಹಾಗೂ ಬಂಡವಾಳ ಶಾಹಿಗಳ ಪರವಾಗಿ ನೀತಿಯನ್ನು ಜಾರಿ ಮಾಡುತ್ತಿದೆ. ಹೀಗಾಗಿ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡದೇ ಸಮಗ್ರ ಭವಿಷ್ಯ ನಿಧಿ ಯೋಜನೆಯನ್ನು ಜಾರಿ ಮಾಡದೇ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ನಮ್ಮ ಸಂಘಟನೆಯನ್ನು ಗಟ್ಟಿ ಮಾಡುವುದರ ಜೊತೆಗೆ ನಮ್ಮ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಹಿರಿಯ ದಲಿತ ಮುಖಂಡರಾದ ಹೆಚ್.ಕೆ.ಸಂದೇಶ್ ಅವರು ಮಾತನಾಡುತ್ತಾ ಕಾರ್ಲ್ ಮಾರ್ಕ್ಸ್ ಅವರು ಬರೆದ ಕೃತಿ ಕಾರ್ಮಿಕರ ಪರವಾಗಿ ಇತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿ ಕೆಲಸವನ್ನು ಮಾಡಿದ್ದರು. ನಮ್ಮನ್ನು ಆಳುವ ಸರಕಾರಗಳು ಕಾರ್ಮಿಕರ ಪರವಾಗಿಲ್ಲ ಅವರು ಬಂಡವಾಳಷಾಹಿಗಳ ಜೊತೆ ಕೈಜೋಡಿಸಿ ಅವರ ಪರವಾದಂತಹ ನೀತಿಯನ್ನು ಜಾರಿಗೆ ತರಲು ಹೊರಟಿದೆ. ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಃಎP ಸರ್ಕಾರ ವರ್ಷಕ್ಕೆ ೨ ಕೋಟಿ ಉದ್ಯೋಗವನ್ನು ಯುವಜನರಿಗೆ ಕೊಡುತ್ತೇವೆಂದ ಸರಕಾರ ಒಂದು ಉದ್ಯೋಗವನ್ನು ಕೊಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಮೇ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಂ.ಜಿ. ಪೃಥ್ವಿ ಸಂಚಾಲಕರು ದಲಿತ ಹಕ್ಕುಗಳ ಸಮಿತಿ ಹಾಸನ, ವಿಜಯಕುಮಾರ್ ಅಧ್ಯಕ್ಷರು ಮಾದಿಗದಂಡೋರ ಹೋರಾಟ ಸಮಿತಿ, ಜಯಪ್ರಕಾಶ್ ಕಾರ್ಯದರ್ಶಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಕಾಂತರಾಜು ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಎಂ.ಮಂಜುಳಾ ಪ್ರಧಾನ ಕಾರ್ಯದರ್ಶಿ ಅಂಗನವಾಡಿ ನೌಕರರ ಸಂಘ, ಮುಬಷೀರ ಅಹಮದ್, ಬ್ಯಾಂಕ್ ನೌಕರರ ಸಂಘಟನೆಯ ಸುಬ್ರಮಣ್ಯ ಸೌಮ್ಯ ತೋಟ ಕಾರ್ಮಿಕರ ಸಂಘ, ಕೆ.ಟಿ. ಹೊನ್ನೇಗೌಡ ಪ್ರಧಾನ ಕಾರ್ಯದರ್ಶಿ ಗ್ರಾ.ಪಂ. ನೌಕರರ ಸಂಘ, ಗ್ಯಾರಂಟಿ ರಾಮಣ್ಣ ಇನ್ನಿತರು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಜನತೆಯ ಪ್ರೀತಿಗೆ ಮನಸೋತ ಡಿಸಿ ಕೆ.ಎಸ್‌. ಲತಾ ಕುಮಾರಿ

Published

on

ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸರ್ವಿಸ್ ರಸ್ತೆಯ ಭೂಮಿಯ ವಿಚಾರವಾಗಿ ಚರ್ಚಿಸಲು ಮೊದಲನೇ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರನ್ನು ಗ್ರಾಮಸ್ಥರು ಉನ್ನತ ಸ್ಥಾನದಲ್ಲಿರುವ ಅಧಿಕಾರಿ ಎನ್ನದೆ ತಮ್ಮ ಊರಿನ ಮನೆಮಗಳು ಎಂದು ಅವರನ್ನು ಪ್ರೀತಿ ವಿಶ್ವಾಸದಿಂದ ಸಾಂಪ್ರದಾಯಕವಾಗಿ ಸತ್ಕರಿಸಿ ಗೌರವಿಸಿದರು.‌


ಗ್ರಾಮಕ್ಕೆ ಮೊದಲನೇ ಬಾರಿ ಭೇಟಿ ನೀಡಿದಾಗ ಜಿಲ್ಲಾಧಿಕಾರಿ ಅವರು ನಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ತಾಳ್ಮೆಯಿಂದ ಕೇಳಿ ಪರಿಹರಿಸುವ ಭರವಸೆಯನ್ನು ನೀಡಿದ್ದರು. ಈ ತರಹದ ಅಧಿಕಾರಿಗಳು ಪ್ರತಿಯೊಂದು ಜಿಲ್ಲೆಗಳಲ್ಲಿ ಇದ್ದರೆ ರೈತರ ಸಮಸ್ಯೆ ಹಾಗೂ ಸಾರ್ವಜನಿಕರ ಸಮಸ್ಯೆ ಬಗೆ ಹರಿಯಲಿದೆ ಎಂದು ಊರಿನ ಮಹಿಳೆಯು ಜಿಲ್ಲಾಧಿಕಾರಿಯವರ ಕಾರ್ಯವನ್ನು ಕೊಂಡಾಡಿದರು.

ಎಂಟು ವರ್ಷಗಳಿಂದ ಇತ್ಯರ್ಥವಾಗದ ಸಮಸ್ಯೆಯನ್ನು ಅವರು ಗ್ರಾಮಕ್ಕೆ ಭೇಟಿ ನೀಡಿ ಕಾನೂನು ಪ್ರಕಾರವಾಗಿ ತಾಳ್ಮೆಯಿಂದ ಅಧಿಕಾರಿಗಳ ಜೊತೆ ಚರ್ಚಿಸಿ ಇತ್ಯರ್ಥಪಡಿಸಿದ್ದರು.


ಈ ಸಂದರ್ಭದಲ್ಲಿ ಗ್ರಾಮದ ಜನರು ಜಿಲ್ಲಾಧಿಕಾರಿಯವರ ಜೊತೆ ಪ್ರೀತಿ ವಿಶ್ವಾಸದಿಂದ ಅಧಿಕಾರಿ ಎನ್ನದೆ ನಡೆದುಕೊಂಡ ರೀತಿಗೆ ಮನಸೋತ ಜಿಲ್ಲಾಧಿಕಾರಿಯವರು ಬೆಂಡೆಕೆರೆ ಗ್ರಾಮದ ಜನತೆಗೆ ಪತ್ರಿಕಾ ಮಾಧ್ಯಮದವರ ಮೂಲಕ ಕೃತಜ್ಞತೆ ಸಲ್ಲಿಸಿದರು.

Continue Reading

Hassan

ಅದ್ದೂರಿಯಾಗಿ ಜರುಗಿದ 18ನೇ ವರ್ಷದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ

Published

on

ಆಲೂರು: ತಾಲೂಕಿನ ಕೆ. ಕಾಟೀಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶ್ರೀ ಉದ್ಭವ ಶನೈಶ್ಚರ ಸ್ವಾಮಿಯ 18ನೇ ವರ್ಷದ ಜಾತ್ರಾ ಮಹೋತ್ಸವವೂ ಅತ್ಯಂತ ವೈಭವದಿಂದ ಜರುಗಿತು. ಈ ಸಂಭ್ರಮದ ನಡುವೆ ಗ್ರಾಮದ ಯುವಕರು ಜಾತಿ-ಮತದ ಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ನೀಡುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.

​ವೈಭವದ ರಥೋತ್ಸವ ಮತ್ತು ಸಾಂಸ್ಕೃತಿಕ ಮೆರುಗು

ಫೆ.6 ರಿಂದ 7 ರವರೆಗೆ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಗ್ರಾಮದ ದೇವತೆಗಳನ್ನು ಚಿನ್ನ ಹಾಗೂ ಬೆಳ್ಳಿಯ ರಥಗಳ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಗಾಸೆ, ಡೋಲು ಕುಣಿತದಂತಹ ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಕಳೆ ತಂದವು. ಭಕ್ತಾದಿಗಳು ಸಾಗರೋಪಾದಿಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.


​ಸೌಹಾರ್ದತೆಯ ಸಂದೇಶ ಸಾರಿದ ಕ್ರಿಕೆಟ್ ಪಂದ್ಯಾವಳಿ

ಜಾತ್ರೆಯ ಮರುದಿನವಾದ ಭಾನುವಾರ , ಗ್ರಾಮದ ಯುವಕರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯು ಎಲ್ಲರ ಗಮನ ಸೆಳೆಯಿತು. “ನಾವೆಲ್ಲರೂ ಒಂದೇ” ಎಂಬ ಉದಾತ್ತ ಉದ್ದೇಶದೊಂದಿಗೆ ಗ್ರಾಮದ ಎಲ್ಲಾ ವರ್ಗದ ಯುವಕರು ಯಾವುದೇ ಭೇದ-ಭಾವವಿಲ್ಲದೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಕ್ರೀಡೆಯ ಮೂಲಕ ಸಮಾಜದಲ್ಲಿ ಭಾವೈಕ್ಯತೆಯನ್ನು ಬೆಳೆಸಬಹುದು ಎಂಬುದನ್ನು ಈ ಯುವಕರು ಸಾಬೀತುಪಡಿಸಿದರು.

ಪ್ರಮುಖ ಸಹಕಾರ

ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಯೋಗೀಶ್ ಅವರ ಮಾರ್ಗದರ್ಶನ ಹಾಗೂ ಪ್ರಧಾನ ಅರ್ಚಕರಾದ ರವಿ ಸ್ವಾಮಿ ಅವರ ಆಶೀರ್ವಾದವಿತ್ತು.

ಯುವಶಕ್ತಿಯ ಸಂಘಟನೆ:

ಗ್ರಾಮದ ಯುವಕರಾದ ಕೆ.ಡಿ.ರವಿ, ಪ್ರಸನ್ನ, ಸೋಮ, ಪ್ರತಾಪ್, ಸುನಿಲ್, ಶ್ರೀಧರ, ಮದನ್, ಮನು (ಭಾಷಾ), ಚಂದನ್, ಮನು ಉಗನೆ, ಗಿರೀಶ್, ಕೆ.ಟಿ. ಮಂಜುನಾಥ್  ಹಾಗೂ ಇನ್ನಿತರ ಯುವಕರು ಹಗಲಿರುಳು ಶ್ರಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

​ಗ್ರಾಮದ ಹಿರಿಯರು ಯುವಕರ ಈ ಉತ್ಸಾಹ ಮತ್ತು ಒಗ್ಗಟ್ಟನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆ. ಕಾಟೀಹಳ್ಳಿಯ ಈ ಮಾದರಿ ಕಾರ್ಯ ಇತರ ಗ್ರಾಮಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ

Continue Reading

Hassan

ಆರ್‌ಟಿಐ ಕಾರ್ಯಕರ್ತನ ಮೇಲೆ ಗ್ರಾ.ಪ. ಮಾಜಿ ಸದಸ್ಯನಿಂದಲೇ ಹಲ್ಲೆ ಆರೋಪ

Published

on

ಹಾಸನ: ಹಸು ಮಾರಾಟ ಮಾಡಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡು ರಾಜ್ಯದ ಗಮನ ಸೆಳೆದಿದ್ದ ರೈತನ ಮೇಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ರವಿ ಎಂಬವರು ಜಿತೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ. ಸದಸ್ಯ ಆನಂದ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.

ನವೆಂಬರ್ ತಿಂಗಳಲ್ಲಿ ಕಾಳೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬರೊಬ್ಬರಿ 16,370 ಪುಟಗಳ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದಿದ್ದ ರವಿ, ಇದಕ್ಕಾಗಿ 32,340 ರೂ. ಶುಲ್ಕವನ್ನು ಪಾವತಿಸಿದ್ದರು. ದಾಖಲೆಗಳ ಜೆರಾಕ್ಸ್‌ಗೆ ಹಣ ಹೊಂದಿಸಲು ತನ್ನ ಹಸುವನ್ನು ಮಾರಾಟ ಮಾಡಿದ್ದರು. ಅಲ್ಲದೆ
ಗ್ರಾಮ ಪಂಚಾಯಿತಿಗೆ ತೆರಳಿ, ಎತ್ತಿನಗಾಡಿಯಲ್ಲಿ ದಾಖಲೆಗಳನ್ನು ಸಾಗಿಸಿಕೊಂಡು ಬಂದಿದ್ದ ರವಿ, ಪಡೆದ ದಾಖಲೆಗಳ ಆಧಾರದ ಮೇಲೆ ಅನುದಾನ ದುರುಪಯೋಗ ಆರೋಪಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ದೂರು ದಾಖಲಾಗಿದ ಬಳಿಕವೇ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರವಿ ಆರೋಪಿಸಿದ್ದಾರೆ.

ದಿನಸಿ ಸಾಮಾನು ಖರೀದಿಗೆ ತೆರಳಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಹಲ್ಲೆಯಿಂದ ಗಾಯಗೊಂಡಿರುವ ರವಿ ಸದ್ಯ ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

Trending

error: Content is protected !!