Mysore
ಅಧಿಕಾರಿಗಳ ಬೆವರಿಳಿಸಿದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು

ಅಧಿಕಾರಿಗಳ ಬೆವರಿಳಿಸಿದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು* ಜಿಲ್ಲಾಧಿಕಾರಿ ರಾಜೇಂದ್ರ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಮ್ಮ ಜನರಿಗೆ ಮುಖ್ಯವಾಗಿ ಆರೋಗ್ಯ ಶಿಕ್ಷಣ ಅತ್ಯವಶ್ಯಕ ಆದ್ದರಿಂದ ಯಾವ ವೈದ್ಯರು ಅನಾವಶ್ಯಕವಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಬಾರದು ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಪ್ರಯತ್ನ ಪಡಬೇಕು ಎಂದು ಕಿವಿ ಮಾತು ಹೇಳಿದರುನಂತರ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಹಣ ಪಡೆದು ಕೆಲಸ ಮಾಡುತ್ತಿರುವುದಾಗಿ ನನ್ನ ಗಮನಕ್ಕೆ ಬಂದಿದೆ ಅಂತವರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳುವುದಾಗಿ ಹೆಚ್ಚರಿಸಿದರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಜೊತೆಗೂಡಿ ಸಭೆ ನಡೆಸಿ ನನಗೆ ಗರ್ಭೀಣಿಯರ ಅಪೌಷ್ಟಿಕತೆ ಬಗ್ಗೆ ವರದಿ ನೀಡಬೇಕೆಂದು ತಿಳಿಸಿದರು
ಎಲ್ಲಾ ಇಲಾಖೆಗಳು ಕಾನೂನು ರೀತಿ ಕಾರ್ಯಕ್ರಮ ಹೋದಲ್ಲಿ ನಿಮ್ಮನ್ನು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು
ಪಟ್ಟಣದ ಹೃದಯ ಭಾಗವಾದ ಹ್ಯಾಂಡ್ ಪೋಸ್ಟ್ ನಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತಿದ್ದು ಪುರಸಭೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಕೂಡಲೇ ಸಿ ಸಿ ಕ್ಯಾಮರ ಅಳವಡಿಸಿ ಕಾನೂನು ಸುವ್ಯವಸ್ಥೆಗೆ ಅನುವು ಮಾಡಬೇಕು ಮತ್ತು ವಾಹನ ನಿಲುಗಡೆಗೆ ನಿಗದಿತ ಸ್ಥಳಗುರುತು ಒಡಿಸಿ ಎಲ್ಲೆಂದರಲ್ಲೇ ವಾಹನ ನಿಲ್ಲಿಸುವವರಿಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು
ಸರಗೂರಿನಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಥಳ ಗುರುತುಪಡಿಸುವಂತೆ ಸೂಚನೆ ನೀಡಿದರು
ಪ್ರಕೃತಿ ವಿಕೋಪದಡಿ ಸರಗೂರು ಭಾಗದಲ್ಲಿ ಸಾವಿರದ ನೂರು ಶಿಥಿಲವಾದ ಬಗ್ಗೆ ಪ್ರತಿಭಟನೆ ನಡೆಸಿದರು ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು
ನ್ಯಾಯ ಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಲೋಪವಾಗಿದೆ ಎಂದು ಸರ್ವಾಜನಿಕ ವಲಯದಿಂದ ಹಲವಾರು ಬಾರಿ ದೂರು ಬಂದಿದ್ದು ಇದನ್ನು ಸರಿಪಡಿಸಿ ಕೊಳ್ಲಬೇಕೆಂದು ಅಧಿಕಾರಿಗಳಿಗೆ ಖಡಕ್ ಹೆಚ್ಚರಿಕೆ ನೀಡಿದರು.
ಇಂದು ತಾಲೋಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶಾಸಕ ಅನಿಲ್ ಚಿಕ್ಕಮಾದು ಸರ್ಕಾರ ರಚನೆಯಾಗಿ ನೂರು ದಿನಗಳಾಗಿದ್ದು ಜನರಿಗೆ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಾಕಿದ್ದು ಇದನ್ನ ಕರ್ತವ್ಯ ನಿಷ್ಠೆಯಿಂದ ಮಾಡಿ. ಇಲ್ಲಾ ಎಂದರೆ ಜಾಗ ಖಾಲಿ ಮಾಡಿ ಕೆಲಸ ಮಾಡುವ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಿ ಎಂದು ತಾಕೀತು ಮಾಡಿದರು.
ಈ ಸಭೆಯಲ್ಲಿ ತಾಲೋಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದರು.
Mysore
ನಂಜನಗೂಡಿನಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ
ಚಿಕ್ಕ ಜಾತ್ರೆ ಮಹೋತ್ಸವ ಮಂಗಳವಾರ ವೈಭವಯುತವಾಗಿ ನೆರವೇರಿತು.
ಬೆಳಿಗ್ಗೆ 10.45 ರಂದು ಸಲ್ಲುವ ಶುಭ ಮಕರ ಲಗ್ನದಲ್ಲಿ ದೇಗುಲದ ಪ್ರಧಾನ ಆಗಮಿಕ ಜೆ. ನಾಗ ಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಯ೯ ನೆರವೇರಿಸಿ ರಥಗಳಿಗೆ ಪೂಜೆ ಸಲ್ಲಿಸಿದರು.
ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಉತ್ಸವ ರಥಕ್ಕೆ ಚಾಲನೆ ನೀಡಿ ತೇರನ್ನು ಎಳೆದರು.
ಹೂವಿನ ಹಾರ ಅಲಂಕೃತಗೊಂಡ ರಥೋತ್ಸವ ನಂಜುಂಡೇಶ್ವರ ಸ್ವಾಮಿಯ ಹಾಗೂ ಪಾರ್ವತಿ ದೇವಿ ಸಮೇತ ಉತ್ಸವ ಮೂರ್ತಿ, ಗಣಪತಿ ಚಂಡಿಕೇಶ್ವರ, ಸೇರಿದಂತೆ ಮೂರು ರಥಗಳು ರಥ ಬೀದಿಯಲ್ಲಿ
ರಥಗಳನ್ನು ಸಾವಿರಾರು ಭಕ್ತಾದಿಗಳು ಹಗ್ಗ ಹಿಡಿದು ಜೈ ನಂಜುಂಡೇಶ್ವರ, ಜೈ ಶ್ರೀಕಂಠೇಶ್ವರ, ಜೈ ನಂಜುಂಡ, ಎಂಬ ಘೋಷಣೆಗಳನ್ನು ಕೂಗುತ್ತಾ ಎಳೆದರು.
ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ರಥಕ್ಕೆ ಹಣ್ಣು ದವನ ಎಸೆದು ಪುನೀತರಾದರು.
ರಥ ಬೀದಿಗಳಲ್ಲಿ ನಿಧಾನವಾಗಿ ಚಲಿಸಿ ಭಕ್ತಾದಿಗಳು ಭಕ್ತಿಯಿಂದ ನಮಿಸಿದರು.
ಪೋಲಿಸ್ ಇಲಾಖೆಯಿಂದ ಬಿಗಿ ಬಂದೋಬಸ್ತು ಇರುವುದರಿಂದ ರಥದಲ್ಲಿ ಯಾವುದೇ ಅಡೆ-ತಡೆಗಳಿಲ್ಲದೆ ಮೂರು ರಥಗಳು 12.50 ಗಂಟೆಗೆ ಸ್ವಸ್ಧಾನಕ್ಕೆ ಸೇರಿದವು.
ಜಾತ್ರಾಯಲ್ಲಿ: ಶಾಸಕರಾದ ದರ್ಶನ್ ಧ್ರುವನಾರಾಯಣ್, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಕಾರ್ಯನಿವ೯ಹಣಾಧಿಕಾರಿ ಎಂ. ಜಗದೀಶ್ ಕುಮಾರ್, ಪೌರಾಯುಕ್ತಧಿಕಾರಿ ನಂಜುಂಡಸ್ವಾಮಿ, ಡಿಎಸ್ಪಿ ಗೋವಿಂದ್ ರಾಜ್, ಇದ್ದರು.
Mysore
ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.

ಮೈಸೂರು : ರಾಜ್ಯದ ಮಹತ್ವದ ಯೋಜನೆ ಗೃಹಲಕ್ಷ್ಮಿ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಯೋಜನೆ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ 2 ಸಾವಿರ ಅರ್ಪಣೆಯಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್‌ಗೆ ಪತ್ರ ಬರೆದಿದ್ದರು.ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಪತ್ರಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸೂಚಿಸಿದ್ದ ಡಿ ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದ್ದು, ಅದರಂತೆ 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಾಗಿದೆ.
ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಹಣ ಸಂದಾಯವಾಗಿದೆ.1,18,000 ರೂಪಾಯಿ ಹಣ ದೇಗುಲಕ್ಕೆ ನೀಡಿಕೆಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಹಣ ಸಂದಾಯ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯ ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.
Mysore
ಪತ್ರಕರ್ತ ಪುನೀತ್ ಗೆ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿ

ಪಿರಿಯಾಪಟ್ಟಣ: ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಜನಮಿತ್ರ ವರದಿಗಾರ ಪತ್ರಕರ್ತ ಸಿ.ಜಿ ಪುನೀತ್ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ನೀಡಲಾಗುವ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಪ್ರಸ್ತಕ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದ ಸೇವೆಗೆ ಸಿ.ಜಿ ಪುನೀತ್ ಆಯ್ಕೆಯಾಗಿದ್ದು, ನ.29ರ ಬುಧವಾರ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕನ್ನಡಾಂಬೆ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ