Mandya
ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರಾ: ಸಂಸದ ಪ್ರತಾಪ್‌ಸಿಂಹ ಕಿಡಿ

ಮಂಡ್ಯ : ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್‌ಗಾಂಧಿ ವಯನಾಡಿಗೆ ಹೋಗಬಹುದು, ಮೈಸೂರಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೂ ಓಡಿ ಹೋಗಬಹುದು ಆದರೆ, ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರು ಆಗುತ್ತಾರಾ ಎಂದು ಸಂಸದ ಪ್ರತಾಪ್‌ಸಿಂಹ ಕಿಡಿಕಾರಿದರು.
ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೂ.4 ರಂದು ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ ಆಯ್ಕೆ ಆಗುತ್ತಾರೆ. ಕಾಂಗ್ರೆಸ್‌ನವರ ಸ್ಥಿತಿ 40 ಸ್ಥಾನ ದಾಟುವುದು ಕಷ್ಟವಾಗಿದೆ. ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು. ಮೋದಿ ಸಂಪುಟದಲ್ಲಿ ಎಚ್ಡಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ, ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್‌ಗಾಂಧಿ ವಯನಾಡಿಗೆ ಹೋಗಬಹುದು. ಮೈಸೂರಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೆ ಓಡಿ ಹೋಗಬಹುದು. ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರು ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಂತು ಬರಗಾಲ ಕಾಲಿಟ್ಟಿತು, ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆದಾಗ ರಾಜ್ಯ ಸಮೃದ್ಧವಾಗಿತ್ತು. ಸಿದ್ದರಾಮಯ್ಯ ಸಿಎಂ ಆದಾಗ ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಕಾವೇರಿ ವಿಚಾರದಲ್ಲಿ ಹಿನ್ನಡೆ ಆದಾಗ ಸಚಿವ ಚಲುವರಾಯಸ್ವಾಮಿ ಧ್ವನಿ ಎತ್ತಲಿಲ್ಲ. ಸ್ಟಾಲಿನ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕಾವೇರಿ ವಿಚಾರದಲ್ಲಿ ಎದೆಗಾರಿಕೆ ತೋರಲಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಮಂಡ್ಯ ರೈತರ ಹಿತ ಕಾಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರವಾಗಲಿ ಇಲ್ಲಿನ ಇದೇ ಪಕ್ಷದ ನಾಯಕರಾಗಲಿ ಮಾಡಲಿಲ್ಲ. ಆದರೆ, ಕಾವೇರಿ ವಿಚಾರದಲ್ಲಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ದೇವೇಗೌಡರು, ಈಗ ಎಚ್‌ಡಿಡಿ ಮಗ ಅಭ್ಯರ್ಥಿ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಈಗಾಗಲೇ ಎಚ್‌ಡಿಕೆ ಅವರು 2 ಲಕ್ಷ ಮತದ ಅಂತರದಲ್ಲಿ ಗೆದ್ದಾಗಿದೆ ಎಂದು ಟಾಂಗ್ ನೀಡಿದರು.
ಜಿಲ್ಲೆಯಲ್ಲಿ ಅಂಬರೀಷ್ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ದೇವೇಗೌಡರ ಇರಲಿಲ್ಲ ಎಂದರೆ ಚಲುವರಾಯಸ್ವಾಮಿ ಜಿಪಂ ಸದಸ್ಯ ಕೂಡ ಆಗುತ್ತಿರಲಿಲ್ಲ ನೆನಪಿರಲಿ? ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕುಮಾರಣ್ಣ ಗೆಲ್ಲಿಸಬೇಕು. ಹಾಗಾಗಿ ಮೈತ್ರಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರು ಹಲಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜಾತಿಗಣತಿ ಅನ್ಯಾಯ ವಿರೋಧಿಸಿದರೂ ನೀವು ಸ್ಪಂದಿಸಲಿಲ್ಲ. ಅವತ್ತು ನಿಮಗೆ ಒಕ್ಕಲಿಗ ಸ್ವಾಮೀಜಿ ಬಗ್ಗೆ ಗೌರವ ಬರಲಿಲ್ವಾ? ಇವತ್ತು ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆಯಾ? ಕಾಂಗ್ರೆಸ್ 135 ಸೀಟ್ ಗೆಲ್ಲಲು ಕಾರಣರಾದ ಡಿ.ಕೆ.ಶಿವಕುಮಾರ್ ಅವರನ್ನು ಏಕೆ ಸಿಎಂ ಆಗಲು ಬಿಡಲಿಲ್ಲ. ಸಿದ್ದರಾಮಯ್ಯಗೆ ಒಕ್ಕಲಿಗರ ಮೇಲೆ ಪ್ರೀತಿ ಇಲ್ಲವೇ? ಜೆಡಿಎಸ್ ಪಕ್ಷ ಸಾಕಷ್ಟು ಒಕ್ಕಲಿಗರಿಗೆ ಅವಕಾಶ ಮಾಡಿಕೊಟ್ಟಿದೆ. ಒಕ್ಕಲಿಗ ನಾಯಕತ್ವ ಬೆಳೆಸಿದ್ದು ದೇವೇಗೌಡರು. ಇವರು ಸಮುದಾಯದ ಪ್ರಶ್ನಾತೀತ ನಾಯಕ. ಕಾವೇರಿ ಕಾಯಲು ಕುಮಾರಸ್ವಾಮಿ ಅವರನ್ನು ಕಳುಹಿಸೋಣ ಎಂದರು.
Mandya
ದೇವಾಲಯಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳು : ಎನ್.ಚಲುವರಾಯಸ್ವಾಮಿ

ಕೆ.ಆರ್.ಪೇಟೆ : ದೇವಾಲಯಗಳು ನಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳಾಗಿದ್ದು, ದೈವದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ನಿಶ್ಚಿತ ಎಂದು ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಅವರು ಕೆ.ಆರ್.ಪೇಟೆ ಗ್ರಾಮ ದೇವತೆ ಶ್ರೀ ದೊಡ್ಡಕೇರಮ್ಮ ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀರಥದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶಿಥಿಲವಾಗಿದ್ದ ಗ್ರಾಮದೇವತೆಯ ದೇವಾಲಯವನ್ನು ವಾಸ್ತುಬದ್ಧವಾಗಿ ನೂತನವಾಗಿ ನಿರ್ಮಿಸಿ ನಾಗರೀಕ ಸಮಾಜ ಮೆಚ್ಚುವಂತಹ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ದೇವರ ಸ್ಮರಣೆ ಹಾಗೂ ಪೂಜೆಯಿಂದ ಕಾಲ ಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆಯಾಗಿ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲಸಲಿ. ಅನ್ನಧಾತರಾದ ರೈತರ ಬಾಳು ಬಂಗಾರವಾಗಲಿ ಎಂದು ಅವರು ಶುಭ ಹಾರೈಸಿದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರು ನೀಡಿದ ಹೃದಯಸ್ಪರ್ಶಿ ಅಭಿನಂದನೆಯನ್ನು ಸ್ವೀಕರಿಸಿದರು.
ಸಮಾಜ ಸೇವಕರಾದ ಸ್ಟಾರ್ ಚಂದ್ರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ. ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ನಾಗೇಂದ್ರಕುಮಾರ್, ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ, ಸ್ಥಾಯಿಸಮಿತಿ ಅಧ್ಯಕ್ಷ ರವೀಂದ್ರಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್, ಚಿನಕುರಳಿ ರಮೇಶ್, ಉಧ್ಯಮಿ ಬಿ. ರಾಜಶೇಖರ್, ವಕೀಲ ಬಿ. ನಾಗೇಶ್, ಪುರಸಭೆ ಸದಸ್ಯರಾದ ಕೆ.ಎಸ್. ಪ್ರಮೋದ್, ಬಸ್ ಸಂತೋಷ್, ನಟರಾಜ್, ಮಹಾದೇವಿ, ಸುಗುಣ, ಕೆ.ಸಿ.ಮಂಜುನಾಥ್, ಗ್ರಾಮದ ಯಜಮಾನರಾದ ಹೆಗ್ಗಡಿ ಕೃಷ್ಣೆಗೌಡ, ಪಟೇಲ್ ಚಂದ್ರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೆಗೌಡ, ಕೆ.ಸಿ. ವಾಸು, ಉಧ್ಯಮಿ ಹೆಚ್.ಎಂ.ಸಿ ಚಂದ್ರಶೇಖರ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಅಶೋಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ, ಗ್ರಾಮದ ಮುಖಂಡರಾದ ಪಟೇಲ್ ಚಂದ್ರಣ್ಣ, ಹೆಗ್ಗಡಿ ಕೃಷ್ಣೆಗೌಡ ಅವರನ್ನು ಸಚಿವ ಚಲುವರಾಯಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.
Mandya
ಬೀದಿಬದಿ ವ್ಯಾಪಾರಿಯ ಆಟೋ ಸಮೇತ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಅಪಾರ ನಷ್ಟ

ನಾಗಮಂಗಲ : ಸಂತೆ ಮತ್ತು ಜಾತ್ರೆಗಳಲ್ಲಿ ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಗೀತಾ ಮಹೇಶ್ ಅವರಿಗೆ ಸೇರಿದ ವಾಹನ ಮತ್ತು ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳಿಗೆ ಕಿಡಿಗೇಡಿಗಳು ಗುರುವಾರ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಬೆಳ್ಳೂರು ಕ್ರಾಸ್ ಕೆಂಬಾರೆ ಗ್ರಾಮದ ಗೀತಾ ಮತ್ತು ಮಹೇಶ್ ವ್ಯಾಪಾರಕ್ಕೆಂದು ಸಾಲ ಮಾಡಿಕೊಂಡು ವಾಹನ ಖರೀಧಿಸಿ ತಾಲೂಕಿನ ವ್ಯಾಪ್ತಿಯ ಸಂತೆ. ಜಾತ್ರೆ. ಹಬ್ಬ ಹರಿದಿನಗಳಲ್ಲಿ ಮಕ್ಕಳ ಆಟದ ಸಾಮಗ್ರಿಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ತಡರಾತ್ರಿ ಆಟೋ ಸಮೇತ ಸಾಮಗ್ರಿಗಳಿಗೆ ಬೆಂಕಿ ಹೊತ್ತಿ ಭಸ್ಮವಾಗಿರುವುದರಿಂದ ಕುಟುಂಬ ಬೀದಿಗೆ ಬಿಂದಿದ್ದು ಕುಟುಂಬಸ್ಥರು ರೋಧಿಸುತ್ತಿದ್ದಾರೆ.
ಮಕ್ಕಳ ಆಟದ ಸಾಮಗ್ರಿಗಳನ್ನು ತಾಲೂಕಿನ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುತ್ತಿದ್ದವು. ನಿನ್ನೆ ದಿವಸ ಹಬ್ಬದ ಪ್ರಯುಕ್ತ ವ್ಯಾಪಾರ ಮುಗಿಸಿಕೊಂಡು ಮನೆ ಮುಂದೆ ನಿಂತಿದ್ದ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹತ್ತಿಸಿದ್ದಾರೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ ನಮಗೆ ನ್ಯಾಯ ಬೇಕೆಂದು ದಂಪತಿಗಳು ಮನವಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
Mandya
ವಿವಿಧ ಬೇಡಿಕೆಗಳಿಗೆ ಒತ್ತಾಯಹಿಸಿ ಏ.26 ರಂದು ಈಡುಗಾಯಿ ಒಡೆಯುವ ಚಳವಳಿ : ವಾಟಾಳ್ ನಾಗರಾಜ್

ಮಂಡ್ಯ: ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರಂತರ ಒತ್ತಾಯ ಮಾಡುತ್ತಿದ್ದರೂ ಬೆಳಗಾವಿಯಲ್ಲಿ ಅಧಿವೇಶನ ನಡೆದರು ಪ್ರಯೋಜನವಾಗಿಲ್ಲ. ಹಾಗೂ ರಾಜ್ಯದಲ್ಲಿ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.26ಕ್ಕೆ ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳವಳಿ ಹಮ್ಮಿಕೊಳಲಾಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರಂತರ ಒತ್ತಾಯ ಮಾಡಲಾಗುತ್ತಿದ್ದು, ೧೯೫೬ರಲ್ಲಿ ಕರ್ನಾಟಕ ಏಕೀಕರಣ ಸಂದರ್ಭದಿಂದಲೂ ಹೋರಾಟ ಮಾಡಲಾಗಿದೆ. ಆದರೂ ಅಂದಿನಿಂದ ಎಲ್ಲ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆದರು ಪ್ರಯೋಜನ ಆಗಿಲ್ಲ. ಎಂಇಎಸ್ ರಾಜ್ಯದ ಗಡಿನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇಂದಿಗೂ ಅದನ್ನು ಯಾವುದೇ ರಾಜ್ಯ ಸರ್ಕಾರ ಇಡೇರಿಸಿಲ್ಲ ಎಂದು ಗುಡುಗಿದರು.
ಕಳಸಬಂಡೂರಿ, ಮೇಕೆದಾಟು ಜಾರಿಯಾಗಿಲ್ಲ, ರಾಜ್ಯದಲ್ಲಿ ಪರಭಾಷಿಕರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಕರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ ವಾಟಾಳ್ ನಾಗರಾಜ್, ಕನ್ನಡಿಗರಿಗೆ ಉದ್ಯೋಗದ ಬಗ್ಗೆ ಕ್ರಮ ಕೈಗೊಂಡಿಲ್ಲ. ಅದಕ್ಕೆ ಪೂರಕವಾದ ಸರೋಜಿನಿಮಹಿಷಿ ವರದಿ ಜಾರಿಯಾಗಿಲ್ಲ. ಐಟಿಬಿಟಿ ಮಸೂದೆ ಜಾರಿಯಾಗಿಲ್ಲ. ಈ ಬಗ್ಗೆಯೂ ಗಂಭೀರ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಳೆದ ಮಾರ್ಚ್ ೨೨ರಂದು ಬಂದ್ ಕರೆ ಕೊಟ್ಟಿದ್ದೆವು. ಮಂಡ್ಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಮಂಡ್ಯ ಜನಕ್ಕೆ ಧನ್ಯವಾದ ಹೇಳುತ್ತೇನೆ. ಇದೇ ಏ.೨೬ಕ್ಕೆ ರಾಜ್ಯದ ಉದ್ದಗಲಕ್ಕೂ ಈಡುಗಾಯಿ ಒಡೆಯುವ ಚಳವಳಿ ಮೂಲಕ ವಿಶೇಷ, ವಿನೂತನವಾಗಿ ಮತ್ತೊಂದು ಹೋರಾಟ ಮಾಡಲಾಗುತ್ತಿದ್ದು, ಎಂಇಎಸ್ ನಿಷೇಧ. ಉತ್ತರ ಕರ್ನಾಟಕ ಅಭಿವೃದ್ಧಿ, ಪರಭಾಷಿಕರ ದಬ್ಬಾಳಿಕೆ, ಪರಭಾಷಿಕರ ಚಿತ್ರಗಳ ಬಹಿಷ್ಕಾರ, ಕೇಂದ್ರದ ಮಲತಾಯಿ ಧೋರಣೆ, ಬಜೆಟ್‌ನಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಕನ್ನಡಿಗರ ಬೇಡಿಕೆ ಈಡೇರಿಕೆಗಾಗಿ ಕನಿಷ್ಠ ಎರಡು ಕೋಟಿ ಈಡುಗಾಯಿ ಒಡೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಜಾತಿಗಣತಿ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇವತ್ತಿನವರೆಗೂ ಜಾತಿ ಬಗ್ಗೆ ಮಾತಾಡಿಲ್ಲ.ಅದನ್ನ ಯಾಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ರಾಜ್ಯ ಉದಯವಾಗಿದ್ದು ಭಾಷೆ ಮೇಲೆ. ಭಾಷೆ ಮೇಲೆ ಕರ್ನಾಟಕದ ಉದಯವಾಯಿತು. ಕುವೆಂಪು ಅವರು ಮೈಸೂರಿನಲ್ಲಿ ಸಮಗ್ರ ಕರ್ನಾಟಕ ಆಗಬೇಕು ಎಂದಿದ್ದರು. ಆದರೆ ಇವತ್ತು ಜಾತಿಯ ಕರ್ನಾಟಕ ಆಗುತ್ತಿದೆ ಎಂದು ಭೇಸರ ವ್ಯಕ್ತಪಡಿಸಿದರು.
ಬಸವಣ್ಣ, ಕನಕದಾಸರ ಸಂದೇಶಗಳನ್ನ ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷಗಳು ಜಾತಿ ಹಿಂದೆ ಬಿದ್ದಿವೆ. ಸಿದ್ದರಾಮಯ್ಯನವರೇ ಕರ್ನಾಟಕದ ಕೊನೆಯ ಕೊಂಡಿ. ಸಿದ್ದರಾಮಯ್ಯ ನಂತರ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಶಾಸನ ಸಭೆಯಲ್ಲಿ ಈ ವಿಷಯ ಚರ್ಚೆ ಬೇಕೆ?. ಶಾಸನಸಭೆಯ ಗಂಭೀರತೆ ಏನಾಗಬೇಕು?. ವಿಧಾನಸಭೆ, ಪರಿಷತ್ತಿನ ಘನತೆ, ಗಾಂಭೀರ್ಯ ಕುಸಿಯುತ್ತಿದೆ. ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನಪರಿಷತ್ತು ವ್ಯಾಪಾರೀಕರಣ ಆಗುತ್ತಿದೆ. ಪರಿಷತ್ತಿಗೆ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅದನ್ನೂ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾರ್ಥ ಸಾರಥಿ, ಮಂಜುನಾಥ್ ಬೆಟ್ಟಹಳ್ಳಿ, ಹೆಚ್.ಸಿ.ಮಂಜುನಾಥ್ ಇತರರಿದ್ದರು.
-
Mandya21 hours ago
ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಬರ್ಬರ ಹತ್ಯೆ…!
-
Kodagu17 hours ago
ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ.
-
Chamarajanagar21 hours ago
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ
-
Chamarajanagar21 hours ago
ಬೋನಿಗೆ ಬಿದ್ದ 3 ನೇ ಚಿರತೆ
-
Kodagu14 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Chamarajanagar12 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Chikmagalur15 hours ago
ಅಕ್ರಮ ಸಂಬಂಧಕ್ಕಾಗಿ ಪತಿಯನ್ನ ಕೊಂದ ಸತಿ
-
Chikmagalur14 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.